• Home
  • »
  • News
  • »
  • lifestyle
  • »
  • Sea Foods: ಭಾರತದ ಬೆಸ್ಟ್ ಸೀ ಫುಡ್​ಗಳನ್ನು ಸವಿಬೇಕು ಅಂದ್ರೆ ಈ ಸ್ಥಳಗಳಿಗೆ ಭೇಟಿ ನೀಡಿ

Sea Foods: ಭಾರತದ ಬೆಸ್ಟ್ ಸೀ ಫುಡ್​ಗಳನ್ನು ಸವಿಬೇಕು ಅಂದ್ರೆ ಈ ಸ್ಥಳಗಳಿಗೆ ಭೇಟಿ ನೀಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Place For sea Food Lovers: ಉತ್ತರ ಭಾರತದ ಪ್ರವಾಸದ ಸಂತೋಷದ ಜೊತೆಗೆ ಕರಾವಳಿ ಭಕ್ಷ್ಯಗಳ ರುಚಿಯನ್ನು ನೀಡುತ್ತದೆ. ಬಂಗ್ಡಾ ಮಸಾಲಾ ಫ್ರೈ, ತಂದೂರಿ ಪಾಂಪ್ರೆಟ್, ಸಿಕಂದರಿ ರಾನ್, ಚಿಕನ್ ಸುಕ್ಕಾ, ಮಟನ್ ಸುಕ್ಕಾ, ಗೋವಾ ಫಿಶ್ ಕರಿ, ಫಿಶ್ ಪ್ರೈ ಹೀಗೆ ಅನೇಕ ರುಚಿಕರವಾದ ಆಹಾರಗಳನ್ನು ನೀವು ಇಲ್ಲಿ ಎಂಜಾಯ್ ಮಾಡಬಹುದು

ಮುಂದೆ ಓದಿ ...
  • Share this:

ಕರಾವಳಿ ಆಹಾರ(Coastal Food) ಅಂದರೆ ಮೀನು, ಏಡಿ, (Fish) ಮಾಂಸಹಾರ ಪ್ರಿಯರು(Non Veg Lovers) ಅತಿ ಹೆಚ್ಚು ಪ್ರೀತಿಸುವ ಆಹಾರಗಳಲ್ಲಿ ಒಂದು. ಎಲ್ಲೇ ಪ್ರವಾಸಕ್ಕೆ(Tour) ಭೇಟಿ ನೀಡಿದರೂ ಕೂಡ, ಆ ಸ್ಥಳದಲ್ಲಿನ ಸಮುದ್ರ ಆಹಾರದ ರುಚಿ ನೋಡಲೇ ಬೇಕು ಆಸೆ ಇರುತ್ತದೆ. ಆದರೆ ಎಲ್ಲಾ ಸ್ಥಳಗಳಲ್ಲಿ ಮೀನಿನ ಆಹಾರ ಹೆಚ್ಚು ಚನ್ನಾಗಿರುವುದಿಲ್ಲ. ಭಾರತದ ಕೆಲವೊಂದು ಸ್ಥಳಗಳಿದೆ ಅಲ್ಲಿ ಸಿಗುವ ರುಚಿಕರವಾದ ಹಾಗೂ ವಿಭಿನ್ನ ಮೀನಿನ ಆಹಾರ ನಿಮಗೆ ಮತ್ತೆಲ್ಲೂ ಸಿಗುವುದಿಲ್ಲ.  ಎಂದು ಆಸೆ ಉಂಟಾಗುತ್ತದೆ. ನಿಸ್ಸಂದೇಹವಾಗಿ, ಆ ಪ್ರದೇಶದ ಸಂಸ್ಕೃತಿ ಹಾಗು ಅಭಿರುಚಿಯು ಪರಿಪೂರ್ಣವಾದ ಭಕ್ಷ್ಯ ಅಸ್ವಾದಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಭಾರತದ ಯಾವ ಸ್ಥಳಗಳಲ್ಲಿ ಮೀನಿನ ಆಹಾರ ಫೇಮಸ್ ಎಂಬುದು ಇಲ್ಲಿದೆ.


ಕೊಚ್ಚಿ


ಕೊಚ್ಚಿ ಹಲವಾರು ಜನರ ಬಹಳ ಇಷ್ಟಪಡುವ ಸ್ಥಳಗಳಲ್ಲಿ ಕೊಚ್ಚಿ ಕೂಡ ಒಂದು, ಇಲ್ಲಿನ ಪ್ರವಾಸಿ ತಾಣಗಳು ಜನರನ್ನು ಆಕರ್ಷಿಸುತ್ತದೆ. ಇಲ್ಲಿ ಅತ್ಯುತ್ತಮ ಮೀನಿನ ಆಹಾರ ಲಭಿಸುತ್ತದೆ. ಇಲ್ಲಿನ ಸಮುದ್ರಾಹಾರದ ರುಚಿಯನ್ನು ಆಸ್ವಾಧಿಸಲು ನೀವು ಫೋರ್ಟ್ ಹೌಸ್ ಹೋಟೆಲ್ ಗೆ ಭೇಟಿ ನೀಡಬೇಕು.. ಈ ರೆಸ್ಟೋರೆಂಟ್ ಅದ್ಭುತವಾದ ಅನುಭವವನ್ನು ನೀಡುವುದಲ್ಲದೇ, ಇಲ್ಲಿ ಕೇರಳದ ಮಸಾಲಾ ಪ್ರಾನ್ ಫ್ರೈ, ಅಪ್ಪಂ, ಫಿಶ್ ಮಪ್ಪಾಸ್, ಮೀನ್ ವಟ್ಟಿಚಾಟು ಇನ್ನು ಅನೇಕ ಪದಾರ್ಥಗಳನ್ನು ನೀವು ರುಚಿ ನೋಡಬಹುದು.


ಚೆನ್ನೈ


ಇದನ್ನೂ ಓದಿ: ಚಳಿಗಾಲದಲ್ಲಿ ಚರ್ಮ ಒರಟಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ


ನಮ್ಮ ನೆರೆಯ ಚೆನ್ನೈ ನಮಗೆ ಬಹಳ ಹತ್ತಿರ. ಬೇರೆ ಯಾವುದೋ ಸ್ಥಳಗಳಿಗೆ ಹೋಗುವ ಬದಲಾಗಿ ನಾವು ಚೆನ್ನೈಗೆ ಸಹ ಹೋಗಿ ಎಂಜಾಯ್ಚ ಮಾಡಬಹುದು. ನೀವು ಮೀನಿನ ಆಹಾರದ ಪ್ರಿಯರಾಗಿದ್ರೆ ಇಲ್ಲಿಗೆ ಹೋಗಿ ತಪ್ಪದೇ  ಸಮುದ್ರಾಹಾರದ ರುಚಿ ನೋಡಲೇಬೇಕು. ಚೆನ್ನೈನ ಮರೀನಾ ಬೀಚ್ ಯಾರಿಗೆ ತಾನೇ ಗೊತ್ತಿಲ್ಲ. ಅದು ಪ್ರವಾಸಿ ಪ್ರಿಯರ ನೆಚ್ಚಿನ ತಾಣ. ಇದು ಭಾರತದಲ್ಲಿನ ಅತಿ ಉದ್ದದ ಕಡಲತೀರವಾಗಿದ್ದು, ಇಲ್ಲಿ ನಿಮಗೆ ಅತ್ಯಂತ ರುಚಿಕರವಾದ ಸಮುದ್ರದ ಆಹಾರಗಳು ಲಭಿಸುತ್ತದೆ. ತಮಿಳುನಾಡಿನ ವಿಶಿಷ್ಟವಾದ ಶೈಲಿಯಲ್ಲಿ, ಬಗೆ ಬಗೆಯ ಮಸಾಲೆಯುಳ್ಳ ಸಮುದ್ರಾಹಾರದ ರುಚಿಯನ್ನು ನೀವು ಇಲ್ಲಿ ಟ್ರೈ ಮಾಡಬಹುದು.


ದೆಹಲಿ


ನಮ್ಮ ರಾಜಧಾನಿ ದೆಹಲಿ ಹಲವಾರು ವಿಚಾರಗಳಿಗೆ ಪ್ರಸಿದ್ಧ. ಅಲ್ಲಿರುವ ಪ್ರವಾಸಿತಾಣಗಳು ಒಂದೆರೆಡಲ್ಲ, ಅಲ್ಲದೇ ಅವುಗಳು ಒಂದೊಂದು ಇತಿಹಾಸದ ಕತೆಯನ್ನು ಸಾರಿ ಸಾರಿ ಹೇಳುತ್ತವೆ. ಆದರೆ ನಿಮಗೆ ಗೊತ್ತಾ, ಇಲ್ಲಿ ಅದ್ಭುತವಾದ ಸಮುದ್ರಾಹಾರಗಳು ಲಭಿಸುತ್ತದೆ. ಇದನ್ನ ಸಮುದ್ರಾಹಾರ ಪ್ರಿಯರ ಸ್ವರ್ಗ ಎನ್ನಲಾಗುತ್ತದೆ.


ಇಲ್ಲಿನ ಫೈನ್ ಡೈನ್ ರೆಸ್ಟೋರೆಂಟ್ ನಲ್ಲಿ ಸ್ವಾದಿಷ್ಟವಾದ ಆಹಾರವನ್ನು ಗ್ರಾಹಕರಿಗೆ ಉಣಬಡಿಸುತ್ತಾರೆ. ಉತ್ತರ ಭಾರತದ ಪ್ರವಾಸದ ಸಂತೋಷದ ಜೊತೆಗೆ ಕರಾವಳಿ ಭಕ್ಷ್ಯಗಳ ರುಚಿಯನ್ನು ನೀಡುತ್ತದೆ. ಬಂಗ್ಡಾ ಮಸಾಲಾ ಫ್ರೈ, ತಂದೂರಿ ಪಾಂಪ್ರೆಟ್, ಸಿಕಂದರಿ ರಾನ್, ಚಿಕನ್ ಸುಕ್ಕಾ, ಮಟನ್ ಸುಕ್ಕಾ, ಗೋವಾ ಫಿಶ್ ಕರಿ, ಫಿಶ್ ಪ್ರೈ ಹೀಗೆ ಅನೇಕ ರುಚಿಕರವಾದ ಆಹಾರಗಳನ್ನು ನೀವು ಇಲ್ಲಿ ಎಂಜಾಯ್ ಮಾಡಬಹುದು.


ಮಂಗಳೂರು


ಬೇರೆ ರಾಜ್ಯಗಳು ಬದಿಗಿರಲಿ, ನಮ್ಮ ಕರ್ನಾಟಕದ ಮಂಗಳೂರು ಸಮುದ್ರಾಹಾರಗಳಿಗೆ ಹೆಚ್ಚು ಪ್ರಸಿದ್ಧ. ಮಂಗಳೂರಿನಲ್ಲಿ ಮಚಲಿ ಎಂಬ ಜನಪ್ರಿಯವಾದ ರೆಸ್ಟೋರೆಂಟ್ ಇದೆ. ಇಲ್ಲಿ ಮಂಗಳೂರು ಶೈಲಿ ಮಾತ್ರವಲ್ಲದೇ ಅನೇಕ ಶೈಲಿಯಲ್ಲಿ ಹಾಗು ಅದ್ಭುತವಾದ ರುಚಿಗೆ ಪ್ರಸಿದ್ಧವಾಗಿದೆ.


ಇದನ್ನೂ ಓದಿ: ಒತ್ತಡ ನಿವಾರಣೆ, ಉತ್ತಮ ಆರೋಗ್ಯಕ್ಕೆ ವಿಟಮಿನ್ ಡಿ ಎಷ್ಟು ಅಗತ್ಯ ನೋಡಿ


ಕರ್ನಾಟಕದ ಕರಾವಳಿ ಪ್ರದೇಶವು ಅತ್ಯುತ್ತಮ ಪಾಕವಿಧಾನವನ್ನು ಹೊಂದಿದ್ದು, ಅದ್ಭುತವಾದ ಸಮುದ್ರಾಹಾರವನ್ನು ಈ ರೆಸ್ಟೋರೆಂಟ್ ಒದಗಿಸುತ್ತಿದೆ. ಇಲ್ಲಿ ಬಗೆ ಬಗೆಯ ಕಿಂಗ್ ಫಿಶ್, ಪ್ರಾನ್ಸ್ ಮತ್ತು ತವಾ ಫ್ರೈ ಸಿಗುತ್ತದೆ. ಹಾಗೆಯೇ ಇಲ್ಲಿ ಪ್ರಾನ್ಸ್ ಬಿರಿಯಾನಿ ತುಂಬಾ ಪ್ರಸಿದ್ಧವಾಗಿದೆ.

Published by:Sandhya M
First published: