ನೀವು ಪದೇ ಪದೇ ಸೀನುತ್ತೀರಾ? ಇದರ ಹಿಂದಿರುವ ಕಾರಣ ಇದು..!

ಹವಾನಿಯಂತ್ರಣದಿಂದಾಗಿ ಒಣ ಮೂಗಿನ ಸಮಸ್ಯೆ ತಲೆದೂರಬಹುದು. ಎಸಿ ಹೊಂದಿರುವ ಕೋಣೆಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ಇದು ಕೂಡ ಸೀನುವಿಕೆಗೆ ಕಾರಣವಾಗಬಹುದು.


Updated:March 26, 2020, 3:07 PM IST
ನೀವು ಪದೇ ಪದೇ ಸೀನುತ್ತೀರಾ? ಇದರ ಹಿಂದಿರುವ ಕಾರಣ ಇದು..!
ಸಾಂದರ್ಭಿಕ ಚಿತ್ರ
  • Share this:
ದಿನದ ಯಾವುದೇ ಸಮಯದಲ್ಲಿ ಸೀನುವುದು ಸಾಮಾನ್ಯ ಪ್ರಕ್ರಿಯೆ. ಅದಾಗ್ಯೂ, ಕೆಲವೊಮ್ಮೆ ಪದೇ ಪದೆ ಸೀನು ಬರುತ್ತಿರುತ್ತದೆ. ಹೀಗೆ ಸತತ ಸೀನುವಿಕೆಯ ಹಿಂದೆ ಗಂಭೀರ ಸಮಸ್ಯೆ ಇರಬಹುದು. ಇದು ದೀರ್ಘಾವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಸೀನುವಿಕೆ ಬರಲು ಹಲವು ಕಾರಣಗಳಿವೆ. ಅಂತಹ ಕೆಲ ಕಾರಣಗಳನ್ನು ಇಲ್ಲಿ ತಿಳಿಸಲಾಗಿದೆ.

ಕಾಲೋಚಿತ ಅಲರ್ಜಿ:

ಕಾಲೋಚಿತ ಅಲರ್ಜಿಯನ್ನು ಅಲರ್ಜಿಕ್ ರಿನಿಟಿಸ್ ಎಂದು ಕರೆಯಲಾಗುತ್ತದೆ. ಮನೆಯ ಧೂಳು, ಪ್ರಾಣಿಗಳ ಕೂದಲು ಮತ್ತು ಬ್ಯಾಕ್ಟೀರಿಯಾಗಳು ಇವು ಬಹಳ ಸೂಕ್ಷ್ಮ. ಬೇರೊಬ್ಬರ ದಿಂಬು ಅಥವಾ ಹಾಸಿಗೆ ಕೂಡ ಅಲರ್ಜಿಯಾಗಿರಬಹುದು. ಇದರಿಂದ ಕೂಡ ಸೀನುವಿಕೆ ಸಮಸ್ಯೆ ಹೆಚ್ಚಾಗುತ್ತವೆ. ಮುಖ್ಯವಾಗಿ ದಿಂಬು ಮತ್ತು ನೀವು ಮಲಗುವ ಸ್ಥಳ. ಏಕೆಂದರೆ ದೀರ್ಘಕಾಲದ ನಿದ್ರೆಯ ಸಮಯದಲ್ಲಿ ಈ ಅಂಶಗಳು ನಿಮ್ಮ ಮೂಗಿನ ಹಾದಿಗಳ ಮೂಲಕ ಒಳ ಪಾತ್ರವಹಿಸುತ್ತವೆ. ಇದರಿಂದ ಸೀನುವಿಕೆ ಸಮಸ್ಯೆ ಕಾಣಿಸಿಕೊಳ್ಳಬಹುದು.

ಒಣ ಕೋಣೆ:
ಹವಾನಿಯಂತ್ರಣದಿಂದಾಗಿ ಒಣ ಮೂಗಿನ ಸಮಸ್ಯೆ ತಲೆದೂರಬಹುದು. ಎಸಿ ಹೊಂದಿರುವ ಕೋಣೆಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ಇದು ಕೂಡ ಸೀನುವಿಕೆಗೆ ಕಾರಣವಾಗಬಹುದು.

ಸೈನಸ್ ಇದೆಯೇ?
ಸೈನಸ್‌ ಸಮಸ್ಯೆಯಿಂದ ಮೂಗಿನೊಳಗೆ ಒಂದು ಲೈನಿಂಗ್ ಮೂಡುತ್ತದೆ. ಇದನ್ನು ಮೂಗಿನ ಒಳಪದರ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಮೂಗಿನಿಂದ ಲೋಳೆಯು ಹೊರಬರುವುದಲ್ಲದೆ ಮತ್ತು ನೋವು ಕಾಣಿಸುತ್ತದೆ. ಇದು ಸೀನುವಿಕೆಗೂ ಕಾರಣವಾಗಬಹುದು.ವ್ಯಾಸೊಮೊಟರ್ ರೈನಾಯಿಟಿಸ್:
ವ್ಯಾಸೊಮೊಟರ್ ರೈನಾಯಿಟಿಸ್ ಎನ್ನುವುದು ಮೂಗಿನೊಳಗಿನ ಪೊರೆಗಳಲ್ಲಿ ಒಂದು ರೀತಿಯ ಉರಿಯೂತವಾಗಿದೆ. ಇದು ಆಗಾಗ್ಗೆ ತಾಪಮಾನದಲ್ಲಿನ ಬದಲಾವಣೆ ಅಥವಾ ನಿದ್ರೆಯ ಸಮಯದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿನ ಬದಲಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೂಡ ಸೀನುವಿಕೆ ಉಂಟಾಗುತ್ತದೆ.
First published: March 26, 2020, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading