Weight Loss: ಏನ್ಮಾಡಿದ್ರೂ ತೂಕ ಕಡಿಮೆ ಆಗ್ತಿಲ್ವಾ? ಈ 7 ಆಹಾರ ಸೇವಿಸಿ ನೋಡಿ

ತೋಳ ಇಳಿಸಿಕೊಳ್ಳಲು ಹೆಚ್ಚು ತರಕಾರಿಗಳು ಮತ್ತು ಹಣ್ಣುಗಳು, ಕಡಿಮೆ ಕರಿದ ಮತ್ತು ಎಣ್ಣೆಯುಕ್ತ ಆಹಾರಗಳನ್ನು ಸೇವಿಸುವುದನ್ನು ಕೇಳಿರಬಹುದು, ಆದರೆ ತೂಕ ಇಳಿಸಲು ನಿಖರವಾಗಿ ಏನು ಮಾಡಬೇಕು? ನಿಮಗೂ ಸಹ ಇದೇ ರೀತಿಯ ಗೊಂದಲಗಳು ಕಾಡುತ್ತಿದ್ದರೆ, ಈ ಹೆಚ್ಚಿನ ಪ್ರೋಟೀನ್ ಇರುವ ಮತ್ತು ಕಡಿಮೆ ಕ್ಯಾಲೋರಿಯ ಭಕ್ಷ್ಯಗಳನ್ನು ಒಮ್ಮೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಿಮ್ಮ ದೇಹದಲ್ಲಿರುವ ತೂಕವನ್ನು (Weight) ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರೆ, ನಿಸ್ಸಂದೇಹವಾಗಿ ಕೆಲವು ಆಹಾರಗಳು ನಿಮಗೆ ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ನಾವು ನಿಯಮಿತವಾಗಿ ವ್ಯಾಯಾಮ ಮಾಡುತ್ತೇವೆ, ಹೆಚ್ಚುವರಿ ಕ್ಯಾಲೋರಿಗಳನ್ನು ಬರ್ನ್ ಮಾಡಿಕೊಳ್ಳುತ್ತೇವೆ ಮತ್ತು ಹೊಸ ರೀತಿಯ ಆಹಾರಗಳನ್ನು (Food) ಪ್ರಯತ್ನಿಸುತ್ತೇವೆ. ಆದಾಗ್ಯೂ, ನಮ್ಮ ಆಹಾರಕ್ರಮವನ್ನು ಬದಲಾಯಿಸುವಾಗ ನಾವು ಯಾವ ಪಾಕವಿಧಾನಗಳನ್ನು ತಯಾರಿಸಬಹುದು ಎಂದು ನಮಗೆ ತಿಳಿದಿರಲಿಕ್ಕಿಲ್ಲ.  ಹೆಚ್ಚು ತರಕಾರಿಗಳು (Vegetable) ಮತ್ತು ಹಣ್ಣುಗಳು, ಕಡಿಮೆ ಕರಿದ ಮತ್ತು ಎಣ್ಣೆಯುಕ್ತ ಆಹಾರಗಳನ್ನು ಸೇವಿಸುವುದನ್ನು ಕೇಳಬಹುದು, ಆದರೆ ನಿಖರವಾಗಿ ಏನು ಮಾಡಬೇಕು? ನಿಮಗೂ ಸಹ ಇದೇ ರೀತಿಯ ಗೊಂದಲಗಳು ಕಾಡುತ್ತಿದ್ದರೆ, ಈ ಹೆಚ್ಚಿನ ಪ್ರೋಟೀನ್ (Protein) ಇರುವ ಮತ್ತು ಕಡಿಮೆ ಕ್ಯಾಲೋರಿಯ ಭಕ್ಷ್ಯಗಳನ್ನು ಒಮ್ಮೆ ನೋಡಿ.

ಇಲ್ಲಿವೆ ನೋಡಿ 7 ಅಧಿಕ ಪ್ರೋಟೀನ್, ಕಡಿಮೆ ಕ್ಯಾಲೋರಿ ಇರುವಂತಹ ಪಾಕವಿಧಾನಗಳು:
1. ಸ್ಟಿರ್ ಫ್ರೈ ಮಾಡಿದ ತರಕಾರಿಗಳು
ಈ ಪೌಷ್ಟಿಕ ಭಕ್ಷ್ಯವು ತರಕಾರಿಗಳು ಮತ್ತು ಕ್ರಂಚ್ ನ ಮಿಶ್ರಣವಾಗಿದ್ದು, ಇದು ನಿಮ್ಮನ್ನು ಹೆಚ್ಚು ತಿನ್ನುವಂತೆ ಮಾಡುತ್ತದೆ. ಈ ಕಡಿಮೆ ಕ್ಯಾಲೋರಿಯ ಇಂಡೋ-ಚೈನೀಸ್ ಭಕ್ಷ್ಯವು ಇತರ ಯಾವುದೇ ಪಾಕವಿಧಾನಕ್ಕಿಂತ ಭಿನ್ನವಾಗಿ ನಿಮ್ಮ ಹಸಿವನ್ನು ನೀಗಿಸುತ್ತದೆ. ಇದನ್ನು ಸ್ವಲ್ಪ ಎಣ್ಣೆಯೊಂದಿಗೆ ಹುರಿಯಲಾಗುತ್ತದೆ ಮತ್ತು ಮಸಾಲೆಗಳನ್ನು ಬಳಸುವುದರೊಂದಿಗೆ ಇದಕ್ಕೆ ಪರಿಮಳವನ್ನು ನೀಡಲಾಗುತ್ತದೆ. ಈ ಸ್ಟಿರ್ ಫ್ರೈ ಮಾಡಿದ ತರಕಾರಿಗಳ ಬೌಲ್ ಖಂಡಿತವಾಗಿಯೂ ನಿಮ್ಮ ಹಸಿವನ್ನು ನೀಗಿಸುತ್ತದೆ.

2. ಹುರಿದ ಗೋಬಿ
ಹೂ ಕೋಸು ಅಥವಾ ಗೋಬಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಕಡಿಮೆ ಕೊಬ್ಬಿನಾಂಶವನ್ನು ಹೊಂದಿದೆ. ಮತ್ತು ಗೋಬಿಯನ್ನು ತಯಾರಿಸುವ ಈ ಶೈಲಿಯು ನಿಮಗೆ ಹೊಸ ರುಚಿಯನ್ನು ನೀಡುತ್ತದೆ. ಇದು ಹುರಿದ ನಂತರ ಗರಿಗರಿಯಾದ ವಿನ್ಯಾಸ ಮತ್ತು ಸ್ಮೋಕಿ ಪರಿಮಳವನ್ನು ಹೊಂದಿರುತ್ತದೆ. ಬೆಳ್ಳುಳ್ಳಿ ಹಾಕಿದ ಮೊಸರು ಡಿಪ್ ಅಥವಾ ಚಟ್ನಿಯೊಂದಿಗೆ ನೀವು ಇದನ್ನು ಸೇವಿಸಲು ಆಯ್ಕೆ ಮಾಡಿಕೊಳ್ಳಬಹುದು.

3. ಸ್ಕ್ರ್ಯಾಂಬಲ್ಡ್ ಮೊಟ್ಟೆಗಳು
ಇದು ನಿಸ್ಸಂದೇಹವಾಗಿ ಮಾಡಿಕೊಳ್ಳಲು ಸುಲಭವಾದ ಮತ್ತು ತಿನ್ನಲು ಆರೋಗ್ಯಕರ ಸಹ ಆಗಿರುತ್ತದೆ. ಇದನ್ನು ತಯಾರಿಸಿಕೊಳ್ಳಲು ನಿಮಗೆ ಮೆಣಸು, ಹಾಲು, ಮೊಟ್ಟೆಗಳು ಮತ್ತು ಬೆಣ್ಣೆ ಬೇಕು. ಇದನ್ನು ಹೆಚ್ಚು ಪೌಷ್ಟಿಕವಾಗಿಸಲು, ನೀವು ಹೆಚ್ಚು ತರಕಾರಿಗಳನ್ನು ಸಹ ಇದಕ್ಕೆ ಸೇರಿಸಬಹುದು.

ಇದನ್ನೂ ಓದಿ: Weight Loss Tips: ಅರಿಶಿನವನ್ನು ಹೀಗೆ ಬಳಸಿದ್ರೆ ತೂಕ ಇಳಿಸೋದು ಸುಲಭವಂತೆ, ನೀವೂ ಟ್ರೈ ಮಾಡಿ

4. ಬೇಯಿಸಿದ ಚಿಕನ್ ಸೀಖ್
ಇದು ಮುಘಲೈ ಮಾದರಿಯ ಕಡಿಮೆ ಕ್ಯಾಲೋರಿಯ ಭಕ್ಷ್ಯವು ಪ್ರೋಟೀನ್ ನಿಂದ ಸಮೃದ್ಧವಾಗಿದೆ ಮತ್ತು ಬೇಯಿಸಿದಾಗ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಎಣ್ಣೆ-ಮುಕ್ತವಾಗಿರುತ್ತದೆ. ಈ ಪಾಕವಿಧಾನವು ನಿಮ್ಮ ಹಸಿವನ್ನು ತೃಪ್ತಿ ಪಡಿಸುವುದು ಮಾತ್ರವಲ್ಲದೆ, ನಿಮ್ಮ ದೇಹದ ತೂಕವನ್ನು ಸಹ ನಿಯಂತ್ರಣದಲ್ಲಿಡುತ್ತದೆ.

5. ಮೊಳಕೆ ಕಾಳುಗಳ ಚಾಟ್
ನೀವು ನಿಮ್ಮ ಮನೆಯಲ್ಲಿ ಈ ಚಾಟ್ ಅನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ ಮಾಡಿಕೊಳ್ಳಬಹುದು. ಈ ಮೊಳಕೆ ಕಾಳುಗಳು ಚಾಟ್ ನಲ್ಲಿ ಒಂದು ಬೌಲ್ ರಾಜ್ಮಾ, ಹೆಸರು ಬೇಳೆ ಮತ್ತು ಕಡಲೆಯಿಂದ ತುಂಬಿಸಿ. ಮಸಾಲೆಗಳನ್ನು ಹಾಕಿಕೊಂಡು ಅದರ ಮೇಲೆ ಸ್ವಲ್ಪ ನಿಂಬೆ ರಸವನ್ನು ಸಹ ಸೇರಿಸಿ.

6. ಮೆಕ್ಸಿಕನ್ ಕ್ವಿನೋವಾ ಸಲಾಡ್
ಕ್ವಿನೋವಾ, ಫಾಕ್ಸ್ ಟೇಲ್, ಬೀನ್ಸ್ ಮತ್ತು ಗರಿಗರಿಯಾದ ತರಕಾರಿಗಳು ಈ ಮೆಕ್ಸಿಕನ್ ಕ್ವಿನೋವಾ ಸಲಾಡ್ ನ ಮುಖ್ಯ ಘಟಕಾಂಶಗಳಾಗಿವೆ. ಈ ಭಕ್ಷ್ಯವು ಸೂಕ್ಷ್ಮವಾದ ಪರಿಮಳವನ್ನು ಹೊಂದಿರುತ್ತದೆ. ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸಹ ಈ ಪಾಕವಿಧಾನವನ್ನು ಮಾಡಿಕೊಂಡು ಸೇವಿಸಬಹುದು.

ಇದನ್ನೂ ಓದಿ: Bad Cholesterol: ಕೆಟ್ಟ ಕೊಲೆಸ್ಟ್ರಾಲ್ ಎಂದರೇನು? ಇಲ್ಲಿದೆ ನೀವು ತಿಳಿಯಲೇಬೇಕಾದ ವಿವರ

7. ಸೋಯಾ ಉತ್ತಪಮ್
ಈ ಸೋಯಾ ಉತ್ತಪಮ್ ಪಾಕವಿಧಾನವು ಹಿಟ್ಟಿನಲ್ಲಿ ಸೋಯಾ ಫ್ಲೇಕ್ಸ್ ಅನ್ನು ಬಳಸಿ ಮಾಡಲಾಗುತ್ತದೆ. ಈ ಭಕ್ಷ್ಯವು ಗಣನೀಯ ಪ್ರಮಾಣದ ಪ್ರೋಟೀನ್ ಅನ್ನು ನೀಡುತ್ತದೆ. ಇದಲ್ಲದೆ, ಈ ಉತ್ತಪಮ್ ಅನ್ನು ಸೂಜಿ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಇದು ಕುರುಚಲು ವಿನ್ಯಾಸವನ್ನು ನೀಡುತ್ತದೆ. ಇದು ಅನೇಕ ರೀತಿಯ ತರಕಾರಿಗಳನ್ನು ಸಹ ಒಳಗೊಂಡಿರುತ್ತದೆ.
Published by:Ashwini Prabhu
First published: