Heart Health: ಜಾಸ್ತಿ ವ್ಯಾಯಾಮ ಮಾಡಿದ್ರೆ ಹೃದಯಕ್ಕೆ ಅಪಾಯನಾ? ಡಾಕ್ಟರ್ ಹೇಳೋದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಠಿಣ ವ್ಯಾಯಾಮವು ಹೃದಯಾಘಾತ ಅಥವಾ ಇತರ ಹೃದಯ ಕಾಯಿಲೆಗೆ ಆಹ್ವಾನ ನೀಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಎಷ್ಟು ಸಮಯದವರೆಗೆ ವ್ಯಾಯಾಮ ಮಾಡಬೇಕು. ಯುವಕರು ಉತ್ಸಾಹದಲ್ಲಿ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುತ್ತಿದ್ದಾರೆಯೇ ಎಂಬ ಹಲವು ಪ್ರಶ್ನೆಗಳು ಉದ್ಭವಿಸಿವೆ.

  • Share this:

ಭಾರತದ (India) ಖ್ಯಾತ ಸ್ಟ್ಯಾಂಡ್-ಅಪ್ ಕಾಮಿಡಿಯನ್ (Comedian) ರಾಜು ಶ್ರೀವಾಸ್ತವ ನಿಧನರಾಗಿದ್ದಾರೆ. ಕಳೆದ ತಿಂಗಳು ಅವರಿಗೆ ಹೃದಯಾಘಾತವಾಗಿತ್ತು (Heart Attack). ಹೃದಯಾಘಾತವಾದ ದಿನ ರಾಜು ಅವರು ಎಂದಿನಂತೆ ವ್ಯಾಯಾಮ (Exercise) ಮಾಡುತ್ತಿದ್ದ ಅವರು ಟ್ರೆಡ್ ಮಿಲ್ನಲ್ಲಿ ಓಡುತ್ತಿದ್ದರು. ಟ್ರೆಡ್ ಮಿಲ್ ಒಂದು ಯಂತ್ರ. ಪ್ರತಿ ಜಿಮ್ನಲ್ಲಿ ಅದನ್ನು ಕಾಣಬಹುದು. ನಿಮ್ಮ ಓಟದ ವೇಗ ಎಷ್ಟು, ನೀವು ಎಷ್ಟು ಸಮಯ ಓಡುತ್ತೀರಿ, ಎಲ್ಲವೂ ಇದರಲ್ಲಿ ಗೊತ್ತಾಗುತ್ತದೆ. ಆ ವೇಳೆ ರಾಜು ಅವರು ಎಷ್ಟು ವೇಗ ಓಡಿದ್ದರೋ, ಎಷ್ಟು ಹೊತ್ತು ಓಡಿದ್ದರೋ ಗೊತ್ತಿಲ್ಲ. ಆ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾದ ಸುದ್ದಿ ವರದಿ ಆಗಿದೆ.


ಕಠಿಣ ವ್ಯಾಯಾಮದಿಂದ ಹೃದಯಾಘಾತ ಅಥವಾ ಹೃದಯ ಕಾಯಿಲೆ ಸಾಧ್ಯತೆ?


ರಾಜು ಮಾತ್ರವಲ್ಲ ಅವರಿಗಿಂತ ಮೊದಲು ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಮತ್ತು ಕನ್ನಡ ನಟ ಪುನೀತ್ ರಾಜ್‌ಕುಮಾರ್ ಕೂಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಕೂಡ ಕೆಲವು ರೀತಿಯ ಕಠಿಣ ವ್ಯಾಯಾಮದಲ್ಲಿ ತೊಡಗಿದ್ದರು. ಇವರಿಗೆ ತುಂಬಾ ವಯಸ್ಸಾಗಿರಲಿಲ್ಲ. ಕಠಿಣ ವ್ಯಾಯಾಮವು ಹೃದಯಾಘಾತ ಅಥವಾ ಇತರ ಹೃದಯ ಕಾಯಿಲೆಗೆ ಆಹ್ವಾನ ನೀಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.


ಎಷ್ಟು ಸಮಯದವರೆಗೆ ವ್ಯಾಯಾಮ ಮಾಡಬೇಕು? ಯುವಕರು ಉತ್ಸಾಹದಲ್ಲಿ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುತ್ತಿದ್ದಾರೆಯೇ ಎಂಬ ಹಲವು ಪ್ರಶ್ನೆಗಳು ಉದ್ಭವಿಸಿವೆ.


ಇದನ್ನೂ ಓದಿ: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ


ಎಷ್ಟು ಸಮಯ ವ್ಯಾಯಾಮ ಮಾಡಬೇಕು?


ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುವುದು ಎಷ್ಟು ಸರಿ ಎಂದು ನೀವು ತಿಳಿಯಬೇಕು. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ದೈಹಿಕ ಚಟುವಟಿಕೆ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಕಾರಿ.


ಮತ್ತು ನಿಮ್ಮ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ವಯಸ್ಕರರು ವಾರಕ್ಕೆ 2 ಗಂಟೆ ಮತ್ತು 30 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಮಾಡಬೇಕೆಂದು ತಜ್ಞರು ಸೂಚನೆ ನೀಡುತ್ತಾರೆ. ಇದರಲ್ಲಿ ವೇಗದ ನಡಿಗೆ, ಸೈಕ್ಲಿಂಗ್, ತೂಕ ತರಬೇತಿ, ಯೋಗ, ಸ್ಟ್ರೆಚಿಂಗ್, ಇತ್ಯಾದಿ. ಮಕ್ಕಳು ಮತ್ತು ಹದಿಹರೆಯದವರು ದಿನಕ್ಕೆ 1 ಗಂಟೆ ದೈಹಿಕ ಚಟುವಟಿಕೆ ಮಾಡಬೇಕು ಎಂದು ಹೇಳಲಾಗಿದೆ.


ಹೆಚ್ಚು ವ್ಯಾಯಾಮ ಮಾಡಿದರೆ ಏನಾಗುತ್ತದೆ?


ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೆಚ್ಚಿನ ತೀವ್ರತೆಯ ವ್ಯಾಯಾಮವು ಹಠಾತ್ ಹೃದಯ ಸ್ತಂಭನ ಮತ್ತು ಹೃದ್ರೋಗ ಹೊಂದಿರುವ ಜನರಲ್ಲಿ ಸಾವಿನ ಅಪಾಯ ಹೆಚ್ಚಿಸಬಹುದು ಎಂಬುದಕ್ಕೆ ಸಂಶೋಧನೆಯೊಂದು ಪುರಾವೆ ಕಂಡು ಹಿಡಿದಿದೆ.


ಇದು ಹೃದಯದ ಲಯದ ಅಸ್ವಸ್ಥತೆ ಅಪಾಯ ಹೆಚ್ಚಿಸುತ್ತದೆ. ಲೆವೆಲಂಡ್ ಕ್ಲಿನಿಕ್ ತುಂಬಾ ಕಠಿಣ ವ್ಯಾಯಾಮ ಹೃದಯಕ್ಕೆ ಅಪಾಯಕಾರಿ. ಆನುವಂಶಿಕ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ ಜನರು ಹೆಚ್ಚಿನ ಅಪಾಯ ಹೊಂದಿರುತ್ತಾರೆ ಎಂದು ತಿಳಿಸಿದೆ.


ಜಿಮ್‌ಗೆ ಹೋಗುವ ಪ್ರತಿಯೊಬ್ಬರೂ ಈ ಪರೀಕ್ಷೆ ಮಾಡಿಸಬೇಕು


ಜಿಮ್ ಗೆ ಹೋಗುವ ಮೊದಲು ಕೆಲವು ಪರೀಕ್ಷೆ ಮಾಡಬೇಕು. ಟ್ರೆಡ್ ಮಿಲ್ ಟೆಸ್ಟ್ ಇದರಿಂದ ನಿಮ್ಮ ಹೃದಯದ ಸ್ಥಿತಿಯನ್ನು ತಿಳಿಯಬಹುದು. ಈ ದಿನಗಳಲ್ಲಿ CT ಆಂಜಿಯೋಗ್ರಫಿ ಕೂಡ ಇದೆ. ಇದು ನಿಮ್ಮ ಹೃದಯದಲ್ಲಿ 40 ರಿಂದ 50 ಪ್ರತಿಶತ ಬ್ಲಾಕ್ ಅನ್ನು ಹೊಂದಿದೆಯೇ ಎಂದು ಹೇಳುತ್ತದೆ.


ಕೆಲವು ತಿಂಗಳುಗಳು ಅಥವಾ ವರ್ಷಗಳ ನಂತರ ಮತ್ತೆ ವರ್ಕೌಟ್ ಆರಂಭಿಸುತ್ತಿದ್ದರೆ ಮೇಲೆ ತಿಳಿಸಿದ ಪರೀಕ್ಷೆಗಳನ್ನು ಸಹ ಮಾಡಿಸಿ. ಸ್ಕ್ರೀನಿಂಗ್ ಮಧುಮೇಹಿಗಳು ಮತ್ತು ಮಹಿಳೆಯರಿಗೆ ವಿಶೇಷವಾಗಿ ಅವಶ್ಯಕ.


ಇದನ್ನೂ ಓದಿ: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?


ಟ್ರೆಡ್ ಮಿಲ್ನ ವೇಗವು ತುಂಬಾ ಹೆಚ್ಚಾದರೆ ಹೃದಯ ಬಡಿತ ಮತ್ತು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಆಗ ಹೃದಯಕ್ಕೆ ಹೆಚ್ಚಿನ ಆಮ್ಲಜನಕ ಬೇಕು. ಇದು ಹೃದಯ ರಕ್ತಪರಿಚಲನೆಯಲ್ಲಿ ಒತ್ತಡ ಉಂಟು ಮಾಡಬಹುದು. ಇದು ರಕ್ತನಾಳಗಳಲ್ಲಿ ಅಡಚಣೆ, ಕಡಿಮೆ ರಕ್ತದೊತ್ತಡ ಅಥವಾ ಹೃದಯಾಘಾತ ಅಪಾಯ ಹೆಚ್ಚಿಸುತ್ತದೆ.

top videos
    First published: