• Home
  • »
  • News
  • »
  • lifestyle
  • »
  • Spoken English: ನೀವು ಸ್ಪಷ್ಟವಾಗಿ ಇಂಗ್ಲಿಷ್ ಮಾತನಾಡಬೇಕೆ? ಹಾಗಿದ್ರೆ ಈ 10 ಟಿಪ್ಸ್ ತಪ್ಪದೆ ಫಾಲೋ ಮಾಡಿ

Spoken English: ನೀವು ಸ್ಪಷ್ಟವಾಗಿ ಇಂಗ್ಲಿಷ್ ಮಾತನಾಡಬೇಕೆ? ಹಾಗಿದ್ರೆ ಈ 10 ಟಿಪ್ಸ್ ತಪ್ಪದೆ ಫಾಲೋ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈಗಂತೂ ನೀವು ಇಂಗ್ಲೀಷ್ ಭಾಷೆಯನ್ನು ಮಾತಾಡಲು ಕಲಿಯುವ ಅನೇಕ ರೀತಿಯ ತರಬೇತಿಗಳನ್ನು ಒದಗಿಸುವವರು ಇದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ನೀವು ಈಗ ಇಂಗ್ಲಿಷ್ ಭಾಷೆಯನ್ನು ಕಲೆಯಲು ಅನೇಕ ಮಾರ್ಗಗಳಿವೆ.

  • Share this:

ಕೆಲವರು ಪ್ರಾರಂಭದಿಂದಲೇ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ (English Medium School) ಓದಿದವರು ಇಂಗ್ಲೀಷ್ ಅನ್ನು ಪ್ರತ್ಯೇಕವಾಗಿ ಕಲಿಯುವ ಅವಶ್ಯಕತೆ ಇರುವುದಿಲ್ಲ, ಆದರೆ ಇಂಗ್ಲೀಷ್ ಮಾಧ್ಯಮದಲ್ಲಿ ಓದದೆ ಇರುವವರು ಅನೇಕರು ತಮ್ಮ ವಿದ್ಯಾಭ್ಯಾಸ ಮುಗಿಸಿ ಇನ್ನೇನು ಉದ್ಯೋಗಕ್ಕೆ (Employment)  ಹೋಗುವ ತಯಾರಿಯಲ್ಲಿ ಇದ್ದಾಗ, ಅವರು ಸಂದರ್ಶನದಲ್ಲಿ ಕಂಪನಿಯ ಅಧಿಕಾರಿಗಳನ್ನು ಮೆಚ್ಚಿಸಿ ಉದ್ಯೋಗವನ್ನು ಪಡೆಯಲು ಇಂಗ್ಲಿಷ್ ಭಾಷೆಯನ್ನು (English Language) ಕಲಿಯುವುದಕ್ಕೆ ಶುರು ಮಾಡುತ್ತಾರೆ. ಈಗಂತೂ ನೀವು ಇಂಗ್ಲೀಷ್ ಭಾಷೆಯನ್ನು ಮಾತಾಡಲು ಕಲಿಯುವ ಅನೇಕ ರೀತಿಯ ತರಬೇತಿಗಳನ್ನು ಒದಗಿಸುವವರು ಇದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ನೀವು ಈಗ ಇಂಗ್ಲಿಷ್ ಭಾಷೆಯನ್ನು ಕಲೆಯಲು ಅನೇಕ ಮಾರ್ಗಗಳಿವೆ. ಇಂಗ್ಲಿಷ್ ಅನ್ನು ವೇಗವಾಗಿ ಕಲಿಯುವುದು ಅಸಾಧ್ಯವೆಂದು ನಿಮಗೆ ಅನ್ನಿಸಿದರೆ, ಅದು ತಪ್ಪು.


ಇಂಗ್ಲಿಷ್ ಭಾಷೆಯನ್ನು ತ್ವರಿತವಾಗಿ ಕಲಿಯಲು ಈ ಸಲಹೆಗಳನ್ನು ಪಾಲಿಸಿ:


1. ನೀವು ನಿಮ್ಮ ಕೈಗೆ ಸಿಗುವಂತಹ ಎಲ್ಲಾ ಇಂಗ್ಲಿಷ್ ವಿಷಯಗಳನ್ನು ಓದಿ
ನೀವು ಬೇಗನೆ ಇಂಗ್ಲಿಷ್ ಭಾಷೆ ಕಲಿಯಲು ಮಾಡಬೇಕಾಗಿರುವುದೇನೆಂದರೆ ನಿಮ್ಮ ಕೈಗೆ ಸಿಗುವ ಮತ್ತು ಕಣ್ಣಿಗೆ ಕಾಣಿಸುವ ಸಾಹಿತ್ಯ, ವೃತ್ತ ಪತ್ರಿಕೆಗಳು, ವೆಬ್‌ಸೈಟ್ ಗಳು, ಇ-ಮೇಲ್ ಗಳು, ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿರುವ ಫೀಡ್ ಹೀಗೆ ಎಲ್ಲವನ್ನೂ ನೀವು ಓದಿ. ಅದು ಇಂಗ್ಲಿಷ್ ನಲ್ಲಿದ್ದರೆ ತಪ್ಪದೆ ಓದಿ, ಏಕೆಂದರೆ ವಿಷಯಗಳು ರಸಭರಿತವಾದ ಹೊಸ ಶಬ್ದಗಳಿಂದ ಕೂಡಿರುತ್ತವೆ ಮತ್ತು ಹೊಸ ಹೊಸ ಶಬ್ದಗಳ ಬಗ್ಗೆ ನಮಗೆ ಮಾಹಿತಿ ದೊರೆಯುತ್ತದೆ ಮತ್ತು ಅವುಗಳನ್ನು ಹೇಗೆ ಬಳಸುವುದು ಅಂತ ಸಹ ಗೊತ್ತಾಗುತ್ತದೆ.


ಇದನ್ನೂ ಓದಿ: Jio Institute: ಜಿಯೋ ಇನ್ಸ್ಟಿಟ್ಯೂಟ್ ನ ಮೊದಲ ಬ್ಯಾಚ್ ಆರಂಭ, ಇದು ನಮ್ಮ ಕನಸಿನ ಕೇಂದ್ರ ಎಂದ ನೀತಾ ಅಂಬಾನಿ


ಮತ್ತೊಂದೆಡೆ, ನಿಮ್ಮ ಶಬ್ದಕೋಶವನ್ನು ನಿರ್ಮಿಸಲು ಹೊಸ ಪದಗಳು ಮತ್ತು ಅಭಿವ್ಯಕ್ತಿಗಳನ್ನು ಕಲಿಯುವುದು ಅತ್ಯಗತ್ಯ, ವಿಶೇಷವಾಗಿ ಅನೇಕ ಪದಗಳನ್ನು ಹೊಂದಿರುವ ಇಂಗ್ಲೀಷ್ ನಂತಹ ಭಾಷೆಯಲ್ಲಿ ಕಲೆಯಲು ತುಂಬಾನೇ ಇರುತ್ತದೆ.


2. ಹೊಸ ಶಬ್ದಗಳನ್ನು ಚೆನ್ನಾಗಿ ಗಮನಿಸಿ


ಈ ಸಲಹೆಯು ನಿಮಗೆ ಯಾವುದೇ ಭಾಷೆಯನ್ನು ತ್ವರಿತವಾಗಿ ಕಲಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ, ನಾವು ಆಗಾಗ್ಗೆ ನೋಡುವ ಹೊಸ ಪದಗಳನ್ನು ನೋಡಿ ಆನಂದಿಸುತ್ತೇವೆ, ಅದನ್ನು ಬೇಗನೆ ಮರೆಯಬಾರದು ಎಂದರೆ ನೀವು ಒಂದು ಚಿಕ್ಕ ನೋಟ್ಸ್ ನಲ್ಲಿ ಈ ಎಲ್ಲಾ ಹೊಸ ಪದಗಳನ್ನು ಬರೆದು ಇರಿಸಿಕೊಳ್ಳಬೇಕು ಮತ್ತು ಆಗಾಗ್ಗೆ ಅದನ್ನು ತೆರೆದು ನೋಡಿ ಓದಬೇಕು. ನೀವು ಹೊಸ ಪದ ಅಥವಾ ಅಭಿವ್ಯಕ್ತಿಯನ್ನು ಕೇಳಿದಾಗಲೆಲ್ಲಾ ಅಥವಾ ಓದಿದಾಗಲೆಲ್ಲಾ, ಅದನ್ನು ಸಂದರ್ಭೋಚಿತವಾಗಿ ಹೇಗೆ ಬರೆಯಬೇಕು ಮತ್ತು ಹೇಗೆ ಓದಬೇಕು ಅಂತ ನೋಡಿಕೊಳ್ಳಿರಿ.


3. ಇಂಗ್ಲಿಷ್ ಭಾಷೆ ಮಾತಾಡುವವರ ಜೊತೆ ಮಾತನಾಡಿ


ನೀವು ಒಂದು ಭಾಷೆಯನ್ನು ಹೆಚ್ಚಾಗಿ ಮಾತಾಡದೆ ಇದ್ದರೆ ಆ ಭಾಷೆ ನಿಮಗೆ ಮರೆತು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಭಾಷೆಯನ್ನು ಚೆನ್ನಾಗಿ ಮತ್ತು ಬೇಗನೆ ಕಲಿತುಕೊಳ್ಳಲು ಆದಷ್ಟು ಇಂಗ್ಲಿಷ್ ಭಾಷೆಯನ್ನು ಮಾತಾಡುವವರೊಂದಿಗೆ ಮಾತನಾಡಿ. ಈಗಂತೂ ವಾಟ್ಸಾಪ್ ಬಂದಿದೆ, ನೀವು ಅದರಲ್ಲಿ ಸಂದೇಶಗಳನ್ನು ಸುಮ್ಮನೆ ಫಾರ್ವರ್ಡ್ ಮಾಡುವುದಕ್ಕಿಂತಲೂ ನೀವು ಏನು ಹೇಳಬೇಕು ಅಂತ ಅಂದು ಕೊಂಡಿರುತ್ತಿರೋ ಅದನ್ನು ಬರೆದು ಕಳುಹಿಸುವುದರಿಂದ ನಿಮ್ಮ ಭಾಷೆಯ ಮೇಲೆ ಇರುವ ಹಿಡಿತ ಇನ್ನಷ್ಟು ಬಲಗೊಳ್ಳುತ್ತದೆ. “ನಮಗೆ ಇಂಗ್ಲಿಷ್ಓದಲು ಬರುತ್ತದೆ ಮತ್ತು ಬರೆಯಲು ಬರುತ್ತದೆ, ಆದರೆ ಮಾತನಾಡಲು ಬರುವುದಿಲ್ಲ" ಅಂತ ಹೇಳುವವರನ್ನು ನಾವು ನೋಡಿರುತ್ತೇವೆ. ಆದ್ದರಿಂದ ಇಂಗ್ಲೀಷ್ ಮಾತಾಡುವವರೊಂದಿಗೆ ಮಾತನಾಡಿದರೆ ನಿಮ್ಮ ಕಲಿಕೆಗೆ ಸಹಾಯವಾಗುತ್ತದೆ.


ಈಗಂತೂ ನೀವು ಇಂಗ್ಲಿಷ್ ಭಾಷೆಯನ್ನು ಕಲಿಯಲು ಅನೇಕ ರೀತಿಯ ಕಡಿಮೆ ಅವಧಿಯ ಕೋರ್ಸ್ ಗಳು ಸಹ ಬಂದಿವೆ, ಅದಕ್ಕೆ ನೋಂದಾಯಿಸಿಕೊಳ್ಳಿ, ಅಥವಾ ಆನ್ ಲೈನ್ ನಲ್ಲಿ ತರಗತಿಗಳನ್ನು ತೆಗೆದುಕೊಳ್ಳಿ.


4. ಇಂಗ್ಲಿಷ್ ಪೊಡ್ಕಾಸ್ಟ್ ಅಥವಾ ಯೂಟ್ಯೂಬ್ ಚಾನೆಲ್ ಗಳಿಗೆ ಚಂದಾದಾರರಾಗಿ


ನಿಮಗೆ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿಯಿದೆಯೋ, ಆ ವಿಷಯಗಳ ಬಗ್ಗೆ ಆನ್‌ಲೈನ್ ನಲ್ಲಿ ಅನೇಕ ರೀತಿಯ ಫೋಡ್ಕಾಸ್ಟ್ ಗಳು ಲಭ್ಯವಿವೆ. ಇಂಗ್ಲಿಷ್ ಭಾಷೆಯಲ್ಲಿರುವ ಫೋಡ್ಕಾಸ್ಟ್ ಅಥವಾ ಯೂಟ್ಯೂಬ್ ಚಾನೆಲ್ ಗಳನ್ನು ನೋಡಿ ಮತ್ತು ಅವುಗಳಿಗೆ ಚಂದಾದಾರರಾಗಿ. ನೀವು ಮನೆಯಲ್ಲಿ ಖಾಲಿ ಕುಳಿತಾಗ, ಡ್ರೈವಿಂಗ್ ಮಾಡುವಾಗ ಇವುಗಳನ್ನು ಆಲಿಸಬಹುದು ಅಥವಾ ಶಾಲೆ ಅಥವಾ ಕೆಲಸಕ್ಕೆ ಪ್ರಯಾಣಿಸುವಾಗ ಸಹ ಕೇಳಿಸಿಕೊಳ್ಳಬಹುದು. ಮೊದಲಿಗೆ, ನೀವು ಸ್ಥಳೀಯ ಉಚ್ಚಾರಣೆಗಳನ್ನು ಕಷ್ಟಕರವೆಂದು ಭಾವಿಸಬಹುದು, ಆದರೆ ಸಮಯ ಹೋದಂತೆ ನಿಮಗೆ ಅದು ಅರ್ಥವಾಗಬಹುದು.


5. ವಿದೇಶಕ್ಕೆ ಹೋಗಿ


ಇಂಗ್ಲಿಷ್ ಮಾತನಾಡುವ ದೇಶದಲ್ಲಿ ವಾಸಿಸುವಾಗ ಮತ್ತು ಅಧ್ಯಯನ ಮಾಡುವಾಗ ಇಂಗ್ಲಿಷ್ ಅನ್ನು ತುಂಬಾನೇ ಬೇಗನೇ ಕಲಿಯಬಹುದು. ಇಂಗ್ಲಿಷ್ ವಿಶ್ವದ ಅತ್ಯಂತ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ ಎಂಬುದು ಇನ್ನೂ ಗುಟ್ಟಾಗಿ ಉಳಿದಿಲ್ಲ ಮತ್ತು ಈ ನಡುವೆ ಆಯ್ಕೆ ಮಾಡಬೇಕಾದ ದೇಶಗಳ ದೊಡ್ಡ ಪಟ್ಟಿಯೊಂದಿಗೆ, ನೀವು ನೆಚ್ಚಿನ ನಗರದ ಆಧಾರದ ಮೇಲೆ ನಿಮ್ಮ ಆದರ್ಶ ಕಲಿಕಾ ಪರಿಸರವನ್ನು ಆಯ್ಕೆ ಮಾಡಬಹುದು. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಕೆ, ಅಮೆರಿಕ, ಕೆನಡಾ ಮತ್ತು ದಕ್ಷಿಣ ಆಫ್ರಿಕಾವನ್ನು ಹೆಸರಿಸಲು ಯೋಚಿಸಿ.


6. ಇಂಗ್ಲಿಷ್ ಕಲೆಯಲು ನಿಮ್ಮ ಸ್ನೇಹಿತರ ಸಹಾಯ ಪಡೆಯಿರಿ


ಇಂಗ್ಲಿಷ್ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಸ್ನೇಹಿತರನ್ನು ನೀವು ಹೊಂದಿದ್ದರೆ, ಅದು ನಿಮಗೆ ಈ ಭಾಷೆಯನ್ನು ಕಲೆಯಲು ಸಹಾಯವಾಗಬಹುದು. ಪ್ರತಿದಿನ ಒಂದು ಅಥವಾ ಎರಡು ಈ ರೀತಿಯ ಪೋಸ್ಟ್ ಗಳನ್ನು ಓದಿ. ಅವು ಸುದ್ದಿ ಅಥವಾ ನಿಯತಕಾಲಿಕ ಲೇಖನಗಳು, ವೀಡಿಯೋಗಳು, ಭಾಷಣಗಳು, ಬ್ಲಾಗ್ ಪೋಸ್ಟ್ ಗಳು, ಹಾಡುಗಳು, ಅಥವಾ ಇನ್ನಾವುದೇ ಆಗಿರಬಹುದು, ಅದನ್ನು ಓದಿ ಅಷ್ಟೇ.


ಇದನ್ನೂ ಓದಿ:  Digital Vaccine: ಡಿಜಿಟಲ್ ಲಸಿಕೆ ಬಂದಿದೆ ನೋಡಿ, ಮಾಮೂಲಿ ಲಸಿಕೆಗೂ ಇದಕ್ಕೂ ಇರೋ ವ್ಯತ್ಯಾಸ ತಿಳಿಯಿರಿ


7. ಒಂದು ವಿಷಯದ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳಿ


ನೀವು ಇಂಗ್ಲಿಷ್ ಭಾಷೆಯನ್ನು ಕಲಿಯಲು ನಿರ್ಧರಿಸಿದರೆ ನೀವು ಅನೇಕ ರೀತಿಯ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಭಾಷೆಯಲ್ಲಿ ಇದು ಏಕೆ ಹೀಗೆ, ಅದು ಏಕೆ ಹೀಗೆ ಅಂತ ಅನೇಕ ಸಂದೇಹಗಳ ಮೇಲೆ ಹಾಗೆಯೇ ಕುಳಿತುಕೊಳ್ಳಬೇಡಿ, ಕುತೂಹಲದಿಂದಿರಿ ಮತ್ತು ಅವುಗಳನ್ನು ಪರಿಹರಿಸಿಕೊಳ್ಳಿ. ನೀವು ಒಂದು ಕೋರ್ಸ್ ಗೆ ದಾಖಲಾದರೆ, ನಿಮ್ಮ ಶಿಕ್ಷಕರನ್ನು ಅನೇಕ ಪ್ರಶ್ನೆಗಳನ್ನು ಕೇಳಿ. ಆದರೆ ನೀವು ಒಬ್ಬಂಟಿಯಾಗಿ ಕಲಿಯುತ್ತಿದ್ದರೆ, ಚಿಂತಿಸಬೇಡಿ, ಈ ಬ್ಲಾಗ್ ಗಳಲ್ಲಿ ಅಥವಾ ಭಾಷಾ ವೆಬ್‌ಸೈಟ್ ಗಳಲ್ಲಿ ಉತ್ತರಗಳನ್ನು ಹುಡುಕಿ, ಇತರ ಕಲಿಯುವವರನ್ನು ಕೇಳಿ, ಅಥವಾ ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಓದಿ ತಿಳಿದುಕೊಳ್ಳಿರಿ.


8. ಹೆಚ್ಚು ಹೆಚ್ಚು ಇಂಗ್ಲಿಷ್ ವಿಷಯಗಳನ್ನು ನೋಡಿ


ನೀವು ಇಷ್ಟಪಡುವ ಸ್ಥಳೀಯ ಇಂಗ್ಲಿಷ್ ಮಾತನಾಡುವ ನಟ ಅಥವಾ ಗಾಯಕನನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಕಲಿಕೆಯನ್ನು ಇನ್ನಷ್ಟು ವೇಗ ಮಾಡಿಕೊಳ್ಳಿರಿ. ಈಗ, ಆನ್‌ಲೈನ್ ಗೆ ಹೋಗಿ, ಅವರು ನೀಡಿದ ಸಂದರ್ಶನಗಳನ್ನು ಹುಡುಕಿ ಮತ್ತು ಅವುಗಳನ್ನು ವೀಕ್ಷಿಸಿ. ಸಾರಾಂಶಕ್ಕಾಗಿ ಒಮ್ಮೆ ಗಮನಿಸಿ, ನಂತರ ಮತ್ತೊಮ್ಮೆ, ನೀವು ಕೇಳುವ ಆಸಕ್ತಿದಾಯಕ ಅಭಿವ್ಯಕ್ತಿಗಳು ಮತ್ತು ಪದಗಳನ್ನು ಬರೆಯಲು ಸಮಯ ತೆಗೆದುಕೊಳ್ಳಿ. ಈ ಸಂದರ್ಶನದಿಂದ ಹೊರಬರುವ ಆಡುಭಾಷೆ, ಕಥೆಗಳು, ಹಾಸ್ಯ ಮತ್ತು ಉಪಕಥೆಗಳು ಖಂಡಿತವಾಗಿಯೂ ನಿಮ್ಮ ಭಾಷೆ ಕಲಿಕೆಗೆ ತುಂಬಾನೇ ಸಹಾಯ ಮಾಡುತ್ತವೆ.


9. ನಿಮಗೆ ಆಸಕ್ತಿಯಿರುವ ವಿಷಯಗಳೊಂದಿಗೆ ಪ್ರಾರಂಭಿಸಿ


ನಿಮ್ಮ ಇಂಗ್ಲಿಷ್ ವಿಷಯವನ್ನು ಓದುವಾಗ ಅದರಲ್ಲಿ ಬರುವಂತಹ ಶಬ್ದಕೋಶದ ಮೇಲೆ ಗಮನ ಹರಿಸಿ. ಯಾವುದಾದರೂ ವಿದೇಶಿ ಸಮ್ಮೇಳನವಿದೆಯೇ? ಇತರ ಸ್ಪರ್ಧಿಗಳೊಂದಿಗೆ ಅಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಿ. ನೀವು ಎಲ್ಲಾದರೂ ಹೋದರೆ ಅಲ್ಲಿ ಪ್ರವಾಸೋದ್ಯಮ ಶಬ್ದಕೋಶವು ನಿಮ್ಮ ಮಾರ್ಗದರ್ಶಿಯಾಗಿರುತ್ತದೆ. ನೀವು ಎಲ್ಲವನ್ನೂ ಒಂದೇ ಬಾರಿಗೆ ಕಲಿಯಲು ಸಾಧ್ಯವಿಲ್ಲ.


10. ಭಾಷೆಯನ್ನು ಕಲಿಯುವಾಗ ನಿಮ್ಮನ್ನು ನೀವು ಕಡಿಮೆ ಅಂತ ಭಾವಿಸಬೇಡಿ


"ನಾನು ಇಂಗ್ಲಿಷ್ ಮಾತನಾಡುವುದಿಲ್ಲ" ಅಥವಾ "ನಾನು ಇದನ್ನು ಎಂದಿಗೂ ಕಲೆಯಲು ಸಾಧ್ಯವಿಲ್ಲ" ಎಂದು ನೀವು ಹೇಳಿಕೊಳ್ಳಬೇಡಿ. ವಾಸ್ತವವಾಗಿ, ಈ ರೀತಿಯ ಮಾತುಗಳ ನಿಮ್ಮ ಕಲಿಕೆಯನ್ನು ಇನ್ನಷ್ಟು ನಿಧಾನ ಮಾಡುತ್ತದೆ. ನೀವು ಪ್ರತಿದಿನ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ನಿಮ್ಮ ತಿಳುವಳಿಕೆಯನ್ನು ಅವು ಮಸುಕಾಗಿಸುತ್ತವೆ ಮತ್ತು ಇಂಗ್ಲೀಷ್ ಚೆನ್ನಾಗಿ ಮಾತನಾಡುವ ನಿಮ್ಮ ಕನಸುಗಳು ಅಸಾಧ್ಯ ಎಂದು ನಿಮಗೆ ಮನವರಿಕೆ ಮಾಡಿಕೊಡುತ್ತವೆ.


ಇದನ್ನೂ ಓದಿ:  Lonely Life: ತುಂಬಾ ದಿನಗಳ ಕಾಲ ಒಂಟಿಯಾಗಿರುವುದು ತುಂಬಾ ಕೆಟ್ಟದ್ದು! ಏಕೆ ಗೊತ್ತಾ?


ಬದಲಾಗಿ "ನಾನು ಇಂಗ್ಲಿಷ್ ಕಲಿಯುತ್ತಿದ್ದೇನೆ ಮತ್ತು ಪ್ರತಿದಿನವೂ ಸುಧಾರಣೆಗಳನ್ನು ಕಂಡುಕೊಳ್ಳುತ್ತಿದ್ದೇನೆ", "ಇದು ಅಷ್ಟೊಂದು ಸುಲಭವಲ್ಲ, ಆದರೆ ಇದು ಅಸಾಧ್ಯ ಸಹ ಅಲ್ಲ” ಅಂತ ಅಂದು ಕೊಳ್ಳಿರಿ.

Published by:Ashwini Prabhu
First published: