ಸಾಮಾನ್ಯವಾಗಿ ನಮ್ಮ ದೇಹದಲ್ಲಿರುವ ಅತಿಯಾದ ತೂಕ ಕಡಿಮೆ(Weight Loss) ಮಾಡಿಕೊಳ್ಳುವ ಪ್ರಯತ್ನದಲ್ಲಿರುವಾಗ ಬಹುತೇಕರು ನೀವು ನಿಮ್ಮ ಆಹಾರದಲ್ಲಿ ಬಳಸುವ ಉಪ್ಪನ್ನು(Salt) ಸ್ವಲ್ಪ ಕಡಿಮೆ ಮಾಡಿ ಅಂತ ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎನ್ನುವುದರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಬಹುತೇಕರು ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳುವಾಗ ಮಾಡುವ ದೊಡ್ಡ ತಪ್ಪು ಎಂದರೆ ಆಗಾಗ್ಗೆ ಪ್ರಮುಖ ಪೋಷಕಾಂಶಗಳು ಒಳಗೊಂಡಿರುವ ಪದಾರ್ಥಗಳನ್ನು ತಮ್ಮ ಆಹಾರದಿಂದ ತೆಗೆದು ಹಾಕುತ್ತಾರೆ. ಈಗಂತೂ ಅಂತರ್ಜಾಲದಲ್ಲಿ(Internet) ಸಾಕಷ್ಟು ರೀತಿಯ ಆಹಾರ ಡಯಟ್ಗಳು ಲಭ್ಯವಿದೆ, ಅದರಲ್ಲಿ ಕೆಲವು ಡಯಟ್ಗಳನ್ನು ಅನುಸರಿಸುವುದರಿಂದ ಆರಂಭದಲ್ಲಿಯೇ ತಮ್ಮ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ದೀರ್ಘಾವಧಿಯಲ್ಲಿ, ನೀವು ಕಳೆದುಕೊಂಡ ತೂಕ ಮತ್ತೆ ನಿಧಾನವಾಗಿ ಮರಳಿ ಪಡೆಯುತ್ತೀರಿ.
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅನೇಕ ಜನರು ತಾವು ಹಾಕಿಕೊಂಡ ಗುರಿಯನ್ನು ತಲುಪಲು ಆಹಾರದಲ್ಲಿ ಉಪ್ಪು ಕಡಿಮೆ ಬಳಸಲು ಪ್ರಯತ್ನಿಸುತ್ತಾರೆ.
ಆದರೆ, ಸೋಡಿಯಂ ದ್ರವ ದೇಹದ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುವ ನಿರ್ಣಾಯಕ ಎಲೆಕ್ಟ್ರೋಲೈಟ್ ಎಂದು ನಿಮಗೆ ತಿಳಿದಿದೆಯೇ?
ದೇಹದಲ್ಲಿರುವ ಸ್ನಾಯುಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಆದರೂ, ನಿಮ್ಮ ಆಹಾರದಲ್ಲಿ ಹೆಚ್ಚು ಉಪ್ಪನ್ನು ಬಳಸುವುದರಿಂದ ಹೆಚ್ಚಿನ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೊಟ್ಟೆ ಉಬ್ಬರ ಮತ್ತು ಮೂತ್ರಪಿಂಡದ ತೊಂದರೆಗೆ ಕಾರಣವಾಗಬಹುದು.
ಹಾಗಾದರೆ ಪರಿಹಾರವೇನು?
ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ಪರದಾಡುತ್ತಿದ್ರೆ ಪ್ರತಿದಿನ ಹೀಗೆ ಮಾಡಿ ಸಾಕು
ತಜ್ಞರ ಪ್ರಕಾರ ದೇಹದ ತೂಕ ಹೆಚ್ಚಾಗುವುದನ್ನು ತಡೆಯಲು ನೀವು ರಾತ್ರಿ ಹೊತ್ತಿನಲ್ಲಿ ಸೇವಿಸುವ ಆಹಾರದಲ್ಲಿ ಕಡಿಮೆ ಉಪ್ಪನ್ನು ಬಳಸುವುದಾಗಿದೆ.
ದೇಹದ ತೂಕ ಕಡಿಮೆ ಮಾಡಲು ತಜ್ಞರು ನೀಡಿದ ಸಲಹೆಗಳು:
ಡಾ. ಶಿಖಾ ಶರ್ಮಾ ತಮ್ಮ ಒಂದು ಪುಸ್ತಕದಲ್ಲಿ "ಇಡೀ ದಿನ ಉಪ್ಪು ಬಳಸದಂತೆ ಅಡುಗೆ ಮಾಡಿಕೊಂಡು ಸೇವಿಸುವುದಕ್ಕಿಂತಲೂ ರಾತ್ರಿ ಊಟವನ್ನು ಉಪ್ಪು ರಹಿತವಾಗಿ ಮಾಡಿಕೊಂಡು ಸೇವಿಸುವುದು ಸೂಕ್ತ. ಉಪ್ಪು ರಹಿತ ಆಹಾರವು ದೇಹದಲ್ಲಿ ನೀರು ಕಳೆದುಕೊಳ್ಳುವ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ.ಸೋಡಿಯಂ ದೇಹಕ್ಕೆ ಅಗತ್ಯವಾಗಿದೆ. ಸುಸ್ಥಿರವಲ್ಲದ ಉಪ್ಪು-ಮುಕ್ತ ಆಹಾರವನ್ನು ಯಾವಾಗಲೂ ಸೇವಿಸುವ ಬದಲು, ಸಂಜೆ 7 ಗಂಟೆಯೊಳಗೆ ಊಟ ಮಾಡಿ ಮುಗಿಸುವುದರಿಂದ ಹೊಟ್ಟೆ ಉಬ್ಬರವಾಗುವುದನ್ನು ತಪ್ಪಿಸುತ್ತದೆ.
ವಾಸ್ತವಾಂಶ ಏನೆಂದರೆ ಸೋಡಿಯಂ ತೂಕ ಹೆಚ್ಚಳ ಉಂಟು ಮಾಡುವುದಿಲ್ಲ, ಇದು ಹೊಟ್ಟೆ ಉಬ್ಬರ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳಲು ಕಾರಣವಾಗುತ್ತದೆ.
ತಜ್ಞರ ಪ್ರಕಾರ, ಸಂಜೆ ಉಪ್ಪನ್ನು ಅಡುಗೆಯಲ್ಲಿ ಕಡಿಮೆ ಬಳಸುವುದರಿಂದ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ.
ವರದಿಯ ಪ್ರಕಾರ, ರಾತ್ರಿ ಹೊತ್ತಿನಲ್ಲಿ ಚಯಾಪಚಯ ಕ್ರಿಯೆಯು ನಿಧಾನವಾಗಿರುತ್ತದೆ ಮತ್ತು ಆದ್ದರಿಂದ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುವ ಆಹಾರ ಪದಾರ್ಥಗಳನ್ನು ತಿನ್ನಬಾರದು, ಬದಲಿಗೆ ನಾರಿನಂಶದಿಂದ ತುಂಬಿದ ಹೆಚ್ಚಿನ ತರಕಾರಿಗಳನ್ನು ಸೇವಿಸಬೇಕು.
ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸಲು ದಾಳಿಂಬೆ ಹೂವನ್ನು ಟ್ರೈ ಮಾಡಿ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ