Hair Mask: ಮನೆಯಲ್ಲೇ ಇರೋ ವಸ್ತುಗಳಿಂದ ಈ ಹೇರ್ ಪ್ಯಾಕ್ ಮಾಡಿ, ಕೂದಲು ಉದುರುವುದು ಕೂಡಲೇ ನಿಲ್ಲುತ್ತಂತೆ!

ಹೊಳಪಿನ ಕೊರತೆ , ಶುಷ್ಕತೆ ಮತ್ತು ಹೊಟ್ಟು ಮುಂತಾದ ಕೂದಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿ ಬಾರಿಯೂ ಪಾರ್ಲರ್ ಅಥವಾ ದುಬಾರಿ ಉತ್ಪನ್ನಗಳ ಮೊರೆ ಹೋಗಲು ಸಾಧ್ಯವಿಲ್ಲ. ಮನೆಯಲ್ಲಿಯೇ ಕೆಲವು ಹೇರ್ ಮಾಸ್ಕ್‌‌‌‌‍ಗಳನ್ನು ತಯಾರಿಸಿಕೊಳ್ಳುವ ಮೂಲಕ ಕೂದಲಿನ ಆರೈಕೆ ಮಾಡಿಕೊಳ್ಳಲು ಸಾಧ್ಯವಿದೆ.

ಕೂದಲುದುರುವ ಸಮಸ್ಯೆಗೆ ಪರಿಹಾರ

ಕೂದಲುದುರುವ ಸಮಸ್ಯೆಗೆ ಪರಿಹಾರ

  • Share this:
ಬಿಸಿಲು, ಧೂಳು (Dust) ಮತ್ತು ಮಾಲಿನ್ಯದಿಂದ (Pollution) ಕೂದಲು ಶುಷ್ಕವಾಗುತ್ತದೆ (dry Hair) ಮತ್ತು ನೆತ್ತಿಯಲ್ಲಿನ ನಿರ್ಜಲೀಕರಣಕ್ಕೆ (Dehydration in the scalp) ಕಾರಣವಾಗುತ್ತದೆ. ಹೊಳಪಿನ ಕೊರತೆ (Lack of flashes), ಶುಷ್ಕತೆ ಮತ್ತು ಹೊಟ್ಟು ಮುಂತಾದ ಕೂದಲಿನ ಸಮಸ್ಯೆಗಳಿಗೆ (Hair problem) ಪರಿಹಾರ ಕಂಡುಕೊಳ್ಳಲು ಪ್ರತಿ ಬಾರಿಯೂ ಪಾರ್ಲರ್ (parlor) ಅಥವಾ ದುಬಾರಿ ಉತ್ಪನ್ನಗಳ ಮೊರೆ ಹೋಗಲು ಸಾಧ್ಯವಿಲ್ಲ. ಮನೆಯಲ್ಲಿಯೇ ಕೆಲವು ಹೇರ್ ಮಾಸ್ಕ್‌‌‌‌‍ಗಳನ್ನು (Hair Mask) ತಯಾರಿಸಿಕೊಳ್ಳುವ ಮೂಲಕ ಕೂದಲಿನ ಆರೈಕೆ (Hair care) ಮಾಡಿಕೊಳ್ಳಲು ಸಾಧ್ಯವಿದೆ. ಈ ಕುರಿತು ಆರೋಮಾಥೆರಪಿಸ್ಟ್ (Aromatherapist), ಕಾಸ್ಮೆಟಾಲಜಿಸ್ಟ್ ಇನಾಟೂರ್‍ನ ಸಂಸ್ಥಾಪಕಿ ಪೂಜಾ ನಾಗ್‍ದೇವ್ (Pooja Nagdev) ಈ ಕುರಿತು ಇಲ್ಲಿ ಮಾಹಿತಿ ನೀಡಿದ್ದಾರೆ.

1. ಮೊಟ್ಟೆಯ ಬಿಳಿ ಭಾಗ ಮತ್ತು ಆಲಿವ್ ಎಣ್ಣೆಯ ಹೇರ್ ಮಾಸ್ಕ್
ಮೊಟ್ಟೆಯಲ್ಲಿರುವ ಅತ್ಯಧಿಕ ಪ್ರೊಟೀನ್ ಮತ್ತು ಪೋಷಕಾಂಶಗಳು ಹಾನಿಗೊಳಗಾದ ಕೂದಲನ್ನು ಸರಿ ಮಾಡುತ್ತವೆ. ಒಂದು ಅಥವಾ ಎರಡು ಮೊಟ್ಟೆಯ ಬಳಿ ಭಾಗಕ್ಕೆ, ಒಂದು ಟೇಬಲ್ ಸ್ಪೂನ್ ಆಲಿವ್ ಎಣ್ಣೆ ಹಾಕಿ ಕಲಸಿ. ಆ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿರಿ. 20 ನಿಮಿಷಗಳ ಬಳಿ ತೊಳೆದು ತೆಗೆಯಿರಿ. ಈ ಹೇರ್ ಪ್ಯಾಕ್ ನಿಮ್ಮ ಒಣ ಕೂದಲಿನ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ.

2. ಬಾಳೆ ಹಣ್ಣು ಮತ್ತು ಜೇನು ತುಪ್ಪ ಹೇರ್ ಮಾಸ್ಕ್
ಬೇಸಿಗೆಯ ಧಗೆಯಿಂದ ನಿಮ್ಮ ನೆತ್ತಿಯಲ್ಲಿ ತುರಿಕೆ ಉಂಟಾಗಬಹುದು. ಅದು ಕೂದಲು ಉದುರಲು ಕೂಡ ಕಾರಣವಾಗಬಹುದು. ಆ್ಯಂಟಿಬ್ಯಾಕ್ಟಿರಿಯಲ್ ಸಾಮಾಗ್ರಿಗಳಾದ, ಬಾಳೆ ಹಣ್ಣು ಮತ್ತು ಜೇನು ತುಪ್ಪದ ಹೇರ್ ಮಾಸ್ಕ್ ಈ ಸಮಸ್ಯೆಯಿಂದ ನಿಮಗೆ ಪರಿಹಾರ ನೀಡಬಲ್ಲದು.

ಇದನ್ನೂ ಓದಿ:  Weight Loss Tips: ತೂಕ ಇಳಿಸಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ರೆ ಈ ಸಲಹೆಗಳನ್ನು ಅನುಸರಿಸಿ

ಜೇನುತುಪ್ಪ ನೆತ್ತಿಯನ್ನು ಮಾಯಿಶ್ಚರೈಸ್ ಮಾಡುತ್ತದೆ. ಬಾಳೆ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ. ಒಂದು ಬಾಳೆಹಣ್ಣಿಗೆ, 2-3 ಚಮಚ ಜೇನುತುಪ್ಪ ಸೇರಿಸಿ. ಆ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ, 15- 20 ನಿಮಿಷ ಹಾಗೆಯೇ ಬಿಡಿ. ಬಳಿಕ ತಣ್ಣಗಿನ ನೀರಿನಲ್ಲಿ ತೊಳೆದು ತೆಗೆಯಿರಿ. ಈ ಮಾಸ್ಕ್ ನಿಮ್ಮ ಕೂದಲನ್ನು ರೇಶ್ಮೆಯಷ್ಟು ನಯಗೊಳಿಸುತ್ತದೆ ಮತ್ತು ನೆತ್ತಿಯ ಸ್ಥಿತಿಯನ್ನು ಸುಧಾರಣೆ ಮಾಡುತ್ತದೆ.

3. ಅವಕಾಡೋ ಮತ್ತು ಬಾದಾಮಿ ಎಣ್ಣೆಯ ಹೇರ್ ಮಾಸ್ಕ್
ವಕಾಡೋ ಅತ್ಯಧಿಕ ಪೋಷಕಾಂಶ ಉಳ್ಳ ಹಣ್ಣಾಗಿದ್ದು, ಅದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಈ ಹಣ್ಣನ್ನು ಬಳಸಿ ನೀವು ಕೂದಲಿಗೆ ಹೆಚ್ಚಿನ ಮೃದುತ್ವ ಮತ್ತು ಹೊಳಪನ್ನು ನೀಡಬಹುದು. ಅವಕಾಡೋ ಹಣ್ಣಿನ ತಿರುಳನ್ನು ತೆಗೆದು, ಅದಕ್ಕೆ ಒಂದು ಚಮಚ ಬಾದಾಮಿ ಎಣ್ಣೆ ಸೇರಿಸಿ ಮಿಶ್ರಣ ತಯಾರಿಸಿ. ಅದನ್ನು ಕೂದಲಿನ ಪ್ರತಿಯೊಂದು ಭಾಗಕ್ಕೂ ಸರಿಯಾಗಿ ಹಚ್ಚಿರಿ. 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಸೌಮ್ಯವಾದ ಶಾಂಪೂ ಬಳಸಿ ತೊಳೆದು ತೆಗೆಯಿರಿ.

ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಈ ಮಾಸ್ಕ್ ಬಳಸಿ
ಕೈಂಡ್‍ಲೈಫ್‍ನ ಸಹ -ಸಂಸ್ಥಾಪಕಿ ಮಾನಸ ಗಾರೆಮೆಲ್ಲ, ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸುವ ಮತ್ತು ದಟ್ಟವಾಗಿ ಕಾಣುವಂತೆ ಮಾಡುವ ಒಂದು ಹೇರ್ ಮಾಸ್ಕ್ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Skin Tan: ಸುಲಭವಾಗಿ ಚರ್ಮದ ಟ್ಯಾನ್ ತೆಗೆಯಬೇಕಾ? ಈ ಐದು ಟಿಪ್ಸ್ ಫಾಲೋ ಮಾಡಿ

ಒಂದು ಬೌಲ್‍ನಲ್ಲಿ ಆಲೋವೇರಾ ಜೆಲ್‍ಗೆ ಒಂದು ಟೇಬಲ್ ಚಮಚ ಹರಳೆಣ್ಣೆ ಮತ್ತು ಒಂದು ಚಮಚ ಬಾದಾಮಿ ಎಣ್ಣೆ ಹಾಕಿ ಮಿಶ್ರಣ ತಯಾರಿಸಿ. ಕೂದಲಿಗೆ ಇನ್ನೂ ಹೆಚ್ಚಿನ ಪೋಷಣೆ ನೀಡಬೇಕೆಂದಿದ್ದರೆ ಆ ಮಿಶ್ರಣಕ್ಕೆ 4-5 ಹನಿಗಳಷ್ಟು ಟೀ ಟ್ರೀ ಎಣ್ಣೆ ಅಥವಾ ವಿಟಮಿನ್ ಇ ಕ್ಯಾಪ್ಸೂಲ್ ಸೇರಿಸಿ. ಕ್ರೀಂನಂತಹ ಮಿಶ್ರಣ ತಯಾರಾಗುವ ವರೆಗೆ ಎಲ್ಲವನ್ನು ಚೆನ್ನಾಗಿ ಕಲಸಿ ಇದನ್ನು ನೆತ್ತಿಗೆ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು 30 ನಿಮಿಷ ಹಾಗೆಯೇ ಬಿಡಿ. ಬಳಿಕ ಶ್ಯಾಂಪೂ ಬಳಸಿ ತೊಳೆದು ತೆಗೆಯಿರಿ.

ಗಮನಾರ್ಹ ಫಲಿತಾಂಶಕ್ಕಾಗಿ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಈ ಮಾಸ್ಕ್ ಬಳಸಿ.

ಲಾಭಗಳು:
• ಕೂದಲು ಉದುರುವುದನ್ನು ತಡೆಯುತ್ತದೆ.
• ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ
• ಹೊಟ್ಟನ್ನು ಕಡಿಮೆ ಮಾಡುತ್ತದೆ
• ನಿಮ್ಮ ಕೂದಲಿಗೆ ಆರೋಗ್ಯ ಮತ್ತು ಬಲವನ್ನು ನೀಡುತ್ತದೆ
Published by:Ashwini Prabhu
First published: