Health & Exercise: ಜಾಸ್ತಿ ಸಮಯ ವ್ಯಾಯಾಮ ಮಾಡೋದಕ್ಕಿಂತ ಚಟುವಟಿಕೆಯಿಂದ ಇರೋದು ಹೆಚ್ಚು ಒಳ್ಳೆಯದಂತೆ

ದೀರ್ಘ ಸಮಯದವರೆಗೆ ವ್ಯಾಯಾಮ ಮಾಡುವುದಕ್ಕಿಂತ ನಿತ್ಯವೂ ಸ್ವಲ್ಪ ಕಾಲ ವ್ಯಾಯಾಮ ಮಾಡುವುದು ಹೆಚ್ಚು ಪರಿಣಾಮಕಾರಿ ಹಾಗೂ ಪ್ರಯೋಜನಕಾರಿ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ನಿತ್ಯವೂ ಗಂಟೆಗಟ್ಟಲೆ ವ್ಯಾಯಾಮ ಮಾಡುವ ಅಗತ್ಯವೂ ಇಲ್ಲ ಎಂದು ಕೂಡ ಈ ಅಧ್ಯಯನ ತಿಳಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ದೀರ್ಘ ಸಮಯದವರೆಗೆ ವ್ಯಾಯಾಮ (Exercise) ಮಾಡುವುದಕ್ಕಿಂತ ನಿತ್ಯವೂ ಸ್ವಲ್ಪ ಕಾಲ ವ್ಯಾಯಾಮ ಮಾಡುವುದು ಹೆಚ್ಚು ಪರಿಣಾಮಕಾರಿ ಹಾಗೂ ಪ್ರಯೋಜನಕಾರಿ ಎಂದು ಹೊಸ ಸಂಶೋಧನೆಯೊಂದು (New Research) ತಿಳಿಸಿದೆ. ನಿತ್ಯವೂ ಗಂಟೆಗಟ್ಟಲೆ ವ್ಯಾಯಾಮ ಮಾಡುವ ಅಗತ್ಯವೂ ಇಲ್ಲ ಎಂದು ಕೂಡ ಈ ಅಧ್ಯಯನ ತಿಳಿಸಿದೆ. ಆರೋಗ್ಯ ಕಾಳಜಿಯುಳ್ಳ ಜನರು (People) ಹೆಚ್ಚಾಗಿ ಎದುರಿಸುತ್ತಿರುವ ಸಂದಿಗ್ಧತೆ ಇದಾಗಿದೆ ಎಂದು ಎಡಿತ್ ಕೋವನ್ ವಿಶ್ವವಿದ್ಯಾಲಯದ (ECU) ಹೊಸ ಸಂಶೋಧನೆಯು ತಿಳಿಸಿದೆ. ನಿತ್ಯವೂ ಸ್ವಲ್ಪ ಕಾಲ ವ್ಯಾಯಾಮ ಮಾಡುವುದು ಸ್ನಾಯುವಿನ (Muscle) ಸದೃಢತೆಗೆ ಉತ್ತಮ ಎಂಬುದು ಈ ಅಧ್ಯಯನಗಳಿಂದ ತಿಳಿದಿದೆ.


ಸಮೀಕ್ಷೆ ಏನು ತಿಳಿಸಿದೆ?
ಜಪಾನ್‌ನ ನಿಗಾಟಾ ವಿಶ್ವವಿದ್ಯಾನಿಲಯ ಮತ್ತು ನಿಶಿ ಕ್ಯುಶು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಾಲ್ಕು ವಾರಗಳ ತರಬೇತಿ ಅಧ್ಯಯನದಲ್ಲಿ ಮೂರು ಗುಂಪುಗಳು ಭಾಗವಹಿಸಿ ತೋಳಿನ ರೆಸಿಸ್ಟೆನ್ಸ್ ವ್ಯಾಯಾಮವನ್ನು ಮಾಡಿದ್ದು ಸ್ನಾಯುವಿನ ಶಕ್ತಿ ಮತ್ತು ಸ್ನಾಯುವಿನ ಬಲದಲ್ಲಿನ ಬದಲಾವಣೆಗಳನ್ನು ಅಳೆಯಲಾಗಿದೆ ಮತ್ತು ಹೋಲಿಸಲಾಗಿದೆ ಜಿಮ್‌ನಲ್ಲಿ ನೀವು ಮಾಡುವ ಪ್ರತಿ ಸ್ನಾಯುವಿನ ಸಂಕೋಚನದಲ್ಲಿ ಸ್ನಾಯು ಬಲ ಅಳೆಯುವ ಯಂತ್ರದಲ್ಲಿ ನಡೆಸಿದ ವಿಲಕ್ಷಣ ಬೈಸೆಪ್ ಸಂಕೋಚನಗಳನ್ನು ಈ ಪ್ರಕ್ರಿಯೆ ಒಳಗೊಂಡಿದೆ.


ಸ್ನಾಯು ಉದ್ದವಾದಾಗ ವಿಲಕ್ಷಣ ಸಂಕೋಚನವುಂಟಾಗುತ್ತದೆ ಅಂದರೆ ಬೈಸಪ್ ಕರ್ಲ್‌ನಲ್ಲಿ ಯಾವುದೇ ಭಾರವಿರುವ ಡಂಬಲ್ಸ್ ಅನ್ನು ಕೆಳಕ್ಕೆ ಸರಿಸಿದಾಗ ಉಂಟಾಗುವ ಸಂಕೋಚನ. ಎರಡು ಗುಂಪುಗಳು ಪ್ರತಿ ವಾರಕ್ಕೆ 30 ಸಂಕೋಚನಗಳನ್ನು ನಡೆಸಿದವು ಅದರಲ್ಲಿ ಒಂದು ಗುಂಪು ವಾರಕ್ಕೆ ಐದು ದಿನಗಳಂತೆ ಆರು ಸಂಕೋಚನ ವ್ಯಾಯಾಮಗಳನ್ನು (6x5) ಮಾಡಿತು ಇನ್ನು ಇತ,ರ ಗುಂಪು ಒಂದೇ ದಿನದಲ್ಲಿ 30 ವ್ಯಾಯಾಮಗಳನ್ನು ವಾರಕ್ಕೊಮ್ಮೆ (30x1) ಮಾಡಿತು. ಇನ್ನೊಂದು ಗುಂಪು ವಾರದಲ್ಲಿ ಒಂದು ದಿನ ಮಾತ್ರ ಆರು ಸಂಕೋಚನ ವ್ಯಾಯಾಮಗಳನ್ನು ಮಾಡಿತು.


ಇದನ್ನೂ ಓದಿ: Vitamin-B: ಮೆದುಳಿನ ಆರೋಗ್ಯಕ್ಕೆ ವಿಟಮಿನ್​ ಬಿ ಎಷ್ಟು ಪ್ರಯೋಜನಕಾರಿ ನೋಡಿ

ನಾಲ್ಕು ವಾರಗಳ ನಂತರ ಒಂದೇ ದಿನದಲ್ಲಿ 30 ಸಂಕೋಚನ ವ್ಯಾಯಾಮಗಳನ್ನು ಮಾಡಿದ ಗುಂಪಿನ ಸ್ನಾಯು ಬಲದಲ್ಲಿ ಯಾವುದೇ ಹೆಚ್ಚಳ ಕಂಡುಬರಲಿಲ್ಲ. ಅದೇ ರೀತಿ ವಾರಕ್ಕೊಮ್ಮೆ ಆರು ಸಂಕೋಚನಗಳನ್ನು ಮಾಡುವ ಗುಂಪು ಸ್ನಾಯುವಿನ ಬಲ ಮತ್ತು ಸ್ನಾಯುವಿನ ಸದೃಢತೆಯಲ್ಲಿ ಯಾವುದೇ ಬದಲಾವಣೆಗಳನ್ನು ತೋರಿಸಲಿಲ್ಲ. ಅದಾಗ್ಯೂ 6×5 ಸಂಕೋಚನ ನಡೆಸುವ ಗುಂಪು ಸ್ನಾಯುವಿನ ಬಲದ 10% ಕ್ಕಿಂತ ಹೆಚ್ಚು 30×1 ಗುಂಪಿನಂತೆ ಸ್ನಾಯು ಸದೃಢತೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿತು.


ಆವರ್ತನೆ ಪರಿಮಾಣವಲ್ಲ:
6x5 ಗುಂಪಿನ ಸ್ನಾಯು ಬಲದಲ್ಲಿರುವ ಹೆಚ್ಚಳವು ನಾಲ್ಕು ವಾರಗಳವರೆಗೆ ವಾರಕ್ಕೆ ಐದು ದಿನಗಳವರೆಗೆ ದಿನಕ್ಕೆ ಒಮ್ಮೆ ಮೂರು-ಸೆಕೆಂಡಿನ ಗರಿಷ್ಠ ವ್ಯಾಯಾಮ ನಡೆಸಿದ ಹಿಂದಿನ ಅಧ್ಯಯನದ ಗುಂಪಿಗೆ ಹೋಲುತ್ತದೆ.


ECU ವ್ಯಾಯಾಮ ಮತ್ತು ಕ್ರೀಡಾ ವಿಜ್ಞಾನದ ಪ್ರಾಧ್ಯಾಪಕ ಕೆನ್ ನೊಸಾಕಾ ಅವರು ಈ ಅಧ್ಯಯನಗಳು ನಿಯಮಿತವಾಗಿ ಮಾಡಬಹುದಾದ ವ್ಯಾಯಾಮವು ಜನರ ಸಾಮರ್ಥ್ಯದ ಮೇಲೆ ನಿಜವಾದ ಪರಿಣಾಮ ಬೀರಬಹುದು ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಭಾರವಾದ ಡಂಬಲ್ ಅನ್ನು ನಿಧಾನವಾಗಿ ದಿನಕ್ಕೊಮ್ಮೆ ಅಥವಾ ಆರು ಬಾರಿ ಕೆಳಮುಖವಾಗಿ ಸರಿಸುವುದು ಈ ವ್ಯಾಯಾಮವನ್ನು ಮಾಡಿದರೆ ಸಾಕು ಎಂಬುದು ಕೆನ್ ಅಭಿಪ್ರಾಯವಾಗಿದೆ. “ಸ್ನಾಯು ಬಲವು ನಮ್ಮ ಆರೋಗ್ಯಕ್ಕೆ ಮುಖ್ಯವಾಗಿದೆ. ವಯಸ್ಸಾದಂತೆ ಸ್ನಾಯುವಿನ ದ್ರವ್ಯರಾಶಿ ಮತ್ತು ಶಕ್ತಿ ಕಡಿಮೆಯಾಗುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ.


ವಿಶ್ರಾಂತಿ ಏಕೆ ಅತ್ಯಗತ್ಯ
ಆಗಾಗ್ಗೆ ಹೆಚ್ಚು ಭಾರವನ್ನು ಎತ್ತುವುದಕ್ಕಿಂತ ಸಣ್ಣ ಪ್ರಮಾಣದಲ್ಲಿ ಸ್ನಾಯು ಉದ್ದವಾಗುವ ಸಂಕೋಚನಗಳೊಂದಿಗೆ ರೆಸಿಸ್ಟೆನ್ಸ್ ವ್ಯಾಯಾಮಗಳನ್ನು ಮಾಡುವುದರಿಂದ ದೇಹವು ಏಕೆ ಉತ್ತಮವಾಗಿ ಪ್ರತಿಕ್ರಿಯಿಸುತ್ತದೆ ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ. ಅದಾಗ್ಯೂ ದೇಹಕ್ಕೆ ವಿಶ್ರಾಂತಿ ಅತ್ಯಗತ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ. 6 × 5 ರ ಗುಂಪು ಈ ಪ್ರಕಾರವಾಗಿ ಎರಡು ದಿನಗಳ ವಿಶ್ರಾಂತಿಯನ್ನು ಪಡೆಯಿತು. ವಿಶ್ರಾಂತಿ ಸಮಯದಲ್ಲಿ ಸ್ನಾಯು ಹೊಂದಾಣಿಕೆಗಳು ಉಂಟಾಗುತ್ತವೆ ಹೀಗಾಗಿ ದಿನದ 24 ಗಂಟೆಯೂ ತರಬೇತಿ ನೀಡುವುದು ಯಾವುದೇ ಸುಧಾರಣೆಯನ್ನುಂಟು ಮಾಡುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಇದನ್ನೂ ಓದಿ:  Liver Health: ಈ ಲಕ್ಷಣಗಳು ಕಂಡು ಬಂದ್ರೆ ಯಕೃತ್ತಿನ ಸಮಸ್ಯೆಯ ಸಂಕೇತವಂತೆ

ವಯಸ್ಕರು ಪ್ರತೀ ದಿನ ವ್ಯಾಯಾಮ ಮಾಡಬೇಕು ಹಾಗೂ ವಾರಕ್ಕೆ 2.5-5 ಗಂಟೆಗಳ ಕಾಲ ಮಧ್ಯಮ ಗತಿಯ ದೈಹಿಕ ಚಟುವಟಿಕೆಯನ್ನು ಮಾಡಬೇಕು ಎಂದು ಆಸ್ಟ್ರೇಲಿಯಾ ಸರಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ವಾರದ ನಿಮಿಷದ ಗುರಿ ಮುಟ್ಟುವುದಕ್ಕಿಂತ ವ್ಯಾಯಾಮವನ್ನು ದೈನಂದಿನ ಚಟುವಟಿಕೆಯನ್ನಾಗಿ ಮಾಡುವ ಮಹತ್ವಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ. ವಾರಕ್ಕೊಮ್ಮೆ ಜಿಮ್‌ಗೆ ಹೋಗುವುದಕ್ಕಿಂತ ಮನೆಯಲ್ಲೇ ಕೆಲವು ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂಬುದು ಕೂಡ ಈ ಅಧ್ಯಯನಗಳಿಂದ ತಿಳಿದು ಬಂದಿದೆ.

Published by:Ashwini Prabhu
First published: