ಆರೋಗ್ಯಕರ (Heathy) ಮತ್ತು ಹೊಳೆಯುವ ತ್ವಚೆಯ (Glowing Skin) ಬಗ್ಗೆ ಕೊರಿಯನ್ನರಿಗೆ (Korean) ಇರುವ ವ್ಯಾಮೋಹ ಹೆಚ್ಚೇ ಎನ್ನಬಹುದು. ಈಗಾಗಲೇ ಈ ವಿಷಯ ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗೆಯೇ ಆರೋಗ್ಯಕರ ಮತ್ತು ಹೊಳೆಯುವ ತ್ವಚೆಯನ್ನು ಹೊಂದುವುದು ಸುಲಭದ ಕೆಲಸವಲ್ಲ, ಅದಕ್ಕಾಗಿ ಸಾಕಷ್ಟು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇದರ ಬಗ್ಗೆ ಆಪ್ತ ಸಮಾಲೋಚಕರು ಮತ್ತು ಸೌಂದರ್ಯತಜ್ಞೆ ಆಗಿರುವ ಡಾ. ದೀಪಾಲಿ ಭಾರದ್ವಾಜ್ ತಮ್ಮ ಅಭಿಪ್ರಾಯವನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ.
ದಕ್ಷಿಣ ಕೊರಿಯಾದ ಜನಜೀವನ ನಮ್ಮ ಭಾರತ ದೇಶದ ಜನಜೀವನಕ್ಕಿಂತ ತುಂಬಾ ಡಿಫರೆಂಟ್. ಕೊರಿಯಾ ಈಗಾಗಲೇ ಭಾರತದ ಜನತೆ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದೆ. ತನ್ನ ಸೌಂದರ್ಯವರ್ಧಕ ಉದ್ಯಮದಿಂದ ಕೊರಿಯಾ ದೇಶವು ಭಾರತದ ಮೇಲೆ ವಿಶಿಷ್ಟ ಪ್ರಭಾವವನ್ನು ಬೀರಿರುವುದು ಸುಳ್ಳಲ್ಲ. ಇದು ಕಣ್ಣ ಮುಂದಿರುವ ಸತ್ಯ. ಸೋಷಿಯಲ್ ಮೀಡಿಯಾ ತುಂಬಾ ಕೊರಿಯನ್ನರ ಜಾಹೀರಾತುಗಳು ಮತ್ತು ರೀಲ್‌ಗಳು ತುಂಬಿ ಹೋಗಿವೆ ಅಂತಾನೇ ಹೇಳಬಹುದು.
ಸೋಷಿಯಲ್ ಮೀಡಿಯಾದಲ್ಲಿ ಬರುವ ಜಾಹೀರಾತುಗಳು ಮತ್ತು ರೀಲ್ಸ್‌ಗಳನ್ನು ನೋಡುವ ಪ್ರತಿಯೊಬ್ಬರು ಸಹ ದಕ್ಷಿಣ ಕೋರಿಯನ್ನರ ದೋಷರಹಿತ ಚರ್ಮವನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಒಂದಲ್ಲ ಒಂದು ಸಲ ಗೂಗಲ್‌ನಲ್ಲಿ ಸರ್ಚ್ ಮಾಡಿಯೇ ಮಾಡಿರುತ್ತಾರೆ. ಆದರೆ ಇದೆಲ್ಲ ನಮ್ಮ ಭಾರತೀಯರಿಗೆ ಹೊಂದಿಕೆ ಆಗುತ್ತಾ? ಎಂಬುದೇ ನಮ್ಮ ಮುಂದಿನ ಪ್ರಶ್ನೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಬಿಯರ್ ಕುಡಿತೀರಾ? ನಷ್ಟವಷ್ಟೇ ಅಲ್ಲ, ಲಾಭವೂ ಇದೆ!
ಈ ಪ್ರಶ್ನೆ ಏಕೆಂದರೆ ಅವರು ತಮ್ಮ ಚರ್ಮದ ರಕ್ಷಣೆ ಕುರಿತು ಅನುಸರಿಸುವ ದಿನಚರಿಯನ್ನು ಫಾಲೋ ಮಾಡುವ ಮೊದಲು ಜೀವಶಾಸ್ತ್ರದ ಕೆಲವು ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂಬುದು ಆಪ್ತ ಸಮಾಲೋಚಕರ ಅಭಿಪ್ರಾಯವಾಗಿದೆ.
ಚರ್ಮದ ಪ್ರಕಾರ ತಿಳಿಯಲು ಅನುಸರಿಸುವ ಪ್ರಮಾಣವಿದು
ನಮ್ಮ ದೇಹದ ಚರ್ಮ ಯಾವ ಪ್ರಕಾರದ್ದು ಎಂದು ತಿಳಿಯಲು ಫಿಟ್ಜ್‌ಪ್ಯಾಟ್ರಿಕ್ ಸ್ಕೇಲ್ ಎಂಬ ಪ್ರಮಾಣವನ್ನು ಬಳಸಿ ಚರ್ಮದ ಪ್ರಕಾರಗಳನ್ನು ತಿಳಿಯುತ್ತಾರೆ. ಇದನ್ನು ಯುವಿ ಮಾನ್ಯತೆಯ ಪ್ರಮಾಣವನ್ನು ನಿರ್ಧರಿಸಲು ಅಭಿವೃದ್ಧಿಪಡಿಸಲಾಗಿದೆ. ಒಂದು ನಿರ್ದಿಷ್ಟ ರೀತಿಯ ಚರ್ಮವು ಫೋಟೊಟಾಕ್ಸಿಕ್ ಆಗುವ ಮೊದಲು, ಅದನ್ನು ಚೆಕ್ ಮಾಡುತ್ತಾರೆ. ಯಾವುದೇ ಚರ್ಮವಾಗಲಿ ಆ ಚರ್ಮವು ಬೆಳಕಿಗೆ ಹೆಚ್ಚು ಸೂಕ್ಷ್ಮವಾಗಿರುತ್ತದೆ.
ಚರ್ಮದ ಪ್ರಕಾರಗಳು ಎಷ್ಟಿವೆ?
ಪ್ರಪಂಚದಲ್ಲಿ ಒಟ್ಟು 6 ರೀತಿಯ ಚರ್ಮದ ಪ್ರಕಾರಗಳಿವೆ. ಈ ಚರ್ಮಗಳ ಬಗ್ಗೆ ವಿವರಿಸುವ ಈ ಪ್ರಮಾಣವು ಚರ್ಮರೋಗ ತಜ್ಞರಿಗೆ ಚರ್ಮದಲ್ಲಿ ಮೆಲನಿನ್ ಅಂಶವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಎಸ್ಜಿಮಾ ಸೇರಿದಂತೆ ವಿವಿಧ ರೀತಿಯ ಚರ್ಮದ ಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಫೋಟೊಥೆರಪಿಯನ್ನು (ಅಥವಾ ಯುವಿ ಲೈಟ್ ಥೆರಪಿ) ಬಳಸಲಾಗುತ್ತದೆ.
ಹಾಗಿದ್ರೆ ಭಾರತೀಯರ ಚರ್ಮದ ಟೈಪ್ ಎಷ್ಟನೆ ಪ್ರಕಾರದ್ದಾಗಿರುತ್ತದೆ?
ಭಾರತೀಯ ಚರ್ಮದ ಟೈಪ್ III ಮತ್ತು VI ರ ನಡುವೆ ಇರುತ್ತದೆ. ಈ ಚರ್ಮವು ಹೆಚ್ಚು ಟ್ಯಾನಿಂಗ್(ಬಿಸಿಲಿಗೆ ಕಪ್ಪಾಗುವಿಕೆ)ಗೆ ಒಳಗಾಗುತ್ತದೆ. ಬಿಸಿಲಿನಿಂದ ಬೇಗನೆ ಚರ್ಮ ಸುಡುತ್ತದೆ. ಇಂತಹ ಚರ್ಮವು ಬೇಗನೆ ಪಿಗ್ಮಟೆಂಷನ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚು.
ದಕ್ಷಿಣ ಕೊರಿಯಾದ ಚರ್ಮವು ಫಿಟ್ಜ್‌ಪ್ಯಾಟ್ರಿಕ್ ಪ್ರಮಾಣದಲ್ಲಿ ಈ ವರ್ಗಕ್ಕೆ ಸೇರುತ್ತದೆ. ಆದರೆ ಕೊರಿಯಾದವರ ಚರ್ಮವು ಹೆಚ್ಚು ಪಿಗ್ಮಟೆಂಷನ್‌ಗೆ ಒಳಗಾಗುವುದಿಲ್ಲ ಎಂಬುದೇ ಮಹತ್ವದ ವ್ಯತ್ಯಾಸ ಭಾರತೀಯ ಚರ್ಮ ಮತ್ತು ಕೊರಿಯಾದವರ ಚರ್ಮಕ್ಕೂ ಇರುವ ವ್ಯತ್ಯಾಸವಾಗಿದೆ. ಅದಕ್ಕಾಗಿಯೇ ಕೊರಿಯನ್ ಚರ್ಮದ ರಕ್ಷಣೆಯು ದಕ್ಷಿಣ ಕೊರಿಯನ್ನರು ಮತ್ತು ಭಾರತೀಯರಿಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.
ಆದರೆ ಚರ್ಮದ ರಕ್ಷಣೆಯು ಇಂತಹ ಚರ್ಮದ ಪ್ರಕಾರಗಳನ್ನು ಸಹ ಮೀರಿರುತ್ತದೆ. ರೈಟ್ ವೇ ನಲ್ಲಿ ದಿನಾಲು ಚರ್ಮದ ಆರೈಕೆ ಬಗ್ಗೆ ಗಮನ ನೀಡಿದರೆ ಪರ್ಫೆಕ್ಟ್ ತ್ವಚೆಯನ್ನು ನಮ್ಮದಾಗಿಸಿಕೊಳ್ಳಬಹುದು. ಅದು ದಿನನಿತ್ಯದ ಸ್ವಲ್ಪ ಸಮಯವನ್ನು ಬಯಸುತ್ತದೆ. ಆ ಸಮಯವನ್ನು ನಿಮ್ಮ ಚರ್ಮಕ್ಕೆ ನೀಡುವ ವ್ಯವಧಾನ ನಿಮಗಿರಬೇಕಷ್ಟೆ.. ಹಾಗಿದ್ರೆ ಪರ್ಫೆಕ್ಟ್ ತ್ವಚೆ ಪಡೆಯಲು ಇರುವ ಕೊರಿಯನ್ನರ ಸ್ಕೀನ್ ಸೀಕ್ರೆಟ್ ಏನು ಎಂಬುದನ್ನು ಈಗ ತಿಳಿಯೋಣ.
ಪರ್ಫೆಕ್ಟ್ ತ್ವಚೆ ಪಡೆಯಲು ಇರುವ ಕೊರಿಯನ್ನರ ಸ್ಕೀನ್ ಸೀಕ್ರೆಟ್
ದಕ್ಷಿಣ ಕೊರಿಯಾದಲ್ಲಿ, ಸಾಂಪ್ರದಾಯಿಕ ಚರ್ಮದ ರಕ್ಷಣೆಯ ಪರಿಹಾರಗಳು ಸ್ವಾಭಾವಿಕವಾಗಿ ಅಲ್ಲಿ ಉಪಯೋಗಿಸುವ ಉತ್ಪನ್ನಗಳನ್ನು ಆಧರಿಸಿವೆ. ಅಂತಹ ಉತ್ಪನ್ನಗಳೆಂದ್ರೆ ಹಸಿರು ಚಹಾ, ಪ್ರೋಪೋಲಿಸ್ ಅಥವಾ ಜೇನುನೊಣದ ಗಮ್, ಬಸವನ ಹುಳು ಬಿಡುವ ಲೋಳೆ ಮತ್ತು ಬಿದಿರಿನ ಸಾರಗಳು ಹೀಗೆ ಇತರ ಉತ್ಪನ್ನಗಳನ್ನು ಹಲವಾರು ತಲೆಮಾರುಗಳಿಂದ ಕೊರಿಯನ್ನರು ಬಳಸುವ ಕೆಲವು ಸಾಮಾನ್ಯ ಪದಾರ್ಥಗಳಾಗಿವೆ.
ಈ ಪದಾರ್ಥಗಳು, ಕಠಿಣ ರಾಸಾಯನಿಕಗಳು ಮತ್ತು ಜೀವಾಣುಗಳಿಂದ ಮುಕ್ತವಾಗಿ, ಚರ್ಮವನ್ನು ಪೋಷಿಸಿ ಆರೋಗ್ಯವಾಗಿರಿಸಿಕೊಳ್ಳುತ್ತವೆ. ಇದಲ್ಲದೆ, ಚರ್ಮದ ರಕ್ಷಣೆಯ ಮತ್ತು ಮೇಕ್ಅಪ್ ವಿಷಯಕ್ಕೆ ಬಂದಾಗ, ದಕ್ಷಿಣ ಕೊರಿಯನ್ನರು ಹಳೆಯ ಕಾಲದ ಚರ್ಮದ ಆರೈಕೆಯ ಪರಿಹಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಚರ್ಮವನ್ನು ಆರೋಗ್ಯವಾಗಿಡುವುದು ಎಷ್ಟು ಮುಖ್ಯ ಎಂದು ಸಹ ಕೊರಿಯನ್ನರು ತಿಳಿದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರೋ ಕೊರಿಯನ್ನರ 10 ಹಂತದ ಚರ್ಮದ ಆರೈಕೆ ವಿಧಾನಗಳು ಇಲ್ಲಿವೆ
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮತ್ತು ಜಾಹೀರಾತುಗಳಲ್ಲಿ ಜನಪ್ರಿಯವಾಗಿರುವ 10-ಹಂತದ ದಕ್ಷಿಣ ಕೊರಿಯಾದ ದಿನಚರಿ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಹೆಚ್ಚು ಫೇಮಸ್ ಆಗಿದೆ. ಈ ವಿಷಯದ ಹಿಂದೆ ಇರುವ ಸೈನ್ಸ್ ಬಹಳ ಸಿಂಪಲ್ ಎಂದು ಹೇಳಬಹುದಾಗಿದೆ. ಅದೇನೆಂದ್ರೆ ಚರ್ಮದ ರಕ್ಷಣೆಯನ್ನು ಮಾಡಲು ಮೊದಲು ಚರ್ಮದ ಆರೈಕೆಯನ್ನು ನಿಯಮಿತವಾಗಿ ಮಾಡುತ್ತಾ ಹೋಗಬೇಕು. ಆ ದಿನಚರಿಯನ್ನು ದಿನಾಲೂ ಫಾಲೋ ಮಾಡಬೇಕು.
ಈ 10-ಹಂತದ ದಿನಚರಿಯು ಎಲ್ಲ ಚರ್ಮದವರಿಗೂ ಕೆಲಸ ಮಾಡದಿದ್ದರೂ, ಇದು ನಿಮಗೆ ಒಂದು ಉತ್ತಮ ಮೇಸೆಜ್ ನೀಡಬಲ್ಲದು. ಅದೇನೆಂದ್ರೆ ನಿಮ್ಮ ಕೆಲಸದಲ್ಲಿ ನೀವು ಎಷ್ಟೆ ಬ್ಯುಸಿ ಆಗಿದ್ರೂ ಸಹ ಚರ್ಮದ ಆರೈಕೆ ನಿಮ್ಮ ಮೊದಲ ಆದ್ಯತೆ ಆಗಿರಬೇಕು.
ಚರ್ಮದ ಆರೈಕೆಯ ಈ ತತ್ವವು ದಕ್ಷಿಣ ಕೊರಿಯನ್ನರ ಬದ್ಧತೆಯಲ್ಲಿ ನಾವು ದಿನನಿತ್ಯ ಕಾಣಬಹುದು. ಇದು ಚರ್ಮದ ಪಿಗ್ಮಟೆಂಷನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಆರೋಗ್ಯಕರ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. ಆದರೆ ಇಷ್ಟೆ ಅಲ್ಲದೇ ಚರ್ಮದ ಟೈಟನಿಂಗ್ ಮತ್ತು ಮೊಡವೆಗಳನ್ನು ಕಡಿಮೆ ಮಾಡುವುದು ಕೊರಿಯನ್ನರ ಚರ್ಮದ ಆರೈಕೆಯ ಮುಖ್ಯ ಗುರಿಯಾಗಿರುತ್ತದೆ.
ಭಾರತೀಯರಿಗೆ ಹೊಂದಿಕೆಯಾಗುವ ಸೂಕ್ತ ಚರ್ಮ ಆರೈಕೆಯ ಪರಿಹಾರಗಳು ಇವು
ಭಾರತೀಯರಿಗೂ ಮತ್ತು ದಕ್ಷಿಣ ಕೊರಿಯನ್ನರಿಗೂ ಅನೇಕ ವ್ಯತ್ಯಾಸಗಳಿವೆ. ಕೊರಿಯನ್ನರ 10-ಹಂತದ ಚರ್ಮದ ಆರೈಕೆ ದಿನಚರಿಯು ಎಲ್ಲರಿಗೂ ಸೂಕ್ತವಾಗಿ ಹೊಂದಿಕೆಯಾಗದೇ ಇರಬಹುದು. ಇದಕ್ಕೆ ಕಾರಣವೆಂದ್ರೆ ಅವರ ಚರ್ಮದ ಪ್ರಕಾರ ಡಿಫರೆಂಟ್ ಆಗಿರಬಹುದು.
ಅದು ಹೆಚ್ಚು ಪಿಗ್ಮಟೆಂಷನ್‌ಗೆ ಒಳಗಾಗುವ ಚರ್ಮದ ಪ್ರಕಾರವಾಗಿರಬಹುದು. ಅಲರ್ಜಿಯಿಂದ ಕೂಡಿರಬಹುದು ಅಥವಾ ಅತಿ ಸೂಕ್ಷ್ಮ ಚರ್ಮ ಆಗಿರಬಹುದು. ಇದರಲ್ಲಿ ಯಾವುದು ಆಗಿದ್ದರೂ ಸಹ ಕೊರಿಯನ್ನರ 10-ಹಂತದ ಚರ್ಮದ ಆರೈಕೆ ದಿನಚರಿಯು ಇಂತಹವರಿಗೆ ವರ್ಕ್ ಆಗೋದಿಲ್ಲ. ಆಗ ಅವರು ನಮ್ಮ ದೇಶದ ಚರ್ಮದ ಆರೈಕೆಯ ಪರಿಹಾರಗಳನ್ನು ಕಂಡುಕೊಳ್ಳುವುದು ಸೂಕ್ತ.
ದೇಹ ಮತ್ತು ಮನಸ್ಸಿನ ಚಿಕಿತ್ಸೆಗಳಿಗೆ ಸೂಕ್ತ ನೈಸರ್ಗಿಕ ಪರಿಹಾರಗಳನ್ನು ನೀಡಲು ಭಾರತವು ಫೇಮಸ್. ಅದಕ್ಕೆ ಅನೇಕ ಪರಿಹಾರಗಳನ್ನು ಭಾರತವು ಅಭಿವೃದ್ಧಿ ಪಡಿಸಿದೆ. ಅದರಲ್ಲಿ ಬಹು ಮುಖ್ಯವಾದ ಪರಿಹಾರವೆಂದ್ರೆ ಅದು ಸ್ಪ್ರಿಂಗ್ ವಾಟರ್ ಚಿಕಿತ್ಸೆ ಆಗಿದೆ. ಇದನ್ನು ಇನ್ನು ಹೆಚ್ಚು ಪ್ರಚಾರ ಮಾಡುವ ಅವಶ್ಯಕತೆ ಇದೆ.
ಇದರ ಕುರಿತು ಆಪ್ತ ಸಮಾಲೋಚಕ “ಸಿಕ್ಕಿಂನ ಒಂದು ಕುಟುಂಬದ ಸದಸ್ಯರಿಗೆ ಎಸ್ಜಿಮಾ ರೋಗಕ್ಕೆ ಚಿಕಿತ್ಸೆ ನೀಡಲು ಹೋಗಿದ್ದಾಗ ಅವರಿಗೆ ನಾನು ಸ್ಪ್ರಿಂಗ್ ವಾಟರ್ ಥೆರಪಿಯನ್ನು ಬಳಸಿದ್ದೇನೆ. ಇದರಲ್ಲಿ ಗಮನಾರ್ಹ ವ್ಯತ್ಯಾಸವನ್ನು ಗಮನಿಸಿದ್ದೆನೆ. ಅದಕ್ಕೆ ಇದರ ಕುರಿತು ನಾನು ಆರೋಗ್ಯ ಸಚಿವಾಲಯ ಮತ್ತು ಆಯುಷ್‌ಗೆ ಮನವಿ ಮಾಡಿದ್ದೇನೆ. ಈ ಚಿಕಿತ್ಸೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದೇನೆ.
ಇಂದು, ಅನೇಕ ಕಂಪನಿಗಳು ಮತ್ತು ತಜ್ಞರು ಹೆಚ್ಚು ನೈಸರ್ಗಿಕ ವಸ್ತುಗಳನ್ನು ಪ್ರಯೋಗಿಸುತ್ತಿದ್ದರೂ ಸಹ, ನಾವು ಚರ್ಮದ ಕಾಯಿಲೆಗಳಿಗೆ ಕೈಗೆಟುಕುವ ಮತ್ತು ಸುಲಭವಾಗಿ ಬಳಕೆ ಮಾಡಬಹುದಾದ ಚಿಕಿತ್ಸೆಯ ಆಯ್ಕೆಯಾಗಿ ಸ್ಪ್ರಿಂಗ್ ವಾಟರ್ ಥೆರಪಿಯಂತಹ ಚಿಕಿತ್ಸೆಗಳಿಂದ ದೂರವಿರುತ್ತೇವೆ. ಇದು ನಿಜಕ್ಕೂ ವಿಪರ್ಯಾಸವೇ ಸರಿ” ಎಂದಿದ್ದಾರೆ.
ಹಾಗಿದ್ರೆ ರಾಸಾಯನಿಕ ಉತ್ಪಾದಕಗಳಿಂದ ದೂರವಿರುವುದು ಹೇಗೆ? ನೈಸರ್ಗಿಕ ಉತ್ಪಾದಕಗಳನ್ನು ಬಳಸಿ ನಮ್ಮ ತ್ವಚೆಯನ್ನು ಸುಂದರವಾಗಿ ಇರಿಸಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಈಗ ನೋಡೋಣ. ಭಾರತದ ನೈಸರ್ಗಿಕ ಉತ್ಪಾದಕವಾದ ಶ್ರೀಗಂಧದ ಪುಡಿ ಭಾರತೀಯ ಚರ್ಮಕ್ಕೆ ಪರ್ಪೆಕ್ಟ್ ಹೊಂದಿಕೆಯಾಗೋ ನೈಸರ್ಗಿಕ ಪದಾರ್ಥವಾಗಿದೆ.
ಇದು ಚರ್ಮಕ್ಕೆ ಗ್ಲಾಸಿ ಲುಕ್ ನೀಡುತ್ತದೆ. ಎಲ್ಲ ಚರ್ಮದವರಿಗೂ ಇದು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಇದರೊಂದಿಗೆ ವಾಟರ್ ಬೆಸ್ಡ್ ಸ್ಕೀನ್ ಪ್ರೊಡಕ್ಟ್‌ಗಳು, ಕಾಪರ್ ಪೆಪ್ಟೈಡ್‌ಗಳನ್ನು ಹೊಂದಿರುವ ಕ್ರೀಮ್‌ಗಳು ಮತ್ತು ಮಾಯಿಶ್ಚರೈಸರ್ ಅಪ್ಲೈ ಮಾಡುವ ಮೊದಲು ಹೈಲುರಾನಿಕ್ ಆಸಿಡ್ ಇರೋ ಸೀರಮ್‌ಗಳನ್ನು ಅಪ್ಲೈ ಮಾಡುವುದರಿಂದ ನಿಮ್ಮ ಸ್ಕೀನ್ ಗ್ಲಾಸಿ ಲುಕ್ ಪಡೆಯುತ್ತದೆ.
ಹಾಗಿದ್ರೆ ನಾವು ದಕ್ಷಿಣ ಕೊರಯಾದ ಚರ್ಮ ಆರೈಕೆಯ ದಿನಚರಿಯನ್ನು ಫಾಲೋ ಮಾಡೋದು ಬೇಡ್ವಾ ಅಂತ ನಿಮಗೆ ಅನಿಸ್ತಾ ಇದ್ರೆ ನೀವು ಕೊರಿಯನ್ ಸ್ಟೈಲ್ ಸ್ಕೀನ್ ಕೇರ್ ಕೂಡ ಫಾಲೋ ಮಾಡಿ ನಿಮ್ಮ ಸ್ಕೀನ್ ಅನ್ನು ಮತ್ತಷ್ಟು ಹೊಳೆಯುವ ಹಾಗೆ ಮಾಡಬಹುದು.
ದಕ್ಷಿಣ ಕೊರಿಯನ್ನರ ಚರ್ಮ ಆರೈಕೆಯ ದಿನಚರಿ ಹೇಗಿರುತ್ತೆ ನೋಡಿ.,.
ನಿಮ್ಮ ದಿನಚರಿಯಲ್ಲಿ ಕೊರಿಯನ್ ಚರ್ಮದ ಆರೈಕೆಯನ್ನು ನೀವು ಬಳಸಬಹುದು. ಅದು ಹೇಗೆಂದರೆ: ಮೊದಲಿಗೆ -ಕ್ಲೆನ್ಸರ್ (ತೈಲ ಆಧಾರಿತ ಕ್ಲೆನ್ಸರ್ ನಂತರ ಫೋಮ್ ಕ್ಲೆನ್ಸರ್), ಎಕ್ಸ್‌ಫೋಲಿಯೇಟರ್, ಶೀಟ್ ಮಾಸ್ಕ್, ಟೋನರ್, ಎಸೆನ್ಸ್, ಸೀರಮ್, ಐ ಕ್ರೀಮ್ ಮತ್ತು ಫೇಸ್ ಕ್ರೀಮ್ ಈ ರೀತಿಯಾಗಿ ನೀವು ನಿಮ್ಮ ತ್ವಚೆಯ ಆರೈಕೆ ಮತ್ತು ರಕ್ಷಣೆಯನ್ನು ಮಾಡಿಕೊಳ್ಳಬಹುದು.
ಪ್ರತಿದಿನವೂ ಎಲ್ಲಾ ಚರ್ಮದ ಪ್ರಕಾರಗಳಿಗೆ ಎಫ್ಫೋಲಿಯೇಟ್ ಮಾಡಲು ಶಿಫಾರಸು ಮಾಡುವುದಿಲ್ಲ. ಅದರ ಬದಲಿಗೆ ವಾರಕ್ಕೆ 2-3 ಬಾರಿ ಎಫ್ಫೋಲಿಯೇಟ್ ಮಾಡಲು ತಜ್ಞರು ಸಲಹೆ ನೀಡುತ್ತಾರೆ. ಶೀಟ್ ಮಾಸ್ಕ್ ತಾತ್ಕಾಲಿಕ ಜಲಸಂಚಯನ ಪ್ರಯೋಜನವನ್ನು ನೀಡುತ್ತದೆ. ಟೋನರ್‌ಗಳನ್ನು ಬಳಕೆ ಮಾಡುವುದು ಸೂಕ್ತ. ಇವು ಆಲ್ಕೋಹಾಲ್ ಅಥವಾ ನೀರು ಆಧಾರಿತವಾಗಿದ್ದರೆ, ಭಾರತೀಯ ಚರ್ಮಕ್ಕೆ ಸೂಕ್ತವಾಗಿರುತ್ತದೆ. ಇದರೊಂದಿಗೆ ಸಾಕಷ್ಟು ನೀರನ್ನು ಕುಡಿಯಲು ಸೂಚಿಸಲಾಗುತ್ತದೆ. ಸನ್‌ಸ್ಕ್ರೀನ್ ಅನ್ನು ಹೆಚ್ಛಾಗಿ ಬಳಸಿ. ಹಾಗೆಯೇ ಮಲಗುವ ಮೊದಲು ಮೇಕಅಪ್ ತೆಗೆಯುವುದು ಸೂಕ್ತ.
ಈ ಮಾಹಿತಿಯನ್ನು ನಮ್ಗೆ ಚರ್ಮ ತಜ್ಞ, ಆಂಟಿ ಅಲರ್ಜಿ ಸ್ಪೆಷಲಿಷ್ಟ್, ಲೇಸರ್ ಸರ್ಜನ್ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಪಡೆದ ಸೌಂದರ್ಯಶಾಸ್ತ್ರಜ್ಞೆ ಆಗಿರುವ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ