• Home
  • »
  • News
  • »
  • lifestyle
  • »
  • Sweating: ಮೈ ಬೆವರುವುದರಿಂದ ತೂಕ ಕಡಿಮೆ ಆಗುತ್ತದೆಯೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

Sweating: ಮೈ ಬೆವರುವುದರಿಂದ ತೂಕ ಕಡಿಮೆ ಆಗುತ್ತದೆಯೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಬೆವರುವಿಕೆಯು ಕ್ಯಾಲೋರಿಗಳನ್ನು ದಹಿಸಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂಬ ಪರಿಕಲ್ಪನೆಗೆ ಇದು ಜನ್ಮ ನೀಡಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ ಅಂತ ಬಹುತೇಕರಿಗೆ ತಿಳಿದಿಲ್ಲ. ಬನ್ನಿ ಹಾಗಾದರೆ ಈ ಬೆವರುವುದು ನಮ್ಮ ದೇಹದಲ್ಲಿನ ತೂಕವನ್ನು ಕಡಿಮೆ ಮಾಡಲು ಸಹಾಯಕವಾಗುವುದೇ ಅಂತ ತಿಳಿದುಕೊಳ್ಳೋಣ.

ಮುಂದೆ ಓದಿ ...
  • Share this:

ಕೆಲವರು ಒಂದೈದು ಮೆಟ್ಟಿಲುಗಳನ್ನು ಹತ್ತಿ ಬಂದರೆ ಸಾಕು ಹಣೆಯ ಮೇಲೆ ಬೆವರಿನ ಹನಿಗಳು ಬಂದಿರುತ್ತವೆ. ಅದೇ ಇನ್ನೂ ಕೆಲವರು ಪ್ರತಿದಿನ ಬೆಳಿಗ್ಗೆ ಒಂದೈದು ಕಿಲೋ ಮೀಟರ್ ವಾಕ್ (Walk) ಅಥವಾ ಜಾಗಿಂಗ್ (Jogging) ಮಾಡಿದರೂ ಅಷ್ಟಾಗಿ ಬೆವರಿರುವುದಿಲ್ಲ. ಈ ಬೆವರುವುದು (Sweating) ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇದು ಅಸಂಖ್ಯಾತ ಕಾರಣಗಳಿಂದಾಗಿ ದೇಹದಲ್ಲಿ ಸಂಭವಿಸುತ್ತದೆ. ಈ ವಿದ್ಯಮಾನವು ಸಾಮಾನ್ಯವಾಗಿ ಬಿಸಿ ಮತ್ತು ಆರ್ದ್ರ ಪರಿಸ್ಥಿತಿಗಳಲ್ಲಿ ಹೆಚ್ಚಿದ ದೇಹದ ತಾಪಮಾನವನ್ನು (body temperature) ತಂಪಾಗಿಸಲು ಅಥವಾ ಒಬ್ಬ ವ್ಯಕ್ತಿಯು ಯಾವುದೇ ದೈಹಿಕ ಚಟುವಟಿಕೆಯಲ್ಲಿ (Physical activity) ತೊಡಗಿದ್ದಾಗ ಸಂಭವಿಸುತ್ತದೆ.


ಬೆವರುವುದರಿಂದ ತೂಕ ಕಡಿಮೆ ಮಾಡಿಕೊಳ್ಳುವುದೇ?
ಬಹುತೇಕರು ವ್ಯಾಯಾಮ ಮಾಡುವಾಗ ತುಂಬಾನೇ ಬೆವರುವುದನ್ನು ನಾವು ನೋಡಿರುತ್ತೇವೆ ಮತ್ತು ಆ ಬೆವರುವಿಕೆ ಮತ್ತು ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಎಲ್ಲೋ ಸಂಪರ್ಕ ಹೊಂದಿದೆ ಎಂಬ ಕಲ್ಪನೆ ಜನರ ಮನಸ್ಸಿನಲ್ಲಿ ಬೇರೊರಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಇದನ್ನೂ ಓದಿ: Weight Loss: ಬೆಳಗ್ಗೆ 5 ನಿಮಿಷಗಳ ಕಾಲ ಈ ವ್ಯಾಯಾಮ ಮಾಡಿ, ಬೊಜ್ಜಿನ ಸಮಸ್ಯೆಗೆ ಬೈ ಬೈ ಹೇಳಿ


ಈ ಬೆವರುವಿಕೆಯು ಕ್ಯಾಲೋರಿಗಳನ್ನು ದಹಿಸಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂಬ ಪರಿಕಲ್ಪನೆಗೆ ಇದು ಜನ್ಮ ನೀಡಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ ಅಂತ ಬಹುತೇಕರಿಗೆ ತಿಳಿದಿಲ್ಲ. ಬನ್ನಿ ಹಾಗಾದರೆ ಈ ಬೆವರುವುದು ನಮ್ಮ ದೇಹದಲ್ಲಿನ ತೂಕವನ್ನು ಕಡಿಮೆ ಮಾಡಲು ಸಹಾಯಕವಾಗುವುದೇ ಅಂತ ತಿಳಿದುಕೊಳ್ಳೋಣ.


ಬೆವರುವಿಕೆಯು ನಿಮ್ಮ ದೇಹವು ಮಾಡುವ ಕೆಲಸದ ಪ್ರಮಾಣಕ್ಕೆ ಹೋಲುತ್ತೆಯಂತೆ
ಹೌದು.. ಬೆವರುವಿಕೆಯು ನಿಮ್ಮ ದೇಹವು ಮಾಡುವ ಕೆಲಸದ ಪ್ರಮಾಣಕ್ಕೆ ಹೋಲುತ್ತದೆ, ಕೆಲವು ಸನ್ನಿವೇಶಗಳನ್ನು ಹೊರತು ಪಡಿಸಿ, ಏಕೆಂದರೆ ಒಬ್ಬ ವ್ಯಕ್ತಿಯು ತನ್ನ ರಕ್ತದೊತ್ತಡವು ಅನಿಯಮಿತವಾಗಿದ್ದಾಗ ಸಹ ತುಂಬಾನೇ ಬೆವರುತ್ತಾನೆ. ಈ ನೈಸರ್ಗಿಕ ವಿದ್ಯಮಾನವು ನಿಮ್ಮ ದೇಹವು ದಹಿಸುತ್ತಿರುವ ಕ್ಯಾಲೋರಿಗಳ ಸಂಖ್ಯೆಯ ಅಳತೆಯಾಗಬಹುದು ಆದರೆ ಈ ಪ್ರಕ್ರಿಯೆಯು ಕ್ಯಾಲೊರಿ-ದಹಿಸುವಿಕೆಗೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ.


ಹಾಗೆ ಹೇಳಿದ ನಂತರ, ಬೆವರುವಿಕೆಯನ್ನು ಏಕೈಕ ಅಳತೆ ಎಂದು ಪರಿಗಣಿಸುವುದನ್ನು ನೀವು ಬಿಡಬೇಕು. ಏಕೆಂದರೆ ಶೀತ ಹವಾಮಾನದಲ್ಲಿ ಈಜುವಾಗ ಅಥವಾ ವ್ಯಾಯಾಮ ಮಾಡುವಾಗ ಕ್ಯಾಲೋರಿಗಳನ್ನು ಸಹ ದಹಿಸಬಹುದು. ನಾವು ಅಳತೆ ಎಂದು ಹೇಳಿದಾಗ, ಅದು ತಾಲೀಮಿನ ತೀವ್ರತೆಯ ಸಂದರ್ಭದಲ್ಲಿದೆ. ಹೆಚ್ಚಿನ ತೀವ್ರತೆಯ ತರಬೇತಿಯು ಒಬ್ಬ ವ್ಯಕ್ತಿಯನ್ನು ಅತಿಯಾಗಿ ಬೆವರುವಂತೆ ಮಾಡುತ್ತದೆ. ಕಡಿಮೆ ತೀವ್ರತೆಯ ತಾಲೀಮು ಅಥವಾ ತರಬೇತಿಯು ಒಬ್ಬ ವ್ಯಕ್ತಿಯನ್ನು ಹೆಚ್ಚು ಬೆವರುವಂತೆ ಮಾಡುವುದಿಲ್ಲ ಆದರೆ ಗಣನೀಯ ಸಂಖ್ಯೆಯ ಕ್ಯಾಲೋರಿಗಳನ್ನು ಇದು ಸುಡುವುದಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಬಹುದು.


ಬೆವರುವಿಕೆಯ ಪ್ರಯೋಜನಗಳು
ಆದರೆ ಇದರರ್ಥ ಅತಿಯಾದ ಬೆವರುವಿಕೆ ಮತ್ತು ತೂಕ ನಷ್ಟವು ಬೇರೆ ಬೇರೆ ಆಗಿವೆ ಎಂದು ಅರ್ಥವೇ? ಇಲ್ಲ. ವಾಸ್ತವವಾಗಿ, ಕೆಲವರು ತೂಕ ಇಳಿಸಿಕೊಳ್ಳಲು ಬೆವರುವ ತಂತ್ರಗಳನ್ನು ಬಳಸುತ್ತಾರೆ ಆದರೆ ಅದು ತಾತ್ಕಾಲಿಕವಾಗಿದೆ. ಸ್ಪರ್ಧೆಗಾಗಿ ತೂಕದ ಆವರಣಕ್ಕೆ ಹೊಂದಿಕೊಳ್ಳಬೇಕಾದ ಕ್ರೀಡಾಪಟುಗಳು ನೀರಿನ ತೂಕವನ್ನು ಕಳೆದು ಕೊಳ್ಳಲು ಸೌನಾ ತಂತ್ರವನ್ನು ಬಳಸುತ್ತಾರೆ ಆದರೆ ಅವರು ಒಮ್ಮೆ ನೀರು ಕುಡಿದರೆ ಅಥವಾ ಆಹಾರ ಸೇವನೆ ಮಾಡಿದರೆ, ಅವರು ತಕ್ಷಣವೇ ಆ ತೂಕವನ್ನು ಮರಳಿ ಪಡೆಯುತ್ತಾರೆ.


ಇದನ್ನೂ ಓದಿ: Skipping Benefits: ಪ್ರತಿದಿನ ಮಿಸ್ ಮಾಡ್ದೇ ಸ್ಕಿಪ್ಪಿಂಗ್ ಮಾಡಿ ಸಾಕು ಈ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ


ಬೆವರುವುದು ನಿಮ್ಮ ದೇಹವು ನಡೆಸುವ ಅತ್ಯಂತ ಆರೋಗ್ಯಕರ ಪ್ರಕ್ರಿಯೆಯಾಗಿದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ನಿಮ್ಮ ದೇಹವು ಭಾರವಾದ ಲೋಹಗಳು ಮತ್ತು ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇದು ಆಮ್ಲಜನಕ ಮತ್ತು ಪೋಷಕಾಂಶಗಳ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ನಿಮ್ಮ ಚರ್ಮವನ್ನು ಪೋಷಿಸುತ್ತದೆ. ಹೀಗೆ ಒಟ್ಟಾರೆ ನೀವು ತಾಲಿಮಿನಿಂದ ಬೆವತರೆ ಒಳ್ಳೆಯದೇ ಎಂದು ಇಲ್ಲಿ ಹೇಳಲಾಗಿದೆ.ಒಟ್ಟಿನಲ್ಲಿ ಬೆವರುವಿಕೆ ಒಳ್ಳೆಯದೇ ಆಗಿದೆ ಎಂದು ಹೇಳಬಹುದು.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು