Fever v/s Heart Attack: ಜ್ವರದಿಂದ ಹೃದಯಘಾತವಾಗುತ್ತಾ? ವೈದ್ಯರು ಹೇಳುವ ಸತ್ಯ ಇಲ್ಲಿದೆ ಕೇಳಿ

ಇಂದಿನ ಆಧುನಿಕ ಜೀವನಶೈಲಿಯಲ್ಲಿ (Lifestyle) ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಒಂದು ಸಾಧನೆ ಎಂಬಂತೆ ಆಗಿದೆ. ಹೌದು ಆರೋಗ್ಯವಿದ್ದರೆ ಎಲ್ಲ, ಅನಾರೋಗ್ಯದಿಂದ ನಾವು ಜೀವನದಲ್ಲಿ ಏನನ್ನು ಮಾಡುವುದಕ್ಕೆ ಆಗುವುದಿಲ್ಲ. ಇಷ್ಟು ದಿನ ಸಣ್ಣ ಜ್ವರ (Fever) ಬಂದರೆ ಮನೆಔಷಧಿ ಕುಡಿದರೆ ಒಂದೆರಡು ದಿನದಲ್ಲಿ ಸುಧಾರಿಸುತ್ತಾರೆ ಎಂಬ ವಿಚಾರಕ್ಕೆ ಸಣ್ಣ ಜ್ವರದ ಲಕ್ಷಣಗಳಿಂದ ಹೃದಯಘಾತವಾಗುವ (Heart attack) ಸಂಭವ ಹೆಚ್ಚು ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಆಧುನಿಕ ಜೀವನಶೈಲಿಯಲ್ಲಿ (Lifestyle) ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಒಂದು ಸಾಧನೆ ಎಂಬಂತೆ ಆಗಿದೆ. ಹೌದು ಆರೋಗ್ಯವಿದ್ದರೆ ಎಲ್ಲ, ಅನಾರೋಗ್ಯದಿಂದ ನಾವು ಜೀವನದಲ್ಲಿ ಏನನ್ನು ಮಾಡುವುದಕ್ಕೆ ಆಗುವುದಿಲ್ಲ. ಇಷ್ಟು ದಿನ ಸಣ್ಣ ಜ್ವರ (Fever) ಬಂದರೆ ಮನೆಔಷಧಿ ಕುಡಿದರೆ ಒಂದೆರಡು ದಿನದಲ್ಲಿ ಸುಧಾರಿಸುತ್ತಾರೆ ಎಂಬ ವಿಚಾರಕ್ಕೆ ಸಣ್ಣ ಜ್ವರದ ಲಕ್ಷಣಗಳಿಂದ ಹೃದಯಘಾತವಾಗುವ (Heart attack) ಸಂಭವ ಹೆಚ್ಚು ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ಅಯ್ಯೋ ಜ್ವರ ಬಂದರೆ ಹೃದಯಘಾತವಾಗುತ್ತಾ ಎಂದು ಗಾಬರಿ ಪಡಬೇಡಿ. ಎಲ್ಲರಲ್ಲೂ ಈ ಲಕ್ಷಣಗಳು ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವರಲ್ಲಿ ಈ ರೀತಿಯ ಲಕ್ಷಣಗಳು (Symptoms) ಕಾಣಿಸಿಕೊಳ್ಳಬಹುದು ಮುಂಜಾಗ್ರತೆ ವಹಿಸಿ ಎಂದು ವೈದ್ಯರು ಹೇಳುತ್ತಿದ್ದಾರೆ.

ಹಾಗಿದ್ರೆ ಈ ಸಣ್ಣ ಜ್ವರ ವರ್ಸ್‌ಸ್‌ ಹೃದಯಘಾತದ ನಡುವೆ ಇರುವ ವ್ಯತ್ಯಾಸಗಳೇನು ? ಇದರ ಲಕ್ಷಣಗಳೇನು ಎಂಬುದನ್ನು ಈ ಲೇಖನದಲ್ಲಿ ಸವಿಸ್ತಾರವಾಗಿ ನಾವಿಲ್ಲಿ ತಿಳಿಯೋಣ.

ವೈರಲ್‌ ಜ್ವರ ಮತ್ತು ಹೃದಯಘಾತದ ನಡುವೆ ಇರುವ ವ್ಯತ್ಯಾಸಗಳೇನು?
ಅಲರ್ಜಿಯಿಂದ ಬರುವ ಸಣ್ಣ ಜ್ವರ ಅಥವಾ ಸಾಮಾನ್ಯವಾಗಿ ಬರುವ ಜ್ವರ ಮತ್ತು ಹೃದಯಘಾತದ ನಡುವೆ ಅಷ್ಟೊಂದು ವ್ಯತ್ಯಾಸವಿಲ್ಲ. ಮೊದಲನೆಯದಾಗಿ ಮೂಗು, ಗಂಟಲು ಮತ್ತು ಶ್ವಾಸಕೋಶಗಳನ್ನು ಒಳಗೊಂಡಂತೆ ಇತರ ನಿಮ್ಮ ಉಸಿರಾಟದ ವ್ಯವಸ್ಥೆಯ ಅಂಗಗಳ ಮೇಲೆ ದಾಳಿ ಮಾಡುವ ವೈರಲ್‌ ಸೋಂಕು ಇದಾಗಿದ್ದರೆ, ಹೃದಯಘಾತದ ಮುನ್ಸೂಚನೆ ಇದು ಎಂದು ತಿಳಿಯಬಹುದು.

ಇನ್ನು ಎರಡನೆಯ ಅಂಶವನ್ನು ನೋಡುವುದಾದರೆ, ಹೃದಯಕ್ಕೆ ಬೇಕಾಗುವಷ್ಟು ರಕ್ತ ಸೂಕ್ತವಾಗಿ ಪೂರೈಕೆ ಆಗದಿದ್ದಾಗ ಈ ಹೃದಯಘಾತ ಸಂಭವಿಸುವ ಪ್ರಮಾಣ ಹೆಚ್ಚು. ಅನೇಕರು ಜ್ವರ ಬಂದಾಗ, ಜ್ವರ ತಾನೇ ಎರಡು ದಿನದಲ್ಲಿ ವಾಸಿಯಾಗುತ್ತದೆ ಎಂದು ಇನ್ನು ಮುಂದೆ ಭಾವಿಸುವ ಆಗಿಲ್ಲ. ಕೂಡಲೇ ವೈದ್ಯರ ತಪಾಸಣೆ ಮಾಡಿಸಿಕೊಳ್ಳಲೇ ಬೇಕು, ಇಲ್ಲದಿದ್ದರೆ ಮುಂದೆ ಒಂದು ದಿನ ತೀವ್ರ ಹೃದಯಘಾತಕ್ಕೆ ಒಳಗಾಗುವ ಸಂಭವ ಹೆಚ್ಚಿರುತ್ತದೆ.

ಹೃದಯಘಾತಕ್ಕೆ ಒಳಗಾದ ವ್ಯಕ್ತಿಯ ವಿಶೇಷ ಕಥೆಯಿದು
ಇದರ ಕುರಿತು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​(AHA) ನ ಕೆಲವು ಜನರ ಬದುಕುಳಿದ ಕಥೆಗಳಲ್ಲಿ ಒಂದಾದ ಲಿಜ್ ಜಾನ್ಸನ್ ಎಂಬ ವ್ಯಕ್ತಿಯು ಹೃದಯಘಾತಕ್ಕೆ ಒಳಗಾದ ವಿಶೇಷ ಕಥೆ ಇದು. ಈ ವ್ಯಕ್ತಿಯು ಅಧಿಕ ರಕ್ತದೊತ್ತಡ ಅಥವಾ ಅಧಿಕ ಕೊಲೆಸ್ಟ್ರಾಲ್ ಅನ್ನು ಹೊಂದಿರಲಿಲ್ಲ. ಹಾಗೆಯೇ ಇವರ ಕುಟುಂಬದಲ್ಲಿ ಯಾರಿಗೂ ಹೃದಯಘಾತ ಆಗುವ ಆನುವಂಶಿಕತೆಯೂ ಇಲ್ಲ. ಆದರೂ ಇವರು ಹೃದಯಘಾತ ಸಂಭವಿಸುವ ಲಕ್ಷಣಗಳನ್ನು ಹೊಂದಿದರು. ಇವರು ಈ ಮುಂಚೆ ಜ್ವರ ಎಂದು ಭಾವಿಸಿ ಸುಮ್ಮನೆ ಇದ್ದರು. ಆದರೆ ಮತ್ತೆ ಮತ್ತೆ ಜ್ವರ ಬಂದಾಗ ವೈದ್ಯರ ಸಲಹೆ ಮೇರೆಗೆ ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡಾಗ ಇವರಿಗೆ ಹೃದಯಘಾತವಾಗುವ ಲಕ್ಷಣಗಳು ಗೋಚರಿಸಿವೆ ಎಂದು ವೈದ್ಯಕೀಯ ವರದಿಗಳು ಹೇಳಿವೆ.

ಇದನ್ನೂ ಓದಿ: Heart Attack: ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ ಹೃದಯಕ್ಕೆ ಅಪಾಯ ಗ್ಯಾರಂಟಿ

ಈ ಹಿಂದೆಯೂ ವೈದ್ಯಕೀಯ ಲೋಕದಲ್ಲಿ ಇಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಆದ್ದರಿಂದ ಜ್ವರ ಎಂದು ಲಘುವಾಗಿ ಪರಿಗಣಿಸುವವರಿಗೆ ಇದು ಎಚ್ಚರಿಕೆ ಗಂಟೆ ಎಂದೇ ಹೇಳಬಹುದು. ಈ ಲಕ್ಷಣಗಳ ಜೊತೆಗೆ ಇತರ ಲಕ್ಷಣಗಳು ನಿಮ್ಮನ್ನು ತೀವ್ರವಾಗಿ ಭಾದಿಸಿದರೆ ಅವು ಹೃದಯಘಾತದ ಆರಂಭಿಕ ಲಕ್ಷಣಗಳು ಎಂದು ವೈದ್ಯರು ಹೇಳುತ್ತಾರೆ.

ಹಾಗಿದ್ರೆ ಹೃದಯಘಾತಕ್ಕೆ ಕಾರಣವಾಗುವ ಇತರ ಲಕ್ಷಣಗಳನ್ನು ಇಲ್ಲಿ ನೋಡೋಣ:
ವಾಂತಿ
ಜ್ವರ ಬಂದಾಗ ವಾಂತಿ ಅಥವಾ ವಾಂತಿ ಬರುವ ಹಾಗೆ ಅನಿಸುವುದು ಮತ್ತು ಇತರ ಜಠರಗರುಳಿನ ಸಮಸ್ಯೆಗಳು ಸಾಮಾನ್ಯವಾದ ಲಕ್ಷಣಗಳಾಗಿವೆ. ಇದು ಹೆಚ್ಚಿನ ಜ್ವರ, ತಲೆನೋವು, ಸ್ನಾಯು ನೋವು, ಕೆಮ್ಮು, ನೋಯುತ್ತಿರುವ ಗಂಟಲು ಮತ್ತು ಆಯಾಸ ಸೇರಿದಂತೆ ಇತರ ರೋಗಲಕ್ಷಣಗಳೊಂದಿಗೆ ಹೊಂದಿರುತ್ತದೆ. ಹಾಗೆಯೇ, ಹೃದಯಾಘಾತದಲ್ಲಿಯೂ ಕೂಡ ವಾಕರಿಕೆ ಲಕ್ಷಣಗಳು ಕಾಣಿಸುತ್ತವೆ.

ವಿಶೇಷವಾಗಿ ಮಹಿಳೆಯರಲ್ಲಿ ಈ ರೋಗಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಏಕೆಂದರೆ ಹೃದಯದಲ್ಲಿ ರಕ್ತಕೊರತೆಯ ಮತ್ತು ಗಾಯಗೊಂಡ ಕಾರ್ಡಿಯೋಮಯೋಸೈಟ್‌ಗಳು ಲ್ಯಾಕ್ಟಿಕ್ ಆಮ್ಲ, ಪೈರುವಿಕ್ ಆಮ್ಲ ಮತ್ತು ಇತರ ಮೆಟಾಬಾಲೈಟ್‌ಗಳನ್ನು ಬಿಡುಗಡೆ ಮಾಡುತ್ತವೆ ಇದರಿಂದ ಹೃದಯಘಾತ ಆಗುವ ಸಂಭವ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಈ ಮೆಟಾಬಾಲೈಟ್‌ಗಳು ಮತ್ತು ಆಮ್ಲಗಳು ಕಾರ್ಡಿಯೋಜೆನಿಕ್ ಎಂಬ ಹಾರ್ಮೊನ್‌ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ವಾಕರಿಕೆ ಮತ್ತು ವಾಂತಿಯ ಲಕ್ಷಣಗಳು ಗೋಚರವಾಗುತ್ತವೆ.

ತಲೆತಿರುಗುವಿಕೆ
ತಲೆತಿರುಗುವಿಕೆ ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಅಥವಾ ಇದು ಜ್ವರದಂತಹ ವೈರಲ್ ಸೋಂಕುಗಳ ಲಕ್ಷಣವೂ ಆಗಿರಬಹುದು. ಇನ್ನು ಕೆಲವರಿಗೆ ಯಾವಾಗಲೂ ತಲೆನೋವು ಇರುವಂತೆ ಭಾಸವಾಗಬಹುದು. ಉಸಿರಾಟದ ತೊಂದರೆ, ಕೈ-ಕಾಲುಗಳಲ್ಲಿ ಊದಿಕೊಳ್ಳುವುದು, ಆಗಾಗ ಆಯಾಸ, ಅಥವಾ ಎದೆನೋವು ಮುಂತಾದ ಲಕ್ಷಣಗಳು ಜ್ವರ ಬಂದಾಗ ಕಾಣಿಸಿಕೊಂಡರೆ ಅವು ಹೃದಯಘಾತ ಸಂಭವಿಸುವ ಸೂಚನೆಯನ್ನು ನಿಮಗೆ ತಿಳಿಸುತ್ತಿವೆ ಎಂಬ ಅರ್ಥವನ್ನು ಹೊಂದಿದೆ.

ವಿಪರೀತ ಚಳಿ ಅಥವಾ ವಿಪರೀತ ಬೆವರುವುದು
ಶೀತ ಬೆವರುವಿಕೆ ಅಥವಾ ಶೀತವು ಹೃದಯಾಘಾತದ ಮೊದಲ ಲಕ್ಷಣಗಳಲ್ಲಿ ಒಂದಾಗಿದೆ. ತೀವ್ರವಾದ ಎದೆ ನೋವು, ಉಸಿರಾಟದ ತೊಂದರೆ ಮತ್ತು ಹೃದಯ ಬಡಿತದ ನಂತರ ಶೀತ ಬೆವರುವಿಕೆ ಎಂಬ ಲಕ್ಷಣಗಳು ಸಂಭವಿಸಿದರೆ, ತಕ್ಷಣವೇ ತುರ್ತು ವೈದ್ಯಕೀಯ ಸಹಾಯವನ್ನು ಪಡೆಯುವುದು ಉತ್ತಮ. ಇದು ಜ್ವರದ ಇನ್ನೊಂದು ಲಕ್ಷಣ ಕೂಡ ಆಗಿರಬಹುದು.

ಇದನ್ನೂ ಓದಿ:  Stroke: ಹಾರ್ಟ್ ಸ್ಟ್ರೋಕ್ ಆಗಿರುವುದನ್ನು ಸೂಚಿಸುವ ಮೂರು ಲಕ್ಷಣಗಳಿವು! ನೆಗ್ಲೆಕ್ಟ್ ಮಾಡಬೇಡಿ

ಉಸಿರಾಟದ ತೊಂದರೆ
ವೈರಲ್‌ ಜ್ವರಗಳಂತಹ ಅತ್ಯಂತ ಗಂಭೀರ ಪ್ರಕರಣಗಳಲ್ಲಿ, ಎದೆ ನೋವು, ತಲೆತಿರುಗುವಿಕೆ ಮತ್ತು ರೋಗಗ್ರಸ್ತವಾಗುವಿಕೆಗಳ ಜೊತೆಗೆ ಉಸಿರಾಟದ ತೊಂದರೆ ಸಂಭವಿಸಬಹುದು. ಉಸಿರಾಟದ ತೊಂದರೆಯು ಹೃದಯಘಾತದ ಮತ್ತೊಂದು ಲಕ್ಷಣವಾಗಿದೆ. ಇನ್ನು ಕೆಲವರಿಗೆ ಎದೆನೋವು ,ತಲೆತಿರುಗುವಿಕೆ ಮತ್ತು ಮೂರ್ಛೆ ಹೋಗುವ ಇತರ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ವೀಪರಿತ ಆಯಾಸ
ಆಯಾಸ ಅಥವಾ ಸಾಮಾನ್ಯ ದಣಿವಿನ ಹಿಂದೆ ಹಲವಾರು ಕಾರಣಗಳಿರಬಹುದು. ಅದು ಏನೇ ಇರಲಿ, ಆಯಾಸದ ಹಿಂದಿನ ಪ್ರಮುಖ ಕಾರಣವೆಂದರೆ ಹೃದಯಾಘಾತ ಎಂದು ವೈದ್ಯರು ಹೇಳುತ್ತಾರೆ. ಹೃದಯಾಘಾತವು ನಿಮ್ಮ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಹೇರುವ ಕಾರಣದಿಂದ ದೇಹದಲ್ಲಿ ವೀಪರಿತ ಆಯಾಸವಾಗುವಂತೆ ಕಂಡುಬರುತ್ತದೆ. ಇನ್ನೊಂದು ಕಡೆ ಅತಿಯಾದ ಆಯಾಸವು ಜ್ವರದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಇದು ಇತರ ರೋಗಲಕ್ಷಣಗಳ ಮೊದಲು ಕಾಣಿಸಿಕೊಳ್ಳಬಹುದು. ಆದರೆ ನಂತರದಲ್ಲಿ ನಿಮಗೆ ಹೃದಯಾಘಾತದ ಇತರ ರೋಗಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಲು ತಜ್ಞರು ಸಲಹೆ ನೀಡುತ್ತಾರೆ.

ಇನ್ನು ಈ ಹೃದಯಘಾತ ಸಂಭವಿಸಿದಂತೆ ಎಚ್ಚರಿಕೆ ವಹಿಸುವುದು ಹೇಗೆ?
ಹೃದಯಘಾತ ಸಂಭವಿಸುವ ಮೊದಲು ಅದನ್ನು ಕೆಲವು ಮುಂಜಾಗ್ರತೆ ವಹಿಸುವುದರಿಂದ ತಡೆಗಟ್ಟಬಹುದು. ಅವುಗಳಲ್ಲಿ ಮುಖ್ಯವಾದ ಮುಂಜಾಗ್ರತೆ ಎಂದರೆ ಆಗಾಗ ಹೃದಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹೃದಯಘಾತವನ್ನು ತಡೆಗಟ್ಟಬಹುದು.

ನಿಯಮಿತವಾಗಿ ಹೃದಯ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮ
ಇದರ ಕುರಿತು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​(AHA) ಸಂಸ್ಥೆಯು "ಪರಿಧಮನಿಯ ಕಾಯಿಲೆ (ಸಿಎಡಿ) ಎಂದು ಹೆಸರಿಸುವ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುವ ಪ್ರಮುಖ ಪರಿಹಾರವೆಂದರೆ- ಆಹಾರದ ಗುಣಮಟ್ಟ, ದೈಹಿಕ ಚಟುವಟಿಕೆ, ಧೂಮಪಾನ ಮತ್ತು ಮದ್ಯಪಾನ ಮಾಡದೇ ಇರುವುದು, ಬಾಡಿ ಮಾಸ್ ಇಂಡೆಕ್ಸ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು, ಒತ್ತಡ, ಅಥವಾ ರಕ್ತದ ಗ್ಲೂಕೋಸ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು, ನಿಯಮಿತವಾಗಿ ಹೃದಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತಿ ಮುಖ್ಯ” ಎಂದು ಹೇಳುತ್ತದೆ.

ಇದನ್ನೂ ಓದಿ: Tattoo ಪ್ರಿಯರೇ ಹುಷಾರ್! ಹಚ್ಚೆ ಹಾಕಲು ಬಳಸುವ ಇಂಕ್​ನಿಂದ ಕ್ಯಾನ್ಸರ್ ಅಪಾಯ!

ಹೃದಯ ಆರೋಗ್ಯ ತಪಾಸಣೆಯ ಮುಖ್ಯ ವೈದ್ಯಕೀಯ ಪರೀಕ್ಷೆಗಳಿವು
ಹೃದಯ ಆರೋಗ್ಯ ಪರೀಕ್ಷೆಗಳಲ್ಲಿ ಮುಖ್ಯವಾಗಿ - ಎಲೆಕ್ಟ್ರೋಕಾರ್ಡಿಯೋಗ್ರಫಿ (ECG ಅಥವಾ EKG), ಎಕೋಕಾರ್ಡಿಯೋಗ್ರಫಿ ಅಥವಾ ಸ್ಟ್ರೆಸ್‌ ಎಕೋಕಾರ್ಡಿಯೋಗ್ರಫಿ, ಪರಿಧಮನಿಯ CT ಆಂಜಿಯೋಗ್ರಫಿ (CTA) ಮತ್ತು ಇತರ ಪರೀಕ್ಷೆಗಳು ಸೇರಿವೆ. ಇದಲ್ಲದೆ, ನಿಮ್ಮ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಆಗಾಗ ಪರೀಕ್ಷಿಸಲು AHA ಶಿಫಾರಸು ಮಾಡುತ್ತದೆ.
Published by:Ashwini Prabhu
First published: