• Home
 • »
 • News
 • »
 • lifestyle
 • »
 • Sleep tips: ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಇಲ್ಲಿದೆ ಸರಳ ಉಪಾಯ

Sleep tips: ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಇಲ್ಲಿದೆ ಸರಳ ಉಪಾಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಉಪಾಯವನ್ನು ಸ್ವತಃ ಡಾಕ್ಟರ್ ಒಬ್ಬರು ಪರೀಕ್ಷೆ ಮಾಡಿ ನೋಡಿದ್ದಾರೆ. ಈ ಸರಳ ಉಪಾಯದ ಮೂಲಕ ಅವರು ರಾತ್ರಿ ನೆಮ್ಮದಿಯಾಗಿ ನಿದ್ರಿಸುತ್ತಾರಂತೆ. ಹಾಗಾದರೆ ಆ ಡಾಕ್ಟರ್ ಪಾಲಿಸುತ್ತಿರುವ ಉಪಾಯವಾದರೂ ಏನು ಗೊತ್ತಾ?

 • Share this:

  ಅನೇಕ ಜನರು ರಾತ್ರಿ ಹಾಯಾಗಿ ಮಲಗೋಕೆ ತುಂಬಾ ಕಷ್ಟ ಪಡುತ್ತಾರೆ. ರಾತ್ರಿ ಸರಿಯಾಗಿ ನಿದ್ರೆ ಬಾರದೆ ಒದ್ದಾಡುತ್ತಾರೆ. ರಾತ್ರಿ ಸರಿಯಾಗಿ ನಿದ್ರೆ ಬಾರದೆ ಇದ್ದರೆ ದೈಹಿಕ ಮತ್ತು ಮಾನಸಿಕ ಆಯಾಸವನ್ನು ಕಡಿಮೆ ಮಾಡಿಕೊಳ್ಳೋಕೆ ಆಗುವುದೇ ಇಲ್ಲ. ಹೀಗಾಗಿ ರಾತ್ರಿ ನೆಮ್ಮದಿಯಿಂದ ನಿದ್ರಿಸಲು ಅನೇಕರು ಹೆಣಗಾಡುತ್ತಾರೆ. ಇದಕ್ಕಾಗಿ ರಾತ್ರಿ ಸರಿಯಾಗಿ ನಿದ್ರೆ ಬರೋಕೆ ಏನು ಮಾಡಬೇಕು ಎಂದೆಲ್ಲ ಅನೇಕ ಉಪಾಯಗಳನ್ನು ಹುಡುಕುತ್ತಾರೆ. ಕೆಲವೊಂದು ಉಪಾಯಗಳನ್ನು ಟ್ರೈ ಮಾಡುತ್ತಾರೆ. ಅದೆಷ್ಟು ಉಪಾಯಗಳು ವರ್ಕೌಟ್ ಆಗುತ್ತವೆ, ಗೊತ್ತಿಲ್ಲ. ಆದರೆ ಇಲ್ಲೊಂದು ವಿಭಿನ್ನವಾದ ಉಪಾಯವಿದೆ. ನೀವೂ ಇದನ್ನು ಟ್ರೈ ಮಾಡಬಹುದು.


  ಈ ಉಪಾಯವನ್ನು ಸ್ವತಃ ಡಾಕ್ಟರ್ ಒಬ್ಬರು ಪರೀಕ್ಷೆ ಮಾಡಿ ನೋಡಿದ್ದಾರೆ. ಈ ಸರಳ ಉಪಾಯದ ಮೂಲಕ ಅವರು ರಾತ್ರಿ ನೆಮ್ಮದಿಯಾಗಿ ನಿದ್ರಿಸುತ್ತಾರಂತೆ. ಹಾಗಾದರೆ ಆ ಡಾಕ್ಟರ್ ಪಾಲಿಸುತ್ತಿರುವ ಉಪಾಯವಾದರೂ ಏನು ಗೊತ್ತಾ?


  "ರಾತ್ರಿ ಮಲಗುವಾಗ ಎರಡೂ ಕಾಲಿಗೆ ಸಾಕ್ಸ್ ಹಾಕಿಕೊಂಡು ಮಲಗಿದರೆ ಉತ್ತಮವಾದ ನಿದ್ದೆ ಬರುತ್ತದೆ" ಎಂದು ವೈದ್ಯೆ ಜೆಸ್ ಅವರು ಹೇಳಿದ್ದಾರೆ. ಅವರು ಹೀಗೆ ನೀಡಿದ ಹೇಳಿಕೆ ಟಿಕ್‌ ಟಾಕ್‌ನಲ್ಲಿ ವೈರಲ್ ಆಗಿದೆ. ಈ ವೈದ್ಯೆ ರಾತ್ರಿ ಮಲಗುವಾಗ ಕಾಲಿಗೆ ಸಾಕ್ಸ್ ಹಾಕಿಕೊಂಡು ಪ್ರಯೋಗ ಮಾಡಿದ್ದಾರೆ. ಈ ಉಪಾಯದಿಂದ ಅವರು ನೆಮ್ಮದಿಯ ನಿದ್ದೆ ಪಡೆದಿದ್ದಾರೆ. ಹೀಗಾಗಿಯೇ ಬೇರೆಯವರಿಗೂ ಇದನ್ನು ಪಾಲಿಸಲು ಸಲಹೆ ನೀಡಿದ್ದಾರೆ.


  ಅಷ್ಟಕ್ಕೂ ಅವರು ಈ ಉಪಾಯದ ಕುರಿತು ಹೇಳೋದಾದರೂ ಏನು ಗೊತ್ತಾ?


  "ರಾತ್ರಿ ಮಲಗುವ ವೇಳೆ ಕಾಲಿಗೆ ಸಾಕ್ಸ್‌ಗಳನ್ನು ಧರಿಸುವುದರಿಂದ ಪಾದಗಳು ಬೆಚ್ಚಗಿರುತ್ತವೆ. ಇದರಿಂದ ರಕ್ತನಾಳಗಳು ತೆರೆದುಕೊಂಡು ದೇಹಕ್ಕೆ ವಿಶ್ರಾಂತಿಯ ಅನುಭವ ನೀಡುತ್ತವೆ" ಎಂದು ವೈಜ್ಞಾನಿಕವಾಗಿ ಅವರು ಇದನ್ನು ಸಮರ್ಥಿಸಿಕೊಂಡಿದ್ದಾರೆ.


  ಹೀಗೆ ರಾತ್ರಿ ಮಲಗುವಾಗ ಕಾಲುಗಳಿಗೆ ಸಾಕ್ಸ್ ಧರಿಸುವುದರಿಂದ ಜನರು ಬೇಗನೇ ನಿದ್ದೆಗೆ ಜಾರುತ್ತಾರೆ ಎಂದು ಅವರು ಹೇಳುತ್ತಾರೆ. ಈ ಉಪಾಯವನ್ನು ಸ್ವತಃ ಡಾ.ಜೆಸ್ ಅವರೇ ಕಂಡು ಹಿಡಿದಿಲ್ಲ. 2006ರಲ್ಲಿನ 'ಫಿಸಿಕಲ್ ಬಿಹೇವಿಯರ್' ಎನ್ನುವ ಒಂದು ಸಂಶೋಧನಾ ಜರ್ನಲ್‌ನಿಂದ ಅವರು ಈ ಉಪಾಯವನ್ನು ತೆಗೆದುಕೊಂಡು ಪಾಲಿಸಿದ್ದಾರೆ. ಅವರ ಅನುಭವದ ಆಧಾರದ ಮೇಲೆ ಸಕಾರಾತ್ಮಕ ಫಲಿತಾಂಶವನ್ನು ಅವರು ಕಂಡುಕೊಂಡಿದ್ದಾರೆ. ಹೀಗಾಗಿ ಬೇರೆಯವರಿಗೂ ಈ ಸಲಹೆ ನೀಡಿದ್ದಾರೆ.


  ಇದನ್ನು ಓದಿ: ಟೆಕ್ಸಾಸ್‌ನಲ್ಲಿ ಅಪಾಯಕಾರಿ ಮಟ್ಟ ತಲುಪಿದ ಉಷ್ಣಾಂಶ: ಹೆಪ್ಪುಗಟ್ಟಿ ಸಾವನ್ನಪ್ಪುತ್ತಿರುವ ಪ್ರಾಣಿಗಳು


  ಈ ಉಪಾಯವನ್ನು ಅವರು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಾಗ ನಾನಾ ತರಹದ ಪ್ರತಿಕ್ರಿಯೆಗಳು ಬಂದಿವೆ. ಕೆಲವೊಬ್ಬರು ಇದನ್ನು ಒಪ್ಪಿಕೊಂಡಿದ್ದಾರೆ. ಆದರೆ ಟಿಕ್‌ಟಾಕ್‌ನ ಕೆಲವು ಬಳಕೆದಾರರು ಈ ಉಪಾಯದ ಬಗ್ಗೆ ಒಮ್ಮತ ಹೊಂದಿಲ್ಲ. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೊಬ್ಬರು "ನಾನು ಸಾಕ್ಸ್ ಹಾಕಿದರೆ ಉಸಿರಾಡೋಕೆ ಕಷ್ಟ ಆಗುತ್ತದೆ," ಎಂದಿದ್ದಾರೆ. ಮತ್ತೆ ಕೆಲವರು ಸಾಕ್ಸ್ ಇಲ್ಲದೇ ಅವರು ನಿದ್ದೆ ಮಾಡೋದು ಕಷ್ಟ ಎಂದು ಹೇಳಿದ್ದಾರೆ.


  ನೀವೂ ರಾತ್ರಿ ನಿದ್ರೆ ಮಾಡೋಕೆ ಕಷ್ಟ ಪಡುತ್ತಿದ್ದೀರಾ? ನೀವು ಯಾವತ್ತಾದರೂ ಈ ಉಪಾಯವನ್ನು ಪ್ರಯತ್ನಿಸಿದ್ದೀರಾ? ಇಲ್ಲದೇ ಇದ್ದರೆ ಇನ್ನೇಕೆ ತಡ? ಒಮ್ಮೆ ಪ್ರಯತ್ನಿಸಿ ನೋಡಿ.

  Published by:Seema R
  First published: