ಬದಲಾದ ಕಾಲಕ್ಕೆ ತಕ್ಕಂತೆ ನೌಕರರ (Employees) ಕೆಲಸದ (Job) ವೇಳೆ ಕೂಡ ಬದಲಾವಣೆಯಾಗುತ್ತಿದೆ. ಮೀಡಿಯಾ, ಐಟಿ, ಎಂಎನ್ಸಿ, ಫಾರ್ಮಾ ಹೀಗೆ ಅನೇಕ ಕ್ಷೇತ್ರಗಳಲ್ಲಿ 24 ಗಂಟೆ ಕೆಲಸ ನಡೆಯುತ್ತಲೇ ಇರುತ್ತದೆ. ಹೀಗಾಗಿ ನೌಕರರು ಸಹ ಯಾವುದೇ ಸಮಯವಾಗಿದ್ದರೂ ಶಿಫ್ಟ್ (Shift) ಮಾಡಬೇಕಾಗುತ್ತದೆ. ಒಂದು ವಾರ ಬೆಳಗ್ಗೆ ಮಾಡಿದರೆ ಇನ್ನೊಂದು ವಾರ ರಾತ್ರಿ ಆಫಿಸ್ಗೆ (Office) ಹೋಗಬೇಕಾಗುತ್ತದೆ. ಕಂಪನಿಯ (Company) ಅಗತ್ಯತೆಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೂ, ಸರದಿಯಂತೆ ಶಿಫ್ಟ್ ಮತ್ತು ನೈಟ್ ಶಿಫ್ಟ್ನಲ್ಲಿ ಕೆಲಸ (Night Shift Work) ಮಾಡುವುದರಿಂದ ಉದ್ಯೋಗಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅನೇಕ ರೋಗಗಳು ಬರುವ ಮತ್ತು ಜೀವಿತಾವಧಿಯನ್ನು ಕಡಿಮೆ ಮಾಡುವ ಅಪಾಯವಿದೆ ಎಂದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅದರಲ್ಲೂ ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವವರು ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಈ ವಿಚಾರವಾಗಿ 'ಅಮೆರಿಕನ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್' ನಲ್ಲಿ ಅಧ್ಯಯನ ನಡೆಸಿದ್ದು, ಪ್ರಪಂಚದಾದ್ಯಂತದ ಹೆಚ್ಚಿನ ಆರೋಗ್ಯ ಕಾರ್ಯಕರ್ತರು ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುತ್ತಾರೆ ಎಂದು ಬಹಿರಂಗಪಡಿಸಿದೆ. ಸುಮಾರು ಐದು ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದರೆ ಮಹಿಳೆಯರ ಮೇಲೆ ಗಂಭೀರ ಅಡ್ಡ ಪರಿಣಾಮ ಬೀರುತ್ತದೆ. ಸಂಶೋಧನೆಯ ಪ್ರಕಾರ, ಅವುಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಸಂಭವಿಸುತ್ತವೆ ಮತ್ತು ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವುದರಿಂದ ಕಡಿಮೆ ನಿದ್ರೆ ಮತ್ತು ನಿದ್ರಾಹೀನತೆ ಉಂಟಾಗುತ್ತದೆ. ಮುಖ್ಯವಾಗಿ ಮಹಿಳೆಯರ ಜೈವಿಕ ಗಡಿಯಾರ (ಬಯೋ ಸೈಕಲ್) ಹಾಳಾಗಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಲಾಗಿದೆ.
ಸಮಸ್ಯೆಗಳು ಅನಿವಾರ್ಯ
ಶಿಫ್ಟ್ ಪ್ರಕಾರ ಕೆಲಸ ಮಾಡುವವರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಅಂದರೆ ತೂಕ ಹೆಚ್ಚಾಗುವುದು, ಕಿರಿಕಿರಿ, ಮೆದುಳಿನಲ್ಲಿ ಭಾರವಾದ ಭಾವನೆ, ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳ ಅಪಾಯವಿದೆ. ಇವುಗಳಲ್ಲದೇ ಗ್ಯಾಸ್ಟ್ರಿಕ್ ಸಮಸ್ಯೆಗಳಾದ ಅಜೀರ್ಣ, ಅಸಿಡಿಟಿ, ಸ್ಟೂಲ್ ಸೋಮಾರಿತನ, ಭೇದಿ ಹೀಗೆ ಅನೇಕ ಸಮಸ್ಯೆಗಳು ಬರಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆದರೆ ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವವರು ಕೆಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ತೊಂದರೆಯಿಂದ ಪಾರಾಗಬಹುದು ಎಂದು ಸಲಹೆ ನೀಡಿದ್ದಾರೆ.
ವ್ಯಾಯಾಮ
ಪ್ರತಿಯೊಬ್ಬರಿಗೂ ವ್ಯಾಯಾಮ ಅತ್ಯಗತ್ಯ. ಅದರಲ್ಲೂ ಕೂತು ಕೆಲಸ ಮಾಡುವವರಿಗೆ ದೈಹಿಕವಾಗಿ ಆಯಾಸವಾಗುವುದಿಲ್ಲ. ಅಂದರೆ ದೇಹದ ಇತರ ಭಾಗಗಳು ಅಷ್ಟು ಕ್ರಿಯಾಶೀಲವಾಗಿರುವುದಿಲ್ಲ. ಇದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ವ್ಯಾಯಾಮ ಮಾಡುವುದು ಅನಿವಾರ್ಯ ಎಂದು ವೈದ್ಯರು ಹೇಳುತ್ತಾರೆ.
ಆರೋಗ್ಯಕರ ಜೀವನಕ್ಕೆ ವ್ಯಾಯಾಮ ಮಂತ್ರವಾಗಿ ಕೆಲಸ ಮಾಡುತ್ತದೆ. ಪ್ರತಿದಿನ ಕನಿಷ್ಠ 30 ರಿಂದ 40 ನಿಮಿಷ ವ್ಯಾಯಾಮಕ್ಕೆಂದೇ ಮೀಸಲಿಡಬೇಕು. ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಮನೆಯಲ್ಲಿಯೇ ಸಣ್ಣ, ಪುಟ್ಟ ವ್ಯಾಯಾಮಗಳನ್ನು ಮಾಡಿ. ಜೊತೆಗೆ ವಾಕಿಂಗ್ ಮತ್ತು ಮೆಟ್ಟಿಲುಗಳನ್ನು ಹತ್ತಬೇಕು ಎಂದು ತಿಳಿಸಿದ್ದಾರೆ.
ನಿದ್ರೆ ಮುಖ್ಯ
ಎಲ್ಲರೂ ರಾತ್ರಿ ಹೊತ್ತು ನಿದ್ರೆ ಮಾಡುವುದು ಬಹಳ ಮುಖ್ಯ. ಆದರೆ, ಆ ಸಮಯದಲ್ಲಿ ಕೆಲಸ ಮಾಡುವುದರಿಂದ ರಾತ್ರಿ ನಿದ್ರೆ ಸರಿದೂಗಿಸಬೇಕು. ಉದ್ಯೋಗಿಗಳು ಪೂರ್ಣ ರಾತ್ರಿ ನಿದ್ರೆ ಮಾಡಬೇಕು. ಮಲಗುವ ಕೋಣೆಯಲ್ಲಿ ಹೆಚ್ಚು ಬೆಳಕು ಇರದಂತೆ ನೋಡಿಕೊಳ್ಳಲು ಹೇಳಲಾಗುತ್ತದೆ. ಮಲಗುವ ಮುನ್ನ ಫೋನ್‌ಗಳಂತಹ ಡಿಜಿಟಲ್ ಸ್ಕ್ರೀನ್‌ಗಳನ್ನು ನೋಡದಂತೆ ಸೂಚಿಸಲಾಗಿದೆ. ಸಾಕಷ್ಟು ನಿದ್ರೆ ಮಾಡಿದರೆ, ಮಾತ್ರ ದೇಹವು ಸಕ್ರಿಯವಾಗಿ ಕೆಲಸ ಮಾಡುತ್ತದೆ ಎಂದು ವೈದ್ಯರು ಸೂಚಿಸುತ್ತಾರೆ.
Night Shift: ನೈಟ್ ಶಿಫ್ಟ್ ಅನಿವಾರ್ಯವೇ, ಆದ್ರೆ ಆರೋಗ್ಯ ಮರೆಯಬೇಡಿ..
ಪೌಷ್ಟಿಕ ಆಹಾರ
ಆರೋಗ್ಯಕರ ಜೀವನಕ್ಕೆ ಪೌಷ್ಟಿಕಾಂಶ ಬಹಳ ಮುಖ್ಯ. ತಡರಾತ್ರಿ ತಿಂದರೆ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇವುಗಳ ಜೊತೆಗೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಹೆಚ್ಚಾಗಬಹುದು ಮತ್ತು ಮಧುಮೇಹಕ್ಕೆ ಕಾರಣವಾಗಬಹುದು. ಚಯಾಪಚಯ ಕ್ರಿಯೆಯ ಮೇಲೂ ಸಹ ಪರಿಣಾಮ ಬೀರುತ್ತದೆ. ಹಾಗಾಗಿ ರಾತ್ರಿ ಹೊತ್ತು ಕಡಿಮೆ ಊಟ ಮಾಡುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ