Sleep: ರಾತ್ರಿ ಮಲಗಿದ ಮೇಲೆ ಆಗಾಗ ಎಚ್ಚರವಾಗ್ತಿದ್ಯಾ? ಚಿಂತಿಸಬೇಡಿ, ನಿಮ್ಮ ಮೆಮೊರಿ ಪವರ್ ಹೆಚ್ಚಾಗ್ತಿದೆಯಂತೆ

ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನ ಹೇಳುವಂತೆ ನಿಮ್ಮನ್ನು ರಾತ್ರಿಯಿಡೀ ಎಚ್ಚರಗೊಳ್ಳುವಂತೆ ಮಾಡುವುದು, ಒತ್ತಡದ ಟ್ರಾನ್ಸ್‌ಮೀಟರ್ ನೊರಾಡ್ರಿನಾಲಿನ್ ಆಗಿದೆ. ಇನ್ನು ಇದರ ಇನ್ನೊಂದು ಧನಾತ್ಮಕ ಅಂಶವೆಂದರೆ ಇದೇ ನೊರಾಡ್ರಿನಲ್ ನಿಯಮಿತವಾದ, ಉತ್ತಮ ನಿದ್ದೆಯನ್ನು ನೀವು ಮಾಡಿರುವಿರಿ ಎಂಬುದನ್ನೂ ಸೂಚಿಸುತ್ತದೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹೆಚ್ಚಿನವರು ಯಾವುದೇ ಕಿರಿಕಿರಿ ಇಲ್ಲದೆ ರಾತ್ರಿ ನಿದ್ರೆಯನ್ನು (Sleep) ಮಾಡಬೇಕು ಎಂದು ಬಯಸುತ್ತಾರೆ. ಮಧ್ಯರಾತ್ರಿ ಎಚ್ಚರವಾದರೆ ನಂತರ ನಿದ್ರೆ ಬರಲು ಬಹಳಷ್ಟು ಸಮಯ ತಗುಲುತ್ತದೆ ಇದರಿಂದ ಉಂಟಾಗುವ ಕಿರಿಕಿರಿ ಅಷ್ಟಿಷ್ಟಲ್ಲ. ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ (University of Copenhagen) ಹೊಸ ಅಧ್ಯಯನ ಹೇಳುವಂತೆ ನಿಮ್ಮನ್ನು ರಾತ್ರಿಯಿಡೀ ಎಚ್ಚರಗೊಳ್ಳುವಂತೆ ಮಾಡುವುದು, ಒತ್ತಡದ ಟ್ರಾನ್ಸ್‌ಮೀಟರ್ ನೊರಾಡ್ರಿನಾಲಿನ್ (Noradrenaline) ಆಗಿದೆ. ಇನ್ನು ಇದರ ಇನ್ನೊಂದು ಧನಾತ್ಮಕ ಅಂಶವೆಂದರೆ ಇದೇ ನೊರಾಡ್ರಿನಲ್ ನಿಯಮಿತವಾದ, ಉತ್ತಮ ನಿದ್ದೆಯನ್ನು ನೀವು ಮಾಡಿರುವಿರಿ ಎಂಬುದನ್ನೂ ಸೂಚಿಸುತ್ತದೆ. ಅಧ್ಯಯನದ (Study) ಭಾಗವಾಗಿರುವ ತಜ್ಞರು ಹೇಳುವಂತೆ ನೊರಾಡ್ರಿನಾಲಿನ್ 100 ಕ್ಕಿಂತ ಹೆಚ್ಚು ಬಾರಿ ರಾತ್ರಿ ಎಚ್ಚರಗೊಳ್ಳುವಂತೆ ಮಾಡುತ್ತದೆಯಂತೆ. 

100 ಕ್ಕೂ ಹೆಚ್ಚು ಬಾರಿ ಎಚ್ಚರಗೊಳ್ಳುವಂತೆ ಮಾಡುತ್ತದೆ


ಈ ಎಚ್ಚರಗೊಳ್ಳುವಿಕೆ ಸಂಭವಿಸುವುದೇ ಸಾಮಾನ್ಯ ನಿದ್ದೆಯ ಸಮಯದಲ್ಲಿ ಎಂಬುದನ್ನು ಒತ್ತಿ ಹೇಳಿದ್ದಾರೆ. ತಾಂತ್ರಿಕವಾಗಿ ಪ್ರತಿ ರಾತ್ರಿ 100 ಕ್ಕೂ ಹೆಚ್ಚು ಬಾರಿ ಎಚ್ಚರಗೊಳ್ಳಲು ನೊರಾಡ್ರಿನಲ್ ಕಾರಣವಾಗುತ್ತದೆ ಅದಾಗ್ಯೂ ಇದು ಎಚ್ಚರಗೊಳ್ಳುವುದು ಎಂಬ ಕಲ್ಪನೆಗೆ ಪರಿಗಣಿತವಾಗುವುದಿಲ್ಲ ಎಂಬುದು ಅಧ್ಯಯನ ತಜ್ಞರ ಅನಿಸಿಕೆಯಾಗಿದೆ.

ನರವೈಜ್ಞಾನಿಕವಾಗಿ ನೀವು ಎಚ್ಚರಗೊಳ್ಳುತ್ತೀರಿ ಈ ಕ್ಷಣಗಳಲ್ಲಿ ನಿಮ್ಮ ಮೆದುಳಿನ ಚಟುವಟಿಕೆಯು ನೀವು ಎಚ್ಚರಗೊಂಡಿದ್ದಾಗ ಇರುವಂತೆಯೇ ಇರುತ್ತದೆ. ಈ ಕ್ಷಣ ತುಂಬಾ ಅಲ್ಪಕಾಲದ್ದಾಗಿರುತ್ತದೆ ಹಾಗಾಗಿ ನಿದ್ರಿಸುವವರು ಇದನ್ನು ಗಮನಿಸುವುದಿಲ್ಲ ಎಂಬುದಾಗಿ ಪಿಎಚ್‌ಡಿ ವಿದ್ಯಾರ್ಥಿ ಮಿ ಆಂಡರ್ಸನ್ ವಿವರಿಸುತ್ತಾರೆ.

ನೊರಾಡ್ರೆನಾಲಿನ್ ಎಂದರೇನು?


ನೊರಾಡ್ರೆನಾಲಿನ್ ಒತ್ತಡದ ಹಾರ್ಮೋನು ಹಾಗೂ ಟ್ರಾನ್ಸ್‌ಮಿಟರ್ (ವಿದ್ಯುತ್ಕಾಂತೀಯ ತಂಗಗಳನ್ನು ಉತ್ಪಾದಿಸಲು ಹಾಗೂ ರವಾನಿಸಲು ಬಳಸುವ ಉಪಕರಣಗಳ ಸೆಟ್) ವಸ್ತುವಾಗಿದೆ ಅಂದರೆ ಇದು ದೇಹದ ಹೋರಾಟ ಹಾಗೂ ಪಲಾಯನವಾದ ಪ್ರಕ್ರಿಯೆಯೊಂದಿಗೆ ಸಂಬಂಧಿಸಿದೆ. ಒತ್ತಡದ ಸಮಯದಲ್ಲಿ ಈ ಮಟ್ಟಗಳು ಹೆಚ್ಚಾಗಬಹುದು ಆದರೆ ನಿಮಗೆ ಗಮನ ಹರಿಸಲು ಕೂಡ ಇದು ಸಹಕಾರಿಯಾಗಿದೆ.

ಇದನ್ನೂ ಓದಿ: Migraine: ಪದೇ ಪದೇ ಕಾಡೋ ಮೈಗ್ರೇನ್​ಗೆ ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ

ಒತ್ತಡದ ಟ್ರಾನ್ಸ್‌ಮೀಟರ್ ನೊರಾಡ್ರೆನಾಲಿನ್ ನಿದ್ರೆಯ ತರಂಗಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ


ಅಧ್ಯಯನದ ನೇತೃತ್ವ ವಹಿಸಿರುವ ಪ್ರೊಫೆಸರ್ ಮೈಕೆನ್ ನೆಡರ್‌ಗಾರ್ಡ್, ನಾವು ನಿದ್ರಿಸುವಾಗ ಮೆದುಳಿನಲ್ಲಿ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೊಸ ಸಂಶೋಧನೆಯು ತಿಳಿಸುತ್ತದೆ. ನಿದ್ರೆಯು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಹಿಂದಿನ ದಿನ ನಾವು ಕಲಿತದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಅನುವು ಮಾಡಿಕೊಡುತ್ತದೆ. ನಿದ್ರೆಯ ಉಲ್ಲಾಸ ಭಾಗವು ನೊರಾಡ್ರಿನಾಲ್ ಅಲೆಗಳಿಂದ ನಡೆಸಲ್ಪಡುತ್ತವೆ

ಹಿಂದಿನ ಸಂಶೋಧನೆಯು ಒತ್ತಡಕ್ಕೆ ಸಂಬಂಧಿಸಿದ ನೊರಾಡ್ರಿನಾಲಿನ್ ನಿದ್ರೆಯ ಸಮಯದಲ್ಲಿ ನಿಷ್ಕ್ರಿಯವಾಗಿರುತ್ತದೆ ಎಂದು ಸೂಚಿಸಿದೆ. ಆದ್ದರಿಂದ, ನಿದ್ರೆಯ ಸಮಯದಲ್ಲಿ ನೊರಾಡ್ರಿನಾಲಿನ್ ನಿಜವಾಗಿಯೂ ಎಷ್ಟು ಸಕ್ರಿಯವಾಗಿದೆ ಎಂಬುದನ್ನು ಕಂಡು ಸಂಶೋಧಕರು ಆಶ್ಚರ್ಯಚಕಿತರಾದರು. ಹೊಸ ಅಧ್ಯಯನದಲ್ಲಿ ತಿಳಿಸಿರುವಂತೆ ನಾವು ನಿದ್ರಿಸಿರುವ ಸಮಯದಲ್ಲಿ ನೊರಾಡ್ರಿನಾಲಿನ್ ಮಟ್ಟವು ನಿರಂತರವಾಗಿ ಹೆಚ್ಚುತ್ತಿದೆ ಹಾಗೂ ತರಂಗ ಮಾದರಿಯಲ್ಲಿ ಕಡಿಮೆಯಾಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಹೆಚ್ಚಿನ ಮಟ್ಟದ ನೊರಾಡ್ರಿನಾಲಿನ್ ಸಮಯದಲ್ಲಿ ಮೆದುಳು ಎಚ್ಚರವಾಗಿರುತ್ತದೆ ಕಡಿಮೆ ನೊರಾಡ್ರಿನಾಲಿನ್ ಎಂದರೆ ನಿದ್ರಿಸುತ್ತೀರಿ ಎಂದಾಗಿದೆ. ನೊರಾಡ್ರಿನಾಲಿನ್ ಮಟ್ಟಗಳಲ್ಲಿ ಎಚ್ಚರ ಮಟ್ಟವು ಸಂಪರ್ಕಿತವಾಗಿದೆ ಹಾಗೂ ನಿರಂತರವಾಗಿ ಬದಲಾಗುತ್ತಿದೆ.

ಸಂಶೋಧಕರು ಯಾವ ರೀತಿಯ ಸಂಶೋಧನೆಯನ್ನು ಕೈಗೊಂಡರು?


ಗಾಜಿನಿಂದ ಮಾಡಿದ ಮೈಕ್ರೋಸ್ಕೋಪಿಕ್ ಆಪ್ಟಿಕಲ್ ಫೈಬರ್‌ಗಳು ಮತ್ತು ತಳೀಯವಾಗಿ ಕುಶಲತೆಯಿಂದ ಮಾಡಲಾದ 'ಲೈಟ್ ರಿಸೆಪ್ಟರ್‌ಗಳನ್ನು ಪ್ರಯೋಗಾರ್ಥ ಬಳಸಲಾದ ಇಲಿಗಳ ಮೆದುಳಿಗೆ ಸೇರಿಸಲಾಯಿತು. ಎಲ್‌ಇಡಿ ಲೈಟ್ ಸೇರಿದಂತೆ ಆಪ್ಟಿಕಲ್ ಫೈಬರ್‌ಗಳನ್ನು ಕೇಬಲ್‌ಗಳಿಗೆ ಜೋಡಿಸಲಾಯಿತು.

ಇದನ್ನೂ ಓದಿ:  Sleeping Problem: ನಿದ್ರಾಹೀನತೆ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ರೆ ಈ ಸಲಹೆಗಳನ್ನು ಪಾಲಿಸಿ

ಇಲಿಗಳು ಮಲಗಿರುವಾಗ ನೊರಾಡ್ರಿನಾಲಿನ್‌ ಮಟ್ಟವನ್ನು ಅಳೆಯುತ್ತಾರೆ ಮತ್ತು ಅವುಗಳ ಮಿದುಳಿನ ವಿದ್ಯುತ್ ಚಟುವಟಿಕೆಗೆ ಹೋಲಿಸಿದರು. ಸಂಶೋಧಕರು ಈ ಸಮಯದಲ್ಲಿ ಹೆಚ್ಚಿನ ಮಟ್ಟದ ನೊರಾಡ್ರಿನಾಲಿನ್ ಅನ್ನು ಗುರುತಿಸಿದರು.

ಇಲಿಗಳು ಸೂಪರ್ ಮೆಮೊರಿ ಅಭಿವೃದ್ಧಿಪಡಿಸಿದವು


ಹಲವಾರು ವಿಧಗಳಲ್ಲಿ ನಿದ್ರೆಯು ನಮಗೆ ಸಹಕಾರಿಯಾಗಿದೆ. ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕುವ ಕೆಲಸವನ್ನು ನಿದ್ರೆ ಮಾಡುತ್ತದೆ. ಆಲ್ಝೈಮರ್ನ ತಡೆಗಟ್ಟುವಿಕೆ ಮತ್ತು ನಮ್ಮ ಸ್ಮರಣೆಯನ್ನು ಸುಧಾರಿಸುತ್ತದೆ. ಅಧ್ಯಯನವು ಇದೇ ಉದ್ದೇಶವನ್ನಿರಿಸಿಕೊಂಡು ಇಲಿಗಳ ಮೇಲೆ ಸಂಶೋಧನೆಯನ್ನು ನಡೆಸಿದವು.

ಹೆಚ್ಚು ನೊರಾಡ್ರಿನಾಲಿನ್ ಮಟ್ಟಗಳನ್ನು ಹೊಂದಿರುವ ಇಲಿಗಳು ಅತ್ಯುತ್ತಮ ಸ್ಮರಣೆಯನ್ನು ಹೊಂದಿವೆ ಎಂಬುದನ್ನು ಸಂಶೋಧಕರು ಕಂಡುಕೊಂಡರು. ಸೂಪರ್ ಮೆಮೊರಿಯನ್ನು ಇಲಿಗಳು ಅಭಿವೃದ್ಧಿಪಡಿಸಿಕೊಂಡವು. ಅಂತೆಯೇ ನೊರಾಡ್ರಿನಾಲಿನ್ ಡೈನಾಮಿಕ್ ನಮ್ಮ ಸ್ಮರಣೆಯ ಮೇಲೆ ಪರಿಣಾಮ ಬೀರುವ ನಿದ್ರೆಯ ಪ್ರಕ್ರಿಯೆಗಳನ್ನು ಬಲಪಡಿಸುತ್ತದೆ ಎಂದು ಇದು ಸೂಚಿಸುತ್ತದೆ

ಖಿನ್ನತೆ ಶಮನಕಾರಿಗಳು ನೊರಾಡ್ರಿನಾಲಿನ್ ಬಳಕೆಯ ಕುರಿತು ಸಂಶೋಧನೆಗಳು


ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಖಿನ್ನತೆ ಶಮನಕಾರಿಗಳಿಗೂ ನೊರಾಡ್ರಿನಾಲಿನ್‌ಗೂ ಸಂಬಂಧವಿದೆಯೇ ಎಂಬ ಅಂಶಕ್ಕೂ ಹೊಸ ಅಧ್ಯಯನ ಒತ್ತು ನೀಡಿದೆ. ಖಿನ್ನತೆ-ಶಮನಕಾರಿಗಳು ದೇಹದಲ್ಲಿ ನೊರಾಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸುತ್ತವೆ ಹಾಗಾಗಿ ಸ್ಮರಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ.

ಇದನ್ನೂ ಓದಿ: Rice: ಮಧುಮೇಹ, ಪಿಸಿಒಎಸ್ ಸಮಸ್ಯೆ ಇದ್ದವರು ಅನ್ನ ಸೇವಿಸಬಹುದೇ? ಏನಂತಾರೆ ತಜ್ಞರು

ಅದಕ್ಕಾಗಿಯೇ ದೇಹದಲ್ಲಿ ನೊರಾಡ್ರಿನಾಲಿನ್ ಮಟ್ಟವನ್ನು ನಿಯಂತ್ರಿಸುವ ವಿವಿಧ ರೀತಿಯ ಔಷಧಿಗಳು ನಮ್ಮ ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ನಾವು ಗಮನ ಹರಿಸಬೇಕು. ಅಂತೆಯೇ ನಿದ್ರೆಯ ಸಮಯದಲ್ಲಿ ನೊರಾಡ್ರಿನಾಲಿನ್ ಅಲೆಗಳ ಮೇಲೆ ಪರಿಣಾಮ ಬೀರದ ಔಷಧಿಗಳನ್ನು ಅಭಿವೃದ್ಧಿಪಡಿಸಲು ನಾವು ಪ್ರಯತ್ನಿಸಬೇಕು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
Published by:Ashwini Prabhu
First published: