ದೀರ್ಘಕಾಲದ ಕುಡಿತದ ಚಟ ಹಾಗೂ ಮಿತಿ ಮೀರಿದ ಆಲ್ಕೋಹಾಲ್ ಸೇವನೆಯಯಿಂದಾಗಿ ಹೃದಯದ ಸಮಸ್ಯೆ, ಲಿವರ್‌ಗೆ ಹಾನಿಯಂತಹ ಇನ್ನೂ ಅನೇಕ ಸಮಸ್ಯೆಗಳು ಉದ್ಬವಿಸುತ್ತವೆ ಎಂಬುವುದು ಎಲ್ಲರಿಗೂ ತಿಳಿದ ವಿಚಾರ.ಹೊಸ ಸಂಶೋಧನೆಯು ಇವುಗಳ ಜೊತೆಗೆ ಆಲ್ಝೈಮರ್ನ (Alzheimer) ಕಾಯಿಲೆಯ ಮೇಲೂ ಮದ್ಯ ಪರಿಣಾಮ (Effects) ಬೀರುತ್ತದೆ ಎಂದು ಹೇಳಿದೆ. ಏನಿದು ಆಲ್ಝೈಮರ್ನ ಕಾಯಿಲೆ? ಬುದ್ಧಿಮಾಂದ್ಯತೆಯ ಒಂದು ಸಾಮಾನ್ಯ ರೂಪವಾಗಿರುವ ಆಲ್ಝೈಮರ್ನ ಕಾಯಿಲೆ ಇಂದು ಪ್ರಪಂಚದಾದ್ಯಂತ (World) ಬಹಳ ಗಂಭೀರವಾದ ಕಾಯಿಲೆಯಾಗಿದೆ. ಆಲ್ಝೈಮರ್ನ ಕಾಯಿಲೆ ಒಂದು ನ್ಯೂರೋ ಡಿಜೆನೆರೇಟಿವ್ ಕಾಯಿಲೆಯಾಗಿದ್ದು ಅದು ಸಾಮಾನ್ಯವಾಗಿ ನಿಧಾನವಾಗಿ ಪ್ರಾರಂಭವಾಗಿ ಹಂತಹಂತವಾಗಿ ಹದಗೆಡುತ್ತದೆ.
ಹೊಸ ಸಂಶೋಧನೆ ಏನು ಹೇಳಿದೆ?
ಹೊಸ ಸಂಶೋಧನೆಯು ಆಲ್ಕೋಹಾಲ್ ಸೇವನೆಯು ಆಲ್ಝೈಮರ್ನ ಕಾಯಿಲೆಯ ದುಷ್ಪಾರಿಣಾಮಗಳನ್ನು ಇನ್ನೂ ಹೆಚ್ಚಿಸುತ್ತದೆ ಎಂದು ಹೇಳಿದೆ. ಹೊಸ ಅಧ್ಯಯನದಲ್ಲಿ, ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ವಿಜ್ಞಾನಿಗಳು ಸ್ವಲ್ಪ ಪ್ರಮಾಣದ ಆಲ್ಕೋಹಾಲ್ ಕೂಡ ಮೆದುಳಿನ ಕ್ಷೀಣತೆಯನ್ನು ವೇಗಗೊಳಿಸುತ್ತದೆ, ಇದು ಮೆದುಳಿನ ಕೋಶಗಳ ಕ್ಷೀಣತೆಗೆ ಕಾರಣವಾಗುವುದರ ಜೊತೆಗೆ ವಿಷಕಾರಿ ಪ್ರೋಟೀನ್‌ಗಳ ಶೇಖರಣೆಯಾದ ಅಮಿಲಾಯ್ಡ್ ಪ್ಲೇಕ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ತೋರಿಸಿದೆ.
ಒಬ್ಬರಲ್ಲಿ ಆರಂಭಿಕ ಹಂತದಲ್ಲಿ ಬುದ್ಧಿಮಾಂದ್ಯತೆ ಕಂಡುಬಂದಲ್ಲಿ ಆ ವೇಳೆ ಅವರು ಮದ್ಯ ಸೇವಿಸುತ್ತಿದ್ದರೆ ಈ ಆರಂಭಿಕ ಹಂತವನ್ನು ಆಲ್ಕೋಹಾಲ್ ವೇಗವಾಗಿ ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಬುದ್ಧಿಮಾಂದ್ಯತೆ ಸಮಸ್ಯೆ ಇರುವವರಲ್ಲಿ ಮದ್ಯಪಾನ ಅವರ ರೋಗದ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ಶರೀರಶಾಸ್ತ್ರ ಮತ್ತು ಔಷಧಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಶಾನನ್ ಮೆಕಾಲೆ ತಿಳಿಸಿದ್ದಾರೆ.
ಇದನ್ನೂ ಓದಿ: ಸಮಯ ಇಲ್ಲವೇ? ಹಾಗಿದ್ರೆ ಗುಜರಾತ್ ಶೈಲಿಯ ಮೆಂತ್ಯ ಥೇಪ್ಲಾ, ಮೂಲಂಗಿ ಪರಾಠಾ ಮಾಡಿ
ವೈದ್ಯಕೀಯ ಶಾಲೆಯ ಆಲ್ಝೈಮರ್ನ ಕಾಯಿಲೆ ಸಂಶೋಧನಾ ಕೇಂದ್ರ ಮತ್ತು ಆಲ್ಕೋಹಾಲ್ ಸಂಶೋಧನಾ ಕೇಂದ್ರದ ಮೂಲಕ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಫಿಸಿಯಾಲಜಿ ಮತ್ತು ಫಾರ್ಮಕಾಲಜಿ ಪ್ರಾಧ್ಯಾಪಕರಾದ ಮೆಕಾಲೆ ಮತ್ತು ಜೆಫ್ರಿ ವೀನರ್ ಅವರ ನೇತೃತ್ವದಲ್ಲಿ ಈ ಅಧ್ಯಯನವು ನಡೆದಿದೆ.
ಸಂಶೋಧನೆಯ ಪ್ರಯೋಗ ಹೇಗೆ ನಡೆಯಿತು?
ಆಲ್ಝೈಮರ್ನ ಕಾಯಿಲೆ ಸಂಬಂಧಿತ ರೋಗಶಾಸ್ತ್ರದ ಇಲಿ ಮಾದರಿಗಳನ್ನು ಬಳಸಿಕೊಂಡು, ಸಂಶೋಧಕರು 10 ವಾರಗಳ ಕಾಲ ಅಧ್ಯಯನ ನಡೆಸಿದ್ದರು. ಪ್ರಯೋಗದಲ್ಲಿ ಕೆಲವು ಇಲಿಗಳಿಗೆ ನೀರು ಮತ್ತು ಇನ್ನುಳಿದವಕ್ಕೆ ಮದ್ಯವನ್ನು ನೀಡಲಾಗಿತ್ತು. ಮದ್ಯ ಸೇವಿಸಿದ ಇಲಿಗಳಲ್ಲಿ ಮಿದುಳಿನ ಕಾರ್ಯ ಮತ್ತು ನಡವಳಿಕೆ ಬದಲಾಗಿತ್ತು. ಅಂದರೆ ಈ ರೋಗದ ಸ್ಥಿತಿ ಮದ್ಯ ಸೇವಿಸಿದ ನಂತರ ಹೆಚ್ಚು ಹದಗೆಟ್ಟಿತ್ತು ಎಂದು ಪ್ರಯೋಗದಲ್ಲಿ ಸಂಶೋಧಕರು ಕಂಡುಕೊಂಡರು.
ಪ್ರಯೋಗದಲ್ಲಿ ಆಲ್ಕೋಹಾಲ್ ಸೇವಿಸಿದ ಇಲಿಗಳ ಮೆದುಳಿನ ಕ್ಷೀಣತೆ ಹೆಚ್ಚಿತು ಮತ್ತು ಹೆಚ್ಚಿನ ಸಂಖ್ಯೆಯ ಸಣ್ಣ ಪ್ಲೇಕ್‌ಗಳನ್ನು ಒಳಗೊಂಡಂತೆ ಹೆಚ್ಚಿನ ಸಂಖ್ಯೆಯ ಅಮಿಲಾಯ್ಡ್ ಪ್ಲೇಕ್‌ಗಳನ್ನು ಉಂಟುಮಾಡಿದ್ದನ್ನು ಸಂಶೋಧಕರು ಕಂಡುಕೊಂಡರು.
ಟೈಪ್ 2 ಮಧುಮೇಹ, ಹೃದಯರಕ್ತನಾಳದ ಕಾಯಿಲೆ ಅಪಾಯ ಹೆಚ್ಚಳ
ಪ್ರಸ್ತುತ ಅಧ್ಯಯನದಲ್ಲಿ, ಮಧ್ಯಮ ಕುಡಿಯುವಿಕೆಯು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಪ್ರತಿರೋಧದ ಗುರುತುಗಳನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಇದು ಆಲ್ಝೈಮರ್ನ ಕಾಯಿಲೆಗೆ ಮಾತ್ರವಲ್ಲದೆ ಟೈಪ್ 2 ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಇತರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ. ಮಧ್ಯಮ ಆಲ್ಕೋಹಾಲ್ ಬಳಕೆಯು ಆತಂಕ ಮತ್ತು ಬುದ್ಧಿಮಾಂದ್ಯತೆ-ಸಂಬಂಧಿತ ನಡವಳಿಕೆಗಳನ್ನು ಬದಲಾಯಿಸುತ್ತದೆ ಎಂದು ಅಧ್ಯಯನವು ಹೇಳಿದೆ.
ಆಲ್ಕೋಹಾಲ್ ಸೇವನೆಯು ಆಲ್ಝೈಮರ್ನ ಕಾಯಿಲೆ ಮತ್ತು ಬುದ್ಧಿಮಾಂದ್ಯತೆಗೆ ಮಾರ್ಪಡಿಸಬಹುದಾದ ಅಪಾಯಕಾರಿ ಅಂಶವಾಗಿದೆ ಎಂದು ಅಧ್ಯಯನದ ರೂವಾರಿ ಮೆಕಾಲೆ ಹೇಳಿದ್ದಾರೆ.
ಎಪಿಡೆಮಿಯೊಲಾಜಿಕಲ್ ಅಧ್ಯಯನಗಳು ಆಲ್ಕೋಹಾಲ್ ಬಳಕೆಯ ಅಸ್ವಸ್ಥತೆಯನ್ನು (ಎಯುಡಿ) ಆಲ್ಝೈಮರ್ನ ಕಾಯಿಲೆಗೆ (ಎಡಿ) ಅಪಾಯಕಾರಿ ಅಂಶವೆಂದು ಗುರುತಿಸಿದೆ, ಆದರೂ ಆಲ್ಕೋಹಾಲ್ ಬಳಕೆ ಆಲ್ಝೈಮರ್ನ ಕಾಯಿಲೆಯ ರೋಗಶಾಸ್ತ್ರವನ್ನು ಹೇಗೆ ಉತ್ತೇಜಿಸುತ್ತದೆ ಎಂಬುದರ ಕುರಿತು ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ