Weight Loss: ತೂಕ ಇಳಿಸೋಕೆ ಬರೀ ನೀರು ಕುಡಿದ್ರೆ ಸಾಕಂತೆ! ನಿಜವಾಗಿಯೂ ಇದು ವರ್ಕ್ ಆಗುತ್ತಾ?

ಹೆಚ್ಚಿದ ತೂಕವು ಎಲ್ಲರಿಗೂ ಚಿಂತೆ ಮಾಡುತ್ತದೆ. ಮುಖ್ಯವಾಗಿ ಸ್ತ್ರೀಯರು. ಸ್ವಲ್ಪ ತೂಕ ಜಾಸ್ತಿಯಾದರೂ ಕಳವಳ ಹೆಚ್ಚಾಗುತ್ತದೆ. ಹೆಚ್ಚು ಕ್ಯಾಲರಿಯನ್ನು ಕಡಿಮೆ ಮಾಡಲು ಮತ್ತು ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಜನರು ಹಲವು ಸರ್ಕಸ್‌ ಮಾಡುತ್ತಾರೆ. ಸಾಮಾನ್ಯವಾಗಿ ತೂಕ ಜಾಸ್ತಿಯಾದ್ರೆ ಹಲವರು ವಾಕಿಂಗ್, ರನ್ನಿಂಗ್, ವರ್ಕ್‌ಔಟ್ ಮತ್ತು ಸೈಕ್ಲಿಂಗ್‌ ಮಾಡುವ ಮೂಲಕ ತೆಳ್ಳಗಾಗಲು ಪ್ರಯತ್ನ ಮಾಡುತ್ತಾರೆ. ಆದರೆ, ಕೇವಲ ನೀರು ಕುಡಿಯುವುದರ ಮೂಲಕ ತೂಕ ಕಡಿಮೆ ಮಾಡಲು ಸಾಧ್ಯವೇ? ಇಲ್ಲಿದೆ ಉತ್ತರ

ಬೆಚ್ಚಗಿನ ನೀರು

ಬೆಚ್ಚಗಿನ ನೀರು

  • Share this:
ಹೆಚ್ಚಿದ ತೂಕವು (Weight) ಎಲ್ಲರಿಗೂ ಚಿಂತೆ ಮಾಡುತ್ತದೆ. ಮುಖ್ಯವಾಗಿ ಸ್ತ್ರೀಯರು. ಸ್ವಲ್ಪ ತೂಕ ಜಾಸ್ತಿಯಾದರೂ ಕಳವಳ ಹೆಚ್ಚಾಗುತ್ತದೆ. ಹೆಚ್ಚು ಕ್ಯಾಲರಿಯನ್ನು ಕಡಿಮೆ ಮಾಡಲು ಮತ್ತು ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಜನರು ಹಲವು ಸರ್ಕಸ್‌ ಮಾಡುತ್ತಾರೆ. ಸಾಮಾನ್ಯವಾಗಿ ತೂಕ ಜಾಸ್ತಿಯಾದ್ರೆ ಹಲವರು ವಾಕಿಂಗ್, ರನ್ನಿಂಗ್, ವರ್ಕ್‌ಔಟ್ ಮತ್ತು ಸೈಕ್ಲಿಂಗ್‌ ಮಾಡುವ ಮೂಲಕ ತೆಳ್ಳಗಾಗಲು ಪ್ರಯತ್ನ ಮಾಡುತ್ತಾರೆ. ಆದರೆ, ಕೇವಲ ನೀರು ಕುಡಿಯುವುದರ (Drinking Water) ಮೂಲಕ ತೂಕ ಕಡಿಮೆ ಮಾಡಲು ಸಾಧ್ಯ ಎಂದು ತಜ್ಞರು ಇಷ್ಟು ದಿನ ಹೇಳುತ್ತಿದ್ದರು. ಆದರೆ ಅದು ಒಂದು ಮಿಥ್ಯ ಎಂದು ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಾಕಿದ್ದಾರೆ. 

ವಾಸ್ತವವಾಗಿ, ಸುಮಾರು ಎಂಟು ಕಿಲೋ ಮೀಟರ್‌ಗಳವರೆಗೆ ಜಾಗಿಂಗ್ ಮಾಡಿದಾಗ ಕಡಿಮೆಯಾಗುವ ಕ್ಯಾಲರಿಗಳನ್ನು ಕೇವಲ ನೀರು ಕುಡಿಯುವುದರಿಂದ ಕಡಿಮೆ ಮಾಡಬಹುದು. ಕುಡಿಯುವ ನೀರು ಅತಿಯಾದ ತಿನ್ನುವಿಕೆಯನ್ನು ತಪ್ಪಿಸುತ್ತದೆ. ಹೀಗಾಗಿ ತೂಕ ಹೆಚ್ಚುವುದನ್ನು ತಡೆಯುತ್ತದೆ.

ಹಾಗಿದ್ರೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ತೂಕ ಇಳಿಕೆ ಆಗುತ್ತದೆಯೇ ಅಥವಾ ಇಲ್ಲವೇ?
ಬೆಚ್ಚಗಿನ ನೀರನ್ನು ಕುಡಿಯುವುದರಿಂದ, ಹೆಚ್ಚಿನ ತೂಕವನ್ನು ಕಳೆದುಕೊಳ್ಳಬಹುದು ಎಂಬುದಕ್ಕೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು “ಊಟದ ನಂತರ ಬಿಸಿ ನೀರು ಕುಡಿಯುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಬಹಳಷ್ಟು ಜನರು ನಂಬುತ್ತಾರೆ. ಆದರೆ ಅದು ಸರಿಯಾದ ಕ್ರಮವಲ್ಲ. ಆದರೆ ಊಟದ ನಂತರ ಬೆಚ್ಚಗಿನ ನೀರು ಕುಡಿಯುವದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ ಎಂಬುದು ನಿಜ ಸಂಗತಿ ಆಗಿದೆ” ಎಂದು ಹೇಳಿದರು.

ಇದನ್ನೂ ಓದಿ:  Baking Soda: ಅಡುಗೆ ಸೋಡಾ ಚರ್ಮದ ಸಮಸ್ಯೆಗಳಿಗೆ ರಾಮಬಾಣವಂತೆ

ತೂಕ ಇಳಿಕೆಯನ್ನು ವೇಗಗೊಳಿಸಲು ಇಲ್ಲಿವೆ 5 ಸುಲಭ ಮಾರ್ಗಗಳು

  • ನಿಮ್ಮ ದಿನವನ್ನು ಡಿಟಾಕ್ಸ್‌ ನೀರಿನಿಂದ ಆರಂಭಿಸಿ
    ಡಿಟಾಕ್ಸ್ ವಾಟರ್ ಅಥವಾ ಹರ್ಬಲ್ ಪಾನೀಯಗಳು ನಮ್ಮ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಲು ಸಹಾಯ ಮಾಡುತ್ತದೆ.

  • ಉತ್ತಮ ಉಪಹಾರ ಸೇವಿಸಿ
    ಬೆಳಗಿನ ಉಪಾಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ವೈದ್ಯರು ಆಗಾಗ ಹೇಳುವುದು ಕೇಳಿರುತ್ತೇವೆ. ಇದು ನಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ಇದು ನೀವು ಮಧ್ಯ ಮಧ್ಯ ಸೇವಿಸುವ ಅನವಶ್ಯಕ ತಿನಿಸುಗಳ ಸೇವನೆಯನ್ನು ತಪ್ಪಿಸುತ್ತದೆ. ಈ ಪ್ರಕ್ರಿಯೆಯು ತೂಕ ಇಳಿಕೆಯನ್ನು ಮತ್ತಷ್ಟು ಉತ್ತೇಜಿಸಲು ಸಹಾಯ ಮಾಡುತ್ತದೆ.

  • ಹಣ್ಣುಗಳನ್ನು ಹೆಚ್ಚು ಸೇವಿಸಿ
    ಹಣ್ಣುಗಳನ್ನು ಸೂಪರ್‌ ಫುಡ್‌ ಎಂದು ತಜ್ಞರು ಕರೆಯುತ್ತಾರೆ. ಏಕೆಂದರೆ ಇವು ಹೊಂದಿರುವ ಪೋಷಕಾಂಶಗಳು ಹೆಚ್ಚು. ಇದರ ಜೊತೆಗೆ ನಮ್ಮ ದೇಹಕ್ಕೆ ಬೇಕಾಗುವ ನೈಸರ್ಗಿಕ ಸಕ್ಕರೆ ಅಂಶವನ್ನು ಇವು ಹೊಂದಿರುತ್ತವೆ. ತೂಕ ಇಳಿಕೆಯ ನಿಮ್ಮ ಪ್ರಯಾಣದಲ್ಲಿ ಹಣ್ಣುಗಳ ಸೇವನೆ ಬಹಳ ಪ್ರಯೋಜನಕಾರಿ.

  • ನೀರನ್ನು ಹೆಚ್ಚು ಕುಡಿಯಿರಿ
    ಬಹಳಷ್ಟು ಸಂದರ್ಭಗಳಲ್ಲಿ, ಜನರು ಊಟದ ನಂತರ ಅಥವಾ ಆಹಾರದ ಜೊತೆಗೆ ನೀರನ್ನು ಕುಡಿಯುತ್ತಾರೆ. ಆದರೆ, ಈ ಅಭ್ಯಾಸ ಕೂಡಾ ಅಜೀರ್ಣಕ್ಕೆ ಕಾರಣವಾಗಬಹುದು. ಜೊತೆಗೆ ತೂಕ ಹೆಚ್ಚಿಸುತ್ತದೆ. ಊಟಕ್ಕೂ ಮುನ್ನ ನೀರು ಸೇವಿಸಬೇಕು. ಇದು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ.


ಇದನ್ನೂ ಓದಿ:  Weight Loss Tips: ಜನರಲ್ಲಿ ಬೊಜ್ಜು ಹೆಚ್ಚಾಗಲು ಇದೇ ಕಾರಣವಂತೆ! ತಜ್ಞರು ಏನು ಹೇಳಿದ್ದಾರೆ ಓದಿ

  • ಜಂಕ್ ಫುಡ್ ಸೇವನೆಯನ್ನು ತಪ್ಪಿಸಿ
    ತೂಕ ಇಳಿಕೆಯ ಪ್ರಕ್ರಿಯೆಯನ್ನು ನೀವು ಆರಂಭಿಸಿದ ಕೂಡಲೇ ಮೊದಲು ನೀವು ಬಿಡಬೇಕಾಗಿರುವುದು ಈ ಜಂಕ್‌ ಫುಡ್‌ ಆಗಿದೆ. ಹೆಚ್ಚು ಎಣ್ಣೆ ಬಳಸಿ ಮತ್ತು ಹೆಚ್ಚು ಮಸಾಲೆಯುಕ್ತ ಪದಾರ್ಥ ಬಳಸಿ ತಯಾರಿಸುವ ಆಹಾರ ತೂಕ ಹೆಚ್ಚಳಕ್ಕೆ ನೇರ ಕಾರಣವಾಗಿರುತ್ತದೆ.


ಊಟದ ಮೊದಲು ಸೂಪ್ ಕುಡಿಯಿರಿ

  • ಊಟದ ಮೊದಲು ಸೂಪ್ ಕುಡಿಯುವುದರಿಂದ ಹೊಟ್ಟೆ ತುಂಬಿದಂತಾಗಿ ಕಡಿಮೆ ಆಹಾರ ಸೇವಿಸುತ್ತೇವೆ. ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ಈ ಸೂಪ್‌ಗಳನ್ನು ಊಟಕ್ಕೆ ಮುಂಚೆ ಸ್ವಲ್ಪ ಕುಡಿಯುವ ಜನರು ಶೇ. 20 ರಷ್ಟು ಕಡಿಮೆ ಆಹಾರ ತಿನ್ನುತ್ತಾರೆ.

  • ಹಣ್ಣು ಅಥವಾ ತರಕಾರಿ ಸ್ಮೂಥಿಗಳನ್ನು ಹೆಚ್ಚು ಬಳಸಿ
    ಸ್ಮೂಥಿಗಳು ಏಕಕಾಲದಲ್ಲಿ ಬಹಳಷ್ಟು ಹಣ್ಣುಗಳು, ತರಕಾರಿಗಳನ್ನು ತಿನ್ನಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನೀವು ತಯಾರಿಸಿಕೊಳ್ಳುವ ಸ್ಮೂಥಿಗಳಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತದೆ.

  • ಉಗುರು ಬೆಚ್ಚಗಿನ ನೀರು ಕುಡಿಯಿರಿ
    ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದು ಕೊಬ್ಬನ್ನು ತ್ವರಿತವಾಗಿ ಕರಗಿಸಲು ಸಹಾಯ ಮಾಡುತ್ತದೆ. ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

  • ನಿಮ್ಮ ಆಹಾರದಲ್ಲಿರಲಿ ಜೇನು ತುಪ್ಪದ ಸೇವನೆ
    ತೂಕ ಇಳಿಕೆಯಲ್ಲಿ ಹೆಚ್ಚು ಜನಪ್ರಿಯ ಆಹಾರ ಪದಾರ್ಥವಾಗಿದೆ. ಇದು ಅನಗತ್ಯ ಕೊಬ್ಬನ್ನು ತೆಗೆದು ಹಾಕುತ್ತದೆ. ಆದರೆ ಇದನ್ನು ನೀವು ಎಂದಿಗೂ ಬಿಸಿ ನೀರಿನಲ್ಲಿ ಸೇವಿಸಬಾರದು. ಬದಲಿಗೆ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬೇಕು.


ಇದನ್ನೂ ಓದಿ: Korean Hair Care Routine: ಕೊರಿಯನ್ನರ ರೀತಿ ಸುಂದರ ಕೂದಲು ನಿಮ್ಮದಾಗಬೇಕು ಅಂದ್ರೆ ಹೀಗೆ ಮಾಡಿ

  • ಸೂಕ್ತ ಸಮಯಕ್ಕೆ ಆಹಾರ ಸೇವನೆ ಮಾಡಿ
    ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದ ಕಾರಣ ಅನಾರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿದೆ. ಆಹಾರ ಸರಿಯಾಗಿ ತೆಗೆದುಕೊಳ್ಳದೆ ಆರೋಗ್ಯ ಹದಗೆಟ್ರೆ ಆಸ್ಪತ್ರೆಗಳ ಸುತ್ತ ತಿರುಗಬೇಕಾಗುತ್ತದೆ. ಕಷ್ಟಪಟ್ಟು ದುಡಿದ ಹಣವೂ ವ್ಯರ್ಥವಾಗುತ್ತದೆ. ನಾವು ತಿನ್ನುವ ಆಹಾರ ಹಾಗೂ ಸಮಯ ಅತಿಮುಖ್ಯವಾಗಿದೆ.

  • ಯೋಗ, ವ್ಯಾಯಾಮ ಮಾಡಿ
    ಎಲ್ಲರೂ ಅದರಲ್ಲೂ ಮಹಿಳೆಯರಿಗೆ ಮನೆಯಲ್ಲಿ ಸಮಯವಿಲ್ಲದೇ ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಕೆಲವೊಂದು ವ್ಯಾಯಾಮ ಮಾಡಿದ್ರೆ ನೀವು ಫಿಟ್ ಆಗುತ್ತೀರಿ ಮತ್ತು ನಿಮ್ಮ ತೂಕ ನಿಯಂತ್ರಣದಲ್ಲಿರುತ್ತದೆ.

Published by:Ashwini Prabhu
First published: