• Home
  • »
  • News
  • »
  • lifestyle
  • »
  • Diabetes: ಡಯಾಬಿಟಿಸ್ ರೋಗಿಯ ಕಥೆ ಈಗ ವೈರಲ್! ಈ ವೈದ್ಯರು ಮಾಡಿದ್ದೇನು?

Diabetes: ಡಯಾಬಿಟಿಸ್ ರೋಗಿಯ ಕಥೆ ಈಗ ವೈರಲ್! ಈ ವೈದ್ಯರು ಮಾಡಿದ್ದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧುಮೇಹ ತಜ್ಞ ಡಾ. ರಾಹುಲ್ ಬಕ್ಸಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅಕ್ಟೋಬರ್ 19 ರಂದು, ಡಾ ಬಕ್ಸಿ ಮಧುಮೇಹದಿಂದ ಬಳಲುತ್ತಿರುವ 30 ಹರೆಯದ ವ್ಯಕ್ತಿಯ ಪ್ರೊಫೈಲ್ ಅನ್ನು ಹಂಚಿಕೊಂಡಿದ್ದಾರೆ.

  • Trending Desk
  • Last Updated :
  • Bangalore, India
  • Share this:

ಆಹಾರದಲ್ಲಿ (Food) ಮಾಡಿದ ಬದಲಾವಣೆ ಹಾಗೂ ನಿಯಮಿತ ನಡಿಗೆಯು 30 ರ ಹರೆಯದ ವ್ಯಕ್ತಿಯು ಹೆಚ್ಚಿನ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ನೆರವನ್ನು ನೀಡಿದೆ. ಆಹಾರ ಹಾಗೂ ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆಯನ್ನು (Priority) ಏಕೆ ನೀಡಬೇಕು ಎಂಬುದಕ್ಕೆ ಈ ದೃಷ್ಟಾಂತ ಜ್ವಲಂತ ಉದಾಹರಣೆಯಾಗಿದೆ ಎಂದು ಮಧುಮೇಹ ತಜ್ಞ ಡಾ. ರಾಹುಲ್ ಬಕ್ಸಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅಕ್ಟೋಬರ್ 19 ರಂದು, ಡಾ ಬಕ್ಸಿ ಮಧುಮೇಹದಿಂದ ಬಳಲುತ್ತಿರುವ 30 ಹರೆಯದ ವ್ಯಕ್ತಿಯ ಪ್ರೊಫೈಲ್ ಅನ್ನು ಹಂಚಿಕೊಂಡಿದ್ದಾರೆ. ವ್ಯಕ್ತಿಯ ರಕ್ತ ಪರೀಕ್ಷೆಯು ವ್ಯಕ್ತಿಯ ಟ್ರೈಗ್ಲಿಸರೈಡ್ ಮಟ್ಟವು 3352.4 ಎಂದು ಸೂಚಿಸಿದೆ. ಟ್ರೈಗ್ಲಿಸರೈಡ್ ನೈಸರ್ಗಿಕ ಕೊಬ್ಬುಗಳು ಮತ್ತು ತೈಲಗಳ ಮುಖ್ಯ ಅಂಶಗಳಾಗಿದ್ದು ರಕ್ತದಲ್ಲಿ ಹೆಚ್ಚಿನ ಸಾಂದ್ರತೆ ಕಂಡುಬಂದಲ್ಲಿ ಸ್ಟ್ರೋಕ್‌ಗೆ ಕಾರಣವಾಗುತ್ತದೆ.


ಈ ಸಂದರ್ಭದಲ್ಲಿ ವ್ಯಕ್ತಿಯಲ್ಲಿ ಕಂಡುಬಂದ ಟ್ರೈಗ್ಲಿಸರೈಡ್ ಮಟ್ಟವು ಸಾಮಾನ್ಯ ಮಟ್ಟಕ್ಕಿಂತ ಅನೇಕ ಪಟ್ಟು ಹೆಚ್ಚಾಗಿತ್ತು. ಸಂಪೂರ್ಣ ಕೊಲೆಸ್ಟ್ರಾಲ್ ಮಟ್ಟವು 440.7 ಆಗಿದ್ದು, ಎರಡು ಪಟ್ಟು ಹೆಚ್ಚಿನ ಪ್ರಮಾಣದಲ್ಲಿತ್ತು ಅಂತೆಯೇ ಕಡಿಮೆ ಸಾಂದ್ರತೆಯ ಲಿಪೊಪೋಟ್ರೀನ್ ಅಥವಾ LDL ಹಾಗೂ ಹೆಚ್ಚಿನ ಸಾಂದ್ರತೆಯ ಲಿಪೋಪ್ರೋಟೀನ್ ಅಥವಾ HDL ತುಂಬಾ ಇಳಿಮುಖವಾಗಿತ್ತು.


ರೋಗಿಯ ಆಹಾರ ಪದ್ಧತಿ ಹೇಗಿತ್ತು?


500 ಮಿಲಿ ತಂಪು ಪಾನೀಯ ದಿನನಿತ್ಯ ಸೇವನೆ


ರೋಗಿಯು ಪ್ರತಿನಿತ್ಯ ಸೇವಿಸುತ್ತಿದ್ದ ಆಹಾರ ನೆಟ್ಟಿಗರ ಗಮನ ಸೆಳೆದಿದೆ ಎಂದೇ ಹೇಳಬಹುದು. ರೋಗಿಯು ಪ್ರತೀ ದಿನ 500 ಮಿಲಿ ತಂಪು ಪಾನೀಯವನ್ನು ಸೇವಿಸುತ್ತಿದ್ದರು ಹಾಗೂ ಜೊತೆಗೆ ಯಾರಾದರೂ ಇದ್ದಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂಬುದು ತಿಳಿದು ಬಂದಿದೆ.



ಬೆಳಗ್ಗಿನ ಉಪಹಾರಕ್ಕೆ ಇವರು ದೋಸೆ, ವಡೆ ಅಥವಾ ವಡಾ ಪಾವ್ ಸೇವಿಸುತ್ತಿದ್ದರು. ಇನ್ನು ಮಧ್ಯಾಹ್ನದೂಟ ಹಾಗೂ ರಾತ್ರಿಯೂಟಕ್ಕೆ ಹೊರಗಿನಿಂದ ಆಹಾರ ತರಿಸಿಕೊಳ್ಳುತ್ತಿದ್ದರು ಎಂದು ರೋಗಿ ತಿಳಿಸಿದ್ದಾಗಿ ಬಕ್ಸ್ ಮಾಹಿತಿ ಹಂಚಿಕೊಂಡಿದ್ದಾರೆ.




ಚೈನೀಸ್ ಖಾದ್ಯಗಳೆಂದರೆ ತುಂಬಾ ಇಷ್ಟವಾಗಿತ್ತು ಎಂದು ತಿಳಿಸಿರುವ ಇವರು ಈ ಖಾದ್ಯಗಳೊಂದಿಗೆ ಥಮ್ಸ್ ಅಪ್ ಅನ್ನು ಸೇವಿಸುತ್ತಿದ್ದರು. ಇನ್ನು ತಂಪುಪಾನೀಯದ ಪ್ರಮಾಣ ಎಷ್ಟಿತ್ತೆಂದರೆ 500 ಮಿಲಿ ಕನಿಷ್ಠ ಸೇವಿಸುತ್ತಿದ್ದರು, ಇನ್ನು ಸ್ನೇಹಿತರು ಯಾರಾದರೂ ಇದ್ದಲ್ಲಿ ಈ ಪ್ರಮಾಣ 1 ಲೀವರೆಗೆ ಹೋಗುತ್ತಿತ್ತು ಎಂದು ಹಂಚಿಕೊಂಡಿದ್ದಾರೆ.


ಈ ಎಲ್ಲಾ ವಿವರಗಳನ್ನು ಬಕ್ಸಿ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ರೋಗಿಯ ಅಸಮರ್ಪಕ ಜೀವನ ಶೈಲಿ ಅವರಿಗೆ ಹೇಗೆ ಹೊಡೆತವನ್ನು ನೀಡಿತ್ತು ಎಂಬುದನ್ನು ವಿವರಿಸಿದ್ದಾರೆ.


ರಕ್ತದ ಸಕ್ಕರೆ ಪ್ರಮಾಣ


ರೋಗಿಯ ರಕ್ತದ ಸಕ್ಕರೆ ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಆಹಾರದ ಮೊದಲಿನ ಪರೀಕ್ಷೆಯು 320 ಎಂದು ದಾಖಲಾಗಿತ್ತು, ಇದು 99 ಕ್ಕಿಂತ ಕಡಿಮೆ ಪ್ರಮಾಣದಲ್ಲಿರಬೇಕು. ಆಹಾರದ ನಂತರದ ಪರೀಕ್ಷೆಯಲ್ಲಿ ಸಕ್ಕರೆ ಪ್ರಮಾಣವು 400 ಆಗಿತ್ತು. ರಕ್ತದ ಸಕ್ಕರೆಯ ಸಾಮಾನ್ಯ ಮಟ್ಟವು 140 mg/dL ಗಿಂತ ಕೆಳಗಿರಬೇಕು. ಸರಾಸರಿ ರಕ್ತದ ಸಕ್ಕರೆ ಪ್ರಮಾಣವು 15.7% ವಾಗಿತ್ತು ಈ ಮಟ್ಟವು 5.7% ಕ್ಕಿಂತ ಕಡಿಮೆ ಇರಬೇಕು ಎಂದು ಬಕ್ಸಿ ಬರೆದುಕೊಂಡಿದ್ದಾರೆ.


ಹೆಚ್ಚಿನ ಟ್ರೈಗ್ಲಿಸರೈಡ್‌ಗಳು ಮತ್ತು ಕಡಿಮೆ LDL


ಹಲವಾರು ಟ್ವಿಟರ್ ಬಳಕೆದಾರರು ರೋಗಿಯಲ್ಲಿ ಹೆಚ್ಚಿನ ಮಟ್ಟದ ಟ್ರೈಗ್ಲಿಸರೈಡ್ ಮತ್ತು ಕಡಿಮೆ ಮಟ್ಟದ LDL ಅನ್ನು ಸೂಚಿಸಿದ್ದಾರೆ. ಟ್ರೈಗ್ಲಿಸರೈಡ್‌ಗಳು ದೇಹದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೆಚ್ಚಿನ ಪ್ರಮಾಣದ ಕೊಬ್ಬಿನಾಮ್ಲಗಳು ಅಪಧಮನಿಗಳನ್ನು ಗಟ್ಟಿಯಾಗಿಸುವುದರಿಂದ ಪಾರ್ಶ್ವವಾಯು, ಹೃದಯಾಘಾತ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ವೈದ್ಯರ ಹೇಳಿಕೆಯಾಗಿದೆ.


ಡಾ. ಬಕ್ಸಿ ಅವರು ರೋಗಿಯ ಲಿಪಿಡ್ ಪರೀಕ್ಷೆಯ (ಸಾಮಾನ್ಯ ರಕ್ತಪರೀಕ್ಷೆ) ಮತ್ತೊಂದು ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ವ್ಯಕ್ತಿಯ ಟ್ರೈಗ್ಲಿಸರೈಡ್ 1378 mg/dL ಆಗಿದ್ದು, ಇದು 2000 ಯೂನಿಟ್‌ಗಳಿಗಿಂತ ಕಡಿಮೆಯಾಗಿದೆ. 3 ದಿನಗಳ ಆಹಾರಕ್ರಮದ ಮಾರ್ಪಾಡುಗಳು ಮತ್ತು ಔಷಧಿಗಳೊಂದಿಗೆ ಟ್ರೈಗ್ಲಿಸರೈಡ್ ಒಂದೆರಡು ಸಾವಿರಗಳಷ್ಟು ಕಡಿಮೆಯಾಗಿದೆ ಎಂದು ಬಕ್ಸಿ ತಿಳಿಸಿದ್ದಾರೆ.


ನವೆಂಬರ್ 3 ರಂದು ಬರೋಬ್ಬರಿ 15 ದಿನಗಳ ನಂತರ ಡಾ ಬಕ್ಸಿ ಮತ್ತೊಂದು ಲಿಪಿಡ್ ಪರೀಕ್ಷಾ ವರದಿಯನ್ನು ಹಂಚಿಕೊಂಡಿದ್ದು, ಇದರಲ್ಲಿ ಟ್ರೈಗ್ಲಿಸರೈಡ್ ಮಟ್ಟವು 315 mg/DL ಗೆ ಇಳಿದಿತ್ತು. ರೋಗಿಯ ಆಹಾರ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ನಡೆಸಲಾಯಿತು ಎಂದು ತಿಳಿಸಿರುವ ವೈದ್ಯರು, ರೋಗಿಯು ನಿತ್ಯವೂ ನಡಿಗೆಯನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ರೋಗಿಯ ಗ್ಲುಕೋಸ್ ಮಟ್ಟ ಕೂಡ ಸುಧಾರಣೆಯಾಗಿದೆ ಎಂದು ಬಕ್ಸಿ ಟ್ವೀಟ್ ಮಾಡಿದ್ದಾರೆ.


ಟ್ವಿಟರ್ ಬಳಕೆದಾರರು ಬಕ್ಸಿಯವರಲ್ಲಿ ಮಧುಮೇಹಕ್ಕೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದು ಅದಕ್ಕೆ ವೈದ್ಯರು ಉತ್ತರವನ್ನು ನೀಡಿದ್ದಾರೆ.


ಪರೀಕ್ಷೆಗಳಿಗೆ ಒಳಪಡುವಂತೆ ಮಧುಮೇಹ ರೋಗಿಗೆ ಏಕೆ ಹೇಳಲಾಯಿತು?


ರೋಗಿಯು ಆಯಾಸ, ನೋಕ್ಟುರಿಯಾ ಮತ್ತು ಪಾಲಿಡಿಪ್ಸಿಯಾದಿಂದ ಬಳಲುತ್ತಿದ್ದರು ಹೀಗಾಗಿ ವೈದ್ಯರ ಬಳಿ ಪರಿಶೀಲಿಸಿಕೊಳ್ಳುವಂತೆ ತಿಳಿಸಲಾಯಿತು ಎಂದು ಬಕ್ಸಿ ತಿಳಿಸಿದ್ದಾರೆ. ನೋಕ್ಟುರಿಯಾ ಎನ್ನುವುದು ರೋಗಿಯನ್ನು ಪದೇ ಪದೇ ಮೂತ್ರ ವಿಸರ್ಜಿಸಲು ಎಚ್ಚರಗೊಳಿಸುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುವ ಈ ಸ್ಥಿತಿ, ಮಧುಮೇಹಿಗಳಲ್ಲೂ ಸಾಮಾನ್ಯವಾಗಿದೆ ಎಂದು ಬಕ್ಸಿ ತಿಳಿಸುತ್ತಾರೆ.


ರಕ್ತದಲ್ಲಿನ ಸಕ್ಕರೆ ಪರೀಕ್ಷೆಯನ್ನು ಮಾಡಿಸಿದರೂ ಲಿಪಿಡ್ ಪರೀಕ್ಷೆಯನ್ನು ಏಕೆ ಮಾಡಲಾಯಿತು?


ಟ್ವಿಟರ್ ಬಳಕೆದಾರರು ಬಕ್ಸಿಯವರಲ್ಲಿ ಈ ಪ್ರಶ್ನೆ ಕೇಳಿದ್ದು, ರೋಗಿಯು ಈಗಾಗಲೇ ಆಯಾಸ, ನೋಕ್ಟೂರಿಯಾ ಮತ್ತು ಪಾಲಿಡಿಪ್ಸಿಯಾದಿಂದ ಬಳಲಿರುವುದಾಗಿ ಆತನ ಕುಟುಂಬ ವೈದ್ಯರು ತಿಳಿಸಿದ್ದರು. ಹಾಗಾಗಿಯೇ ಸಂಪೂರ್ಣ ಪರೀಕ್ಷೆಯನ್ನು ಮಾಡಿಸುವಂತೆ ಹೇಳಿದೆ ಎಂದು ವೈದ್ಯರು ತಿಳಿಸಿದ್ದಾರೆ.


ಮಧುಮೇಹದ ಸಾಮಾನ್ಯ ಪರೀಕ್ಷೆಗಳು ಯಾವುವು?


ಮಧುಮೇಹಕ್ಕೆ ವೈದ್ಯರು ಸೂಚಿಸುವ ಪರೀಕ್ಷೆಗಳೆಂದರೆ ಆಹಾರ ತೆಗೆದುಕೊಳ್ಳದೇ ಮಾಡುವ ರಕ್ತದ ಸಕ್ಕರೆ ಪರೀಕ್ಷೆ, ಗ್ಲುಕೋಸ್ ಮಟ್ಟದ ಪರೀಕ್ಷೆ, ರಕ್ತದಲ್ಲಿನ ಸಕ್ಕರೆಯ ಪರೀಕ್ಷೆ, ಗ್ಲೂಕೋಸ್ ಸ್ಕ್ರೀನಿಂಗ್ ಪರೀಕ್ಷೆ ಮತ್ತು HbA1C ಆಗಿದೆ.


ಫಾಸ್ಟಿಂಗ್ ಬ್ಲಡ್ ಶುಗರ್ ಲೆವಲ್ ಮಟ್ಟದ ಸಾಮಾನ್ಯ ಶ್ರೇಣಿಯೇನು?


ಆಹಾರ ತೆಗೆದುಕೊಳ್ಳದೇ ಅಂದರೆ ಉಪವಾಸ ಸ್ಥಿತಿಯಲ್ಲಿ ಮಾಡುವ ಸಕ್ಕರೆ ಪರೀಕ್ಷೆಯ ಮಟ್ಟವು ಯಾವಾಗಲೂ 90mg/dL ಗಿಂತ ಕಡಿಮೆ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ. 100 ರಿಂದ 125 mg/dL ನಡುವಿನ ಮಟ್ಟವನ್ನು ಪ್ರಿಡಿಯಾಬಿಟಿಸ್ ಎಂದು ಪರಿಗಣಿಸಲಾಗುತ್ತದೆ ಎಂದು ಬಕ್ಸಿ ತಿಳಿಸಿದ್ದಾರೆ


ಮಧುಮೇಹ ಮತ್ತು ಕೊಲೆಸ್ಟ್ರಾಲ್‌ಗೆ ಸಂಬಂಧವಿದೆಯೇ?


ಹೌದು. ನೀವು ಮಧುಮೇಹ ಹೊಂದಿದ್ದರೆ, ನೀವು ಹೆಚ್ಚಿನ ಮಟ್ಟದ LDL ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊಂದುವ ಸಾಧ್ಯತೆಗಳಿವೆ.

Published by:Divya D
First published: