• Home
  • »
  • News
  • »
  • lifestyle
  • »
  • High-Protein Breakfast: ಪ್ರೋಟೀನ್ ಭರಿತವಾದ 7 ದಾಲ್ ಉಪಾಹಾರಗಳಿವು

High-Protein Breakfast: ಪ್ರೋಟೀನ್ ಭರಿತವಾದ 7 ದಾಲ್ ಉಪಾಹಾರಗಳಿವು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬೇಳೆಕಾಳುಗಳು ಪ್ರೋಟೀನ್ ಮತ್ತು ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಅವುಗಳು ನಮ್ಮ ದೈನಂದಿನ ಊಟದ ಒಂದು ಭಾಗವಾಗಿದ್ದರೆ ಮತ್ತು ಅವುಗಳನ್ನು ಬಳಸಿ ಬೆಳಿಗ್ಗೆ ಉಪಾಹಾರ ಮಾಡಿಕೊಂಡು ಸೇವಿಸಿದರೆ ಎಷ್ಟು ಆರೋಗ್ಯಕರವಾಗಿರುತ್ತದೆ ಗೊತ್ತೇ? ಇನ್ಮುಂದೆ ನಿಮ್ಮ ಪ್ರೋಟೀನ್ ಭರಿತ ಆಹಾರವಾದ ಬೇಳೆಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಲು ನೀವು ಬಯಸಿದರೆ, ಈ ಕೆಲವು ಪಾಕವಿಧಾನಗಳನ್ನು ನೀವು ಪ್ರಯತ್ನಿಸಬಹುದು.

ಮುಂದೆ ಓದಿ ...
  • Share this:

ಬಹುತೇಕರು ದೇಹದ ಆರೋಗ್ಯವನ್ನು (Health) ಚೆನ್ನಾಗಿ ಕಾಪಾಡಿಕೊಳ್ಳಲು ಒಳ್ಳೆಯ ಆಹಾರ, ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ತಿನ್ನಬೇಕು ಎಂದು ತಿಳಿದುಕೊಂಡಿರುತ್ತಾರೆ. ಆದರೆ ಎಷ್ಟೋ ಜನರಿಗೆ ಒಳ್ಳೆಯ ಆಹಾರ (Food) ಸೇವನೆ ಎಂದರೆ ಉತ್ತಮ ಪ್ರಮಾಣದ ಪೌಷ್ಠಿಕಾಂಶ ಮತ್ತು ಪ್ರೋಟೀನ್ (Protein) ಅಂತ ಗೊತ್ತೇ ಇರುವುದಿಲ್ಲ ನೋಡಿ. ಒಂದು ವೇಳೆ ಅವರಿಗೆ ಈ ವಿಷಯ ಗೊತ್ತಿದ್ದರೂ ಸಹ ಅವರು ಈ ಪೌಷ್ಟಿಕಾಂಶ (Nutrition) ಮತ್ತು ಪ್ರೋಟೀನ್ ಭರಿತ ಆಹಾರಗಳನ್ನು ಹೆಚ್ಚಾಗಿ ಮಾಡಿಕೊಂಡು ಸೇವಿಸುತ್ತಿರುವುದಿಲ್ಲ ಎಂದು ಹೇಳಬಹುದು. ನೀವು ಉತ್ತಮ ಪ್ರೋಟೀನ್ ಪಡೆಯಬೇಕು ಎಂದರೆ ಎಲ್ಲೋ ದೂರ ಹೋಗಿ ಯಾವುದೋ ಒಂದು ಆಹಾರ ಪದಾರ್ಥವನ್ನು ತರಬೇಕು ಅಂತೆನಿಲ್ಲ. ಅವುಗಳನ್ನು ಅನೇಕ ದೈನಂದಿನ ಪದಾರ್ಥಗಳಿಂದಲೇ ನೀವು ಪಡೆಯಬಹುದು.


ಉದಾಹರಣೆಗೆ ನಮ್ಮ ಮನೆಯಲ್ಲಿರುವಂತಹ ಬೇಳೆಗಳನ್ನು ತೆಗೆದುಕೊಳ್ಳಿ. ಬೇಳೆಕಾಳುಗಳು ಪ್ರೋಟೀನ್ ಮತ್ತು ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಅವುಗಳು ನಮ್ಮ ದೈನಂದಿನ ಊಟದ ಒಂದು ಭಾಗವಾಗಿದ್ದರೆ ಮತ್ತು ಅವುಗಳನ್ನು ಬಳಸಿ ಬೆಳಿಗ್ಗೆ ಉಪಾಹಾರ ಮಾಡಿಕೊಂಡು ಸೇವಿಸಿದರೆ ಎಷ್ಟು ಆರೋಗ್ಯಕರವಾಗಿರುತ್ತದೆ ಗೊತ್ತೇ? ಇನ್ಮುಂದೆ ನಿಮ್ಮ ಪ್ರೋಟೀನ್ ಭರಿತ ಆಹಾರವಾದ ಬೇಳೆಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಲು ನೀವು ಬಯಸಿದರೆ, ಈ ಕೆಲವು ಪಾಕವಿಧಾನಗಳನ್ನು ನೀವು ಪ್ರಯತ್ನಿಸಬಹುದು.


ಬೆಳಗ್ಗಿನ ಉಪಾಹಾರಕ್ಕಾಗಿ 7 ಪ್ರೋಟೀನ್ ಭರಿತ ದಾಲ್ ರೆಸಿಪಿಗಳು ಇಲ್ಲಿವೆ ನೋಡಿ


1. ಮೊಳಕೆ ಕಾಳುಗಳು ಇಡ್ಲಿ
ಮೊಳಕೆ ಕಾಳುಗಳ ಇಡ್ಲಿಯ ಈ ಪಾಕವಿಧಾನದಲ್ಲಿ, ನಾವು ಸಾಂಪ್ರದಾಯಿಕ ಉದ್ದಿನ ಬೇಳೆ ಇಡ್ಲಿ ಹಿಟ್ಟಿಗೆ ಮೊಳಕೆ ಕಾಳುಗಳನ್ನು ಬದಲಾಯಿಸುವ ಮೂಲಕ ಹೊಸ ತಿರುವನ್ನು ಸೇರಿಸಿದ್ದೇವೆ. ಕೆಲವು ಪದಾರ್ಥಗಳನ್ನು ಸರಳವಾಗಿ ವಿನಿಮಯ ಮಾಡಿಕೊಂಡರೆ ಇಡ್ಲಿಗಳು ಯಾವುದೇ ಸಮಯದಲ್ಲಿ ಸಿದ್ಧವಾಗುತ್ತವೆ. ಈ ಪಾಕವಿಧಾನವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೂ ಸಹ ಸೂಕ್ತವಾಗಿದೆ.


ಇದನ್ನೂ ಓದಿ: Mushrooms: ಅಣಬೆ ತಿಂದ್ರೆ ಮಧುಮೇಹ ನಿಯಂತ್ರಣವಾಗುತ್ತಾ? ಉತ್ತರ ಇಲ್ಲಿದೆ


2. ದಾಲ್ ಪರಾಠಾ
ಹೆಸರು ಬೇಳೆಯೊಂದಿಗೆ ಈ ಪರಾಠಾವು ಪ್ರೋಟೀನ್ ನಿಂದ ತುಂಬಿದೆ ಮತ್ತು ಅಷ್ಟೇ ರುಚಿಕರವಾಗಿದೆ. ಇದನ್ನು ಒಂದು ಬಟ್ಟಲು ಮೊಸರಿನೊಂದಿಗೆ ಸೇರಿಸಿಕೊಂಡು ತಿಂದರೆ ಬೆಳಗ್ಗಿನ ಉಪಾಹಾರವನ್ನು ತುಂಬಾನೇ ಎಂಜಾಯ್ ಮಾಡಬಹುದು. ಈ ಪಾಕವಿಧಾನವನ್ನು ತಯಾರಿಸಲು ಸುಲಭ ಮತ್ತು ರುಚಿಕರವಾಗಿದೆ.


3. ಪೆಸರಟ್ಟು
ಇದು ಆಂಧ್ರಪ್ರದೇಶದ ಪ್ರಸಿದ್ಧ ದೋಸೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ತಿನ್ನಲು ಸಂಪೂರ್ಣ ಆನಂದದಾಯಕವಾಗಿರುತ್ತದೆ. ಇದನ್ನು ಹೆಸರು ಬೇಳೆಯಿಂದ ತಯಾರಿಸಲಾಗುತ್ತದೆ ಮತ್ತು ಇದು ತುಂಬಾನೇ ಸ್ವಾದಿಷ್ಟವಾಗಿರುತ್ತದೆ. ಈ ಹಸಿರು ಬಣ್ಣದ ದೋಸೆ ಮೃದುವಾದ ರಚನೆಯನ್ನು ಹೊಂದಿದ್ದು, ಅದು ನಿಮ್ಮ ಬಾಯಿಯಲ್ಲಿ ಇರಿಸಿದರೆ ಸಾಕು ತಾನೇ ಕರಗಿ ಹೋಗುತ್ತದೆ. ನೀವು ಪೆಸರಟ್ಟುವನ್ನು ಉಪ್ಮಾದಿಂದ ತುಂಬಬಹುದು ಮತ್ತು ಅದರ ರುಚಿಯನ್ನು ಆನಂದಿಸಬಹುದು.


4. ದಾಲ್ ಶೋರ್ಬಾ
ಪ್ರತಿ ಸಾಂಪ್ರದಾಯಿಕ ಉತ್ತರ ಭಾರತದ ಔತಣದಲ್ಲಿ ದಾಲ್ ಶೋರ್ಬಾ ಪ್ರಮುಖವಾದುದು ಆಗಿದೆ. ದಾಲ್ ಶೋರ್ಬಾ, ದಾಲ್ ನಿಂದ ಮಾಡಿದ ರುಚಿಕರವಾದ ಸೂಪ್. ಸಾಮಾನ್ಯವಾಗಿ, ಶೋರ್ಬಾ ಸೇವಿಸಿದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೆಚ್ಚುವರಿಯಾಗಿ, ಇದನ್ನು ನೀವು ಸೇವಿಸುವುದರಿಂದ ಅತೀ ಕಡಿಮೆ ಕ್ಯಾಲೋರಿಗಳನ್ನು ಸೇವಿಸುತ್ತೀರಿ. ಈ ಮಳೆಗಾಲದಲ್ಲಿ, ಮಸಾಲೆಯುಕ್ತ ದಾಲ್ ಶೋರ್ಬಾ ಸೇವಿಸಲು ಸೂಕ್ತವಾಗಿದೆ.


5. ಡೊಕ್ಲಾ
ಆರೋಗ್ಯಕರ ಭಾರತೀಯ ತಿಂಡಿಗಳಲ್ಲಿ ತುಂಬಾನೇ ಮುಖ್ಯವಾದದ್ದು ಈ ಡೊಕ್ಲಾ ಅಂತ ಹೇಳಬಹುದು. ಡೀಪ್-ಫ್ರೈ ಮಾಡದಿರುವ ಮೂಲಕ ಡೊಕ್ಲಾ ನಿಮಗೆ ಸಾಕಷ್ಟು ಕ್ಯಾಲೋರಿಗಳನ್ನು ಉಳಿಸುತ್ತದೆ. ಇದನ್ನು ಹುದುಗಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಪರಿಪೂರ್ಣತೆಗೆ ಹಬೆಯಲ್ಲಿ ಬೇಯಿಸಲಾಗುತ್ತದೆ ಮತ್ತು ಇದರ ಮೇಲೆ ಬಿಸಿ ಬಿಸಿ ತಡ್ಕಾವನ್ನು ಸಹ ಹಾಕಲಾಗುತ್ತದೆ.


ಇದನ್ನೂ ಓದಿ:  Weight Loss: ಹೊಟ್ಟೆಯ ಬೊಜ್ಜು ಕರಗಿಸಲು 5 ಸೂಪರ್ ಡ್ರಿಂಕ್ಸ್​! ನೀವೂ ಒಮ್ಮೆ ಟ್ರೈ ಮಾಡಿ


6. ದಾಲ್ ಚಟ್ನಿ
ಈ ಚಟ್ನಿ ಅಷ್ಟು ಜನಪ್ರಿಯವಾಗಿಲ್ಲದಿರಬಹುದು, ಆದರೆ ರುಚಿಕರವಾಗಿರುತ್ತದೆ. ಈ ಚಟ್ನಿಯ ಅದ್ಭುತ ವಿಷಯವೆಂದರೆ ಇದನ್ನು ಕಡಲೆ, ಉದ್ದು, ಹೆಸರು ಕಾಳು ಮತ್ತು ಅರ್ಹಾರ್ ಸೇರಿದಂತೆ ಹಲವಾರು ದಾಲ್ ಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ನೀವು ಈ ಚಟ್ನಿಯನ್ನು ಯಾವುದೇ ಊಟದೊಂದಿಗೆ ಜೋಡಿಸಿಕೊಂಡು ಸೇವಿಸಬಹುದು.


7. ಮೂಂಗ್ಲೆಟ್
ಪ್ರೋಟೀನ್ ಭರಿತ ಉಪಾಹಾರವಾದ ಈ 'ಹೆಸರು ಬೇಳೆ ಆಮ್ಲೆಟ್' ಅಥವಾ ಮೂಂಗ್ಲೆಟ್ ನಿಮ್ಮ ದಿನವನ್ನು ಪ್ರಾರಂಭಿಸಲು ಉತ್ತಮವಾದ ಉಪಾಹಾರವಾಗಿದೆ. ಹೆಸರು ಬೇಳೆಯ ಜೊತೆಗೆ ಈರುಳ್ಳಿ, ಟೊಮೆಟೊ ಮತ್ತು ಕ್ಯಾಪ್ಸಿಕಂನಂತಹ ಆರೋಗ್ಯಕರ ಪದಾರ್ಥಗಳನ್ನು ಇದು ಒಳಗೊಂಡಿರುತ್ತದೆ.

Published by:Ashwini Prabhu
First published: