ಪ್ಲಾಸ್ಟಿಕ್​ ಕಪ್​ನಲ್ಲಿ ಚಹಾ ಕುಡಿತೀರಾ? ಹಾಗದ್ರೆ ಅಪಾಯ ಗ್ಯಾರಂಟಿ

ಅಂಗಡಿಗಳಲ್ಲಿ ಅಥವಾ ಟೀ ಸ್ಟಾಲ್​ಗಳಲ್ಲಿ ಬಳಸುವ ಪ್ಲಾಸ್ಟಿಕ್​ ಗ್ಲಾಸ್​​ ಅನ್ನು ಪಾಲಿಯೆಸ್ಟರ್​​ನಿಂದ ತಯಾರಿಸಲಾಗುತ್ತದೆ. ಈ ಕಪ್​ನಲ್ಲಿ ಬಿಸಿ ಟೀ ಹಾಕಿದಾಗ ಅದರಲ್ಲಿ ಅಂಟಿರುವ ಹಾನಿಕಾರಕ ಅಂಶಗಳು ಚಹಾದೊಡನೆ ಸೇರಿತ್ತವೆ.

Harshith AS | news18-kannada
Updated:November 2, 2019, 9:16 AM IST
ಪ್ಲಾಸ್ಟಿಕ್​ ಕಪ್​ನಲ್ಲಿ ಚಹಾ ಕುಡಿತೀರಾ? ಹಾಗದ್ರೆ ಅಪಾಯ ಗ್ಯಾರಂಟಿ
ಟೀ
  • Share this:
ಮುಂಜಾಜೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕೆಬೇಕು. ಇನ್ನು ಕೆಲವರಿಗೆ ಆಫೀಸಿನ ಒತ್ತಡದ ಸಂದರ್ಭದಲ್ಲಿ ರಿಲಾಕ್ಸ್​ ಆಗಲು ಟೀ ಕುಡಿಯದಿದ್ದರೆ ಸಮಧಾನವೇ ಆಗುವುದಿಲ್ಲ. ಆದರೆ ಮನೆಯಲ್ಲಿದ್ದಾಗ ಮಾತ್ರ ಟೀ ಕುಡಿಯಲು ಸ್ಟೀಲ್​ ಗ್ಲಾಸ್​ ಬಳಸುವ ನಾವು ಹೊರಗಡೆ ಹೋದಾಗ ಪ್ಲಾಸ್ಟಿಕ್​ ಕಪ್​ನಲ್ಲಿ ಕುಡಿಯುತ್ತೇವೆ. ಆದರೆ ಪ್ಲಾಸ್ಟಿಕ್​ ಕಪ್​ನಲ್ಲಿ ಕುಡಿಯುವ ಟೀ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

ಅಂಗಡಿಗಳಲ್ಲಿ ಅಥವಾ ಟೀ ಸ್ಟಾಲ್​ಗಳಲ್ಲಿ ಬಳಸುವ ಪ್ಲಾಸ್ಟಿಕ್​ ಗ್ಲಾಸ್​​ ಅನ್ನು ಪಾಲಿಯೆಸ್ಟರ್​​ನಿಂದ ತಯಾರಿಸಲಾಗುತ್ತದೆ. ಈ ಕಪ್​ನಲ್ಲಿ ಬಿಸಿ ಟೀ ಹಾಕಿದಾಗ ಅದರಲ್ಲಿ ಅಂಟಿರುವ ಹಾನಿಕಾರಕ ಅಂಶಗಳು ಚಹಾದೊಡನೆ ಸೇರಿರುತ್ತವೆ. ಅಂತೆಯೇ, ಅಧ್ಯಾಯನವೊಂದರ ಪ್ರಕಾರ ಪ್ಲಾಸ್ಟಿಕ್​ ಗ್ಲಾಸ್​ನಲ್ಲಿ ಚಹಾ ಸೇವಿಸುದರಿಂದ ಬಾಯಿ ಕಾನ್ಸರ್​ ಕೂಡ ಕಾರಣವಾಗಬಹುದೆಂದು ತಿಳಿಸಿದೆ.

ಇದನ್ನೂ ಓದಿ: ನಾಳಿನ ‘ವಿಶ್ವಾಸ’ದ ಬಗ್ಗೆ ಚಿಂತೆಯಿಲ್ಲ, 1 ವರ್ಷ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟ ತಮಗೆಲ್ಲರಿಗೂ ಧನ್ಯವಾದ; ಕೈ ಶಾಸಕರಿಗೆ ಎಚ್​ಡಿಕೆ ಕೃತಜ್ಞತೆ

ಪ್ಲಾಸ್ಟಿಕ್​ ಕಪ್​ ತಯಾರಿಸುವ ವೇಳೆ ಸೋರದಂತೆ ತಡೆಯಲು ಕೃತಕ ಮೇಣದ ಬತ್ತಿಯನ್ನು ಲೇಪನ ಮಾಡಿರುತ್ತಾರೆ. ಬಿಸಿ ಚಹಾ 45 ಡಿಗ್ರಿಗಿಂತ  ಹೆಚ್ಚಾದಾಗ ಮೇಣ ಕರಗಿ ಚಹಾದೊಂದಿಗೆ ಸೇರುತ್ತದೆ. ಇದನ್ನು ಸವಿಯುದರಿಂದ ಕರುಳಿನ ಸೋಂಕು ಅಥವಾ ಜೀರ್ಣಾಂಗ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.

ಇನ್ನು ಥರ್ಮೊಕೋಲ್​ ಕಪ್​ನಲ್ಲಿ ಚಹಾ ಕುಡಿದರೆ ಚರ್ಮದ ಸೋಂಕು ಕಾಡುತ್ತದೆ. ಇದರಿಂದ ನಿಮ್ಮ ಚರ್ಮದ ಮೇಲೆ ಕೆಂಪು ಕಲೆಗಳು, ತುರಿಕೆ ಕಾಣಿಸಿಕೊಳ್ಳುಬಹುದು. ದಿನನಿತ್ಯ ಥರ್ಮೊಕೋಲ್​ ಕಪ್ ಬಳಸುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗಬಹುದು.​

ನಿಮ್ಮ ನ್ಯೂಸ್​18 ಕನ್ನಡವನ್ನು  FacebookTwitterInstagramHelo & ShareChat ನಲ್ಲಿ ಹಿಂಬಾಲಿಸಿ

 
First published: November 2, 2019, 9:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading