Diabetes: ಮದ್ಯಪಾನದಿಂದ ಮಧುಮೇಹ ಹೆಚ್ಚುತ್ತದೆಯೇ? ಈ ಬಗ್ಗೆ ತಜ್ಞರು ಹೇಳೋದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧುಮೇಹಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ. ಒಬ್ಬ ವ್ಯಕ್ತಿಯು ಒಮ್ಮೆ ಈ ರೋಗಕ್ಕೆ ತುತ್ತಾದರೆ ಜೀವನವಿಡೀ ಬಳಲಿ ಬೆಂಡಾಗಬೇಕಾಗುತ್ತದೆ. ಇದನ್ನು ಶಾಶ್ವತವಾಗಿ ತೊಡೆದು ಹಾಕಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸಬಹುದು. ಉತ್ತಮ ಆಹಾರ ಪದ್ಧತಿ ಮತ್ತು ಸಕ್ರಿಯ ಜೀವನಶೈಲಿ ಮೂಲಕ ರಕ್ತದ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳ್ತಾರೆ.

ಮುಂದೆ ಓದಿ ...
  • Share this:

ಮಧುಮೇಹವು (Diabetes) ಗಂಭೀರ ಮತ್ತು ವೇಗವಾಗಿ (Serious And Speed) ಜನರನ್ನು (People) ತನ್ನ ತೆಕ್ಕೆಗೆ ತೆಗೆದುಕೊಳ್ತಿದೆ. ಹೆಚ್ಚು ಜನರನ್ನು ಮಧುಮೇಹ ಕಾಯಿಲೆ (Disease) ಕಾಡುತ್ತಾ ಇದೆ. ಈಗ ಕೇವಲ ವಯಸ್ಸಾದವರು (Aged) ಮಾತ್ರವಲ್ಲದೇ, ಚಿಕ್ಕ ವಯಸ್ಸಿನವರೂ ಈ ಕಾಯಿಲೆಗೆ ಅಂಟಿಕೊಳ್ಳುತ್ತಿರುವುದು ಆತಂಕಕಾರಿ ವಿಷಯ ಆಗಿದೆ. ನಾವು ತಿನ್ನುವ ಆಹಾರ (Food), ದೈಹಿಕ ಚಟುವಟಿಕೆಗಳು ತುಂಬಾ ಮುಖ್ಯ ಆಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಮಧುಮೇಹಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ. ಒಬ್ಬ ವ್ಯಕ್ತಿಯು ಒಮ್ಮೆ ಈ ರೋಗಕ್ಕೆ ತುತ್ತಾದರೆ, ಜೀವನವಿಡೀ ಬಳಲಿ ಬೆಂಡಾಗಬೇಕಾಗುತ್ತದೆ. ಇದನ್ನು ಶಾಶ್ವತವಾಗಿ ತೊಡೆದು ಹಾಕಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸಬಹುದು.


ಮಧುಮೇಹ ನಿಯಂತ್ರಿಸುವುದು ಹೇಗೆ?


ಉತ್ತಮ ಆಹಾರ ಪದ್ಧತಿ ಮತ್ತು ಸಕ್ರಿಯ ಜೀವನಶೈಲಿ ಮೂಲಕ, ರಕ್ತದ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳ್ತಾರೆ. ಇದು ಈ ರೋಗದ ದೊಡ್ಡ ಸಮಸ್ಯೆ ಆಗಿದೆ. ಮಧುಮೇಹಿಗಳು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹ ರೋಗಿಗಳು ಆಲ್ಕೋಹಾಲ್ ಅಥವಾ ಬಿಯರ್ ಕುಡಿಯುತ್ತಾರೆ. ಆದರೆ ಇದು ಕಾಯಿಲೆಯನ್ನು ಹೆಚ್ಚಿಸುತ್ತದೆ.


ವೈನ್ ಮತ್ತು ಬಿಯರ್ ಕುಡಿಯುವವರು ಟೈಪ್ 1 ಡಯಾಬಿಟಿಸ್ ಅಥವಾ ಟೈಪ್ 2 ಡಯಾಬಿಟಿಸ್ ಹೊಂದಿದ್ದರೆ ಮನೆಯಲ್ಲಿ ಅಥವಾ ಪಬ್‌, ಬಾರ್ ನಲ್ಲಿ ನಲ್ಲಿ ಮದ್ಯಪಾನ ಮಾಡುವುದು ಕಾಯಿಲೆಯನ್ನು ಹೆಚ್ಚಿಸುತ್ತದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ.


ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


ಮಧುಮೇಹ ಕಾಯಿಲೆ ಮತ್ತು ಮದ್ಯಪಾನ


ಡಯಾಬಿಟಿಸ್ ಆರ್ಗ್ ಡಾಟ್ ಕಾಂ ಪ್ರಕಾರ, ನೀವು ಮಧುಮೇಹ ಹೊಂದಿದ್ದರೆ ಮತ್ತು ಆಲ್ಕೋಹಾಲ್ ಸೇವಿಸಿದರೆ ಅಥವಾ ಕುಡಿಯದಿದ್ದರೆ ಆಲ್ಕೋಹಾಲ್ ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು ಎಂದು ಹೇಳಿದೆ. ಆಲ್ಕೋಹಾಲ್ ಕುಡಿಯುವುದು ಹೈಪೋವನ್ನು ಹೊಂದುವ ಸಾಧ್ಯತೆ ಹೆಚ್ಚಿಸಬಹುದು.


ಏಕೆಂದರೆ ಆಲ್ಕೋಹಾಲ್ ರಕ್ತದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಬಹಳಷ್ಟು ಕ್ಯಾಲೊರಿ ಹೊಂದಿದೆ. ತೂಕದ ಮೇಲೂ ಪರಿಣಾಮ ಬೀರಬಹುದು.


ಆಲ್ಕೋಹಾಲ್ ಮಧುಮೇಹ ಉಂಟು ಮಾಡುತ್ತದೆಯೇ?


ಕೌಟುಂಬಿಕ ಇತಿಹಾಸ, ವಯಸ್ಸು, ಇತ್ಯಾದಿ ಸೇರಿದಂತೆ ಟೈಪ್ 2 ಮಧುಮೇಹಕ್ಕೆ ಹಲವು ಅಪಾಯಕಾರಿ ಅಂಶಗಳಿವೆ. ಅಧಿಕ ತೂಕ ಹೊಂದಿರುವ ಜನರು ಮಧುಮೇಹದ ಅಪಾಯ ಹೊಂದಿದ್ದಾರೆ. ಅತಿಯಾದ ಆಲ್ಕೊಹಾಲ್ ಸೇವನೆ ಟೈಪ್ 2 ಮಧುಮೇಹ ಅಪಾಯ ಹೆಚ್ಚಿಸುತ್ತದೆ. ಆಲ್ಕೋಹಾಲ್ ಬಹಳಷ್ಟು ಕ್ಯಾಲೊರಿ ಹೊಂದಿದೆ. ಇದು ತೂಕ ಹೆಚ್ಚಿಸುತ್ತದೆ.


ಎಷ್ಟು ಆಲ್ಕೊಹಾಲ್ ಸೇವಿಸುವುದು ಸುರಕ್ಷಿತ?


ಆಲ್ಕೋಹಾಲ್ ಕುಡಿಯದಿದ್ದರೆ ಉತ್ತಮ. ಅದಾಗ್ಯೂ ವಾರಕ್ಕೆ 14 ಯೂನಿಟ್‌ಗಳಿಗಿಂತ ಹೆಚ್ಚು ಕುಡಿಯುವುದು ಸುರಕ್ಷಿತವಲ್ಲ. ಈ ಮಾರ್ಗಸೂಚಿಗಳು ಪುರುಷರು ಮತ್ತು ಮಹಿಳೆಯರಿಗೆ ಒಂದೇ ಆಗಿದೆ.


ಆಲ್ಕೋಹಾಲ್ ಮತ್ತು ಹೈಪೊಗ್ಲಿಸಿಮಿಯಾ


ಇನ್ಸುಲಿನ್ ಅಥವಾ ಸಲ್ಫೋನಿಲ್ಯೂರಿಯಾಸ್‌ ಕೆಲವು ಮಧುಮೇಹ ಔಷಧಿ ಬಳಸಿದರೆ ನೀವು ಹೈಪೊಗ್ಲಿಸಿಮಿಯಾ ಹೊಂದುವ ಸಾಧ್ಯತೆ ಹೆಚ್ಚು. ಆಲ್ಕೋಹಾಲ್ ಸೇವನೆ ರಕ್ತದ ಸಕ್ಕರೆ ಮಟ್ಟ ಕಡಿಮೆಯಾದಾಗ, ಆಲ್ಕೋಹಾಲ್ ನಿಮ್ಮ ದೇಹದ ಚೇತರಿಕೆ ಸಾಮರ್ಥ್ಯ ಕುಂಠಿತಗೊಳಿಸುತ್ತದೆ. ರಕ್ತದ ಸಕ್ಕರೆ ಮಟ್ಟವು ಕಡಿಮೆಯಾದಾಗ. ಇದು ಯಕೃತ್ತಿನ ಸಾಮರ್ಥ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ.


ಖಾಲಿ ಹೊಟ್ಟೆಯಲ್ಲಿ ಮದ್ಯಪಾನ ಮಾಡುವುದು ಹೆಚ್ಚು ಹಾನಿಕರ


ಅತಿಯಾಗಿ ಕುಡಿಯುತ್ತಿದ್ದರೆ ಅಥವಾ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಹೈಪೋಗ್ಲಿಸಿಮಿಯಾ ಹೊಂದುವ ಸಾಧ್ಯತೆ ಹೆಚ್ಚು. ನೀವು ಆಲ್ಕೋಹಾಲ್ ಕುಡಿಯುವುದನ್ನು ನಿಲ್ಲಿಸಿದಾಗ ಹೈಪೋ ಪಡೆಯುವ ಅಪಾಯ ಹೆಚ್ಚು. ಇದು 24 ಗಂಟೆಗಳವರೆಗೆ ಇರುತ್ತದೆ.


ಮದ್ಯಪಾನ ಮತ್ತು ತೂಕ


ವೈನ್ ಮತ್ತು ಬಿಯರ್ ಬಹಳಷ್ಟು ಕ್ಯಾಲೊರಿ ಹೊಂದಿದೆ. ಹಾಗಾಗಿ ತೂಕ ಇಳಿಸಲು ಇದು ನಿಮ್ಮ ದಾರಿಗೆ ತಡೆಯುಂಟು ಮಾಡಿದೆ. ಮಧುಮೇಹಕ್ಕೆ ಬೊಜ್ಜು ಕೂಡ ಪ್ರಮುಖ ಕಾರಣ.


ಇದನ್ನೂ ಓದಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


ಆಲ್ಕೋಹಾಲ್ ಮತ್ತು ಕಾರ್ಬೋಹೈಡ್ರೇಟ್

top videos


    ಆಲ್ಕೋಹಾಲ್ ಕಾರ್ಬೋಹೈಡ್ರೇಟ್ ಅಂಶ ಹೊಂದಿದೆ. ಮಧುಮೇಹ ರೋಗಿಗಳಿಗೆ ಇದು ಸೂಕ್ತ ಪಾನೀಯವಲ್ಲ. ಹೈಪೋಸ್ ಪಡೆಯುವ ಸಾಧ್ಯತೆ ಹೆಚ್ಚಿಸುತ್ತದೆ.

    First published: