Hair Care Tips: ಕೂದಲು ಉದುರಿ ನೆತ್ತಿ ಕಾಣುತ್ತಿದೆಯೇ ಹಾಗಿದ್ದರೆ ಇಂದಿನಿಂದಲೇ ಈ ಸಲಹೆ ಪಾಲಿಸಿ

ಕೂದಲಿಗೆ ಸರಿಯಾದ ಆರೈಕೆ ಮತ್ತು ಪೋಷಣೆ ನೀಡುವುದು ಕೂದಲಿನ ಗುಣಮಟ್ಟವನ್ನು ಸುಧಾರಣೆ ಮಾಡುತ್ತದೆ. ಮತ್ತು ಕೂದಲ ಬೆಳವಣಿಗೆ ವೇಗಗತಿ ಪಡೆದುಕೊಳ್ಳುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರತಿ ಹುಡುಗಿಯು (Girl) ಉದ್ದ (Long) ಮತ್ತು ಸುಂದರವಾದ (Beautiful) ಕೂದಲು (Hair) ಹೊಂದುವ ಬಯಕೆ ಹೊಂದಿರುತ್ತಾಳೆ. ಆದರೆ ಮಾಲಿನ್ಯ ಮತ್ತು ಅನಾರೋಗ್ಯಕರ ಜೀವನಶೈಲಿ (Life Style), ಆಹಾರ ಪದ್ಧತಿಯಿಂದಾಗಿ ಕೂದಲಿನ ಗುಣಮಟ್ಟವು ಹದಗೆಡುತ್ತದೆ. ಜೊತೆಗೆ ಕೂದಲು ಉದುರುತ್ತ ನೆತ್ತಿಯು ಖಾಲಿ ಆಗುತ್ತದೆ. ಮತ್ತು ಕೆಲವೊಮ್ಮೆ ಕೂದಲಿನ ಬೆಳವಣಿಗೆ ನಿಂತು ಹೋಗುತ್ತದೆ. ಇಂತಹ ಸಂದರ್ಭದಲ್ಲಿ ಕೂದಲಿಗೆ ಸರಿಯಾದ ಪೋಷಣೆ ನೀಡುವುದು ತುಂಬಾ ಮುಖ್ಯ ಆಗುತ್ತದೆ. ಕೂದಲಿಗೆ ಸರಿಯಾದ ಆರೈಕೆ ಮತ್ತು ಪೋಷಣೆ ನೀಡುವುದು ಕೂದಲಿನ ಗುಣಮಟ್ಟವನ್ನು ಸುಧಾರಣೆ ಮಾಡುತ್ತದೆ. ಮತ್ತು ಕೂದಲ ಬೆಳವಣಿಗೆ ವೇಗಗತಿ ಪಡೆದುಕೊಳ್ಳುತ್ತದೆ.

    ನಿಮ್ಮ ಕೂದಲ ಬೆಳವಣಿಗೆ ವೇಗವಾಗಿ ಆಗಬೇಕೆಂದು ನೀವು ಬಯಸಿದರೆ ಇಲ್ಲಿ ನಾವು ಹೇಳಿರುವ ಕೆಲವು ತಂತ್ರಗಳನ್ನು ಟ್ರೈ ಮಾಡಿ ನೋಡಿ. ಕೂದಲಿನ ಈ ತಂತ್ರಗಳು ನಿಮ್ಮ ಕೂದಲನ್ನು 1 ತಿಂಗಳೊಳಗೆ 2 ರಿಂದ 5 ಇಂಚುಗಳಷ್ಟು ಉದ್ದ ಬೆಳೆಯುವಂತೆ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ನೀವು ಈ ಕೆಲಸವನ್ನು ಮಾಡಿ..

    ನಿಮ್ಮ ನೆತ್ತಿಯ ರಕ್ತ ಪರಿಚಲನೆ ಕೂದಲ ಬೆಳವಣಿಗೆಗೆ ಸಹಕಾರಿ

    ನಿಮ್ಮ ಕೂದಲ ಬೆಳವಣಿಗೆ ವೇಗವಾಗಿ ಆಗಬೇಕೆಂದು ನೀವು ಬಯಸುತ್ತಿದ್ದೀರಿ ಎಂದಾದರೆ ನಿಮ್ಮ ನೆತ್ತಿಯ ರಕ್ತ ಪರಿಚಲನೆ ಸರಿಯಾಗಿ ಇರಬೇಕಾಗುತ್ತದೆ. ನೆತ್ತಿಯ ರಕ್ತ ಪರಿಚಲೆನ ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇದನ್ನು ಮಾಡಲು, ರಾತ್ರಿ ಮಲಗುವ ಮೊದಲು ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ.

    ಇದನ್ನೂ ಓದಿ: ಪದೇ ಪದೇ ಕಾಣಿಸಿಕೊಳ್ಳೋ ಮೊಡವೆ ನಿವಾರಣೆಗೆ ತ್ವಚೆಯ ಹೊರಗಲ್ಲ ಒಳಗಿಂದಲೇ ಮದ್ದು ಮಾಡಿ

    ಬಾಚಣಿಗೆಯಿಂದ ನೆತ್ತಿಯಲ್ಲಿ ರಕ್ತದ ಹರಿವು ಹೆಚ್ಚುತ್ತದೆ. ಮತ್ತು ಇದರಿಂದ ರಕ್ತವು ಕೂದಲ ಬುಡಕ್ಕೆ ಸುಲಭವಾಗಿ ತಲುಪುತ್ತದೆ. ಮತ್ತು ಕೂದಲು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಮತ್ತು ವೇಗವಾಗಿ ಬೆಳೆಯುತ್ತದೆ.

    ಮಲಗುವ ಮೊದಲು ತಲೆಗೆ ಮಸಾಜ್ ಮಾಡಿ

    ಮಲಗುವ ಮೊದಲು ನೀವು ನಿಮ್ಮ ತಲೆಯನ್ನು ಎಣ್ಣೆ ಹಾಕದೇ ಬೆರಳುಗಳ ಸಹಾಯದಿಂದ ಮಸಾಜ್ ಮಾಡಬೇಕು. ಇದು ನಿಮಗೆ ಒಳ್ಳೆಯ ವಿಶ್ರಾಂತಿ ನೀಡುತ್ತದೆ. ಅಲ್ಲದೆ, ನಿಮ್ಮ ನೆತ್ತಿಯಲ್ಲಿ ರಕ್ತದ ಹರಿವು ಹೆಚ್ಚುವಂತೆ ಮಾಡುತ್ತದೆ. ಇದರಿಂದಾಗಿ ಕೂದಲಿನ ಬೆಳವಣಿಗೆಯು ವೇಗವಾಗಿ ಆಗುತ್ತದೆ.

    ಕೂದಲು ಬಿಚ್ಚಿ ಮಲಗುವ ಅಭ್ಯಾಸ ಬದಲಾಯಿಸಿ

    ರಾತ್ರಿ ಕೂದಲು ತೆರೆದು ಮಲಗುವ ಅಭ್ಯಾಸ ನಿಮಗಿದ್ದರೆ ಇಂದೇ ಬದಲಾಯಿಸಿಕೊಳ್ಳಿ. ಕೂದಲು ವೇಗವಾಗಿ ಬೆಳೆಯಲು ರಾತ್ರಿ ಕೂದಲನ್ನು ಕಟ್ಟಿಕೊಂಡು ಮಲಗಿ. ಇದರಿಂದ ಕೂದಲು ಸಿಕ್ಕು ಬೀಳುವುದಿಲ್ಲ ಮತ್ತು ಇದು ಕೂದಲ ಮೃದುತ್ವಕ್ಕೆ ಧಕ್ಕೆ ಉಂಟು ಮಾಡದೆ ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.

    ಆಗಾಗ್ಗೆ ಕೂದಲು ತೊಳೆಯುವ ಅಭ್ಯಾಸ ಬದಲಾಯಿಸಿ

    ನೀವು ಪ್ರತಿದಿನ ಕೂದಲು ತೊಳೆದರೆ ಅದು ನಿಮ್ಮ ಕೂದಲಿನ ಮೂಲವನ್ನು ದುರ್ಬಲ ಮಾಡುತ್ತದೆ. ಮತ್ತು ಇದರಿಂದ ಕೂದಲು ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಆದ್ದರಿಂದ 1 ಅಥವಾ 2 ದಿನಗಳ ನಂತರ ಮಾತ್ರ ನಿಮ್ಮ ತಲೆ ತೊಳೆಯಲು ಪ್ರಯತ್ನಿಸಿ.

    ನೆತ್ತಿಯ ಶುಚಿಗೊಳಿಸುವಿಕೆ ನಿಮಗೆ ಬಹಳ ಮುಖ್ಯ. ಮಸಾಜ್ ಮಾಡುವ ಮೂಲಕ ನಿಮ್ಮ ಕೂದಲನ್ನು ತೊಳೆಯಿರಿ. ಅದು ನಿಧಾನವಾಗಿ ಹಗುರವಾದ ಕೈಗಳಿಂದ. ನಿಮ್ಮ ಕೂದಲನ್ನು ತೊಳೆಯುವ ಮೊದಲು ನಿಮ್ಮ ಕೂದಲಿಗೆ ಎಣ್ಣೆ ಹಾಕುವುದು ಮರೆಯಬೇಡಿ.

    ಇದನ್ನೂ ಓದಿ: ಸುಡು ಬಿಸಿಲು, ಮಕ್ಕಳ ಆಹಾರದಲ್ಲಿ ಈ ಪದಾರ್ಥಗಳನ್ನು ಮಿಸ್ ಮಾಡಲೇಬೇಡಿ

    ದೀರ್ಘ ಸಮಯದವರೆಗೆ ಟವೆಲ್ ತಲೆಗೆ ಕಟ್ಟಬೇಡಿ

    ಮಹಿಳೆಯರು ಕೂದಲು ತೊಳೆದ ನಂತರ ಅನೇಕ ಬಾರಿ ಟವೆಲ್ ನ್ನು ಗಂಟೆಗಳ ಕಾಲ ಸುತ್ತಿಕೊಂಡು ಹಾಗೆ ಇರುತ್ತಾರೆ. ಇದು ನಿಮ್ಮ ಕೂದಲಿನ ಬೇರನ್ನು ದುರ್ಬಲ ಮಾಡುತ್ತದೆ. ಕೂದಲು ವೇಗವಾಗಿ ಬೆಳೆಯಲು ಬಯಸಿದರೆ ಹಗುರವಾದ ಕೈಗಳಿಂದ ಕೂದಲನ್ನು ಒರೆಸಿ. ಗಾಳಿಯಲ್ಲಿ ಒಣಗಲು ಬಿಡಿ. ಬ್ಲೋ ಡ್ರೈಯರ್ ಅಥವಾ ಬಿಸಿಲಿನಲ್ಲಿ ಕೂದಲನ್ನು ಒಣಗಿಸಬೇಡಿ.
    Published by:renukadariyannavar
    First published: