Sleeping Problem: ರಾತ್ರಿ ನಿದ್ದೆ ಬರಲ್ವಾ? ಹಾಗಿದ್ರೆ ಉತ್ತಮ ನಿದ್ದೆ ಮಾಡಲು ಈ ಪದಾರ್ಥ ಸೇವನೆ ಮಾಡಿ

ಉತ್ತಮ ಮತ್ತು ಗಾಢ ನಿದ್ದೆ ಮಾಡದೇ ಹೋದರೆ ಹಲವು ಆರೋಗ್ಯ ತೊಂದರೆಗಳಿಗೆ ವ್ಯಕ್ತಿ ಗುರಿಯಾಗುತ್ತಾನೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿದ್ರಿಸಲು ತೊಂದರೆ ಇರುವ ಜನರ ಸ್ವಭಾವದಲ್ಲಿ ಕಿರಿಕಿರಿ ಭಾವನೆ ಉಂಟಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ದಿನಗಳಲ್ಲಿ (Now a Days)  ಜನರಲ್ಲಿ (People) ನಿದ್ರಾಹೀನತೆ (Sleeping Disorder) ಸಮಸ್ಯೆ (Problem) ಹೆಚ್ಚು ಕಾಡುತ್ತಿದೆ. ಅದಕ್ಕೆ ಕಾರಣ ಹಲವಾರು ಇರಬಹುದು. ಕೆಲವರು ಆರೋಗ್ಯ (Health) ತೊಂದರೆಗಳಿಂದ ನಿದ್ರಾಹೀನತೆ ಅನುಭವಿಸುತ್ತಾರೆ. ಕೆಲವರು ರಾತ್ರಿ ಹೆಚ್ಚು ಸಮಯದವರೆಗೆ ಮೊಬೈಲ್ ನೋಡುತ್ತಾರೆ. ಇನ್ನು ಕೆಲವರು ಆಫೀಸಿನಲ್ಲಿ ತಡರಾತ್ರಿಯವರೆಗೆ ಕೆಲಸದಲ್ಲಿ ನಿರತರಾಗಿರ್ತಾರೆ. ಹೀಗಾಗಿ ನಿದ್ದೆ ಬಾರದೇ, ಅಥವಾ ನಿದ್ದೆ ಮಾಡಲು ಸಾಧ್ಯ ಆಗುವುದಿಲ್ಲ. ಅದಾಗ್ಯೂ ಬಹುತೇಕ ಜನರು ನಿದ್ದೆಯಿಲ್ಲದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಸರಿಯಾದ ನಿದ್ದೆ ಮಾಡದೇ ಹೋದರೆ ಬೆಳಗಿನ ಜಾವ ಏಳಲು ಆಲಸ್ಯ ಉಂಟಾಗಿ, ಬೆಳಗಿನ ಕೆಲಸಗಳಿಗೆ ತೊಂದರೆ ಉಂಟು ಮಾಡುತ್ತದೆ.

  ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೂ ಪರಿಣಾಮ

  ಉತ್ತಮ ಮತ್ತು ಗಾಢ ನಿದ್ದೆ ಮಾಡದೇ ಹೋದರೆ ಹಲವು ಆರೋಗ್ಯ ತೊಂದರೆಗಳಿಗೆ ವ್ಯಕ್ತಿ ಗುರಿಯಾಗುತ್ತಾನೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿದ್ರಿಸಲು ತೊಂದರೆ ಇರುವ ಜನರ ಸ್ವಭಾವದಲ್ಲಿ ಕಿರಿಕಿರಿ ಭಾವನೆ ಉಂಟಾಗುತ್ತದೆ. ದಿನವಿಡೀ ಶಕ್ತಿಯ ಕೊರತೆ ಎದ್ದು ಕಾಣುತ್ತದೆ.

  ಕೆಲಸ ಮಾಡಲು ಸಾಧ್ಯವಾಗದ ಆಲಸ್ಯ ಮೈದೋರುವುದು

  ಯಾವುದೇ ಕೆಲಸ ಮಾಡಲು ಮನಸ್ಸು ಬರಲ್ಲ. ಹಾಗಾಗಿ ಆರೋಗ್ಯದಿಂದ ಇರಲು ಆಹಾರದ ಜೊತೆಗೆ, ಸಾಕಷ್ಟು ನಿದ್ರೆ ಮಾಡುವುದು ತುಂಬಾ ಅವಶ್ಯಕ. ಇಂದು ನಾವು ಇಲ್ಲಿ ನಿಮ್ಮ ನಿದ್ದೆಯನ್ನು ಪ್ರಚೋದಿಸುವ ಆಹಾರ ಪದಾರ್ಥಗಳ ಬಗ್ಗೆ ನೋಡೋಣ.

  ಇದನ್ನೂ ಓದಿ: ಥೈರಾಯ್ಡ್ ರೋಗಿಗಳಿಗೆ ಈ ರೀತಿಯ ಆಹಾರ ಸೇವನೆ ಸೂಕ್ತ! ಮಿಸ್ ಮಾಡಬೇಡಿ

  ಈ ಪದಾರ್ಥಗಳ ಸೇವನೆ ನಿಮಗೆ ಉತ್ತಮ ಮತ್ತು ಆಳವಾದ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಇವುಗಳನ್ನು ತಿಂದು ಮಲಗಿದರೆ ನಿದ್ದೆಯ ಸಮಸ್ಯೆ ದೂರವಾಗುತ್ತದೆ.

  ಒಳ್ಳೆಯ ನಿದ್ರೆ ಮಾಡಲು ಮಲಗುವ ಮುನ್ನ ಯಾವ ಪದಾರ್ಥಗಳನ್ನು ಸೇವನೆ ಮಾಡಬೇಕು?

  ಹಾಲು ಸೇವನೆ

  ಒಳ್ಳೆಯ ನಿದ್ದೆ ಮಾಡಲು ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲು ಕುಡಿಯಬೇಕು. ಹಾಲಿನಲ್ಲಿ ಟ್ರಿಪ್ಟೊಫಾನ್ ಮತ್ತು ಸಿರೊಟೋನಿನ್ ಇದೆ. ಹೀಗಾಗಿ ಇದರಿಂದ ರಾತ್ರಿ ಹಾಲು ಕುಡಿದ ನಂತರ ಚೆನ್ನಾಗಿ ನಿದ್ದೆ ಬರುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಒತ್ತಡ ನಿವಾರಿಸುತ್ತದೆ.

  ಬಾಳೆಹಣ್ಣು ಸೇವನೆ

  ರಾತ್ರಿ ಬಾಳೆಹಣ್ಣು ಸೇವನೆ ಮಾಡುವುದು ಒಳ್ಳೆಯ ನಿದ್ದೆ ಮಾಡಲು ಪ್ರಚೋದನೆ ನೀಡುತ್ತದೆ.  ಬಾಳೆಹಣ್ಣಿನಲ್ಲಿ ಕಂಡು ಬರುವ ಅಂಶಗಳು ಸ್ನಾಯುಗಳನ್ನು ಒತ್ತಡದಿಂದ ಮುಕ್ತವಾಗಿರಿಸುತ್ತದೆ. ಬಾಳೆಹಣ್ಣಿನಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ.

  ಬಾದಾಮಿ ಸೇವನೆ

  ಬಾದಾಮಿಯಲ್ಲಿ ಸಾಕಷ್ಟು ಮೆಗ್ನೀಸಿಯಮ್ ಅಂಶ ಇದೆ. ಇದು ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ. ಬಾದಾಮಿ ಸೇವನೆ ಮಾಡುವುದು ನೆಮ್ಮದಿಯ ನಿದ್ದೆಗೆ ಸಹಾಯ ಮಾಡುತ್ತದೆ.

  ಹರ್ಬಲ್ ಟೀ ಸೇವನೆ

  ನಿಮಗೆ ನಿದ್ರೆಯ ಸಮಸ್ಯೆ ಇದ್ದರೆ ನೀವು ಕೆಫೀನ್ ಮತ್ತು ಆಲ್ಕೋಹಾಲ್ ತ್ಯಜಿಸಬೇಕು. ನೀವು ಹರ್ಬಲ್ ಟೀಯನ್ನು ರಾತ್ರಿಯಲ್ಲಿ ಕುಡಿದರೆ ಅದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಪ್ರಚೋದನೆ ನೀಡುತ್ತದೆ.

  ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿದೆ ಗ್ರೀನ್ ಡೇಟಿಂಗ್ ಟ್ರೆಂಡ್, ಏನಿದು ಹೊಸದು?

  ಚೆರ್ರಿ ಸೇವನೆ

  ಚೆರ್ರಿಗಳು ಉತ್ತಮ ಪ್ರಮಾಣದ ಮೆಲಟೋನಿನ್ ನ್ನು ಹೊಂದಿವೆ. ಇದು ದೇಹದ ಆಂತರಿಕ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಮಲಗುವ ಮುನ್ನ ಒಂದು ಹಿಡಿ ಚೆರ್ರಿ ಹಣ್ಣು ಸೇವನೆ ಮಾಡುವುದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ. ನೀವು ಚೆರ್ರಿ ರಸ ಸಹ ಕುಡಿಯಬಹುದು.
  Published by:renukadariyannavar
  First published: