Tea: ಟೀ ಕುಡಿದ್ರೆ ದೀರ್ಘಯುಷಿಗಳಾಗಿ ಬದುಕಬಹುದಾ? ಏನ್ ಹೇಳ್ತಿದೆ ಅಧ್ಯಯನ

ಇತ್ತೀಚಿನ ದಿನಗಳಲ್ಲಿ ಗ್ರೀನ್ ಟೀ, ಬ್ಲಾಕ್ ಟೀ, ತುಳಸೀ ಟೀ ಹೀಗೆ ಆರೋಗ್ಯಕ್ಕೆ ಅನುಗುಣವಾಗುವಂತಹ ಚಹಾ ವನ್ನೇ ಕುಡಿಯುವವರೇ ಹೆಚ್ಚು. ಆದರೆ ಚಹಾ ಕುಡಿಯುವುದು ಹೇಗೆ ಆರೋಗ್ಯಕ್ಕೆ ಒಳ್ಳೆಯದೋ, ಹಾಗೆಯೇ ಹೇಗೆ ಚಹಾವನ್ನು ಸೇವಿಸುತ್ತೇವೆ ಎಂಬುದು ಕೂಡ ನಿಮ್ಮ ಆರೋಗ್ಯ ಹೇಗಿದೆ ಎಂಬ ವಿಚಾರವನ್ನು ತಿಳಿಸುತ್ತದೆ ಎಂದು ಸಂಶೋಧನಾ ಅಧ್ಯಯನವು ಹೇಳುತ್ತಿದೆ. ಅದೇನು ವಿಷಯ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಚಹಾ

ಚಹಾ

  • Share this:
ಮುಂಜಾನೆ ಎದ್ದು ಒಂದು ಲೋಟ ಬಿಸಿ ಬಿಸಿ ಕಾಫಿ (Coffee) ಅಥವಾ ಚಹಾ (Tea) ಕುಡಿಯುತ್ತಾ ಪೇಪರ್ ಓದುತ್ತಾ ಕುಳಿತರೆ ಏನೋ ಒಂದು ರೀತಿಯ ಉಲ್ಲಾಸ. ಮನಸ್ಸಿಗೆ ಫ್ರೆಶ್ ಆದ ಅನುಭವ… ಅಂತೆಯೇ ಹೆಚ್ಚಿನವರಿಗೆ ಎದ್ದು ಮುಖ ತೊಳೆದು ಕಾಫಿ, ಚಹಾ ಕುಡಿದ ನಂತರವೇ ದಿನ ಆರಂಭವಾಗುವುದು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರೀನ್ ಟೀ, ಬ್ಲಾಕ್ ಟೀ, ತುಳಸೀ ಟೀ ಹೀಗೆ ಆರೋಗ್ಯಕ್ಕೆ (Health) ಅನುಗುಣವಾಗುವಂತಹ ಚಹಾ ವನ್ನೇ ಕುಡಿಯುವವರೇ ಹೆಚ್ಚು. ಆದರೆ ಚಹಾ ಕುಡಿಯುವುದು ಹೇಗೆ ಆರೋಗ್ಯಕ್ಕೆ ಒಳ್ಳೆಯದೋ, ಹಾಗೆಯೇ ಹೇಗೆ ಚಹಾವನ್ನು ಸೇವಿಸುತ್ತೇವೆ ಎಂಬುದು ಕೂಡ ನಿಮ್ಮ ಆರೋಗ್ಯ ಹೇಗಿದೆ ಎಂಬ ವಿಚಾರವನ್ನು ತಿಳಿಸುತ್ತದೆ ಎಂದು ಸಂಶೋಧನಾ ಅಧ್ಯಯನವು (research study) ಹೇಳುತ್ತಿದೆ. ಅದೇನು ವಿಷಯ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಚಹಾ ಸೇವನೆಯನ್ನು ಮಾಡುವಾಗ ನೆಮ್ಮದಿಯಿಂದ ಕುಡಿಯಿರಿ. ಇದರಿಂದ ನಿಮ್ಮ ಸಾವಿನ ಅವಧಿ ಇನ್ನಷ್ಟು ವಿಳಂಬವಾಗಿ ನೀವು ದೀರ್ಘಾಯುಶಿಗಳಾಗುತ್ತೀರಿ ಎಂದು ಅಧ್ಯಯನವೊಂದು ಕಂಡುಹಿಡಿದಿದೆ. ಚಹಾದ ಹೆಚ್ಚಿನ ಸೇವನೆಯು ನಿಮ್ಮ ದೀರ್ಘಾಯುಷ್ಯದ ಜೊತೆ ಸಂಬಂಧ ಹೊಂದಿದೆ. ಚಹಾದ ವಿಶಿಷ್ಟ ಪ್ರಯೋಜನಗಳನ್ನು ಸಂಶೋಧಕರು ಈ ಅಧ್ಯಯನದಲ್ಲಿ ವಿಶ್ಲೇಷಿಸಿದ್ದಾರೆ.

ಹಾಗಿದ್ರೆ ಸಂಶೋಧನಾ ಅಧ್ಯಯನವು ಏನ್‌ ಹೇಳ್ತಿದೆ?
ಯುನೈಟೆಡ್ ಕಿಂಗ್‌ಡಮ್‌ನ ಸಂಶೋಧಕರು “ಕಪ್ಪು ಚಹಾವನ್ನು ಕುಡಿಯುವ ಹೆಚ್ಚಿನ ಜನರ ಆರೋಗ್ಯ ಪ್ರಯೋಜನಗಳ ಸಮಗ್ರ ವಿಶ್ಲೇಷಣೆಯನ್ನು ನಡೆಸಿದಾಗ, ಹೆಚ್ಚು ಚಹಾ ಕುಡಿಯುವ ಜನರು ಉತ್ತಮ ಆರೋಗ್ಯವನ್ನು ಹೊಂದಿರುವವರು ಆಗಿದ್ದಾರೆ. ಇದರಿಂದ ಅವರು ದೀರ್ಘಾಯುಷಿಗಳಾಗಿ ತಮ್ಮ ಜೀವನ ನಡೆಸುತ್ತಾರೆ. ಇವರಲ್ಲಿ ಸಾವಿನ ಅಪಾಯದ ಪ್ರಮಾಣ ಸಾಧಾರಣವಾಗಿ ಕಡಿಮೆ ಇರುತ್ತದೆ” ಎಂದು ಕಂಡುಹಿಡಿದಿದ್ದಾರೆ.

ಸಂಶೋಧನೆಯ ದತ್ತಾಂಶದ ವಿಶ್ಲೇಷಣೆ ಹೇಗಿತ್ತು?
ಸಂಶೋಧನೆಯ ದತ್ತಾಂಶದ ವಿಶ್ಲೇಷಣೆಯಿಂದ “ಎರಡು ಅಥವಾ ಮೂರು ಕಪ್ ಚಹಾವನ್ನು ಕುಡಿಯುವ ಜನರು ಶೇಕಡಾ 9 ಮತ್ತು 13 ರಷ್ಟು ಕಡಿಮೆ ಸಾವಿನ ಅಪಾಯವನ್ನು ಹೊಂದಿದ್ದು, ಉತ್ತಮ ಆರೋಗ್ಯದ ಜೊತೆಗೆ ದೀರ್ಘಯುಷಿಗಳಾಗಿ ಬದುಕುತ್ತಾರೆ” ಎಂದು ತಿಳಿದುಬಂದಿದೆ.

ಈ ಸಂಶೋಧನಾ ಅಧ್ಯಯನವನ್ನು ನಡೆಸಿದ ಸಂಸ್ಥೆ ಯಾವುದು?
ಈ ಸಂಶೋಧನೆಯನ್ನು ಯುನೈಟೆಡ್ ಕಿಂಗ್‌ಡಮ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಒಂದು ಸಂಸ್ಥೆಯಾದ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದಾರೆ. ಈ ಅಧ್ಯಯನವು ಗ್ರೀನ್‌ ಚಹಾದ ಬಗ್ಗೆ ಹಿಂದೆ ನಡೆದಿರುವ ಅನೇಕ ಸಂಶೋಧನೆಗಳ ಬಗ್ಗೆ ಇರುವ ಅನೇಕರ ನಿಲುವನ್ನು ಬದಲಾಯಿಸುತ್ತದೆ.

ಇದನ್ನೂ ಓದಿ:  Weight Loss Tips: ವಾಲ್‌ನಟ್ಸ್‌ನಿಂದ ಮೊಸರಿನವರೆಗೆ ತೂಕ ಇಳಿಸಲು ಸಹಾಯ ಮಾಡುವ ಆಹಾರಗಳಿವು

"ಪ್ರತಿದಿನ ಎರಡು ಅಥವಾ ಅದಕ್ಕಿಂತ ಹೆಚ್ಚು ಕಪ್ ಚಹಾವನ್ನು ಸೇವಿಸುವ ಜನರು ಚಹಾವನ್ನು ಸೇವಿಸದ ಜನರಿಗಿಂತ 9% ದಿಂದ 13% ರಷ್ಟು ಪ್ರಮಾಣದ ಕಡಿಮೆ ಸಾವಿನ ಅಪಾಯವನ್ನು ಹೊಂದಿದ್ದಾರೆಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಹೆಚ್ಚಿನ ಚಹಾ ಸೇವನೆಯು ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯ ರಕ್ತನಾಳದ ಕಾಯಿಲೆ, ರಕ್ತಕೊರತೆಯ ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಹೀಗೆ ಇನ್ನಿತರ ಸಾವಿನ ಅಪಾಯ ಹೆಚ್ಚಿರುವ ಕಾಯಿಲೆಗಳನ್ನು ಬರದಂತೆ ತಡೆಗಟ್ಟುವ ಶಕ್ತಿಯನ್ನು ಹೊಂದಿದೆ" ಎಂದು ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ ಹೇಳಿಕೆಯನ್ನು ನೀಡಿದೆ.

ಸಂಶೋಧನೆ ನಡೆದಿದ್ದು ಹೀಗೆ:
40 ರಿಂದ 69 ವರ್ಷ ವಯಸ್ಸಿನ 4,98,043 ಪುರುಷರು ಮತ್ತು ಮಹಿಳೆಯರು ಅಧ್ಯಯನದಲ್ಲಿ ಭಾಗವಹಿಸಿದ್ದರು, ಅದರಲ್ಲಿ 89% ರಷ್ಟು ಜನರು ಕಪ್ಪು ಚಹಾವನ್ನು ಸೇವಿಸಿದ್ದಾರೆ ಎಂದು ಹೇಳಿದ್ದಾರೆ. ಈ ಅಧ್ಯಯನವು 2006 ರಿಂದ 2010 ರ ನಡುವೆ ನಡೆದಿದ್ದು, ಇದು ಪ್ರಶ್ನಾವಳಿಗೆ ಉತ್ತರಿಸುವ ಪ್ರಕ್ರಿಯೆಯನ್ನು ಒಳಗೊಂಡಿದೆ. ಇದನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಅನುಸರಿಸಲಾಗಿದೆ. ಈ ಅಧ್ಯಯನದಲ್ಲಿ ಭಾಗವಹಿಸುವವರನ್ನು ಸುಮಾರು 11 ವರ್ಷಗಳ ಕಾಲ ಅನುಸರಿಸಲಾಗಿದೆ ಮತ್ತು ಸಾವಿನ ಮಾಹಿತಿಯು ಯುಕೆ ರಾಷ್ಟ್ರೀಯ ಆರೋಗ್ಯ ಸೇವೆಯಿಂದ ಲಿಂಕ್ ಮಾಡಲಾದ ದತ್ತಾಂಶಗಳಿಂದ ಬಂದಿದೆ.

ಇದನ್ನೂ ಓದಿ: Cough Remedies: ಕಫ, ಕೆಮ್ಮಿನಿಂದ ಬಳಲುತ್ತಿದ್ದೀರಾ? ಮನೆಯಲ್ಲೇ ಸಿಗುವ ತಕ್ಷಣದ ಪರಿಹಾರಗಳಿವು

ಸಂಶೋಧನೆಯ ತೀರ್ಮಾನ:
"ಹೆಚ್ಚಿನ ಚಹಾದಲ್ಲಿನ ಕೆಫಿನ್‌ ಸೇವನೆಯು ಮಾನವನ ದೇಹದ ಚಯಾಪಚಯ ಕ್ರಿಯೆಯಲ್ಲಿನ ಆನುವಂಶಿಕ ವ್ಯತ್ಯಾಸಕ್ಕೆ ಸಂಬಂಧಿಸಿಲ್ಲ. ಒಂದು ದಿನಕ್ಕೆ 2 ಅಥವಾ ಅದಕ್ಕಿಂತ ಹೆಚ್ಚು ಕಪ್‌ ಚಹಾ ಕುಡಿಯುವವರಲ್ಲಿ ಕಡಿಮೆ ಪ್ರಮಾಣದ ಮರಣದ ಅಪಾಯವನ್ನು ಹೊಂದುವುದಕ್ಕೆ ನೇರವಾದ ಸಂಬಂಧವನ್ನು ಹೊಂದಿದೆ. ಈ ಸಂಶೋಧನೆಯು ಚಹಾದ ಹೆಚ್ಚಿನ ಸೇವನೆಯಿಂದ ಕೂಡ ನೀವು ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂಬುದನ್ನು ಸೂಚಿಸುತ್ತದೆ” ಎಂದು ಸಂಶೋಧಕರು ತೀರ್ಮಾನಿಸಿದರು.
Published by:Ashwini Prabhu
First published: