• Home
  • »
  • News
  • »
  • lifestyle
  • »
  • Magnesium Deficiency: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ

Magnesium Deficiency: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವೊಮ್ಮೆ ದೇಹದಲ್ಲಿ ಮೆಗ್ನೀಸಿಯಮ್ ಅಂಶದ ಕೊರತೆಯಿಂದಾಗಿಯೂ ಹಠಾತ್ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು. ಮೆಗ್ನೇಸಿಯಮ್ ಒಂದು ದೇಹಕ್ಕೆ ಬೇಕಾದ ಅತ್ಯಗತ್ಯ ಖನಿಜ ಆಗಿದೆ. ಮೆಗ್ನೀಸಿಯಮ್ ಕೊರತೆ ಯಾವ ಕಾಯಿಲೆಗೆ ಕಾರಣವಾಗುತ್ತದೆ ಎಂದು ನಾವು ಇಲ್ಲಿ ತಿಳಿಯೋಣ.

  • Share this:

    ಹೃದಯಾಘಾತ (Heart Attack) ಎಂಬುದು ಕೇವಲ ವಯಸ್ಸಾದ (Age) ನಂತರ ಉಂಟಾಗುವ ಕಾಯಿಲೆ (Disease) ಎಂದು ಪರಿಗಣಿಸುವ ಸಮಯ ಒಂದಿತ್ತು. ಆದರೆ ಸಮಯ ಮತ್ತು ಜೀವನಶೈಲಿಯ (Time And Lifestyle) ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಯುವ ಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಜೀವನಶೈಲಿ ಮತ್ತು ದೈಹಿಕ ಚಟುವಟಿಕೆ ಹಾಗೂ ಆಹಾರ ಪದ್ಧತಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಮೂಲಕ ಯುವ ಜನರಲ್ಲಿ ಉಂಟಾಗುತ್ತಿರುವ ಹೃದಯಾಘಾತ ಪ್ರಕರಣಗಳನ್ನು ತಡೆಯಬಹುದು. ಕೆಲವೊಮ್ಮೆ ಹೃದಯಾಘಾತವು ತುಂಬಾ ತೀವ್ರವಾಗಿ ಇರುತ್ತದೆ. ಅದು ಪ್ರಾಣಕ್ಕೆ ಕುತ್ತು ತರುತ್ತದೆ. ಹೃದಯಾಘಾತಕ್ಕೆ ಕಾರಣಗಳು ಅಧಿಕ ಬಿಪಿ, ಕೊಲೆಸ್ಟ್ರಾಲ್, ಒತ್ತಡ ಇತ್ಯಾದಿ ಹಲವು ಕಾರಣಗಳಿವೆ.


    ದೇಹದಲ್ಲಿ ಮೆಗ್ನೀಸಿಯಮ್ ಅಂಶದ ಕೊರತೆ


    ಕೆಲವೊಮ್ಮೆ ದೇಹದಲ್ಲಿ ಮೆಗ್ನೀಸಿಯಮ್ ಅಂಶದ ಕೊರತೆಯಿಂದಾಗಿಯೂ ಹಠಾತ್ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು. ಮೆಗ್ನೀಸಿಯಮ್ ಎಂದರೇನು? ಎಂದು ನೀವು ಕೇಳಿದರೆ ಮೆಗ್ನೇಸಿಯಂ ಒಂದು ದೇಹಕ್ಕೆ ಬೇಜಾದ ಅತ್ಯಗತ್ಯ ಖನಿಜ ಆಗಿದೆ. ಮೆಗ್ನೀಸಿಯಮ್ ಕೊರತೆ ಯಾವ ಕಾಯಿಲೆಗೆ ಕಾರಣವಾಗುತ್ತದೆ ಎಂದು ನಾವು ಇಲ್ಲಿ ತಿಳಿಯೋಣ.


    ಇದ್ದಕ್ಕಿದ್ದಂತೆ ಹೃದಯಾಘಾತ ಏಕೆ ಉಂಟಾಗುತ್ತದೆ?


    ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ ನಲ್ಲಿ ಪ್ರಕಟವಾದ ಸಂಶೋಧನೆಯು ಈ ಬಗ್ಗೆ ಹೇಳುತ್ತದೆ. ಹೃದಯ ಬಡಿತಕ್ಕೆ ಕಾರಣವಾದ ಕಾರ್ಡಿಯೋಮಯೋಸೈಟ್ ಕೋಶಗಳ ಶಕ್ತಿ ಮತ್ತು ವಿದ್ಯುತ್ ಸ್ಥಿರತೆಗೆ ಮೆಗ್ನೀಸಿಯಂ ಅಂಶ ಬೇಕಾಗಿದೆ ಎಂದು ವರದಿ ಹೇಳುತ್ತದೆ.


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಇದರ ಕೊರತೆಯು ಅಸಹಜ ಹೃದಯ ಬಡಿತಕ್ಕೆ ಕಾರಣ ಆಗಬಹುದು. ಮತ್ತು ಹೃದಯಾಘಾತ ಸೇರಿದಂತೆ ಅನೇಕ ಹೃದಯ ಕಾಯಿಲೆಗಳಿಗೆ ಕಾರಣ ಆಗಬಹುದು.


    ಮೆಗ್ನೀಸಿಯಮ್ ಕೊರತೆ ನೀಗಿಸಲು ಏನು ತಿನ್ನಬೇಕು?


    ಡಾರ್ಕ್ ಚಾಕೊಲೇಟ್


    ಡಾರ್ಕ್ ಚಾಕೊಲೇಟ್ ಅನ್ನು ಅನಾರೋಗ್ಯಕರ ಎಂದು ಹೇಳಲಾಗುತ್ತದೆ. ಏಕೆಂದರೆ ಇದನ್ನು ಮಿತಿಯಲ್ಲಿ ತಿನ್ನುವುದು ಅನೇಕ ಆರೋಗ್ಯ ಸಮಸ್ಯೆ ನಿವಾರಿಸಿಸುತ್ತದೆ. ಇದರಲ್ಲಿ ಮೆಗ್ನೀಸಿಯಮ್ ಕೊರತೆ ಸೇರಿದೆ. 28 ಗ್ರಾಂ ಡಾರ್ಕ್ ಚಾಕೊಲೇಟ್‌ನಲ್ಲಿ 64 ಮಿಗ್ರಾಂ ಮೆಗ್ನೀಸಿಯಂ ಇದೆ. ಇದು ಅತ್ಯುತ್ತಮ ಮೆಗ್ನೀಸಿಯಮ್ ಆಹಾರ ನೀಡುತ್ತದೆ.


    ಒಣ ಹಣ್ಣುಗಳು


    ಬಾದಾಮಿ, ಗೋಡಂಬಿ, ವಾಲ್‌ ನಟ್‌ ಒಣ ಹಣ್ಣುಗಳು ಸಹ ಮೆಗ್ನೀಸಿಯಮ್ ಆಹಾರ ಮೂಲಗಳ ಪಟ್ಟಿಯಲ್ಲಿ ಬರುತ್ತವೆ. ಇದರ ಜೊತೆಗೆ ಒಣ ಹಣ್ಣುಗಳು ಫೈಬರ್ ಮತ್ತು ಮೊನೊಸಾಚುರೇಟೆಡ್ ಕೊಬ್ಬು ಸಹ ಹೊಂದಿವೆ. ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಹೃದಯಾಘಾತಕ್ಕೆ ಮತ್ತೊಂದು ಕಾರಣ ಕೊಲೆಸ್ಟ್ರಾಲ್. 28 ಗ್ರಾಂ ಗೋಡಂಬಿಯಲ್ಲಿ ನೀವು 82 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಪಡೆಯುತ್ತೀರಿ.


    ದ್ವಿದಳ ಧಾನ್ಯಗಳು


    ದ್ವಿದಳ ಧಾನ್ಯಗಳ ಸೇವನೆ ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಉಂಟಾಗಲ್ಲ. ಏಕೆಂದರೆ ಕೇವಲ 1 ಕಪ್ ದ್ವಿದಳ ಧಾನ್ಯಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ಮೆಗ್ನೀಸಿಯಮ್ 30 ಪ್ರತಿಶತ ನೀವು ಪಡೆಯಬಹುದು. 1 ಕಪ್ ಪಾಡ್‌ಗಳಲ್ಲಿ ಸುಮಾರು 120 ಮಿಗ್ರಾಂ ಮೆಗ್ನೀಸಿಯಮ್ ಇದೆ. ಕಾಳುಗಳು, ಕಡಲೆ, ಬಟಾಣಿ, ಸೋಯಾಬೀನ್ ಇತ್ಯಾದಿಗಳು ಬೀನ್ಸ್ ಒಳಗೆ ಬರುತ್ತವೆ.


    ಬೀಜಗಳು


    ಕುಂಬಳಕಾಯಿ ಬೀಜ, ಚಿಯಾ ಬೀಜ, ಸೆಣಬಿನ ಬೀಜ ಇತ್ಯಾದಿಗಳನ್ನು ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವು ಪೌಷ್ಟಿಕಾಂಶದಿಂದ ತುಂಬಿವೆ. ಈ ಬೀಜಗಳು ದೊಡ್ಡ ಪ್ರಮಾಣದ ಮೆಗ್ನೀಸಿಯಮ್ ಅನ್ನು ಸಹ ಹೊಂದಿವೆ. 28 ಗ್ರಾಂ ಬೀಜಗಳನ್ನು ತಿನ್ನುವ ಮೂಲಕ ನೀವು ಸುಮಾರು 150 ಮಿಗ್ರಾಂ ಮೆಗ್ನೀಸಿಯಮ್ ಪಡೆಯಬಹುದು.


    ಧಾನ್ಯಗಳು


    ಸಸ್ಯಾಹಾರಿಗಳಿಗೆ ಮೆಗ್ನೀಸಿಯಮ್ ಆಹಾರಗಳ ಕೊರತೆಯಿಲ್ಲ. ಕ್ವಿನೋವಾ, ಗೋಧಿ, ಓಟ್ಸ್ ಇತ್ಯಾದಿಗಳಲ್ಲಿ ಸಾಕಷ್ಟು ಮೆಗ್ನೀಸಿಯಮ್ ಇದೆ. ದೇಹದಲ್ಲಿ ಈ ಪೋಷಕಾಂಶದ ಕೊರತೆ ತಡೆಯುತ್ತದೆ. ಮೆಗ್ನೀಸಿಯಂ ಆರೋಗ್ಯ ಪ್ರಯೋಜನಗಳು ಯಾವುವು?


    ಇದನ್ನೂ ಓದಿ: ಗರ್ಭಾವಸ್ಥೆಯಲ್ಲುಂಟಾಗುವ ಫೋಲಿಕ್ ಆಮ್ಲದ ಕೊರತೆಯಿಂದ ಯಾವೆಲ್ಲಾ ಸಮಸ್ಯೆ ಉಂಟಾಗುತ್ತದೆ? ಯಾವ ಪದಾರ್ಥಗಳು ಇದನ್ನು ಪೂರೈಸುತ್ತವೆ?


    ದೇಹದ ಮೆಗ್ನೀಸಿಯಮ್ ಮಟ್ಟ ಸರಿಪಡಿಸಿದರೆ ಖಿನ್ನತೆ, ಮಧುಮೇಹ, ಹೃದ್ರೋಗ, ಮೈಗ್ರೇನ್ ಮುಂತಾದ ಸಮಸ್ಯೆ ದೂರವಾಗುತ್ತವೆ.

    Published by:renukadariyannavar
    First published: