Weight Loss: ತೂಕ ಇಳಿಸಿಕೊಳ್ಳಲು ಪರದಾಡುತ್ತಿದ್ದೀರಾ? ಹಾಗಿದ್ರೆ ಇವರ ಕಥೆ ನಿಮಗೆ ಸ್ಪೂರ್ತಿಯಾಗಬಹುದು

ಈಗಂತೂ ನಾವು ನಮ್ಮ ದೇಹದಲ್ಲಿನ (Body) ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು (Weight Loss) ಇಂಟರ್ನೆಟ್ ನಲ್ಲಿರುವ ಬಹುತೇಕ ಎಲ್ಲಾ ಫಿಟ್ನೆಸ್ ವೆಬ್‌ಸೈಟ್ ಗಳನ್ನು ಹುಡುಕಾಡಿ, ತುಂಬಾನೇ ಮಾಹಿತಿಯನ್ನು ಕಲೆ ಹಾಕಿಕೊಂಡಿರುತ್ತೇವೆ. ಆದರೂ ಸಹ ನಮಗೆ ಹೀಗೆ ಮಾಡಿದರೆ ದೇಹದ ತೂಕ ಕಡಿಮೆ ಆಗುತ್ತದೆ ಅಂತ ನಿಖರವಾದ ಮಾಹಿತಿ ಸಿಕ್ಕಿರುವುದಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ನಾವು ನಮ್ಮ ದೇಹದಲ್ಲಿನ (Body) ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು (Weight Loss) ಇಂಟರ್ನೆಟ್ ನಲ್ಲಿರುವ ಬಹುತೇಕ ಎಲ್ಲಾ ಫಿಟ್ನೆಸ್ ವೆಬ್‌ಸೈಟ್ ಗಳನ್ನು ಹುಡುಕಾಡಿ, ತುಂಬಾನೇ ಮಾಹಿತಿಯನ್ನು ಕಲೆ ಹಾಕಿಕೊಂಡಿರುತ್ತೇವೆ. ಆದರೂ ಸಹ ನಮಗೆ ಹೀಗೆ ಮಾಡಿದರೆ ದೇಹದ ತೂಕ ಕಡಿಮೆ ಆಗುತ್ತದೆ ಅಂತ ನಿಖರವಾದ ಮಾಹಿತಿ ಸಿಕ್ಕಿರುವುದಿಲ್ಲ. ನಾವು ಫಿಟ್ನೆಸ್ (Fitness) ಯೋಜನೆಯನ್ನು ಪ್ರಾರಂಭಿಸಲು ಪ್ರೇರೇಪಿಸುವ ಅನೇಕ ಕಥೆಗಳು ನಮ್ಮಲ್ಲಿರುತ್ತವೆ, ಆದರೆ ಆ ಫಿಟ್ನೆಸ್ ಪ್ರಯಾಣವನ್ನು ಆರಂಭಿಸಿದ ನಂತರ ಅದನ್ನು ಬಿಡದೆ ಹಾಗೆಯೇ ಮುಂದುವರೆಸಿಕೊಂಡು ಹೋಗಿ ದೇಹದಲ್ಲಿನ ತೂಕವನ್ನು ಕಡಿಮೆ ಮಾಡಿಕೊಂಡಿರುವ ಕಥೆಗಳು ಸಿಗುವುದು ತೀರಾ ಕಡಿಮೆ ಅಂತ ಹೇಳಬಹುದು.

ಬನ್ನಿ ಹಾಗಾದರೆ ಇಲ್ಲಿ ಉಷಾ ಇಂಟರ್ನ್ಯಾಷನಲ್ ನ ಉಪಾಧ್ಯಕ್ಷೆಯಾದ ಅಮಿತಾ ಕಪೂರ್ ಅವರು ಅವರ ಫಿಟ್ನೆಸ್ ಪ್ರಯಾಣದ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಅಂತ ಕೇಳೋಣ.

ಫಿಟ್ನೆಸ್ ಅನ್ನು ಫಾಲೋ ಮಾಡುವ ಅಮಿತಾ ಅವರ ಕಥೆ ಕೇಳಿ
ಸುಮಾರು 5 ವರ್ಷಗಳ ಹಿಂದೆ ಇವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಫಿಟ್ ಆಗಿರಲು ಯೋಜನೆಯನ್ನು ಶುರು ಮಾಡಿದರಂತೆ. “ನಾನು ನಿಜವಾಗಿಯೂ ತುಂಬಾ ದಪ್ಪಗಿರಲಿಲ್ಲ, ಆದರೆ ನಾನು ತುಂಬಾ ಫಿಟ್ ಸಹ ಆಗಿರಲಿಲ್ಲ. ಆದರೆ ನಾನು ಹೊಸ ವರ್ಷವನ್ನು ತಲುಪುವ ಮೊದಲು ಫಿಟ್ ಆಗಿರಲು ಬಯಸಿ ಶೀಘ್ರದಲ್ಲಿಯೇ ನಾನು ಫಿಟ್ನೆಸ್ ಅನ್ನು ಸ್ವಯಂ-ಅಳವಡಿಸಿಕೊಳ್ಳಬೇಕು ಮತ್ತು ಅದು ರಾಜಿಯಾಗದ ಜೀವನ ವಿಧಾನವಾಗುವವರೆಗೆ ಆಂತರಿಕಗೊಳಿಸಬೇಕು ಎಂದು ಅರಿತುಕೊಂಡೆ. ಇದು ನೀವು ಆರು ತಿಂಗಳು ಅಥವಾ ಒಂದು ವರ್ಷದವರೆಗೆ ಮಾಡುವ ಕೆಲಸವಲ್ಲ ಮತ್ತು ನಂತರ ನೀವು ನಿಮ್ಮ ಅಪೇಕ್ಷಿತ ತೂಕ ಮತ್ತು ಗಾತ್ರವನ್ನು ತಲುಪಿದ ನಂತರ ನಿಲ್ಲಿಸುವುದಲ್ಲ” ಎಂದು ಅಮಿತಾ ಅವರು ಹೇಳಿದರು.

“ಇದು ನಿರಂತರ ಮತ್ತು ಸ್ಥಿರವಾಗಿರಬೇಕು, ಆರಂಭದಲ್ಲಿ ನನಗೆ ಸಾಮಾನ್ಯವಾಗಿ ಏನಾಯಿತೆಂದರೆ, ನಾನು ನನ್ನ ಸಾಪ್ತಾಹಿಕ ಗುರಿಯನ್ನು ತಲುಪಿದ ನಂತರ ಮತ್ತೆ ಸ್ವಲ್ಪ ಹೆಚ್ಚು ತಿಂಡಿಗಳನ್ನು ತಿನ್ನುವುದನ್ನು ಶುರು ಮಾಡಿದ್ದೆ. ಆದ್ದರಿಂದ ನನ್ನ ದೇಹದ ತೂಕ ಮತ್ತೆ ಹೆಚ್ಚಾಗುತ್ತಿತ್ತು ಮತ್ತು ನನ್ನ ಫಿಟ್ನೆಸ್ ಎಲ್ಲಾ ಹದಗೆಟ್ಟಿತ್ತು” ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಇದನ್ನೂ ಓದಿ:  Yoga for Fitness: ಕೇವಲ 10 ನಿಮಿಷ ಯೋಗ ಮಾಡಿ, ರೋಗದಿಂದ ದೂರ ಇರಿ!

ನಂತರ ನಾನು ನನ್ನ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಮತ್ತು ದೇಹದ ತೂಕವನ್ನು ಇಳಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ಸೋತಿದ್ದೇನೆ ಎಂದು ನಾನು ಭಾವಿಸಿದೆ ಎಂದು ಅಮಿತಾ ಹೇಳಿದರು. ನಂತರ ನಾನು ಒಬ್ಬ ಟ್ರೈನರ್ ಅನ್ನು ಪಡೆದು ಕೊಂಡೆ, ಅವರು ನನಗೆ ಮಿನಿ-ಬಿಂಜ್ ಊಟವನ್ನು ಅನುಮತಿಸಿದರು. ನಾನು ಅದನ್ನು ಹಿಂದೆ ಮಾಡಿದ ತಪ್ಪುಗಳನ್ನು ನೆನಪಿನಲ್ಲಿಟ್ಟುಕೊಂಡು ಅದನ್ನೇ ಕಟ್ಟುನಿಟ್ಟಾಗಿ ಅನುಸರಿಸಿದೆ ಎಂದು ಹೇಳಿದರು.

ನಿಯಮಿತವಾಗಿ ತಾಲೀಮು ಮಾಡುವುದು
ಜೀವನದಲ್ಲಿ ನಾನು ಸಹ ಯಾವಾಗಲೂ ಪ್ರಯೋಗ ಮತ್ತು ವೈವಿಧ್ಯತೆಯನ್ನು ಆನಂದಿಸುತ್ತೇನೆ. ಅದೇ ತತ್ವಶಾಸ್ತ್ರವು ನನ್ನ ಫಿಟ್ನೆಸ್ ಸ್ಪೇಸ್ ನಲ್ಲಿಯೂ ಸಹ ಅಳವಡಿಸಿಕೊಂಡೆ. ನಾನು ವಿವಿಧ ವ್ಯಾಯಾಮಗಳನ್ನು ಪ್ರಯತ್ನಿಸಿದೆ. ಪೈಲೇಟ್ಸ್, ಯೋಗ, ಜುಂಬಾ, ನಡಿಗೆ, ಓಟ ಹೀಗೆ ಎಲ್ಲವನ್ನೂ ನಾನು ಪ್ರಯತ್ನಿಸಿದೆ ಎಂದು ಅನಿತಾ ಹೇಳಿದರು.

ಇಂದು ನಾನು ಪೈಲೇಟ್ಸ್ ಮತ್ತು ಯೋಗ, ಜುಂಬಾ, ಏರೋಬಿಕ್ಸ್ ಮತ್ತು ಎಚ್ಐಐಟಿಯನ್ನು ಮಾಡುತ್ತೇನೆ, ನನ್ನ ಮನಸ್ಥಿತಿ ಏನು ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಇವುಗಳ ಮಿಶ್ರಣ ಮತ್ತು ಹೊಂದಾಣಿಕೆಯೇ ಕಳೆದ 3 ರಿಂದ 4 ವರ್ಷಗಳಲ್ಲಿ ನನ್ನನ್ನು ಫಿಟ್ ಆಗಿರಿಸುತ್ತಿದೆ. ವಿಶೇಷವಾಗಿ ಲಾಕ್ಡೌನ್ ಆದಾಗ ನಾವು ಮನೆಯಲ್ಲಿಯೇ ಇದ್ದಾಗ ತರಬೇತುದಾರರಿಂದ ಆನ್ಲೈನ್ ತರಗತಿಗಳನ್ನು ಮುಂದುವರಿಸಿದೆ.

ನಾನು ಮಾನಸಿಕವಾಗಿ ದಣಿದ ದಿನಗಳಲ್ಲಿ, ನನ್ನ ಉತ್ಸಾಹವನ್ನು ಹೆಚ್ಚಿಸಲು ಜೋರಾಗಿ ಸಂಗೀತದೊಂದಿಗೆ ಜುಂಬಾ ಅಥವಾ ಏರೋಬಿಕ್ಸ್ ಮಾಡುತ್ತಿದ್ದೆ. ಕೆಲವೊಮ್ಮೆ ನಾನು ಯೋಗ ಮಾಡುತ್ತಿದ್ದೆ ಮತ್ತು ಅದರಿಂದ ತುಂಬಾನೇ ಮನಸ್ಸಿಗೆ ಮತ್ತು ದೇಹಕ್ಕೆ ನೆಮ್ಮದಿ ಮತ್ತು ಆರಾಮ ಸಿಗುತ್ತಿತ್ತು. ನಾನು ಇಡೀ ದಿನ ನನ್ನ ಆಸನಕ್ಕೆ ಅಂಟಿಕೊಂಡಿದ್ದೇನೆ ಎಂದು ನನಗೆ ಅನಿಸಿದಾಗ ನಾನು ಪ್ರತಿ ಸ್ನಾಯು ಮತ್ತು ನರವನ್ನು ಕ್ರಿಯೆಗೆ ತಳ್ಳಲು ಎಚ್ಐಐಟಿಗೆ ಹೋಗುತ್ತಿದ್ದೆ. ನಾನು ಆ ಬಿಗಿಯಾದ ಸ್ನಾಯುಗಳನ್ನು ಸಡಿಲಗೊಳಿಸಬೇಕು ಎಂದು ನನಗೆ ತಿಳಿದಿದ್ದಾಗ ಪೈಲೇಟ್ಸ್ ಅನ್ನು ಮಾಡುತ್ತಿದ್ದೆ ಎಂದು ಅನಿತಾ ಅವರು ತಮ್ಮ ಅನುಭವವನ್ನು ವಿವರಿಸಿದರು.

ಅನುಸರಿಸಿದ ಆಹಾರ ಪದ್ಧತಿ ಹೇಗಿತ್ತು ಗೊತ್ತೇ?
ಫಿಟ್ನೆಸ್ ನ ಒಂದು ದೊಡ್ಡ ಭಾಗವೆಂದರೆ ನಾವು ತಿನ್ನುವ ಆಹಾರ. ಇದನ್ನು ಸಾಬೀತುಪಡಿಸುವ ಅಸಂಖ್ಯಾತ ಅಧ್ಯಯನಗಳಿವೆ. ಅನಿತಾ ಅವರು ಅನುಸರಿಸಿದ ಆಹಾರ ಪದ್ದತಿ ಹೇಗಿತ್ತು ಅಂತ ಒಮ್ಮೆ ನೋಡಿ.

ಇದನ್ನೂ ಓದಿ:  Weight Gain: ಮಕ್ಕಳ ತೂಕ ಹೆಚ್ಚಿಸಲು ಈ ಆರೋಗ್ಯಕರ ಆಹಾರಗಳನ್ನು ಕೊಡಿ

  1. ಅವರಿಗೆ ಹಸಿವಾದಾಗ ಮಾತ್ರ ಆಹಾರ ಸೇವಿಸುತ್ತಿದ್ದರು ಮತ್ತು ಊಟ ಮಾಡುವ ಮೊದಲು ಒಂದು ಲೋಟ ನೀರನ್ನು ಕುಡಿಯುತ್ತಿದ್ದರಂತೆ. ಆನಂತರ ನಿಮ್ಮ ಹೊಟ್ಟೆ ಹಸಿವು ನಿಜವಾಗಿದ್ದರೆ, ಊಟ ಮಾಡಿ ಅಂತ ಅನಿತಾ ಹೇಳುತ್ತಾರೆ.

  2. ನನಗೆ ನಿಜವಾಗಿಯೂ ಸಹಾಯ ಮಾಡಿದ್ದು ಏನೆಂದರೆ, ಸೌತೆಕಾಯಿ, ಕ್ಯಾರೆಟ್, ಟೊಮ್ಯಾಟೋ, ಬೀಟ್ರೂಟ್ ಇತ್ಯಾದಿಗಳಿಂದ ತುಂಬಿದ ಸೂಪ್ ಬೌಲ್ ಮತ್ತು ನಂತರ ತರಕಾರಿಗಳು ಮತ್ತು ಒಂದು ಬಟ್ಟಲು ದಾಲ್, 1/2 ರೊಟ್ಟಿ ಅಥವಾ 2 ಟೀ ಸ್ಪೂನ್ ಅನ್ನ ಸೇವಿಸುತ್ತಿದ್ದೆ ಎಂದು ಹೇಳಿದರು.

  3. ನನಗೆ ಏನಾದರೂ ಸಿಹಿ ತಿಂಡಿಯನ್ನು ತಿನ್ನಬೇಕು ಎಂದೆನಿಸಿದರೆ ಡಾರ್ಕ್ ಚಾಕೊಲೇಟ್ ನ ದೊಡ್ಡ ತುಂಡನ್ನು ತಿನ್ನುತ್ತೇನೆ ಅಥವಾ ನಾನು ಹಂಬಲಿಸುತ್ತಿರುವ ಯಾವುದೇ ಸಿಹಿ ತಿಂಡಿಯನ್ನು ಸ್ವಲ್ಪ ತಿನ್ನುತ್ತೇನೆ ಎಂದು ಹೇಳುತ್ತಾರೆ.

  4. ಇಲ್ಲಿ ನಾನು ಕಲಿತಂತಹ ಒಂದು ಮುಖ್ಯವಾದ ವಿಷಯವೆಂದರೆ ನಿಮ್ಮ ಮುಂದೆ ಅನಾರೋಗ್ಯಕರ ಆಹಾರದ ತಟ್ಟೆ ಇದ್ದಾಗ ನೀವು ನಿಮ್ಮ ಮುಖವನ್ನು ಇನ್ನೊಂದು ಬದಿಗೆ ಸರಿಸಿಕೊಳ್ಳಿರಿ. ಈ ಹೆಚ್ಚುವರಿ ಕ್ಯಾಲೊರಿಗಳಿಂದ ನಿಮ್ಮನ್ನು ಸಾಧ್ಯವಾದಷ್ಟು ದೂರ ಇರಿಸಿಕೊಳ್ಳಿರಿ ಎಂದು ಅನಿತಾ ಹೇಳಿದರು.


ಅನಿತಾ ಅವರು ಕಲಿತಂತಹ ಫಿಟ್ನೆಸ್ ಪಾಠಗಳು
ಈಗ ಕೆಲವು ವರ್ಷಗಳಿಂದ ಫಿಟ್ನೆಸ್ ಜರ್ನಿಯಲ್ಲಿರುವುದರಿಂದ, ನಾನು ಗಮನಿಸಿರುವುದು ಏನೆಂದರೆ, ಈ ತೂಕ ಇಳಿಸಿಕೊಳ್ಳುವ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಎಡವುವವರು ಹೆಚ್ಚಾಗಿ ತಮ್ಮ ಕೆಲಸ ಮತ್ತು ಜೀವನದ ಸಮತೋಲನದಲ್ಲಿ ಸಮಸ್ಯೆ ಹೊಂದಿರುವವರು ಎಂದು ಅನಿತಾ ಹೇಳಿದರು.

ಹೆಚ್ಚಿನ ವೃತ್ತಿಪರರಿಗೆ ತಮಗಿದ್ದ ಅತಿಯಾದ ಕೆಲಸದ ವಾತಾವರಣವು ನ್ಯಾವಿಗೇಟ್ ಮಾಡಲು ತುಂಬಾ ಕಠಿಣವಾಗಿದೆ ಮತ್ತು ಇದು ನಮ್ಮ ಜೀವನಶೈಲಿಗೆ ಮಾರಕವಾಗುತ್ತದೆ. ನಾವು ನಿರ್ದಿಷ್ಟವಾದ ಆರೋಗ್ಯಕರವಾದ ಜೀವನಶೈಲಿಯನ್ನು ಆನಂದಿಸಲು ನಾವು ಏನು ಮಾಡಬೇಕು ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಸ್ವಂತ ಯೋಗಕ್ಷೇಮಕ್ಕಾಗಿ ಸಮಯವನ್ನು ಮೀಸಲಿಡಬೇಕು
ಇದರರ್ಥ ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಸ್ವಂತ ಯೋಗಕ್ಷೇಮಕ್ಕಾಗಿ ಸಮಯವನ್ನು ಮೀಸಲಿಡಬೇಕು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆರಂಭದಲ್ಲಿ, ನಾನು ಕೆಲಸ ಮತ್ತು ಜೀವನದ ಸಮತೋಲನದ ವಿಷಯಕ್ಕೆ ಬಂದಾಗ ನಾನು ಕೆಲಸ ಮಾಡುವ ಕಂಪನಿಯು ಅದ್ಭುತವಾಗಿದ್ದರೂ ಸಹ, ನಾನು ಅನೇಕ ಕರೆಯನ್ನು ತಪ್ಪಿಸಿಕೊಳ್ಳುತ್ತೇನೆ ಅಥವಾ ಕೆಲವು ಇಮೇಲ್ ಅನ್ನು ತಪ್ಪಿಸಿಕೊಳ್ಳುತ್ತೇನೆ ಎಂದು ನಾನು ತುಂಬಾ ಚಿಂತಿತಳಾಗಿದ್ದೆ. ಭಯವು ನನ್ನ ತಲೆಯಲ್ಲಿಯೇ ಹೆಚ್ಚು ಇತ್ತು, ನಾನು ಪ್ರತಿದಿನ ಬೆಳಿಗ್ಗೆ ಕನಿಷ್ಠ ಒಂದು ಗಂಟೆಯನ್ನು ಬದಿಗಿಡಲು ಪ್ರಾರಂಭಿಸಿದಾಗ ನನಗಾಗಿ ಏನನ್ನಾದರೂ ಮಾಡಲು ಪ್ರಾರಂಭಿಸಿದೆ. ಕೆಲವು ದಿನ ನಾನು ಪೈಲೇಟ್ಸ್, ಯೋಗ ಅಥವಾ ಜುಂಬಾವನ್ನು ಮಾಡುತ್ತಿದ್ದೆ ಮತ್ತು ಇನ್ನೂ ಕೆಲವು ದಿನಗಳಲ್ಲಿ ಅದು ನನ್ನ ರಿಯಾಜ್ ಸಹ ಆಗಿತ್ತು.

ನಾನು ಚಿಕ್ಕವಳಾಗಿದ್ದಾಗ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆಯುವುದು ಕನಸಾಗಿತ್ತು, ಕೆಲವು ವರ್ಷಗಳ ಹಿಂದೆ ನಾನು ಮತ್ತೆ ಕಂಡು ಕೊಂಡ ಉತ್ಸಾಹ ಮತ್ತು ಇದು ನನಗೆ ತುಂಬಾ ಸಂತೋಷ ಮತ್ತು ಶಾಂತತೆಯ ಮೂಲವಾಗಿರುವುದರಿಂದ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಇವುಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನದನ್ನು ಮಾಡುವುದರಿಂದ ನನ್ನ ಉತ್ಪಾದಕತೆ, ನನ್ನ ಶಕ್ತಿಯ ಮಟ್ಟಗಳು ಮತ್ತು ನನ್ನ ಸಕಾರಾತ್ಮಕ ಮನೋಭಾವ ಎಲ್ಲವೂ ಹೆಚ್ಚುತ್ತಿದೆ ಎಂದು ನಾನು ಶೀಘ್ರದಲ್ಲಿಯೇ ಅರಿತುಕೊಂಡೆ ಎಂದು ಅನಿತಾ ಹೇಳುತ್ತಾರೆ.

ನಮ್ಮ ಆರೋಗ್ಯದ ಕಡೆ ನಾವು ಗಮನಹರಿಸಬೇಕು
ಇಂದು, ನಾನು ಪ್ರತಿದಿನ ಕೆಲವು ರೀತಿಯ ವ್ಯಾಯಾಮವನ್ನು ಮಾಡುತ್ತೇನೆ ಮತ್ತು ನನ್ನ ರಿಯಾಜ್ ಅನ್ನು ಶ್ರದ್ಧೆಯಿಂದ ಮಾಡುತ್ತೇನೆ ಎಂದು ಖಚಿತಪಡಿಸಿಕೊಳ್ಳುತ್ತೇನೆ. ನಾನು ನನ್ನ ಹಿಂದೂಸ್ತಾನಿ ಕ್ಲಾಸಿಕಲ್ ಸಂಗೀತದ 3ನೇ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದೇನೆ ಮತ್ತು ಈಗ 4ನೇ ವರ್ಷಕ್ಕೆ ತಯಾರಿ ನಡೆಸುತ್ತಿದ್ದೇನೆ. ಇದು ನನ್ನ ಕನಸು ನನಸಾಗುತ್ತಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದು ಹೇಳಿದರು.

ಇದನ್ನೂ ಓದಿ:  Foods for Sleeping: ಉತ್ತಮ ನಿದ್ದೆಗಾಗಿ ಏನು ತಿನ್ನಬೇಕು? ಇಲ್ಲಿದೆ ಓದಿ, ಟ್ರೈ ಮಾಡಿ, ನಿದ್ದೆ ಮಾಡಿ!

“ಈ ಮಾನಸಿಕ ಆರೋಗ್ಯವು ಎಷ್ಟು ನಿರ್ಣಾಯಕವಾಗಿದೆ ಎಂಬುದನ್ನು ನಾವೆಲ್ಲರೂ ಕಳೆದ ಒಂದೆರಡು ವರ್ಷಗಳಲ್ಲಿ ಅರಿತು ಕೊಂಡಿದ್ದೇವೆ ಮತ್ತು ನಮ್ಮ ಮನಸ್ಸುಗಳು, ನಮ್ಮ ಭಾವನೆಗಳು ಮತ್ತು ನಮ್ಮ ಹೃದಯಗಳನ್ನು ಪೋಷಿಸಲು ನಾವು ಕಲಿಯಬೇಕು. ನೀವು ಇಂದಿನಿಂದ ದಿನಕ್ಕೆ ಕೇವಲ 15 ನಿಮಿಷಗಳಿಂದ ವ್ಯಾಯಾಮ ಮಾಡುವುದನ್ನು ಪ್ರಾರಂಭಿಸಿ ಮತ್ತು ಶೀಘ್ರದಲ್ಲಿಯೇ ನಿಮ್ಮ ಆರೋಗ್ಯದಲ್ಲಿ ಮತ್ತು ಮನಸ್ಥಿತಿಯಲ್ಲಿ ಬದಲಾವಣೆಯನ್ನು ಕಾಣುತ್ತೀರಿ” ಎಂದು ಅನಿತಾ ಹೇಳಿದರು.
Published by:Ashwini Prabhu
First published: