Long Hair: ಕಪ್ಪು, ದಟ್ಟ ಹಾಗೂ ಉದ್ದ ಕೂದಲು ನಿಮ್ಮದಾಗಬೇಕೆ? ಹಾಗಾದ್ರೆ ಈ 5 ಗೋಲ್ಡನ್ ನಿಯಮಗಳನ್ನು ಪಾಲಿಸಿ

ಉದ್ದನೆಯ, ದಟ್ಟವಾದ ಹೊಳಪುಳ್ಳ ಕೂದಲಿನ ಒಡತಿಯಾಗಬೇಕೆಂದು ಆಸೆ ಇಲ್ಲವದವರು ಯಾರಿದ್ದಾರೆ? ಆದರೆ ತಹ ಕೂದಲನ್ನು ಪಡೆಯಲು ಅಷ್ಟೇ ಶ್ರಮ ಪಡಬೇಕು. ಅಂದರೆ ಕೂದಲಿನ ನಿಯಮಿತ ಆರೈಕೆ ಮಾಡಬೇಕು. ಕೂದಲಿಗೆ ಯಾವುದೇ ರೀತಿಯ ಹಾನಿ ಆಗದಂತೆ ಕಾಳಜಿ ವಹಿಸಬೇಕು. ಮೂವರು ಕೂದಲ ತಜ್ಞರು, ಕೂದಲಿನ ಆರೈಕೆ ಮತ್ತು ಅದರ ನಿರ್ವಹಣೆಯ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಕಪ್ಪು ನೀಳ, ದಟ್ಟ ಕೂದಲು

ಕಪ್ಪು ನೀಳ, ದಟ್ಟ ಕೂದಲು

  • Share this:
ಉದ್ದನೆಯ (Long) ದಟ್ಟವಾದ ಹೊಳಪುಳ್ಳ ಕೂದಲಿನ (Hair) ಒಡತಿಯಾಗಬೇಕೆಂದು ಆಸೆ ಇಲ್ಲವದವರು ವಿರಳ. ಆದರೆ ಅಂತಹ ಕೂದಲನ್ನು ಪಡೆಯಲು, ಅಷ್ಟೇ ಶ್ರಮ ಪಡಬೇಕು, ಅಂದರೆ ಕೂದಲಿನ ನಿಯಮಿತ ಆರೈಕೆ ಮಾಡಬೇಕು. ಕೂದಲಿಗೆ ಯಾವುದೇ ರೀತಿಯ ಹಾನಿ (Damage) ಆಗದಂತೆ ಕಾಳಜಿ ವಹಿಸಬೇಕು. ಮೂವರು ಕೂದಲ ತಜ್ಞರು (Hair experts), ಕೂದಲಿನ ಆರೈಕೆ ಮತ್ತು ಅದರ ನಿರ್ವಹಣೆಯ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವು ಈ ಕೆಳಗಿನಂತಿವೆ. ಕಾಯಾ ಸ್ಕಿನ್ ಕ್ಲಿನಿಕ್‍ನ ಕೂದಲು ತಜ್ಞೆ ಡಾ. ಅಶಿನಿ ಭಟ್ (Dr. Ashwini Bhat), ಕೂದಲ ನಿರ್ವಹಣೆಗೆ ಅಗತ್ಯವಿರುವ 5 ಗೋಲ್ಡನ್ ನಿಯಮಗಳನ್ನು ತಿಳಿಸಿದ್ದಾರೆ.

ದಟ್ಟ ಕೂದಲನ್ನುಪಡೆಯಲು ಮತ್ತು ಕೂದಲ ಹಾನಿಯನ್ನು ತಡೆಯಲು 5 ನಿಯಮಗಳು

1 ಆರೋಗ್ಯಕರ ನೆತ್ತಿ :
ಹೊಟ್ಟು, ಜಿಡ್ಡಾದ ನೆತ್ತಿ , ಒಣ ಮತ್ತು ತುರಿಕೆಯುಳ್ಳ ನೆತ್ತಿ , ಅನಾರೋಗ್ಯಕರ ನೆತ್ತಿಗೆ ಕಾರಣಗಳು. ಅವು ಆರೋಗ್ಯಕರ ಕೂದಲನ್ನು ಹೊಂದುವ ಸಾಮರ್ಥ್ಯವನ್ನು ಕುಗ್ಗಿಸುತ್ತವೆ.

2. ಸೂಕ್ತ ಉತ್ಪನ್ನಗಳು :
ಕೂದಲ ಆರೈಕೆಗೆಂದು ಶಾಂಪೂಗಳು ಮತ್ತು ಉತ್ಪನ್ನಗಳನ್ನು ತುಂಬಾ ವಿವೇಚನೆಯಿಂದ ಆಯ್ಕೆ ಮಾಡಬೇಕು. ಉದಾಹರಣೆಗೆ ಗುಂಗುರು ಕೂದಲಿಗೆ ತುಂಬಾ ತೇವಾಂಶದ ಅಗತ್ಯ ಇರುತ್ತದೆ , ಆದರೆ ನೇರ ಕೂದಲಿಗೆ ಕಡಿಮೆ ತೇವಾಂಶ ಸಾಕು.

3. ಸರಿಯಾದ ಸ್ಟೈಲಿಂಗ್ :
ಹೀಟ್ - ಲೆಸ್ ಸ್ಟೈಲಿಂಗ್ ಈ ದಿನಗಳಲ್ಲಿ ಒಂದು ಟ್ರೆಂಡ್ ಆಗಿದೆ. ಆದರೆ ನೀವು ಶಾಖ ಆಧಾರಿತ ಸಾಧನದಿಂದ ನಿಮ್ಮ ಕೂದಲನ್ನು ಸ್ಟೈಲಿಂಗ್ ಮಾಡುತ್ತಿದ್ದರೆ, ಹೀಟ್ ಪ್ರೊಟೆಕ್ಷನ್ ಸ್ಪ್ರೇ ಮಾಡಲು ಮರೆಯದಿರಿ ಮತ್ತು ಕೂದಲಿಗೆ ಕಡಿಮೆ ಹಾನಿ ಉಂಟು ಮಾಡುವ ವಿಧಾನಗಳನ್ನು ಅನುಸರಿಸಿ.

ಇದನ್ನೂ ಓದಿ:  Health Tips: ವರ್ಕ್ ಫ್ರಮ್​ ಹೋಂನಿಂದ ಬೆನ್ನು ನೋವು ಹೆಚ್ಚಾಗಿದ್ಯಾ? ಈ ಟಿಪ್ಸ್ ಫಾಲೋ ಮಾಡಿ

4. ಬಿಸಿ ನೀರು :
ಕೂದಲಿನ ನೈಸರ್ಗಿಕ ತೈಲ ಮತ್ತು ತೇವಾಂಶವನ್ನು ಉಳಿಸಿಕೊಳ್ಳಲು , ಕೂದಲನ್ನು ತೊಳೆಯುವಾಗ ಬಿಸಿ ನೀರನ್ನು ಬಳಸಬೇಡಿ. ಅದು ಕೂದಲಿನ ಕ್ಯುಟಿಕಲ್‍ಗೂ ಹಾನಿ ಮಾಡುತ್ತದೆ ಮತ್ತು ಕೂದಲನ್ನು ಒರಟಾಗಿಸುತ್ತದೆ.

5. ರಾಸಾಯನಿಕ ಚಿಕಿತ್ಸೆಗಳು :
ಕೂದಲನ್ನು ಆಗಾಗ ಪರ್ಮಿಂಗ್, ಸ್ಟ್ರೈಟ್ನಿಂಗ್ ಮಾಡಿಸುವುದು, ಬಣ್ಣ ಹಾಕಿಸುವುದು ಮುಂತಾದ ಪ್ರಕ್ರಿಯೆಗಳು ನಿಮ್ಮ ಕೂದಲಿಗೆ ಹಾನಿ ಮಾಡುತ್ತವೆ.

ಸ್ಕಿನ್ ಕ್ರಾಫ್ಟ್ ಲ್ಯಾಬ್‍ನ ಆರ್ ಅಂಡ್ ಡಿ ಡಿವಿಶನ್‍ನ ನಿರ್ದೇಶಕ ಡಾ.ಕೌಸ್ತವ್ ಗುಹಾ ಅವರು ಆರೋಗ್ಯಕರ ಕೂದಲಿನ ನಿರ್ವಹಣೆಗೆ ಕೆಲವು ಸಲಹೆಗಳನ್ನು ಇಲ್ಲಿ ನೀಡಿದ್ದಾರೆ.

ಕೂದಲು ದಟ್ಟವಾಗಿ ಮತ್ತು ಹೊಳಪಿನಿಂದ ಕಂಗೊಳಿಸುವಂತೆ ಮಾಡುವ ವಿಧಾನ

1. ಕೂದಲನ್ನು ರಕ್ಷಿಸುವ ಯಾವುದೇ ವಿಧಾನವಿರಲಿ, ಅದು ಕೂದಲಿನ ಕ್ಯೂಟಿಕಲ್ ಮತ್ತು ಕಾರ್ಟೆಕ್ಸ್ ಪದರಗಳ ಸಮಗ್ರತೆ ಮತ್ತು ಶಕ್ತಿಯನ್ನು ರಕ್ಷಿಸುವ ಗುರಿಯನ್ನು ಹೊಂದಿರಬೇಕು.

2. ಆಧುನಿಕ ಕಾಲದ್ ವಿವಿಧ ರೀತಿಯ ಸ್ಟೈಲಿಂಗ್ ಮತ್ತು ಅಂದಗೊಳಿಸುವ ಸಾಧನಗಳು ಕ್ಯುಟಿಕಲ್ ಪದರದ ಚಿಪ್ಪಿಂಗ್‍ಗೆ ಕಾರಣವಾಗುತ್ತವೆ, ಅದರ ಪರಿಣಾಮವಾಗಿ ಕೂದಲು ಬಿರುಕಾಗುವುದು ಮತ್ತು ವಿಭಜಿತ ತುದಿಗಳಂತಹ ಸಮಸ್ಯೆಗಳು ಕಂಡು ಬರುತ್ತವೆ.

ಇದನ್ನೂ ಓದಿ:  Heath Tips: ಬೇಸಿಗೆಯಲ್ಲಿ ಈ ಜ್ಯೂಸ್ ಕುಡಿಯುವುದರಿಂದ ಹಲವು ಸಮಸ್ಯೆಗಳಿಗೆ ಸಿಗುತ್ತಂತೆ ಪರಿಹಾರ

3. ಕೂದಲನ್ನು ನೇರಗೊಳಿಸುವ ಪ್ರಕ್ರಿಯೆಯಲ್ಲಿ ಬಳಸುವ ರಾಸಾಯನಿಕಗಳು, ಬ್ಲೀಚ್‍ಗಳು ಮತ್ತು ಬಣ್ಣಗಳು ಕೂದಲಿಗೆ ಹಾನಿ ಮಾಡುತ್ತವೆ. ಆಗಾಗ ಅದನ್ನು ಮಾಡಿಸುತ್ತಿದ್ದರೆ, ಕೂದಲಿನ ಸ್ಥಿತಿ ಇನ್ನಷ್ಟು ಹದಗೆಡಬಹುದು.

4. ಪದೇ ಪದೇ ಶ್ಯಾಂಪೂ ಬಳಸುವುದರಿಂದ , ಕೂದಲಿನ ಮೇಲ್ಮೈಯಲ್ಲಿರುವ ಲಿಪಿಡ್ ಮ್ಯಾಟರ್ ಹೊರಟು ಹೋಗಿ, ಕೂದಲಿಗೆ ಹಾನಿ ಉಂಟಾಗುತ್ತದೆ. ಹಾಗಾಗಿ ಕೂದಲನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಶ್ಯಾಂಪುವಿನಿಂದ ತೊಳೆದರೆ ಸಾಕು. ಆದರೆ ಶ್ಯಾಂಪೂ ಮಾಡಿದ ಬಳಿಕ ಕಂಡೀಶನರ್ ಬಳಸಬೇಕು.

5. ಕೂದಲಿಗೆ ನಿಯಮಿತ ಎಣ್ಣೆ ಹಾಕುವುದರಿಂದ, ಅದು ನಿಮ್ಮ ಕೂದಲಿನ ಮೇಲೆ ರಕ್ಷಣಾತ್ಮಕ ಉಂಟಾಗುತ್ತದೆ. ಏಕೆಂದರೆ, ಎಣ್ಣೆಗಳು, ಕೂಲಿನ ಕ್ಯೂಟಿಕಲ್ ಮತ್ತು ಕಾರ್ಟೆಕ್ಸ್ ಪದರಗಳಿಗೆ ನುಗ್ಗುವ ಮೂಲಕ, ಲಿಪಿಡ್ ಬಾಂಡ್‍ಗಳು ಹಾಗೇಯೇ ಉಳಿಯುವಂತೆ ಮಾಡುತ್ತವೆ.

ಫಿಕ್ಸ್ ಡರ್ಮಾ ಇಂಡಿಯಾ ಪ್ರೈವೆಟ್ ಲಿಮಿಟೆಡ್‍ನ , ಪ್ರೊಡಕ್ಟ್ ಮತ್ತು ರಿಸರ್ಚ್ ಮ್ಯಾನೇಜರ್, ಕೂದಲ ತಜ್ಞ ವಿಪಿನ್ ಶರ್ಮಾ ಅವರು ತಮ್ಮ ಮೆಚ್ಚಿನ 5 ಕೂದಲ ಆರೈಕೆಯ ಸಲಹೆಗಳನ್ನು ಇಲ್ಲಿ ತಿಳಿಸಿದ್ದಾರೆ. ಅವು ಈ ಕೆಳಗಿನಂತಿವೆ.

ಕೂದಲ 5 ಗೋಲ್ಡನ್ ನಿಯಮಗಳು

1. ಕಂಡೀಶನರ್ ಬಳಕೆ:
ಪ್ರತಿಯೊಂದು ಪ್ರಕಾರದ ಕೂದಲಿಗೂ ಕಂಡೀಶನಿಂಗ್ ಬೇಕೇ ಬೇಕು. ಕೂದಲು ಶಾಂಪೂ ಮಾಡುವುದಕ್ಕೂ ಮುನ್ನ ಮಾಡುವ ಕಂಡೀಶನಿಂಗ್ (ಕೂದಲ ಮಾಸ್ಕ್, ಎಣ್ಣೆ) ಆಗಿರಬಹುದು ಅಥವಾ ಬಳಿಕ ಮಾಡುವ ಕಂಡೀಶನಿಂಗ್ (ಕಂಡೀಶನರ್, ಸೆರಮ್) ಆಗಿರಬಹುದು, ಯಾವುದನ್ನಾದರೂ ಬಳಸಿ, ಆದರೆ ತಪ್ಪಿಸಬೇಡಿ.

ಇದನ್ನೂ ಓದಿ:  Brinjal Benefits: ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ದೂರ ಮಾಡುತ್ತೆ ಈ ಸೂಪರ್ ತರಕಾರಿ, ಸರಿಯಾದ ಬಳಕೆ ಹೇಗೆ?

2. ನೆತ್ತಿಯ ಸ್ವಚ್ಚತೆ:
ಕೂದಲು ಉದುರುವುದನ್ನು ಮತ್ತು ನೆತ್ತಿಯ ಸೋಂಕನ್ನು ತಪ್ಪಿಸಲು ಹಾಗೂ ಕೂದಲ ಬೆಳವಣಿಗೆಯನ್ನು ನಿರ್ವಹಿಸಲು , ನೆತ್ತಿಯನ್ನು ಸ್ವಚ್ಚವಾಗಿಡುವುದು ಬಹಳ ಮುಖ್ಯ.

3. ಆಂತರಿಕ ಪೋಷಣೆ:
ಉತ್ತಮ ಕೂದಲಿನ ನಿರ್ವಹಣೆಗಾಗಿ ಯಾವಾಗಲೂ ಸಮತೋಲಿತ ಆಹಾರವನ್ನು ಸೇವಿಸಿ. ಕೂದಲಿನ ಆರೈಕೆ ಸಾಕಷ್ಟು ಪ್ರೊಟೀನ್‍ನ ಅಗತ್ಯ ಇರುತ್ತದೆ. ನಿಮ್ಮ ಸಪ್ಲಿಮೆಂಟ್‍ಗಳನ್ನು ತಪ್ಪದೇ ತೆಗೆದುಕೊಳ್ಳಿ.

4. ಕಡಿಮೆಯೇ ಅಧಿಕ:
ಕೂದಲಿನ ಆರೈಕೆಯ ವಿಷಯಕ್ಕೂ ಇದು ಅನ್ವಯಿಸುತ್ತದೆ. ಕೂದಲನ್ನು ಹೆಚ್ಚುವರಿ ಶಾಖ ಮತ್ತು ಕೆಮಿಕಲ್ ಟ್ರೀಟ್‍ಮೆಂಟ್‍ನಿಂದ ದೂರವಿಡಿ.

5. ಮಾಸ್ಕ್ ಬಳಸುವುದು ಅಗತ್ಯ:
ಮುಖಕ್ಕೆ ಮಾತ್ರವಲ್ಲ, ಕೂದಲಿಗೂ ಮಾಸ್ಕ್ ಬಳಸುವ ಅಗತ್ಯವಿದೆ. ನಿಮ್ಮ ಕೂದಲಿನ ಅಗತ್ಯಕ್ಕೆ ತಕ್ಕಂತೆ, ಕನಿಷ್ಟ ಪಕ್ಷ 15 ದಿನಕ್ಕೆ ಒಮ್ಮೆಯಾದರೂ ಮಾಸ್ಕ್ ಬಳಸಿ.

ಇದನ್ನೂ ಓದಿ: ಕಾಲಿನಲ್ಲಿ ಹೀಗಾಗ್ತಿದ್ರೆ ಏನೋ ಸಣ್ಣ ಸಮಸ್ಯೆ ಅಂದ್ಕೊಂಡು ಸುಮ್ಮನಾಗ್ಬೇಡಿ, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್​ಗೂ ಹೀಗೇ ಆಗುತ್ತೆ ಜೋಪಾನ!
Published by:Ashwini Prabhu
First published: