Garlic: ಬೆಳ್ಳುಳ್ಳಿಯನ್ನು ದಿಂಬಿನ ಅಡಿಯಲ್ಲಿಡುವುದೇಕೆ? ಇಲ್ಲಿದೆ ಕಾರಣ

ಆಹಾರಕ್ಕೆ ಹಾಕುವ ಬೆಳ್ಳುಳ್ಳಿಯನ್ನು ಹಾಸಿಗೆ ಮೇಲೆ ಮತ್ತು ನಾವು ತಲೆ ಇಟ್ಟು ಮಲಗುವ ದಿಂಬಿನ ಕೆಳಗೆ ಏಕೆ ಇಟ್ಟುಕೊಳ್ಳುವುದು? ಹೀಗೆ ಇಟ್ಟುಕೊಂಡರೆ ಏನಾಗುತ್ತದೆ? ಇಟ್ಟುಕೊಳ್ಳದಿದ್ದರೆ ಏನಾಗುತ್ತದೆ? ಅಂತೆಲ್ಲಾ ಆಲೋಚನೆಗಳು ಈಗ ನಮ್ಮ ನಿಮ್ಮೆಲ್ಲರ ತಲೆಯಲ್ಲಿ ಬರುತ್ತಿರಬಹುದಲ್ಲವೇ? ಬನ್ನಿ ಹಾಗಾದರೆ ಇದರ ಹಿಂದಿನ ಕಥೆ ಏನು ಅಂತ ತಿಳಿದುಕೊಂಡು ಬರೋಣ.

 ಬೆಳ್ಳುಳ್ಳಿ

ಬೆಳ್ಳುಳ್ಳಿ

  • Share this:
ನಾವು ಚಿಕ್ಕವರಾಗಿದ್ದಾಗ ಮನೆಯಲ್ಲಿ ಹಿರಿಯರು ಕಥೆಗಳನ್ನು ಹೇಳುವಾಗ ಅದರಲ್ಲಿ ಮಲಗುವ ಹಾಸಿಗೆಯ (Bed) ಮೇಲೆ ಬೆಳ್ಳುಳ್ಳಿಯನ್ನು (Garlic) ಇಡುವುದರಿಂದ ರಾತ್ರಿ ಹೊತ್ತಿನಲ್ಲಿ ಪಿಶಾಚಿಗಳು ನಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ ಮತ್ತು ಅವುಗಳು ನಮ್ಮ ಕನಸಿನಲ್ಲಿ ಬಂದು ನಮ್ಮನ್ನು ಹೆದರಿಸುವುದಿಲ್ಲ ಅಂತ ಹೇಳಿರುವುದು ನಮಗೆ ಇನ್ನೂ ನೆನಪಿರುತ್ತದೆ. ಹೀಗೆ ಆಹಾರಕ್ಕೆ (Food) ಹಾಕುವ ಬೆಳ್ಳುಳ್ಳಿಯನ್ನು ಹಾಸಿಗೆ ಮೇಲೆ ಮತ್ತು ನಾವು ತಲೆ ಇಟ್ಟು ಮಲಗುವ ದಿಂಬಿನ ಕೆಳಗೆ ಏಕೆ ಇಟ್ಟುಕೊಳ್ಳುವುದು? ಹೀಗೆ ಇಟ್ಟುಕೊಂಡರೆ ಏನಾಗುತ್ತದೆ? ಇಟ್ಟುಕೊಳ್ಳದಿದ್ದರೆ ಏನಾಗುತ್ತದೆ? ಅಂತೆಲ್ಲಾ ಆಲೋಚನೆಗಳು (Thoughts) ಈಗ ನಮ್ಮ ನಿಮ್ಮೆಲ್ಲರ ತಲೆಯಲ್ಲಿ ಬರುತ್ತಿರಬಹುದಲ್ಲವೇ? ಬನ್ನಿ ಹಾಗಾದರೆ ಇದರ ಹಿಂದಿನ ಕಥೆ ಏನು ಅಂತ ತಿಳಿದುಕೊಂಡು ಬರೋಣ.

ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡುವ ಆಲೋಚನೆಯು ಕೇವಲ ಮಿಥ್ಯೆ ಮಾತ್ರವಲ್ಲ, ಅನೇಕ ಜನರು ಇನ್ನೂ ತಮ್ಮ ದಿಂಬಿನ ಕೆಳಗೆ ಬೆಳ್ಳುಳ್ಳಿಯನ್ನು ಇಟ್ಟುಕೊಂಡು ಮಲಗುತ್ತಾರೆ ಎಂದು ನಾವು ನಿಮಗೆ ಹೇಳಿದರೆ ನೀವು ನಂಬಲಿಕ್ಕಿಲ್ಲ.

ಬೆಳ್ಳುಳ್ಳಿಯನ್ನೇ ಏಕೆ ಇಟ್ಟುಕೊಳ್ಳುತ್ತಾರೆ ಮತ್ತು ಇದು ಕೆಲಸ ಮಾಡುತ್ತದೆಯೇ?
ಬೆಳ್ಳುಳ್ಳಿಯು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳ ಶಕ್ತಿ ಕೇಂದ್ರವಾಗಿದ್ದು, ಇದು ಹಲವಾರು ರೀತಿಯಲ್ಲಿ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಬೆಳ್ಳುಳ್ಳಿಯ ಸೇವನೆಯ ಹಲವಾರು ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆ ಯುಗಯುಗಗಳಿಂದಲೂ ತಿಳಿಸಲಾಗಿದೆ ಮತ್ತು ಈ ನಂಬಿಕೆಗಳಲ್ಲಿ ಹೆಚ್ಚಿನವುಗಳು ವಿಜ್ಞಾನದಿಂದ ಬೆಂಬಲಿಸಲ್ಪಟ್ಟಿವೆ. ಆದರೆ ಈ ಹಳೆಯ ನಂಬಿಕೆಯ ಬಗ್ಗೆ ಏನು ಹೇಳುತ್ತೀರಿ? ಈ ಸಾಂಪ್ರದಾಯಿಕ ಆಚರಣೆಗೆ ಯಾವುದಾದರೂ ವಿಜ್ಞಾನ ಬೆಂಬಲಿತ ವಿವರಣೆ ಇದೆಯೇ? ಅಂತ ನೀವು ಕೇಳಬಹುದು.

ಇದಕ್ಕೆ ನಿಜವಾದ ಕಾರಣ ಏನು?
ಈ ಪರಿಹಾರವು ಬೆಳ್ಳುಳ್ಳಿಯ ಕಟುವಾದ ಮತ್ತು ಬಲವಾದ ವಾಸನೆಯೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ಇದು ಖಂಡಿತವಾಗಿಯೂ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ, ಇದು ನಿಮ್ಮ ನಿದ್ರೆಗೆ ತುಂಬಾ ಸಹಾಯ ಮಾಡುತ್ತದೆ. ಹೇಗೆ ಎಂದರೆ ಸೊಳ್ಳೆಗಳು, ಕೀಟಗಳನ್ನು ಈ ಬೆಳ್ಳುಳ್ಳಿಯ ವಾಸನೆ ದೂರ ಓಡಿಸುತ್ತದೆ ಮತ್ತು ನಿದ್ರಾಹೀನತೆಯನ್ನು ಸರಿಪಡಿಸುತ್ತದೆ. ಪ್ರಾಚೀನ ಪರಿಹಾರದ ಪ್ರಕಾರ, ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡುವುದು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ನಿದ್ರೆಯ ಅಸ್ವಸ್ಥತೆಗಳನ್ನು ಸಹ ದೂರವಿಡುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: Morning Breakfast: ಬೆಳಗಿನ ತಿಂಡಿ, ತೂಕ ಇಳಿಕೆಗೆ ಮಶ್ರೂಮ್ ಸಲಾಡ್ ರೆಸಿಪಿ ಮಾಡಿ ಸವಿಯಿರಿ

ಆದಾಗ್ಯೂ, ಇದಕ್ಕೆ ವೈಜ್ಞಾನಿಕ ವಿವರಣೆಯು ಬೆಳ್ಳುಳ್ಳಿಯಲ್ಲಿ ಸಲ್ಫರ್ ಇರುವಿಕೆಗೆ ಸಂಬಂಧಿಸಿದೆ, ಇದು ಬಲವಾದ ವಾಸನೆಗೆ ಕಾರಣವಾಗುತ್ತದೆ ಮತ್ತು ಈ ಬಲವಾದ ವಾಸನೆ ನಿದ್ರೆಯನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ.

ಇದಲ್ಲದೆ, ಲವಂಗದ ಮೊಗ್ಗನ್ನು ದಿಂಬಿನ ಕೆಳಗೆ ಇಡುವುದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. ಆದರೆ ಆ ಬಲವಾದ ವಾಸನೆಯೊಂದಿಗೆ ಮಲಗಲು ನೀವು ದ್ವೇಷಿಸುತ್ತಿದ್ದರೆ, ಬೆಳ್ಳುಳ್ಳಿಯಿಂದ ತಯಾರಿಸಿದ ರಾತ್ರಿ ಪಾನೀಯವು ನಿಮ್ಮ ಅನಿಯಮಿತ ನಿದ್ರೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

ಮಲಗುವ ಸಮಯದಲ್ಲಿ ಬೆಳ್ಳುಳ್ಳಿಯಿಂದ ಪಾನೀಯವನ್ನು ಹೇಗೆ ತಯಾರಿಸುವುದು?

  • ಈ ಸರಳವಾದ ಮಲಗುವ ಸಮಯದ ಪಾನೀಯವನ್ನು ತಯಾರಿಸಲು, ಒಂದು ಪ್ಯಾನ್ ಅನ್ನು ತೆಗೆದುಕೊಂಡು ಅದರಲ್ಲಿ ಮೊದಲಿಗೆ 1 ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಿ, ನಂತರ ಅದನ್ನು ಒಮ್ಮೆ ಸ್ಮ್ಯಾಶ್ ಮಾಡಿ ಮತ್ತು ಅದಕ್ಕೆ 1 ಲೋಟ ಹಾಲನ್ನು ಸೇರಿಸಿ.

  • ನೀವು ಈ ಪಾನೀಯವನ್ನು ಸಿಹಿ ಮತ್ತು ಖಾರದ ಪದಾರ್ಥಗಳ ಟ್ವಿಸ್ಟ್ ನೊಂದಿಗೆ ತಯಾರಿಸಬಹುದು.


ಇದನ್ನೂ ಓದಿ: Weight Loss Tips: ವ್ಯಾಯಾಮ ಮಾಡ್ದೇ ತೂಕ ಇಳಿಸೋದು ಹೇಗೆ ಗೊತ್ತಾ? ಇಲ್ನೋಡಿ ಹೀಗ್ ಮಾಡಿ

  • ಈ ಪಾನೀಯವನ್ನು ಸ್ವಲ್ಪ ಸಮಯದವರೆಗೆ ಕುದಿಸಿದ ನಂತರ, ಜ್ವಾಲೆಯನ್ನು ಆಫ್ ಮಾಡಿ ಮತ್ತು ಒಂದು ಲೋಟಕ್ಕೆ ಹಾಕಿಕೊಳ್ಳಿರಿ, ಅದಕ್ಕೆ 1 ಟೀ ಸ್ಪೂನ್ ಜೇನುತುಪ್ಪ ಮತ್ತು ಒಂದು ಚಿಟಿಕೆ ಕರಿಮೆಣಸನ್ನು ಸೇರಿಸಿಕೊಳ್ಳಿರಿ.

  • ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಚೆನ್ನಾಗಿ ನಿದ್ರೆ ಮಾಡಲು ತಣ್ಣಗೆ ಅಥವಾ ಬೆಚ್ಚಗೆ ಕುಡಿಯಿರಿ.

Published by:Ashwini Prabhu
First published: