Hair Care: ಉದ್ದನೆಯ ಹೊಳೆಯುವ ಕೂದಲು ನಿಮ್ಮದಾಗಬೇಕೆ? ಹಾಗಿದ್ರೆ ಮನೆಯಲ್ಲಿಯೇ ಈ ಶಾಂಪೂ ತಯಾರಿಸಿ

ನಿಮ್ಮ ಕೂದಲಿಗೆ ಜೀವ ತುಂಬಲು ಮತ್ತು ಅದು ಮೃದುವಾಗಿ, ಹೊಳೆಯುವಂತೆ ಮಾಡಲು ಮನೆಯಲ್ಲೇ ತಯಾರಿಸಿದ ಶಾಂಪೂವನ್ನು ಬಳಸಬಹುದು. ಮನೆಯಲ್ಲೇ ತಯಾರಿಸಬಹುದಾದ ಮೂರು ವಿಧಧ ಶಾಂಪೂಗಳ ಮಾಹಿತಿ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ನಮ್ಮ ಜೀವನ ಶೈಲಿ (Lifestyle) ಮತ್ತು ಆಹಾರ ಪದ್ಧತಿ ಹೇಗಿದೆ ಎಂದರೆ, ಚರ್ಮ ಮತ್ತು ಕೂದಲಿನ (Hair) ಸಹಜ ಸೌಂದರ್ಯವನ್ನು ಕಾಪಾಡಿಕೊಳ್ಳವುದು ಸವಾಲಿನ ಕೆಲಸವಾಗಿದೆ. ಅದರಲ್ಲೂ ಬಹುಪಾಲು ಎಲ್ಲಾ ವಯೋಮಾನದವರು ಸಿಕ್ಕಾದ ಕೂದಲು ಮತ್ತು ಸೊರಗಿದ ಕೂದಲಿನ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಕೂದಲ ಆರೈಕೆಯ (Hair care) ಸೂಕ್ತ ದಿನಚರಿಯನ್ನು ಅನುಸರಿಸಿದರೂ ಕೂಡ, ಮುಖ್ಯವಾಗಿ ಬೇಸಿಗೆಯಲ್ಲಿ (Summer) ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಬಿಸಿಲು, ಧೂಳು ಮತ್ತು ಬೆವರಿನ  ಕಾರಣದಿಂದ ನೆತ್ತಿಯ ತೇವಾಂಶ ಯಾವಾಗಲೂ ಕಡಿಮೆ ಆಗುತ್ತಿರುತ್ತದೆ. ಇದು ನಿಮ್ಮ ಕೂದಲನ್ನು ಒಣಗಿಸುತ್ತದೆ (Dry Hair) ಮಾತ್ರವಲ್ಲ ಸಿಕ್ಕಾಗಿಸುತ್ತದೆ ಕೂಡ. ನಿಮ್ಮ ಕೂದಲಿಗೆ ಜೀವ ತುಂಬಲು ಮತ್ತು ಅದು ಮೃದುವಾಗಿ (Soft), ಹೊಳೆಯುವಂತೆ (Silk) ಮಾಡಲು ಮನೆಯಲ್ಲೇ ತಯಾರಿಸಿದ ಶಾಂಪೂವನ್ನು ಬಳಸಬಹುದು. ಮನೆಯಲ್ಲೇ ತಯಾರಿಸಬಹುದಾದ ಮೂರು ವಿಧಧ ಶಾಂಪೂಗಳ (Shampoo) ಮಾಹಿತಿ ಇಲ್ಲಿದೆ.

ಕೂದಲಿನ ಹೊಳಪಿಗೆ ತೆಂಗಿನಕಾಯಿ ಹಾಲಿನ ಶಾಂಪು
ತೆಂಗಿನ ಕಾಯಿಯ ಹಾಲನ್ನು ಉಪಯೋಗಿಸಿ , ಕೂದಲಿಗೆ ಹಲವಾರು ಪ್ರಯೋಜನಗಳನ್ನು ನೀಡುವ ಶಾಂಪೂವನ್ನು ತಯಾರಿಸಬಹುದು. ಅದಕ್ಕಾಗಿ ನಿಮಗೆ ಬೇಕಾಗುವ ಸಾಮಾಗ್ರಿಗಳು – ವಿಟಮಿನ್ ಇ ಎಣ್ಣೆ, ಲಿಕ್ವಿಡ್ ಸೋಪ್ ಮತ್ತು ತೆಂಗಿನ ಕಾಯಿ ಹಾಲು.

ಶಾಂಪೂ ತಯಾರಿಸಲು, ಮೊದಲಿಗೆ ಅರ್ಧ ಚಮಚ ವಿಟಮಿನ್ ಇ ಎಣ್ಣೆಯನ್ನು , ಅರ್ಧ ಕಪ್ ಲಿಕ್ವಿಡ್ ಸೋಪ್‍ಗೆ ಸೇರಿಸಿ. ಬಳಿಕ ತೆಂಗಿನ ಕಾಯಿ ಹಾಲನ್ನು ಅದಕ್ಕೆ ಸೇರಿಸಿ. ಈ ತೆಂಗಿನ ಕಾಯಿ ಶಾಂಪುವನ್ನು ಒಂದು ಬಾಟಲಿಯಲ್ಲಿ ತುಂಬಿ ಇಡಿ. ಈ ಶಾಂಪೂವಿನಿಂದ ನಿತ್ಯವೂ ನಿಮ್ಮ ಕೂದಲನ್ನು ತೊಳೆಯಿರಿ. ಅದರಲ್ಲಿರುವ ತೆಂಗಿನ ಕಾಯಿ ಹಾಲು ನಿಮ್ಮ ಕೂದಲಿಗೆ ಪೋಷಣೆ ನೀಡುತ್ತದೆ ಮತ್ತು ಅದನ್ನು ಮೃದುವಾಗಿಸುತ್ತದೆ. ಜೊತೆಗೆ ಶಾಂಪೂವಿನಲ್ಲಿರುವ ವಿಟಮಿನ್ ಇ ಕೂದಲಿಗೆ ಹೊಳಪನ್ನು ನೀಡುತ್ತದೆ.

ಸಿಕ್ಕಾದ ಕೂದಲಿಗೆ ಜೊಜೊಬಾ ಎಣ್ಣೆಯ ಶಾಂಪೂ
ಜೊಜೋಬಾ ಎಣ್ಣೆಯ ಶಾಂಪೂ ಕೂಡ ಕೂದಲಿಗೆ ತುಂಬಾ ಪ್ರಯೋಜನಕಾರಿ. ಅದರಲ್ಲೂ ಸಿಕ್ಕಾದ ಮತ್ತು ಒಣಗಿ ಹೋದಂತೆ ಕಾಣುವ ಕೂದಲನ್ನು ರೇಶ್ಮೆಯಂತೆ ನುಣುಪಾಗಿ ಮತ್ತು ಹೊಳೆಯುವಂತೆ ಮಾಡಲು ಜೊಜೋಬಾ ಎಣ್ಣೆಯ ಶಾಂಪೂವನ್ನು ಬಳಸುವುದು ಉತ್ತಮ ಆಯ್ಕೆ ಎನಿಸಿಕೊಳ್ಳುತ್ತದೆ.

ಇದನ್ನೂ ಓದಿ:  Monsoon Hair Care: ಮಳೆಗಾಲದಲ್ಲಿ ನಿಮ್ಮ ಕೂದಲಿನ ಆರೈಕೆ ಈ ರೀತಿ ಮಾಡಿ ನೋಡಿ

ಈ ಶಾಂಪೂವನ್ನು ಮಾಡಲು ನಿಮಗೆ ಬೇಕಾಗುವ ಸಾಮಾಗ್ರಿಗಳು - ಗ್ಲಿಸರಿನ್, ಜೊಜೋಬಾ ಎಣ್ಣೆ, ತೆಂಗಿನಕಾಯಿ ಎಣ್ಣೆ , ಸೌಮ್ಯವಾದ ಶಾಂಪೂ ಮತ್ತು ಡಿಸ್ಟಿಲ್‍ಡ್ ವಾಟರ್. ಶಾಂಪೂ ತಯಾರಿಸಲು, ಮೊದಲಿಗೆ ಒಂದು ಟೀ ಚಮಚ ಗ್ಲೀಸರಿನ್ ಅನ್ನು , ಅರ್ಧ ಟೀ ಚಮಚ ಜೋಜೋಬಾ ಎಣ್ಣೆಯ ಜೊತೆಗೆ ಸೇರಿಸಿ. ಬಳಿಕ ಅದಕ್ಕೆ ಅರ್ಧ ಟೀ ಚಮಚ ತೆಂಗಿನಕಾಯಿ ಎಣ್ಣೆ ಮತ್ತು ಒಂದು ಟೀ ಚಮಚ ಡಿಸ್ಟಿಲ್‍ಡ್ ನೀರು ಹಾಗೂ ಒಂದು ಟೀ ಚಮಚ ಸೌಮ್ಯವಾದ ಶಾಂಪೂವನ್ನು ಸೇರಿಸಿ ಮಿಶ್ರಣ ತಯಾರಿಸಿ. ನೀವು ತಲೆ ಸ್ನಾನ ಮಾಡುವಾಗಲೆಲ್ಲಾ ಈ ಶ್ಯಾಂಪೂವನ್ನೇ ಬಳಸಿ.

ಜೇನು ತುಪ್ಪದ ಶಾಂಪೂವನ್ನು ಪ್ರಯತ್ನಿಸಿ
ನಿಮ್ಮ ಕೂದಲೂ ಮತ್ತು ನೆತ್ತಿಯ ತೇವಾಂಶವನ್ನು ಕಾಪಾಡಿಕೊಳ್ಳುವುದು , ಕೂದಲಿನ ಆರೋಗ್ಯಕ್ಕೆ ಅತ್ಯಂತ ಅಗತ್ಯ. ಜೇನು ತುಪ್ಪದ ಶಾಂಪೂ ಕೂದಲು ಮತ್ತು ನೆತ್ತಿಯ ತೇವಾಂಶವನ್ನು ಕಾಪಾಡುವಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಈ ಶಾಂಪೂವನ್ನೊಮ್ಮೆ ಪ್ರಯತ್ನಿಸಿ ನೋಡಿ.

ಇದನ್ನೂ ಓದಿ:   Oily Hair Tips: ಎಣ್ಣೆಯುಕ್ತ ನೆತ್ತಿ ಮತ್ತು ಕೂದಲು ಸಮಸ್ಯೆ ಇರುವವರು ಈ ಎಣ್ಣೆ ಹಚ್ಚುವುದು ಉತ್ತಮ

ಇದನ್ನು ಮಾಡಲು ನಿಮಗೆ ಬೇಕಾಗುವ ಸಾಮಾಗ್ರಿಗಳು - ಸಾವಯವ ಜೇನು ತುಪ್ಪ , ಲಿಕ್ವಿಡ್ ಸೋಪ್ ಮತ್ತು ಎಸೆನ್ಶಿಯಲ್ ಆಯಿಲ್. ಒಂದು ಟೀ ಚಮಚ ಸಾವಯವ ಜೇನು ತುಪ್ಪಕ್ಕೆ ಒಂದು ಕಪ್ ಲಿಕ್ವಿಡ್ ಸೋಪ್ ಮತ್ತು ಕೆಲವು ಹನಿಗಳಷ್ಟು ಎಸೆನ್ಶಿಯಲ್ ಎಣ್ಣೆಯನ್ನು ಸೇರಿಸಿದರೆ ಜೇನು ತುಪ್ಪದ ಶಾಂಪೂ ಸಿದ್ಧವಾಗುತ್ತದೆ. ಅದನ್ನು ಒಂದು ಬಾಟಲಿಯಲ್ಲಿ ತುಂಬಿಸಿ, ಕೂದಲಿಗೆ ಸ್ನಾನ ಮಾಡುವಾಗಲೆಲ್ಲಾ ಬಳಸಿ. ಈ ಶಾಂಪೂ ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ , ಹೊಳಪು ನೀಡುತ್ತದೆ ಮತ್ತು ಆರೋಗ್ಯಕರವಾಗಿಸುತ್ತದೆ.
Published by:Ashwini Prabhu
First published: