Good Habits: ಅಲಾರಂ ಇಲ್ಲದೇ ಬೆಳಿಗ್ಗೆ ಬೇಗ ಏಳ್ಬೇಕಾ? ಈ 3 ಅಭ್ಯಾಸ ರೂಢಿಸಿಕೊಳ್ಳಿ ಸಾಕು

ನೀವು ಬೆಳಿಗ್ಗೆ ಬೇಗನೆ ಎದ್ದಾಗ, ವ್ಯಾಯಾಮ ಮಾಡಲು, ಓದಲು, ಪೌಷ್ಟಿಕ ಉಪಾಹಾರವನ್ನು ತಯಾರಿಸಲು ಮತ್ತು ನಿಮ್ಮ ಆರೋಗ್ಯ ವೃದ್ದಿಗೆ ಸಮಯವನ್ನು ಪಡೆಯುತ್ತೀರಿ. ಸಾತ್ವಿಕ ಮೂಮೆಂಟ್ ನ ಸುಬಾಹ್ ಸರಾಫ್ ಜೈನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮೂಲಕ ಅಲಾರಂ ಇಲ್ಲದೆ ಬೇಗನೆ ಎಚ್ಚರಗೊಳ್ಳುವ ಕೆಲವು ಮಾರ್ಗಗಳನ್ನು ಹೇಳಿದ್ದಾರೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲವರು ರಾತ್ರಿ ಎಷ್ಟೇ ಬೇಗ ಮಲಗಿದರೂ (Sleep) ಸಹ ಬೆಳಿಗ್ಗೆ ಹಾಸಿಗೆಯಿಂದ ಮೇಲೆ ಎದ್ದೇಳುವುದು ಎಂದರೆ ಅವರಿಗೆ ತುಂಬಾ ಕಷ್ಟದ ಕೆಲಸ. ಆದರೆ ಅದೇ ಇನ್ನೂ ಕೆಲವರಿಗೆ ರಾತ್ರಿ ಎಷ್ಟೇ ತಡವಾಗಿ ಮಲಗಿದರೂ ಸಹ ಬೆಳಿಗ್ಗೆ (Morning) ಬೇಗನೆ ಎದ್ದೇಳುವುದು ಎಂದರೆ ತುಂಬಾನೇ ಸುಲಭವಾದ ಕೆಲಸವಾಗಿರುತ್ತದೆ. ಹೀಗೆ ಬೆಳಿಗ್ಗೆ ಏಳಲು ಕೆಲವರು ಅಲಾರಂ ಅನ್ನು (Alarm) ಸೆಟ್ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರಿಗೆ ಅವರು ಅನುಸರಿಸುತ್ತಿರುವ ದಿನಚರಿಯೇ (routine) ಅವರಿಗೆ ಬೆಳಿಗ್ಗೆ ಬೇಗನೆ ಏಳುವಂತೆ ಮಾಡುತ್ತದೆ. ಬೇಗನೆ ಏಳುವುದು ಎಲ್ಲಾ ಅಭ್ಯಾಸಗಳ ತಾಯಿ (Mother) ಎಂದು ಹೇಳಲಾಗುತ್ತದೆ. ಇಡೀ ರಾತ್ರಿ ಎಚ್ಚರವಾಗಿರುವ ಜನರು ಇದನ್ನೆಲ್ಲಾ ಒಪ್ಪುವುದಿಲ್ಲ.

ವಾಸ್ತವದಲ್ಲಿ, ನೀವು ಬೆಳಿಗ್ಗೆ ಬೇಗನೆ ಎದ್ದಾಗ ಅಡೆನೋಸಿನ್ ಹೆಚ್ಚು ವೇಗವಾಗಿ ಬೆಳೆಯುತ್ತದೆ ಮತ್ತು ಇದು ಸಂಜೆಯ ನಂತರ ನಿಮಗೆ ಮಂಪರು ಅನುಭವಿಸುವಂತೆ ಮಾಡುತ್ತದೆ.

ಎಷ್ಟು ಗಂಟೆಗಳ ಕಾಲ ನಿದ್ದೆ ಆರೋಗ್ಯಕ್ಕೆ ಒಳ್ಳೆಯದು
ಬೇಗನೆ ಮಲಗಲು ಹೋಗುವುದರಿಂದ ನೀವು ನಾಲ್ಕರಿಂದ ಆರು ಗಂಟೆಗಳ ನಿದ್ರೆಯನ್ನು ಸುಗಮವಾಗಿ ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಇದು ಮರುದಿನ ನಿಮಗೆ ಉಲ್ಲಾಸ ಮತ್ತು ಪುನರುಜ್ಜೀವನವನ್ನು ನೀಡುತ್ತದೆ. ಇದು ನಿಜವಾಗಿಯೂ ಆರೋಗ್ಯಕರ ಜೀವನವನ್ನು ನಡೆಸಲು ನಿಮಗೆ ಸಹಾಯ ಮಾಡುತ್ತದೆ.

ನೀವು ಬೆಳಿಗ್ಗೆ ಬೇಗನೆ ಎದ್ದಾಗ, ವ್ಯಾಯಾಮ ಮಾಡಲು, ಓದಲು, ಪೌಷ್ಟಿಕ ಉಪಾಹಾರವನ್ನು ತಯಾರಿಸಲು ಮತ್ತು ನಿಮ್ಮ ಆರೋಗ್ಯ ವೃದ್ದಿಗೆ ಸಮಯವನ್ನು ಪಡೆಯುತ್ತೀರಿ. ಸಾತ್ವಿಕ ಮೂಮೆಂಟ್ ನ ಸುಬಾಹ್ ಸರಾಫ್ ಜೈನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮೂಲಕ ಅಲಾರಂ ಇಲ್ಲದೆ ಬೇಗನೆ ಎಚ್ಚರಗೊಳ್ಳುವ ಕೆಲವು ಮಾರ್ಗಗಳನ್ನು ಹೇಳಿದ್ದಾರೆ ನೋಡಿ.



perfect alarm tone for waking Heres what it should sound like
ಸಾಂದರ್ಭಿಕ ಚಿತ್ರ


1. ತಂತ್ರಜ್ಞಾನವನ್ನು ನಿಲ್ಲಿಸುವ ಸಮಯವನ್ನು ನಿಗದಿಪಡಿಸಿ
ನಿಮ್ಮ ಮನಸ್ಸನ್ನು ನಿಷ್ಕ್ರಿಯಗೊಳಿಸಲು ಮತ್ತು ಎಲ್ಲಾ ಶಬ್ದವನ್ನು ದೂರವಿಡಲು ಒಂದು ಅದ್ಭುತ ವಿಧಾನವೆಂದರೆ ತಂತ್ರಜ್ಞಾನದಿಂದ ಸಂಪರ್ಕ ಕಡಿದುಕೊಳ್ಳುವುದು.

ಇದನ್ನೂ ಓದಿ:  Headache Problem: ತಲೆನೋವಿನಿಂದ ಪರಿಹಾರ ಪಡೆಯಲು ಪರಿಣಾಮಕಾರಿ ಮಾರ್ಗಗಳು ಯಾವವು?

ರಾತ್ರಿ 8 ಗಂಟೆಯಾಗಿರಲಿ ಅಥವಾ ರಾತ್ರಿ 9 ಗಂಟೆಯಾಗಿರಲಿ, ನಿಮಗಾಗಿ ಒಂದು ಸಮಯವನ್ನು ನಿಗದಿಪಡಿಸಿಕೊಳ್ಳಿ, ಅದರ ನಂತರ ನೀವು ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಎಲ್ಲಾ ಗ್ಯಾಜೆಟ್ ಗಳಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಳಿಸುತ್ತೀರಿ. ಇದು ನಿಮಗೆ ಬೇಗನೆ ನಿದ್ರೆ ಮಾಡಲು ಮತ್ತು ಬೇಗನೆ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ.

2. ರಾತ್ರಿ ಊಟ ಮಿತವಾಗಿರಲಿ
ನೀವು ಬೆಳಿಗ್ಗೆ ಹೊಟ್ಟೆ ತುಂಬಾ ಉಪಾಹಾರ ಮಾಡಿ, ರಾತ್ರಿ ಹೊತ್ತಿನಲ್ಲಿ ತುಂಬಾನೇ ಮಿತವಾಗಿ ಆಹಾರ ಸೇವಿಸುವುದು ಒಳ್ಳೆಯದು. ಮಿತವಾಗಿ ಸೇವಿಸುವ ರಾತ್ರಿ ಊಟ ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ, ತನ್ಮೂಲಕ ನಿಮಗೆ ಉತ್ತಮ ನಿದ್ರೆ ಬರುತ್ತದೆ ಮತ್ತು ಅಸಿಡಿಟಿ ಅಥವಾ ಅಜೀರ್ಣದಂತಹ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಸೂಪ್ ಅಥವಾ ಸಲಾಡ್ ಅನ್ನು ಸೇವಿಸುವುದು ನಿಮಗೆ ಬೆಳಿಗ್ಗೆ ಬೇಗ ಏಳಲು ಸಹಾಯ ಮಾಡುತ್ತದೆ.

ಅದೇ ಸಮಯದಲ್ಲಿ, ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ನೀವು ನೀವು ಊಟವನ್ನು ಬಿಟ್ಟುಬಿಡಬಾರದು. ತುಂಬಾ ಊಟ ಮಾಡಿದರೆ ದೀರ್ಘ ಜೀರ್ಣಕ್ರಿಯೆ ಪ್ರಕ್ರಿಯೆ ಹೆಚ್ಚು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದರಿಂದಾಗಿ ದೀರ್ಘ ನಿದ್ರೆಯ ಗಂಟೆಗಳು ಬೇಕಾಗುತ್ತವೆ.

3. ಒಂದು ನಿರ್ದಿಷ್ಟವಾದ ದಿನಚರಿಯನ್ನು ಫಾಲೋ ಮಾಡಿ
ನೀವು ನಿಜವಾಗಿಯೂ ಬೇಗನೆ ಎದ್ದೇಳಲು ಬಯಸಿದರೆ ಇದು ಮಾಡಬೇಕಾದ ಅತ್ಯಂತ ಪ್ರಮುಖ ವಿಷಯವಾಗಿದೆ. ತಜ್ಞರು "ಬೇಗನೆ ಎದ್ದೇಳಲು ಬಲವಾದ ಕಾರಣವನ್ನು ರಚಿಸಿಕೊಳ್ಳಿ.

ಇದನ್ನೂ ಓದಿ:  Work Stress: ಕೆಲಸದ ಒತ್ತಡದಿಂದ ಬೇಸತ್ತಿದ್ದೀರಾ? ಈ ರೀತಿ ಮಾಡಿದ್ರೆ ನೀವು ನಿರಾಳರಾಗ್ತೀರಿ!

ನೀವು ಬೇಗನೆ ಏಳಲು ದೃಢವಾದ ಕಾರಣವನ್ನು ಹೊಂದಿಲ್ಲದಿದ್ದರೆ, ನೀವು ಎಷ್ಟೇ ಪ್ರಯತ್ನಿಸಿದರೂ ನಿಮಗೆ ಎದ್ದೆಳಲು ಸಾಧ್ಯವಾಗುವುದಿಲ್ಲ. ನೀವು ರಚನಾತ್ಮಕ ಮತ್ತು ಸ್ಫೂರ್ತಿದಾಯಕ ಬೆಳಗಿನ ದಿನಚರಿಯನ್ನು ರಚಿಸಿದರೆ, ಅದು ಸ್ವತಃ ಪ್ರತಿದಿನ ನೀವು ಬೆಳಿಗ್ಗೆ ಬೇಗನೆ ಎದ್ದೇಳುವಂತೆ ಮಾಡುತ್ತದೆ.
Published by:Ashwini Prabhu
First published: