ಜ್ಞಾಪಕ ಶಕ್ತಿ ಹೆಚ್ಚಿಸಬೇಕೇ? ಹಾಗಿದ್ರೆ ನಿಯಮಿತವಾಗಿ ಚಹಾ ಕುಡಿಬೇಕಂತೆ..!

ಇದರಿಂದ ಮೆದುಳಿನ ವ್ಯವಸ್ಥಿತ ಭಾಗದ ಕಾರ್ಯವು ಆರೋಗ್ಯಕರವಾಗಿರುವುದು ಕಂಡು ಬಂದಿದೆ ಎಂದು ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ತಂಡದ ನಾಯಕ ಫೆಂಗ್ ಲೀ ಹೇಳಿದ್ದಾರೆ.

zahir | news18-kannada
Updated:September 14, 2019, 3:42 PM IST
ಜ್ಞಾಪಕ ಶಕ್ತಿ ಹೆಚ್ಚಿಸಬೇಕೇ? ಹಾಗಿದ್ರೆ ನಿಯಮಿತವಾಗಿ ಚಹಾ ಕುಡಿಬೇಕಂತೆ..!
tea
  • Share this:
ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಎದ್ದು ಬಿಸಿ ಬಿಸಿ ಚಹಾ ಕುಡಿದರೆ ಮನಸ್ಸಿಗೆ ಅದೇನೋ ಉಲ್ಲಾಸ ಸಿಗುತ್ತದೆ. ಆದರೆ ಅದೇ ಉಲ್ಲಾಸ ನಿಮ್ಮ ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತಿದ್ದರೆ?, ಹೌದು ಪ್ರತಿನಿತ್ಯ ಚಹಾ ಕುಡಿಯುವವರ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಸಿಂಗಾಪುರದ ವಿಜ್ಞಾನಿಗಳು ನಡೆಸಿದ ಈ ಅಧ್ಯಯನದಲ್ಲಿ ಪ್ರತಿನಿತ್ಯ ಚಹಾ ಸೇವಿಸುವವರ ಜ್ಞಾಪಕ ಶಕ್ತಿ ಮತ್ತು ಕಲ್ಪನಾ ಸಾಮಾರ್ಥ್ಯ ಟೀ ಕುಡಿಯದವರಿಗಿಂತ ಉನ್ನತ ಮಟ್ಟದಲ್ಲಿರುವುದು ಕಂಡುಕೊಳ್ಳಲಾಗಿದೆ.

'ನಮ್ಮ ಫಲಿತಾಂಶಗಳು ನಿಯಮಿತವಾಗಿ ಚಹಾ ಕುಡಿಯುವುದರಿಂದ ಮೆದುಳಿನ ಸಂಘಟನೆಯಲ್ಲಿ ವಯಸ್ಸಿಗೆ ಸಂಬಂಧಿಸಿದ ಕುಸಿತದ ವಿರುದ್ಧ ರಕ್ಷಣಾತ್ಮಕ ಪರಿಣಾಮ ಬೀರುವುದನ್ನು  ಸೂಚಿಸಿದೆ. ಇದರಿಂದ ಮೆದುಳಿನ ವ್ಯವಸ್ಥಿತ ಭಾಗದ ಕಾರ್ಯವು ಆರೋಗ್ಯಕರವಾಗಿರುವುದು ಕಂಡು ಬಂದಿದೆ' ಎಂದು ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ತಂಡದ ನಾಯಕ ಫೆಂಗ್ ಲೀ ಹೇಳಿದ್ದಾರೆ.

ಈ ಹಿಂದೆ ಸಹ ನಿಯಮಿತ ಚಹಾ ಸೇವನೆಯು ಮಾನವನ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಆದರೆ ಈ ಬಾರಿ ಸಂಶೋಧನೆಯಿಂದ ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ, ಮನಸ್ಥಿತಿ ಸುಧಾರಣೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ತಡೆಗಟ್ಟುವಿಕೆಯನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.

ಇದನ್ನೂ ಓದಿ: ಸೌತ್ ಸಿನಿರಂಗದ ಸ್ಟಾರ್ ನಟನ ಮುದ್ದಿನ ಮಡದಿ ಯುವರತ್ನನ ಯುವರಾಣಿ..!

ಪ್ರೊಫೆಸರ್ ಫೆಂಗ್ ನೇತೃತ್ವದಲ್ಲಿ ನಡೆದ ಈ ಅಧ್ಯಯನದ ಫಲಿತಾಂಶದಲ್ಲಿ ದೈನಂದಿನ ಚಹಾ ಸೇವನೆ ಮಾಡುವವರಲ್ಲಿ, ಜ್ಞಾಪಕ ಶಕ್ತಿಯ ಅಪಾಯ ಶೇ. 50 ಪ್ರತಿಶತದಷ್ಟು ಕಡಿಮೆ ಎಂಬುದು ತಿಳಿದು ಬಂದಿದೆ.

ವಿಜಯ್ ದೇವರಕೊಂಡ ತಮ್ಮನಿಗೂ ಕೊಡಗಿನ ಚೆಂದುಳ್ಳಿ ಚೆಲುವೆ ನಾಯಕಿ: ಆದರೆ ರಶ್ಮಿಕಾ ಅಲ್ಲ..!ಈ ಅಧ್ಯಯನಕ್ಕಾಗಿ ಸಂಶೋಧಕರ ತಂಡ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 36 ವಯಸ್ಕರನ್ನು ಪರೀಕ್ಷಿಸಿದ್ದರು. ಅವರ ಆರೋಗ್ಯ, ಜೀವನಶೈಲಿ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಮಾಹಿತಿ ಸಂಗ್ರಹಿಸಿ ಅದರ ಆಧಾರದ ಮೇಲೆ ಅಧ್ಯಯನ ನಡೆಸಲಾಗಿತ್ತು.

ಇದನ್ನೂ ಓದಿ: ಕೇವಲ 1100 ರೂ.ಗೆ ಹೋಂಡಾ ಸ್ಕೂಟರ್: ಆನ್​ಲೈನ್ ಪಾವತಿ ಮಾಡಿದ್ರೆ 7 ಸಾವಿರ ಕ್ಯಾಶ್​ಬ್ಯಾಕ್..!
First published:September 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading