Health Tips: ತುಂಬಾ ಹೊತ್ತು ಕುಳಿತುಕೊಳ್ಳೋದ್ರಿಂದ ಹೃದಯಾಘಾತವಾಗುತ್ತಾ? ತಜ್ಞರು ಏನ್ ಹೇಳ್ತಾರೆ?

ಅಧ್ಯಯನವು ದಿನಕ್ಕೆ 5 ಕ್ಕೂ ಹೆಚ್ಚು ಗಂಟೆಗಳ ಕಾಲ ಕುಳಿತು ಕೊಳ್ಳುವವರಲ್ಲಿ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ತಜ್ಞರು ತಿಳಿದ್ದಾರೆ. ಅಧಿಕ ಕಾಲ ಕುಳಿತುಕೊಳ್ಳುವವರು ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಕೆಲ ಸಲಹೆಗಳನ್ನು ಪಾಲಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸುಮಾರು ಎರಡು ವರ್ಷಗಳಿಂದ ಈ ಕೋವಿಡ್ (Covid19) ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಬೆಳಿಗ್ಗೆ ಯಿಂದ ಸಂಜೆಯ ತನಕ ಒಂದೇ ಕಡೆ ಕುಳಿತು ಕೊಂಡು ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿರುವುದನ್ನು ನಾವು ನೋಡಿರುತ್ತೇವೆ. ಇದಷ್ಟೇ ಅಲ್ಲದೆ ಗಂಟೆಗಟ್ಟಲೆ ನಿಮ್ಮ ಕಂಪ್ಯೂಟರ್ (Computer) ಮುಂದೆ ಕುಳಿತು, ವೆಬ್ ಸಿರೀಸ್ ಅಥವಾ ಚಲನಚಿತ್ರಗಳನ್ನು ನೋಡುತ್ತಿದ್ದರೆ ಅಪಾಯ (Danger) ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತಾರೆ ಹೃದ್ರೋಗ (Heart Problem) ತಜ್ಞರು. ಹೀಗೆ ಹೆಚ್ಚಿನ ಸಮಯವನ್ನು ನೀವು ಒಂದೇ ಕಡೆ ಕುಳಿತು ಕೊಂಡು ಕಳೆಯುವುದರಿಂದ ನೀವು ಹೃದಯಾಘಾತಕ್ಕೆ ಒಳಗಾಗುವ ಹೆಚ್ಚಿನ ಅಪಾಯದಲ್ಲಿರುತ್ತೀರಿ ಎಂದು ಹೃದ್ರೋಗ ತಜ್ಞರು (Expert) ಹೇಳುತ್ತಾರೆ.

ಹೆಚ್ಚು ಗಂಟೆಗಳ ಕಾಲ ಕುಳಿತುಕೊಂಡ್ರೆ ಅಪಾಯ

ಒಂದು ಅಧ್ಯಯನವು ದಿನಕ್ಕೆ 10 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕುಳಿತು ಕೊಳ್ಳುವ ಜನರು ಪ್ರತಿದಿನ ಐದು ಅಥವಾ ಅದಕ್ಕಿಂತ ಕಡಿಮೆ ಗಂಟೆಗಳ ಕಾಲ ಕುಳಿತು ಕೊಳ್ಳುವವರಿಗಿಂತ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸೂಚಿಸುತ್ತದೆ. ಕುಳಿತು ಕೊಳ್ಳುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ, ರಕ್ತದೊತ್ತಡ ಮತ್ತು ಮೂಳೆಯ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದು ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಸಹ ಹೆಚ್ಚಿಸಬಹುದು, ಇದು ಮಾರಣಾಂತಿಕವೆಂದು ಸಾಬೀತು ಪಡಿಸಬಹುದು.

ನೀವು ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಅಥವಾ ಆಸ್ಟಿಯೊಪೊರೋಸಿಸ್ ನಂತಹ ಯಾವುದೇ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದರೆ, ನಿಮ್ಮ ಜೀವನಶೈಲಿಯನ್ನು ಚೆನ್ನಾಗಿ ಗಮನಿಸಿ, ಏಕೆಂದರೆ ನಿಮ್ಮ ಜಡ ಜೀವನಶೈಲಿ ಅಥವಾ ತುಂಬಾ ಹೊತ್ತು ಕುಳಿತುಕೊಳ್ಳುವ ದಿನಚರಿಯು ಸಹ ಇದಕ್ಕೆ ಕಾರಣಗಳಾಗಿರಬಹುದು.

ಸ್ಥೂಲಕಾಯ ಸಮಸ್ಯೆ ಹೆಚ್ಚಾಗುತ್ತೆ

ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ನ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಸರ್ಜನ್ ನಿರ್ದೇಶಕ ಡಾ.ರಿತ್ವಿಕ್ ರಾಜ್ ಭುಯಾನ್, ಇತ್ತೀಚೆಗೆ ನಡೆದ ಸಂವಾದದಲ್ಲಿ ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವುದು ದೇಹದ ವಿವಿಧ ಕಾರ್ಯಗಳಿಗೆ ಹೇಗೆ ತೊಂದರೆಯನ್ನು ಉಂಟು ಮಾಡುತ್ತದೆ ಎಂಬುದನ್ನು ವಿವರಿಸುತ್ತಾರೆ. "ಕುಳಿತುಕೊಳ್ಳುವುದು ಸಾಮಾನ್ಯವಾಗಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ, ನಿಮ್ಮ ಸೊಂಟದ ಸುತ್ತಲಿನ ಹೆಚ್ಚುವರಿ ಕೊಬ್ಬು, ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಸ್ಥೂಲಕಾಯಕ್ಕೆ ಕಾರಣವಾಗಬಹುದು" ಎಂದು ವೈದ್ಯರು ಹೇಳುತ್ತಾರೆ.

ಕುತ್ತಿಗೆ, ಬೆನ್ನು ನೋವಿಗೆ ಕಾರಣವಾಗುತ್ತೆ

ನೀವು ದೀರ್ಘ ಗಂಟೆಗಳ ಕಾಲ ಕುಳಿತುಕೊಳ್ಳುವುದನ್ನು ಮುಂದುವರಿಸಿದಾಗ ನಿಮ್ಮ ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳಲ್ಲಿ ಹೇಗೆ ತೊಂದರೆಯನ್ನು ಎದುರಿಸಲು ಪ್ರಾರಂಭಿಸಬಹುದು ಎಂಬುದನ್ನು ವೈದ್ಯರು ವಿವರಿಸುತ್ತಾರೆ. ನಿಮ್ಮ ಮೂಳೆಗಳಿಗೂ ದೈಹಿಕ ಚಲನೆ ಮುಖ್ಯವಾಗಿದೆ ಮತ್ತು ಡಾ. ಭುಯಾನ್ ಅವರು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ದುರ್ಬಲಗೊಳ್ಳುವ ವ್ಯಕ್ತಿಯ ಅಪಾಯವು ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ:  Summer Health Tips: ಬೇಸಿಗೆಯ ಸೆಕೆಯಿಂದ ಪಾರಾಗಲು ಪುದೀನಾವನ್ನು ಈ 5 ರೀತಿಯಲ್ಲಿ ಬಳಸಿ

ಮೊಳೆಗಳು ದುರ್ಬಲಗೊಳುತ್ತೆ

"ನಾವು ನಡೆದಾಡುವಾಗ ನಮ್ಮ ದೇಹವು ಮೂಳೆಗಳ ಮೇಲೆ ಒತ್ತಡ ಹೇರುತ್ತದೆ ಎಂದು ಹೇಳಲಾಗುತ್ತದೆ. ಇದು ವಿಶೇಷ ಕೋಶದಿಂದ ಹೊಸ ಮೂಳೆ ಅಂಗಾಂಶಗಳನ್ನು ಉತ್ಪಾದಿಸುವ ಮೂಲಕ ದೇಹವನ್ನು ಆರೋಗ್ಯಕರವಾಗಿಸುತ್ತದೆ. ಆದರೆ ದೀರ್ಘಕಾಲದವರೆಗೆ ಕುಳಿತು ಕೊಳ್ಳುವ ಅಭ್ಯಾಸ ದೇಹದ ಚಲನೆಯನ್ನು ನಿರ್ಬಂಧಿಸುತ್ತವೆ ಮತ್ತು ಇದರ ಪರಿಣಾಮವಾಗಿ, ಮೂಳೆಯನ್ನು ದುರ್ಬಲಗೊಳಿಸುವ ಹೊಸ ಮೂಳೆ ಅಂಗಾಂಶಗಳು ಕಡಿಮೆ ಆಗುತ್ತವೆ" ಎಂದು ವೈದ್ಯರು ತಿಳಿಸಿದರು.

ದಿನದಲ್ಲಿ ನೀವು ಎಷ್ಟು ಗಂಟೆಗಳ ಕಾಲ ಕುಳಿತು ಕೊಂಡಿರುತ್ತೀರಿ ಎನ್ನುವ ಸಮಯದ ಆಧಾರದ ಮೇಲೆ ನಿಮ್ಮ ಹೃದಯಾಘಾತದ ಅಪಾಯವನ್ನು ಹೇಗೆ ಲೆಕ್ಕಹಾಕುವುದು ಎಂದು ವೈದ್ಯರು ಇಲ್ಲಿ ಹಂಚಿ ಕೊಂಡಿದ್ದಾರೆ ನೋಡಿ.

1. ಕಡಿಮೆ ಅಪಾಯ - ದಿನಕ್ಕೆ 4 ಗಂಟೆಗಳಿಗಿಂತ ಕಡಿಮೆ ಕುಳಿತುಕೊಳ್ಳುವುದು

2. ಮಧ್ಯಮ ಅಪಾಯ- ದಿನಕ್ಕೆ 4 ರಿಂದ 8 ಗಂಟೆಗಳು ಕುಳಿತುಕೊಳ್ಳುವುದು

3. ಹೆಚ್ಚಿನ ಅಪಾಯ - ದಿನಕ್ಕೆ 8 ರಿಂದ 11 ಗಂಟೆಗಳು ಕುಳಿತುಕೊಳ್ಳುವುದು

4. ಅತಿ ಹೆಚ್ಚಿನ ಅಪಾಯ - ದಿನಕ್ಕೆ 11 ಗಂಟೆಗಳಿಗಿಂತ ಹೆಚ್ಚು ಕುಳಿತುಕೊಳ್ಳುವುದು

ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ನೋಡಿ ಕೆಲವು ಸಲಹೆಗಳು:

1. 40 ನಿಮಿಷಗಳಿಗಿಂತ ಹೆಚ್ಚು ಕಾಲ ಒಂದೇ ಕಡೆ ಕುಳಿತು ಕೊಳ್ಳಬಾರದು ಮತ್ತು ಯಾವಾಗಲೂ ವಿರಾಮವನ್ನು ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಲಾಗುತ್ತದೆ.

2. ಕುಳಿತು ಕೊಳ್ಳುವಾಗ ಭಂಗಿಯಲ್ಲಿನ ಬದಲಾವಣೆಗಳು ನಿಮ್ಮ ಆರೋಗ್ಯದ ಮೇಲೆ ದೀರ್ಘಕಾಲದವರೆಗೆ ಕುಳಿತು ಕೊಳ್ಳುವುದರಿಂದ ಉಂಟಾಗುವ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲಸದ ಸಮಯದಲ್ಲಿ ಆಗಾಗ್ಗೆ ಎದ್ದು ನಡೆದಾಡುವುದು ಸಹ ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ದೀರ್ಘಕಾಲದ ಜಡ ಸಮಯವು ಹೊಂದಿರುವ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಇದು ನಮಗೆ ಶಕ್ತಿಯುತವಾಗಿರಲು, ಗಮನವನ್ನು ಕೇಂದ್ರೀಕರಿಸಲು, ನಮ್ಮ ಕೆಲಸಗಳನ್ನು ಇನ್ನಷ್ಟು ಚೆನ್ನಾಗಿ ಮಾಡಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ದೈಹಿಕ ಯೋಗ ಕ್ಷೇಮಕ್ಕೆ ಇದು ಉತ್ತಮವಾಗಿದೆ.

ಇದನ್ನೂ ಓದಿ: Sleeping Tips: ನೆಲದ ಮೇಲೆ ಮಲಗುವ ಅಭ್ಯಾಸವಿದೆಯೇ? ಹಾಗಿದ್ರೆ ಅದರ ಪ್ರಯೋಜನ ತಿಳಿಯಿರಿ

3. ಹೃದಯದ ಆರೋಗ್ಯದ ವಿಷಯಕ್ಕೆ ಬಂದಾಗ, ಅನೇಕ ಅಂಶಗಳು ಕಾರ್ಯರೂಪಕ್ಕೆ ಬರುತ್ತವೆ, ಆದರೆ ಅತ್ಯಂತ ಮುಖ್ಯವಾದ ಅಂಶವೆಂದರೆ ನೀವು ದಿನಕ್ಕೆ ಎಷ್ಟು ಸಮಯವನ್ನು ಕುಳಿತುಕೊಂಡು ಕಳೆಯುತ್ತೀರಿ ಎಂಬುದಾಗಿದೆ. ಕಂಪ್ಯೂಟರ್ ಪರದೆಯ ಮುಂದೆ ನೀವು ಪ್ರತಿದಿನ ಗಂಟೆಗಟ್ಟಲೆ ಕಳೆಯುತ್ತಿದ್ದರೆ, ಹೃದಯ ರಕ್ತನಾಳದ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ನಿಮ್ಮ ಅಪಾಯವನ್ನು ಹೆಚ್ಚಿಸಬಹುದು.

ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತು ಕೊಳ್ಳುವವರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಅಂತಹ ಸನ್ನಿವೇಶದಲ್ಲಿ, ನೀವು ಕುಳಿತು ಕೊಂಡ ಜಾಗದಿಂದ ಎದ್ದು ಅಲ್ಲೇ ಗಂಟೆಗೆ 5 ನಿಮಿಷಗಳ ಕಾಲ ಎದ್ದು ಸುತ್ತಾಡುವುದು ಬಹಳ ಮುಖ್ಯ.
Published by:Pavana HS
First published: