Skin Allergies: ಮಳೆಗಾಲದಲ್ಲಿ ಕಾಣಿಸಿಕೊಳ್ಳುವ 5 ಬಗೆಯ ಚರ್ಮದ ಅಲರ್ಜಿಗಳ ಬಗ್ಗೆ ಇರಲಿ ಎಚ್ಚರ

ಮಳೆಗಾಲವು ಬೇಸಿಗೆಯಿಂದ ಬೇಸತ್ತ ದೇಹಗಳಿಗೆ ಒಂದು ಉತ್ತಮ ವಿಶ್ರಾಂತಿಯನ್ನು ನೀಡುತ್ತದೆ. ಆದರೆ ಈ ಮಳೆಗಾಲ ಬಂತೆಂದರೆ ಸಾಕು ಚರ್ಮಕ್ಕೆ ಸಂಬಂಧಪಟ್ಟ ಅಲರ್ಜಿಗಳು ಹೆಚ್ಚು ಕಾಣಿಸಿಕೊಳ್ಳಲಾರಂಭಿಸುತ್ತವೆ. ಇದರ ಜೊತೆ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಬರುತ್ತವೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ 5 ಚರ್ಮದ ಅಲರ್ಜಿಗಳು ಯಾವುವು ಇಲ್ಲಿದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಮ್ಮ ಸೌಂದರ್ಯವನ್ನು ಎದ್ದುಕಾಣುವಂತೆ ಮಾಡುವುದೇ ನಮ್ಮ ಸುಂದರವಾದ ಚರ್ಮ (Beautiful Skin). ಹೀಗಾಗಿ ಯಾವಾಗಲೂ ಸುಂದರವಾದ ಚರ್ಮವನ್ನು ಹೊಂದಬೇಕೆಂಬುದು ಪ್ರತಿಯೊಬ್ಬರು ಬಯಸುತ್ತಾರೆ. ಸೂರ್ಯನ ಕಿರಣಗಳಿಂದ (sun ray) ಚರ್ಮಕ್ಕೆ ಹಾನಿಯಾಗದಂತೆ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಕೇವಲ ಸೂರ್ಯನ ವಿಕಿರಣಗಳಿಂದ ಮಾತ್ರ ಅಲ್ಲ ಚಳಿ ಹಾಗೂ ಮಳೆಗಾಲದಲ್ಲೂ (Monsoon) ಚರ್ಮದ ರಕ್ಷಣೆ ಮುಖ್ಯವಾಗುತ್ತದೆ. ಆದರೂ ಯಾವಾಗಲೂ ನಾವು ಉತ್ತಮ ಚರ್ಮವನ್ನು ಪಡೆಯಲು ಸಾಧ್ಯವಿರುವುದಿಲ್ಲ. ಋತುವಿನ ಬದಲಾವಣೆ ನಿಮಗೆ ಸಂತೋಷವನ್ನು ತರಬಹುದು, ಆದರೆ ಇದು ನಿಮ್ಮ ಚರ್ಮದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಮಳೆಯು ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು (Skin Problems) ತರುತ್ತದೆ.

ಮಳೆಗಾಲದಲ್ಲಿ ಉಂಟಾಗುವ ಚರ್ಮದ ಕಾಯಿಲೆಗಳು 
ಮಳೆಗಾಲವು ಬೇಸಿಗೆಯಿಂದ ಬೇಸತ್ತ ದೇಹಗಳಿಗೆ ಒಂದು ಉತ್ತಮ ವಿಶ್ರಾಂತಿಯನ್ನು ನೀಡುತ್ತದೆ. ಆದರೆ ಈ ಮಳೆಗಾಲ ಬಂತೆಂದರೆ ಸಾಕು ಚರ್ಮಕ್ಕೆ ಸಂಬಂಧಪಟ್ಟ ಅಲರ್ಜಿಗಳು ಹೆಚ್ಚು ಕಾಣಿಸಿಕೊಳ್ಳಲಾರಂಭಿಸುತ್ತವೆ. ಇದರ ಜೊತೆ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಬರುತ್ತವೆ. ಆರ್ದ್ರ ವಾತಾವರಣ ಮತ್ತು ಕಡಿಮೆ ತಾಪಮಾನ ಇರುವ ವಾತಾವರಣ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಅಭಿವೃದ್ಧಿ ಹೊದುವುದಕ್ಕೆ ಸೂಕ್ತ ವಾತಾವರಣ. ಇದು ತುರಿಕೆ, ಕೆಂಪು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಲ್ಲದೆ, ಮಾನ್ಸೂನ್ ಸಮಯದಲ್ಲಿ ಅತಿಯಾದ ಬೆವರು ಚರ್ಮಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.

ಇದನ್ನೂ ಓದಿ:  Radish: ಊಟದ ವೇಳೆ ಹೆಚ್ಚು ಮೂಲಂಗಿ ತಿಂತೀರಾ? ಮರೆಯದೇ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ

ಇದು ತ್ವರಿತ ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಕಾರಣದಿಂದ ಚರ್ಮದ ಅಲರ್ಜಿಯು ಉಂಟಾಗುತ್ತದೆ. ಡಾ. ವೈಭವ್ ಕಾಳಂಬೆ, ಎಂಬಿಬಿಎಸ್, ಎಂಡಿ (ಡರ್ಮ್ಯಾಟೊಲಾಜಿ), ಸ್ಕಿನ್ ಮೆಡಿಕಾ, ಡೊಂಬಿವಲಿ (ಡಬ್ಲ್ಯೂ) ಅವರು ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ 5 ವಿಧದ ಚರ್ಮದ ಅಲರ್ಜಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಅದರ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ.

ಮಳೆಗಾಲದಲ್ಲಿ ಕಾಣಿಸಿಕೊಳ್ಳುವ 5 ಚರ್ಮದ ಅಲರ್ಜಿಗಳು ಇಲ್ಲಿವೆ:
1) ಸ್ಕೇಬೀಸ್
ಮಳೆಗಾಲದಲ್ಲಿ ಅನೇಕ ಜನರು ಕಲುಷಿತ ನೀರಿನ್ನು ಕುಡಿಯವುದರಿಂದ ಅನೇಕ ರೋಗಗಳಿಗೆ ಬಲಿಯಾಗುತ್ತಾರೆ. ಇದರ ಜೊತೆಗೆ ಕಲುಷಿತ ನೀರಿನ ಸೇವನೆಯು ಚರ್ಮದ ತುರಿಕೆಗೆ ದಾರಿ ಮಾಡಿಕೊಡುತ್ತದೆ. ಇದು ಬರಿಗಣ್ಣಿಗೆ ಕಾಣದ ಪರಾವಲಂಬಿ ಕ್ರೀಮಿಗಳ ಮೂಲಕ ಸಂಭವಿಸುವ ನೀರಿನ ಸಂಬಂಧಿತ ಕಾಯಿಲೆಯಾಗಿದೆ.

ಸ್ಕೇಬೀಸ್ ರೋಗವು ಚರ್ಮದಲ್ಲಿ ದದ್ದುಗಳು ಮತ್ತು ತೀವ್ರವಾದ ತುರಿಕೆ ಮೂಲಕ ತೀವ್ರ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಇದರ ಚಿಕಿತ್ಸೆಗಾಗಿ ವೈದ್ಯರನ್ನು ಕೂಡಲೇ ಸಂಪರ್ಕಿಸಿ, ಆರೋಗ್ಯ ತಪಾಸಣೆ ಪಡೆಯಲೇಬೇಕು. ದೇಹದ ತುರಿಕೆಯನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳು ಎಂದರೆ ನೀವು ಧರಿಸುವ ಎಲ್ಲ ಬಟ್ಟೆಗಳನ್ನು ನಂಜುನಿರೋಧಕ ಕಾರಕಗಳಿಂದ ತೊಳೆಯಬೇಕು.

2)ಎಸ್ಜಿಮಾ
ಈ ಅಲರ್ಜಿಯು ಹೆಚ್ಚಿನ ತಾಪಮಾನದಿಂದ ಆರ್ದ್ರ ವಾತಾವರಣವಾಗಿ ಬದಲಾಗುವ ಹಠಾತ್ ಸ್ಥಿತಿಗೆ ಈ ಚರ್ಮದ ಅಲರ್ಜಿ ಕಾಣಿಸಿಕೊಳ್ಳುವ ಸಂಭವ ಹೆಚ್ಚು. ಈ ಬದಲಾವಣೆಯು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿನ ತೇವಾಂಶವನ್ನು ಸಂರಕ್ಷಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ, ಚರ್ಮವು ಎಸ್ಜಿಮ್ಯಾಟಿಕ್ ಆಗಿ ಬದಲಾಗುತ್ತದೆ.

ಇದನ್ನೂ ಓದಿ:  Cervical Cancer: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮೊದಲ ಸ್ಥಳೀಯ HPV ಲಸಿಕೆ

ಇದು ಗುಳ್ಳೆಗಳು, ಚರ್ಮ ಕೆಂಪಾಗುವಿಕೆ, ತುರಿಕೆ ಮತ್ತು ಪಾದಗಳು, ಕೈಗಳು ಅಥವಾ ಕೆಳಗಿನ ಕಾಲುಗಳು ಹೆಚ್ಚು ಒಣಗಿದ ರೀತಿಯಲ್ಲಿ ಶುಷ್ಕ ಚರ್ಮವನ್ನು ಹೊದಿರುವಂತೆ ಇರುತ್ತದೆ. ಚರ್ಮದ ಕಿರಿಕಿರಿಯನ್ನು ತಪ್ಪಿಸಲು, ಹಗುರವಾದ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವುದು ಮುಖ್ಯ. ತೆಂಗಿನ ಎಣ್ಣೆಯನ್ನು ದೇಹದ ಬಾಧಿತ ಭಾಗಗಳಿಗೆ ಹಚ್ಚಿದರೆ ಸ್ವಲ್ಪ ಆರಾಮ ಎನಿಸಿಬಹುದು.

3) ದದ್ದುಗಳು
ಮಳೆಗಾಲದ ಆರಂಭದೊಂದಿಗೆ ವಿವಿಧ ರೀತಿಯ ದದ್ದುಗಳ ದೇಹದ ಚರ್ಮದ ಮೇಲೆ ಕಾಣಿಸಿಕೊಳ್ಳುವ ಸಂಭವ ಹೆಚ್ಚಿರುತ್ತದೆ. ಆರ್ದ್ರ ವಾತಾವರಣದೊಂದಿಗೆ ತಾಪಮಾನವು ಕಡಿಮೆ ಆಗುತ್ತದೆ. ಇದು ಈಗಾಗಲೇ ಸೀನುವ ಜನರು ಅಥವಾ ರಿನಿಟಿಸ್‌ನಿಂದ ಬಳಲುತ್ತಿರುವ ಜನರ ಮೇಲೆ ಪರಿಣಾಮ ಬೀರಬಹುದಾದರೂ, ಅಲರ್ಜಿನ್‌ಗಳು ಚರ್ಮದಲ್ಲಿ ಅಲರ್ಜಿಯ ಲಕ್ಷಣಗಳನ್ನು ಸಹ ಉಲ್ಬಣಗೊಳಿಸಬಹುದು.

ಅಲರ್ಜಿಯ ಹರಡುವಿಕೆಯನ್ನು ತಗ್ಗಿಸಲು, ಒಳಾಂಗಣ ಸಸ್ಯಗಳನ್ನು ಆದಷ್ಟು ದೂರವಿಡಬೇಕು. ಸಾಕುಪ್ರಾಣಿಗಳಿಂದ ದೂರವಿರಬೇಕು ಮತ್ತು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

4) ಅಥ್ಲೀಟ್ ಪಾದ ರೋಗ
ಅಥ್ಲೀಟ್‌ ಪಾದವು ಮಳೆಗಾಲದಲ್ಲಿ ಕಂಡು ಬರುವ ಸಾಮಾನ್ಯ ಸೋಂಕಾಗಿದ್ದು, ಸಾಕ್ಸ್ ಮತ್ತು ಬೂಟುಗಳು ಒದ್ದೆಯಾಗುವುದರಿಂದ ಹೆಚ್ಚಿನ ತೇವಾಂಶ ಧಾರಣ ಅಥವಾ ಬೆವರಿನಿಂದ ಉಂಟಾಗುತ್ತದೆ. ಈ ಅಲರ್ಜಿಯ ಸಾಮಾನ್ಯ ಲಕ್ಷಣಗಳೆಂದರೆ ಕಾಲ್ಬೆರಳ ಉಗುರುಗಳ ಬಣ್ಣ ಅಥವಾ ಬಿರುಕು, ಪಾದಗಳಲ್ಲಿ ತುರಿಕೆ ಮತ್ತು ಚರ್ಮ ಸುಲಿಯುವುದು. ಇದು ಗಂಭೀರ ಸ್ಥಿತಿಯಲ್ಲದಿದ್ದರೂ ಹೆಚ್ಚು ಸಾಂಕ್ರಾಮಿಕವಾಗಿದೆ.

ಈ ಸೋಂಕನ್ನು ದೂರವಿಡಲು, ಬೆವರು ಅಥವಾ ತೇವಾಂಶವನ್ನು ನಿಯಂತ್ರಣದಲ್ಲಿಡಲು ಆಂಟಿಫಂಗಲ್ ಪೌಡರ್‌ಗಳನ್ನು ಬಳಸಬಹುದು. ಹೊರಗಡೆಯಿಂದ ಬಂದಾಗ ಮನೆಯೊಳಕ್ಕೆ ಪಾದಗಳನ್ನು ಸರಿಯಾಗಿ ತೊಳೆಯಲು ಸಹ ಶಿಫಾರಸು ಮಾಡಲಾಗಿದೆ.

5) ರಿಂಗ್‌ವರ್ಮ್‌ ಅಥವಾ ಹುಳಕಡ್ಡಿ ರೋಗ
ಪಾದದ ಅಡಿಭಾಗ, ಕೈಗಳ ಮುಂಗೈ ಅಥವಾ ಕುತ್ತಿಗೆಯ ಮೇಲೆ ಕಾಣಿಸಿಕೊಳ್ಳುವ ವೃತ್ತಾಕಾರದ, ಕೆಂಪು ದದ್ದುಗಳು ರಿಂಗ್‌ವರ್ಮ್‌ ಸೋಂಕಿನಿಂದ ಉಂಟಾಗಿರಬಹುದು. ಇದು ಶಿಲೀಂಧ್ರಗಳ ಸೋಂಕು ಆಗಿದ್ದು, ತುರಿಕೆಗೆ ಕಾರಣವಾಗುತ್ತದೆ. ರಿಂಗ್‌ವರ್ಮ್‌ ಸೋಂಕಿಗೆ ಒಳಗಾದವರು ಯಾವಾಗಲೂ ಸ್ವಚ್ಛವಾದ, ಸಡಿಲವಾದ ಬಟ್ಟೆಗಳನ್ನು ಧರಿಸಬೇಕು ಮತ್ತು ಅಸ್ವಸ್ಥತೆಯಿಂದ ಪರಿಹಾರವನ್ನು ಪಡೆಯಲು ಚರ್ಮರೋಗ ವೈದ್ಯರಿಂದ ಅನುಮೋದಿತ ಆಂಟಿಫಂಗಲ್ ಕ್ರೀಮ್‌ಗಳನ್ನು ಬಳಸಬೇಕು. ಎಲ್ಲಾ ಸಮಯದಲ್ಲೂ ಪಾದಗಳನ್ನು ಶುಷ್ಕ ಮತ್ತು ಸ್ವಚ್ಛವಾಗಿರಿಸಿಕೊಳ್ಳುವುದು ಸಹ ಅಗತ್ಯವಾಗಿದೆ.

ಇದನ್ನೂ ಓದಿ:  Dry Cough: ಆಗಾಗ ನಿಮ್ಮನ್ನು ಒಣ ಕೆಮ್ಮು ಕಾಡುತ್ತಿದೆಯೇ? ಚಿಂತೆ ಬೇಡ ಆಯುರ್ವೇದದಲ್ಲಿ ಇದಕ್ಕಿದೆ ಪರಿಹಾರ

ಮಳೆಗಾಲದಲ್ಲಿ ಅನೇಕ ಜನರು ಚರ್ಮದ ಅಲರ್ಜಿಯನ್ನು ಎದುರಿಸುತ್ತಾರೆ. ಆದಾಗ್ಯೂ, ಆಗಾಗ್ಗೆ ಕಾಲು ಮತ್ತು ಕೈಗಳನ್ನು ತೊಳೆಯುವುದು, ಸ್ವಚ್ಛವಾದ ಬಟ್ಟೆಗಳನ್ನು ಧರಿಸುವುದು, ಕಲುಷಿತ ಮತ್ತು ಧೂಳಿನ ವಾತಾವರಣದಿಂದ ದೂರವಿರುವುದು ಮತ್ತು ತೀವ್ರ ತೊಂದರೆಗಳ ಸಂದರ್ಭದಲ್ಲಿ ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಮುಂತಾದ ಸರಿಯಾದ ಕ್ರಮಗಳೊಂದಿಗೆ ಈ ಚರ್ಮದ ಅಲರ್ಜಿಗಳಿಂದ ದೂರವಿರಬಹುದು.
Published by:Ashwini Prabhu
First published: