Children Health: ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗೋದು ಯಾಕೆ? ವೈದ್ಯರು ಬಿಚ್ಚಿಟ್ಟ ಸತ್ಯ!

ಮಳೆಗಾಲದಲ್ಲಿ ಉಸಿರಾಟದ ಸೋಂಕುಗಳು, ಜಠರಗರುಳಿನ ಸೋಂಕುಗಳು, ಟೈಫಾಯಿಡ್, ಮಲೇರಿಯಾ ಮತ್ತು ಡೆಂಗ್ಯೂ ಸಾಮಾನ್ಯವಾಗಿದೆ. ಆದರೆ ಈ ವರ್ಷ ವೈದ್ಯರು ಗಮನಿಸಿರುವ ಪ್ರಕಾರ ಹೆಚ್ಚು ಮಕ್ಕಳು ಪದೇ ಪದೇ ಇಂತಹ ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹಾಗಾದರೆ ಇದಕ್ಕೆ ಕಾರಣ ಏನು, ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಏಕೆ? ಇದಕ್ಕೆ ಪರಿಹಾರವೇನು ಎಂಬುದಕ್ಕೆ ಇಲ್ಲಿದೆ ಉತ್ತರ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲದಲ್ಲಿ ಎಲ್ಲರೂ ಸಣ್ಣ-ಪುಟ್ಟ ಅನಾರೋಗ್ಯಕ್ಕೆ (Illness) ಒಳಗಾಗುವುದು ಸಹಜ ವಿಚಾರವಾದರೂ ಮಕ್ಕಳ ವಿಚಾರದಲ್ಲಿ ಇದು ಸ್ವಲ್ಪ ಗಂಭೀರ ಪರಿಣಾಮ ಬೀರಬಹುದು. ಪದೇ ಪದೇ ಮಕ್ಕಳು (Children) ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೆ ಅದು ಅವರ ಬೌದ್ಧಿಕ ಬೆಳವಣಿಗೆ ಮೇಲೆ ಕೆಟ್ಟ ಪ್ರಭಾವಕ್ಕೆ ಕಾರಣವಾಗುತ್ತದೆ. ಮಳೆಗಾಲದ (Monsoon) ಸಂದರ್ಭದಲ್ಲಿ ಪ್ರತಿ ಮಕ್ಕಳು ಹಲವಾರು ಬಾರಿ ಶೀತ, ಜ್ವರ, ಕೆಮ್ಮುವಿನಂತಹ ಕಾಯಿಲೆಗಳನ್ನು ಅನುಭವಿಸುತ್ತಲೇ ಇರುತ್ತಾರೆ ಮತ್ತು ಪೋಷಕರು ಸಹ ಆತಂಕದಲ್ಲಿಯೇ ಕಾಲಕಳೆಯುತ್ತಾರೆ. ಮಳೆಗಾಲದಲ್ಲಿ ಉಸಿರಾಟದ ಸೋಂಕುಗಳು, ಜಠರಗರುಳಿನ ಸೋಂಕುಗಳು, ಟೈಫಾಯಿಡ್, ಮಲೇರಿಯಾ ಮತ್ತು ಡೆಂಗ್ಯೂ ಸಾಮಾನ್ಯವಾಗಿದೆ.  ಆದರೆ ಈ ವರ್ಷ ವೈದ್ಯರು (Doctors) ಗಮನಿಸಿರುವ ಪ್ರಕಾರ ಹೆಚ್ಚು ಮಕ್ಕಳು ಪದೇ ಪದೇ ಇಂತಹ ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಹಾಗಾದರೆ ಇದಕ್ಕೆ ಕಾರಣ ಏನು, ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಏಕೆ? ಇದಕ್ಕೆ ಪರಿಹಾರವೇನು ಎಂಬುದಕ್ಕೆ ಇಲ್ಲಿದೆ ಉತ್ತರ.

"ವಿಭಿನ್ನ ವೈರಸ್‌ಗಳಿಂದಾಗಿ ಸೋಂಕು ಉಲ್ಬಣ"
ಈ ವಿಚಾರದ ಬಗ್ಗೆ ಮಕ್ಕಳ ವೈದ್ಯರೊಂದಿಗೆ ಮಾತನಾಡಿದಾಗ ಅವರು ಇದಕ್ಕೆ ಕೆಲವು ಕಾರಣಗಳನ್ನು ಬಹಿರಂಗ ಪಡಿಸಿದರು. ನಾರಾಯಣ ಹೆಲ್ತ್‌ ನ ಮಕ್ಕಳ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ಮಹೇಶ್ ಬಾಲ್ಸೇಕರ್, ಮಳೆಗಾಲದಲ್ಲಿ ಸೋಂಕುಗಳು ವಿಪರೀತವಾಗಿದ್ದರೂ, ಈ ವರ್ಷ ಹಲವಾರು ವಿಭಿನ್ನ ವೈರಸ್‌ಗಳ ಉಲ್ಬಣವಾಗಿದೆ. ಈ ವೈರಸ್ ಗಳು ಮಕ್ಕಳಲ್ಲಿನ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿರುವುದರಿಂದ ಈ ವರ್ಷ ಸೋಂಕುಗಳ ಉಲ್ಬಣ ಹೆಚ್ಚಾಗಿರಬಹುದು ಎಂದು ತಿಳಿಸಿದರು.

ಇದನ್ನೂ ಓದಿ:  Gum Cancer Symptoms: ಈ ಸಮಸ್ಯೆಗಳನ್ನು ಕಡೆಗಣಿಸಿದ್ರೆ ಮಾರಕ, ಗಮ್​ ಕ್ಯಾನ್ಸರ್​ನ ಆರಂಭಿಕ ಲಕ್ಷಣವಿದು

ಸಾಮಾನ್ಯವಾಗಿ ವರದಿಯಾಗುವ ರೋಗಲಕ್ಷಣಗಳು ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡುತ್ತಾ, ಮೇದಾಂತ ಆಸ್ಪತ್ರೆಯ ಪೀಡಿಯಾಟ್ರಿಕ್ಸ್‌ನ ಹಿರಿಯ ಸಲಹೆಗಾರ ಡಾ. ವಿನೀತ್ ಕ್ವಾತ್ರಾ, “ಇತ್ತೀಚಿನ ದಿನಗಳಲ್ಲಿ ಜ್ವರ, ಕೆಮ್ಮು ಮತ್ತು ನೆಗಡಿ ಸಮಸ್ಯೆಯಿಂದ ಆಸ್ಪತ್ರೆಗೆ ಮಕ್ಕಳು ಬರುತ್ತಿದ್ದಾರೆ. ಅಲ್ಲದೇ 5 ರಿಂದ 7 ದಿನಗಳವರೆಗೆ ಜ್ವರದಿಂದ ಬರುತ್ತಿದ್ದಾರೆ, ಇದು ಟೈಫಾಯಿಡ್ ಮತ್ತು ಕೆಲವು ಡೆಂಗ್ಯೂ ಪ್ರಕರಣಗಳಾಗಿ ಬದಲಾದರೂ ಆಶ್ಚರ್ಯವಿಲ್ಲ” ಎಂದಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿವೆ ಎಂದು ತಿಳಿಸಿದ್ದಾರೆ.

ಜ್ವರ ಬಂದಾಗ ಪೋಷಕರು ಮಾಡಬೇಕಾದ ಮೊದಲ ಕೆಲಸ ಏನು?
ಸಾಮಾನ್ಯವಾಗಿ ಮಕ್ಕಳಿಗೆ ಜ್ವರ ಬಂದಾಗ ಮೊದಲಿಗೆ ಪೋಷಕರು ಮನೆಯಲ್ಲಿಯೇ ಔಷಧಿಗಳನ್ನು ನೀಡಿ ಒಂದೆರೆಡು ದಿನ ಕಾಯೋಣ ಅಂತಾ ಸುಮ್ಮನಾಗಿ ಬಿಡುತ್ತಾರೆ. ಆದರೆ ವೈದ್ಯರು ಹೇಳುವ ಪ್ರಕಾರ, ಪ್ರಸ್ತುತ ಹಲವಾರು ವಿಭಿನ್ನ ವೈರಸ್ ಗಳು ಇರುವುದರಿಂದ ಸಣ್ಣ ಜ್ವರ ಕಾಣಿಸಿಕೊಂಡರು ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುತ್ತಾರೆ.

ಡಾ ಕ್ವಾತ್ರಾ ಈ ಬಗ್ಗೆ ಮಾತನಾಡಿ, ಈ ಋತುವಿನಲ್ಲಿ ಶಿಶುವೈದ್ಯರು ನೋಡುತ್ತಿರುವ ಎಲ್ಲಾ ಕಾಯಿಲೆಗಳು ಮೊದಲಿಗೆ ಸಣ್ಣ ಜ್ವರ, ಕೆಮ್ಮು, ಶೀತ, ವಾಂತಿಯಿಂದ ಶುರುವಾಗಿ ನಂತರ ಗಂಭಿರ ಸಮಸ್ಯೆಗೆ ಕಾರಣವಾಗಿವೆ. ಹೀಗಾಗಿ ಮೊದಲ ದಿನವೇ ಪೋಷಕರು ಹೆಚ್ಚರ ವಹಿಸಬೇಕು ಎಂದಿದ್ದಾರೆ. ಜ್ವರದ ಔಷಧಿಗಳಿಂದ ತಾಪಮಾನ ಕಡಿಮೆಯಾಗದಿದ್ದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದಿದ್ದಾರೆ.

ಮನೆಯಲ್ಲಿ ಜ್ವರಕ್ಕೆ ಹೇಗೆ ಚಿಕಿತ್ಸೆ ನೀಡಬೇಕು?
ಎರಡನೆಯದಾಗಿ, ಮನೆಯಲ್ಲಿ ಪೋಷಕರು ಮಾಡಬೇಕಾದ ಮೊದಲ ಮತ್ತು ಅಗ್ರಗಣ್ಯ ವಿಷಯವೆಂದರೆ ಪ್ಯಾರಸಿಟಮಾಲ್‌ನಂತಹ ಜ್ವರದ ಮೂಲ ಔಷಧಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು. ಮಕ್ಕಳ ತಾಪಮಾನ ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ಪ್ಯಾರಸಿಟಮಾಲ್ ಅನ್ನು 4 ಗಂಟೆಯಿಂದ ಪ್ರತಿ 6 ಗಂಟೆಗಳಿಗೊಮ್ಮೆ ನೀಡಬೇಕು. ಔಷಧಿ ಬಳಿಕ ಮಕ್ಕಳ ತಾಪಮಾನ ಕಡಿಮೆ ಮಾಡಲು ಒದ್ದೆ ಬಟ್ಟೆಯಿಂದ ಅವರನ್ನು ಆಗಾಗ್ಗೆ ಒರೆಸುತ್ತಿರಬೇಕು. ಆದರೆ ಐಸ್ ಪ್ಯಾಕ್, ತಣ್ಣೀರಿನಿಂದ ಒರೆಸಬಾರದು ಎಂಬುವುದನ್ನು ಪೋಷಕರು ಗಮನದಲ್ಲಿಟ್ಟುಕೊಳ್ಳಬೇಕು. ಮಕ್ಕಳಿಗೆ ಸ್ವಲ್ಪ ಬಿಸಿ ನೀರಿನ ಸ್ನಾನ ಕೂಡ ಮಾಡಿಸುವುದು ಜ್ವರವನ್ನು ಕಡಿಮೆ ಮಾಡಲು ಉತ್ತಮ ಮಾರ್ಗ ಎನ್ನುತ್ತಾರೆ ವೈದ್ಯರು. ಇದಾದ ನಂತರವೂ ಜ್ವರ ಇನ್ನೂ 24 ಗಂಟೆಗಳ ಕಾಲ ಮುಂದುವರಿದರೆ, ಮೊದಲೇ ಸಲಹೆ ನೀಡಿದಂತೆ ವೈದ್ಯರನ್ನು ಭೇಟಿ ಮಾಡಬೇಕು.

ಇದನ್ನೂ ಓದಿ:  Breast Feeding: ಒತ್ತಡದ ಜೀವನಶೈಲಿಯ ಕಾರಣ ತಾಯಂದಿರಿಗೆ ಹಾಲುಣಿಸಲು ಕಷ್ಟವಾಗ್ತಿದೆಯಾ?

ಮನೆಯಲ್ಲಿ ಮಗುವನ್ನು ತಂಪಾದ ಕೋಣೆಯಲ್ಲಿ ಇರಿಸುವುದು, ಹಗುರವಾದ ಬಟ್ಟೆ ಮತ್ತು ಚೆನ್ನಾಗಿ ಕಾಯಿಸಿ ಆರಿಸಿದ ನೀರು ನೀಡುವ ಮೂಲಕ ಹೈಡ್ರೀಕರಿಸುವುದು ಮುಖ್ಯ. ಹೆಚ್ಚಿನ ಜ್ವರಗಳು 2-3 ದಿನಗಳವರೆಗೆ ಒಂದೇ ರೀತಿ ಇರುತ್ತವೆಯಾದರೂ, ಈಗಿರುವ ಕಾಯಿಲೆಗಳ ಬಗ್ಗೆ ಪೋಷಕರು ಮೊದಲೇ ಎಚ್ಚೆತ್ತುಕೊಳ್ಳಬೇಕು.

ಆದಾಗ್ಯೂ, ಚಿಕ್ಕ ಶಿಶುಗಳಲ್ಲಿ ಯಾವುದೇ ಜ್ವರಕ್ಕೆ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಜ್ವರವು ಅಧಿಕವಾಗಿದ್ದರೆ ಅಥವಾ ಅನಾರೋಗ್ಯ ಅಥವಾ ಇತರ ಆತಂಕಕಾರಿ ಲಕ್ಷಣಗಳನ್ನು ಹೊಂದಿದ್ದರೆ ಮಕ್ಕಳು ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.

ಇನ್ಫ್ಲುಯೆನ್ಸ ವ್ಯಾಕ್ಸಿನೇಷನ್ ಪ್ರಾಮುಖ್ಯತೆ
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ 6 ತಿಂಗಳ ವಯಸ್ಸಿನ ನಂತರ ಎಲ್ಲಾ ಮಕ್ಕಳಿಗೆ 'ಫ್ಲೂ' ಅಥವಾ ಇನ್ಫ್ಲುಯೆನ್ಸ ಲಸಿಕೆಯನ್ನು ಶಿಫಾರಸು ಮಾಡುತ್ತದೆ ಮತ್ತು 5 ವರ್ಷ ವಯಸ್ಸಿನವರೆಗೆ ಪ್ರತಿ ವರ್ಷ ಸಲಹೆ ನೀಡಲಾಗುತ್ತದೆ. ಮಕ್ಕಳಿಗೆ ರೋಗನಿರೋಧಕ ಶಕ್ತಿ ಅಥವಾ ದೀರ್ಘಕಾಲದ ಕಾಯಿಲೆಗಳಿದ್ದರೆ ಮಾತ್ರ ಫ್ಲೂ ಲಸಿಕೆ ನೀಡಲಾಗುತ್ತದೆ. ಆದಾಗ್ಯೂ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಮಕ್ಕಳಿಗೆ ಫ್ಲೂ ಲಸಿಕೆಯನ್ನು ನೀಡಬೇಕೆಂದು ಸೂಚಿಸಲಾಗಿದೆ.

Coronavirus cases are becoming more common in childrens parents concerned about children and safe follow these safe tips
ಸಾಂದರ್ಭಿಕ ಚಿತ್ರ


"ಈ ವ್ಯಾಕ್ಸಿನೇಷನ್ ಎಲ್ಲಾ ರೀತಿಯ ಜ್ವರವನ್ನು ನಿವಾರಿಸದಿದ್ದರೂ ಹಂದಿ ಜ್ವರವನ್ನು ಒಳಗೊಂಡಿರುವ ಮಾರಣಾಂತಿಕ ವೈರಸ್‌ಗಳ ವಿರುದ್ಧ ನಮ್ಮ ಮಕ್ಕಳ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಆದ್ದರಿಂದ ನನ್ನ ಸಲಹೆಯಲ್ಲಿ, ಪ್ರತಿಯೊಬ್ಬರೂ ಫ್ಲೂ ಶಾಟ್ ತೆಗೆದುಕೊಳ್ಳಬೇಕು ಏಕೆಂದರೆ ಚಿಕಿತ್ಸೆಗಿಂತ ತಡೆಗಟ್ಟುವಿಕೆ ಯಾವಾಗಲೂ ಉತ್ತಮವಾಗಿದೆ, ”ಎಂದು ಡಾ ಕ್ವಾತ್ರಾ ಹೇಳುತ್ತಾರೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ?
ಪ್ರತಿಯೊಬ್ಬರಿಗೂ ರೋಗನಿರೋಧಕ ಶಕ್ತಿ ಪ್ರಮುಖವಾಗಿದ್ದು, ಸಣ್ಣ ಪುಟ್ಟ ಕಾಯಿಲೆಗಳ ವಿರುದ್ಧ ಹೋರಾಡಲು ಇದು ನಮ್ಮನ್ನು ಸಜ್ಜುಗೊಳಿಸುತ್ತದೆ. ಹೀಗಾಗಿ ಮಕ್ಕಳಲ್ಲಿ ಇಮ್ಯುನಿಟಿ ಬೂಸ್ಟರ್ ಹೆಚ್ಚಿಸುವತ್ತ ಪೋಷಕರು ಗಮನ ನೀಡಬೇಕು. ಇದಕ್ಕೆ ಆರೋಗ್ಯಕರ ಆಹಾರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಜೊತೆಗೆ ನಿದ್ರೆ, ದೈಹಿಕ ಚಟುವಟಿಕೆ ಸಹ ಮಗುವಿನ ಆರೋಗ್ಯವನ್ನು ಕಾಪಾಡುವ ಇತರ ಕೆಲವು ಪ್ರಮುಖ ಅಂಶಗಳಾಗಿವೆ.

ಇದನ್ನೂ ಓದಿ:  Baby Food: ನಿಮ್ಮ ಪುಟ್ಟ ಕಂದಮ್ಮಗಳಿಗೆ ಅನ್ನ ತಿನ್ನಿಸಬಹುದಾ? ಗೊಂದಲಕ್ಕೆ ಇಲ್ಲಿದೆ ಉತ್ತರ

ಮುಖ್ಯವಾಗಿ ಕಾಲಕಾಲಕ್ಕೆ ಅವರಿಗೆ ನೀಡಬೇಕಾದ ಎಲ್ಲಾ ಪ್ರಮುಖ ಲಸಿಕೆಗಳನ್ನು ಹಾಕಿಸಬೇಕು. ಮಕ್ಕಳು ಅನಾರೋಗ್ಯಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಸರಿಯಾದ ಆರೋಗ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ.
Published by:Ashwini Prabhu
First published: