ನೀವು ಪೋರ್ನ್ ವಿಡಿಯೋ ನೋಡುತ್ತೀರಾ? ಹಾಗಿದ್ರೆ ಇಲ್ಲಿದೆ ಶಾಕಿಂಗ್ ನ್ಯೂಸ್

ದಿನನಿತ್ಯ ಪೋರ್ನ್​ ವಿಡಿಯೋ ವೀಕ್ಷಿಸುವ ಜನರು ಲೈಂಗಿಕ ಚಟುವಟಿಕೆಗಳತ್ತ ಆಕರ್ಷಿತರಾಗಿರುತ್ತಾರೆ. ಆದರೆ ವಿಡಿಯೋ ವೀಕ್ಷಣೆಯ ಚಟದಿಂದ ನೀವು ಹೆಚ್ಚಾಗಿ ಒಂಟಿತನವನ್ನು ಇಷ್ಟ ಪಡುತ್ತೀರಿ. ಇದು ನಿಮ್ಮ ಮೆದುಳಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ

news18
Updated:July 8, 2019, 8:04 PM IST
ನೀವು ಪೋರ್ನ್ ವಿಡಿಯೋ ನೋಡುತ್ತೀರಾ? ಹಾಗಿದ್ರೆ ಇಲ್ಲಿದೆ ಶಾಕಿಂಗ್ ನ್ಯೂಸ್
.
  • News18
  • Last Updated: July 8, 2019, 8:04 PM IST
  • Share this:
ನಿಮಗೆ ಪೋರ್ನ್​ ವಿಡಿಯೋಗಳನ್ನು ನೋಡುವ ಅಭ್ಯಾಸವಿದೆಯೇ? ಇಲ್ಲ ಅಶ್ಲೀಲ ಚಿತ್ರಗಳನ್ನು ಹೆಚ್ಚು ವೀಕ್ಷಿಸುತ್ತೀರಾ? ಹಾಗಿದ್ದರೆ ಅಂತಹ ಅಭ್ಯಾಸಕ್ಕೆ ಇಂದೇ ಗುಡ್ ಬೈ ಹೇಳಿ. ಏಕೆಂದರೆ ಇದು ನಿಮ್ಮ ದಾಂಪತ್ಯ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ.

ಯಾರೂ ಹೆಚ್ಚಾಗಿ ಪೋರ್ನ್​(ಸೆಕ್ಸ್) ವಿಡಿಯೋಗಳನ್ನು ನೋಡುತ್ತಾರೆ ಅಂತವರು ಲೈಂಗಿಕ ಕ್ರಿಯೆಯಲ್ಲಿ ಅಸಮರ್ಥರಾಗುತ್ತಾರೆ. ಸಾಮಾನ್ಯ ವ್ಯಕ್ತಿಗೆ ಇರುವ ಲೈಂಗಿಕ ಆಸಕ್ತಿಯು ಪೋರ್ನ್ ವಿಡಿಯೋಗಳನ್ನು​ ನೋಡುವ ವ್ಯಕ್ತಿಯಲ್ಲಿ ಕಂಡು ಬರುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಪ್ರತಿನಿತ್ಯ ಪೋರ್ನ್​ ನೋಡುವ ವ್ಯಕ್ತಿಯು ತನ್ನ ಸಂಗಾತಿಯನ್ನು ತೃಪ್ತಿ ಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಇದರಿಂದಾಗಿ ದಾಂಪತ್ಯ ಜೀವನದಲ್ಲಿ ವಿರಸಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನ ತಂಡ ತಿಳಿಸಿದೆ.

ಪೋರ್ನ್​ ವಿಡಿಯೋಗಳನ್ನು ವೈಭವೀಕರಿಸಿ ತೋರಿಸಲಾಗುತ್ತದೆ. ಆದರೆ ಅದೇ ಕಲ್ಪನೆಯಲ್ಲಿ ತನ್ನ ಸಂಗಾತಿಯೊಂದಿಗೆ ವರ್ತಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಕೂಡ ಇದೆ. ಏಕೆಂದರೆ ಸಂಬಂಧಗಳಲ್ಲಿ ಲೈಂಗಿಕ ತೃಪ್ತಿ ಮತ್ತು ಆತ್ಮ ತೃಪ್ತಿ ಸಮತೋಲನದಲ್ಲಿರಬೇಕಾಗುತ್ತದೆ.

ಅಲ್ಲದೆ ಹೆಚ್ಚಾಗಿ ಪೋರ್ನ್​ ವೀಕ್ಷಿಸುವ ವ್ಯಕ್ತಿಗಳಲ್ಲಿ ಕಾಮಾಸಕ್ತಿ ಕುಂಠಿತವಾಗುತ್ತದೆ. ಇದರಿಂದ ಲೈಂಗಿಕ ಜೀವನದ ಆಸಕ್ತಿ ಇರುವುದಿಲ್ಲ. ಆಗಾಗಿ ಸಂಬಂಧಗಳಲ್ಲಿ ಬಿರುಕಿಗೆ ಇದು ಕೂಡ ಕಾರಣವಾಗಬಹದು.

ದಿನನಿತ್ಯ ಪೋರ್ನ್​ ವಿಡಿಯೋ ವೀಕ್ಷಿಸುವ ಜನರು ಲೈಂಗಿಕ ಚಟುವಟಿಕೆಗಳತ್ತ ಆಕರ್ಷಿತರಾಗಿರುತ್ತಾರೆ. ಆದರೆ ವಿಡಿಯೋ ವೀಕ್ಷಣೆಯ ಚಟದಿಂದ ನೀವು ಹೆಚ್ಚಾಗಿ ಒಂಟಿತನವನ್ನು ಇಷ್ಟ ಪಡುತ್ತೀರಿ. ಇದು ನಿಮ್ಮ ಮೆದುಳಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೆಯೇ ವೈವಾಹಿಕ ಜೀವನದ ಅಸಂತೃಪ್ತಿಗೆ ಇದುವೇ ಮೂಲ ಕಾರಣವಾಗುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇದನ್ನೂ ಓದಿಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮುನ್ನ ನಿಮಗೆ ಈ ವಿಷಯ ತಿಳಿದಿರಲೇಬೇಕು..!

First published: July 8, 2019, 8:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading