Cashews: ಜಾಸ್ತಿ ಗೋಡಂಬಿ ತಿಂದರೆ ಮೂತ್ರಪಿಂಡಕ್ಕೆ ಹಾನಿ, ಎಚ್ಚರ!

ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿ ಸೇವನೆಯು ಮೂತ್ರಪಿಂಡದ ಹಾನಿಯಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಗೋಡಂಬಿ(cashews) ಯಾರಿಗೆ ಇಷ್ಟ ಆಗಲ್ಲ ಹೇಳಿ. ಒಣ ಹಣ್ಣಗಳ ಪೈಕಿ ಗೋಡಂಬಿಯನ್ನು ಅತಿ ಹೆಚ್ಚಾಗಿ ಜನರು ಇಷ್ಟಪಟ್ಟು ತಿನ್ನುತ್ತಾರೆ ಎಂದರೆ ತಪ್ಪಾಗಲಾರದು. ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ - ಅಜ್ಜಿಯಂದಿರೂ ಸಹ ತಿನ್ನಲು ಇಷ್ಟಪಡುತ್ತಾರೆ. ಈ ಗೋಡಂಬಿಯ ಮೂಲ ಬ್ರೆಜಿಲ್‌ನದ್ದಾಗಿದು (Brazil), ಇದರಲ್ಲಿ ಖನಿಜ ಅಂಶ(mineral content) ಹೇರಳವಾಗಿದೆ. ಗೋಡಂಬಿ ಮರಗಳಲ್ಲಿ ಇದರ ಹಣ್ಣು ನೇತಾಡುತ್ತಿರುತ್ತದೆ. ಹಣ್ಣಿನ ಕೆಳಭಾಗದಲ್ಲಿ ಗೋಡಂಬಿ ಇರುತ್ತದೆ. ವರ್ಷ ಪೂರ್ತಿ ಹಣ್ಣು ಹಾಗೂ ಗೋಡಂಬಿ ಲಭ್ಯವಿದ್ದು, ಇದರಿಂದ ಹಲವು ಲಾಭಗಳಿವೆ(benefits). ಆದರೆ ಕೆಲ ಆರೋಗ್ಯ ಸಮಸ್ಯೆ (health problems) ಇದ್ದವರಿಗೆ ಗೋಡಂಬಿ ಸೇವನೆ ಒಳ್ಳೆಯದಲ್ಲ ಎಂಬುದು ಇದೀಗ ಸದ್ಯ ಹೇಳಲಾಗುತ್ತಿರುವ ವಿಚಾರವಾಗಿದೆ.

    ಯಾರು ಸೇವಿಸಬಾರದು
    ಗೋಡಂಬಿ ಅಥವಾ ಕ್ಯಾಶೀವ್ ನಟ್‌ಗಳಲ್ಲಿ ಆಹಾರದ ಫೈಬರ್ ಅಂಶ ಹೊಂದಿದ್ದು, ಇದನ್ನು ನಮ್ಮ ದೇಹ ಉತ್ಪಾದನೆ ಮಾಡದ ಕಾರಣ ಅದನ್ನು ಹೊರಗಿನಿಂದ ಸೇವಿಸಬೇಕಾಗುತ್ತದೆ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗಲಿದ್ದು, ಜೀರ್ಣಾಂಗ ಸಂಬಂಧಿ ರೋಗಗಳನ್ನು ಕಡಿಮೆ ಮಾಡುತ್ತದೆ.

    ಗೋಡಂಬಿ ಎಲ್‌ಡಿಎಲ್‌ ಕೊಲೆಸ್ಟರಾಲ್‌ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಎಚ್‌ಡಿಎಲ್‌ ಕೊಲೆಸ್ಟರಾಲ್‌ ಒಯ್ಯುವ ಸಾಮಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ರೋಗ ಬರುವ ಅಪಾಯವನ್ನು ತಗ್ಗಿಸುತ್ತದೆ. ಆದರೆ, ಉಪ್ಪು ಅಂಶ ಹೆಚ್ಚಿರುವ ಅಥವಾ ಹುರಿದ ಗೋಡಂಬಿಯಲ್ಲದಂತೆ ನೋಡಿಕೊಳ್ಳಿ ಎನ್ನುತ್ತಾರೆ ತಜ್ಞರು.

    ಇದನ್ನು ಓದಿ: Cashew Trees: ಚಂಡಮಾರುತದಿಂದ ಗೋಡಂಬಿ ಮರಗಳನ್ನು ರಕ್ಷಿಸಿಕೊಳ್ಳಲು ಹೊಸ ವಿಧಾನ ಕಂಡುಹಿಡಿದ ರೈತ ಮಹಿಳೆ

    ಗೋಡಂಬಿಯಲ್ಲಿ ಪ್ರೊಟೀನ್, ಜೀವಸತ್ವಗಳು, ಖನಿಜಗಳು, ಪೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿರುತ್ತವೆ. ಮಿತವಾದ ಸೇವನೆಯ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಅಲರ್ಜಿ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರೂ ಸಹ ಗೋಡಂಬಿ ಸೇವನೆಯಿಂದ ದೂರ ಇರುವುದು ಒಳ್ಳೆಯದು ಎಂದು ಮುಂಬೈನ ಅಪೊಲೊ ಆಸ್ಪತ್ರೆಯ ಡಯೆಟೀಷಿಯನ್ ಡಾ. ಜಿನಾಲ್ ಪಟೇಲ್ ಅವರು ಮಾಹಿತಿ ನೀಡಿದ್ದಾರೆ.

    ತಲೆನೋವು ಕಾಡಬಹುದು
    ನೀವು ಗೋಡಂಬಿಯನ್ನು ಅತಿಯಾಗಿ ಸೇವಿಸಿದಾಗ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಅಜೀರ್ಣ ಸಮಸ್ಯೆ ಹೊಂದಿರುವವರಿಗೆ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿ ಸೇವನೆಯು ಮೂತ್ರಪಿಂಡದ ಹಾನಿಯಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಯಲ್ಲಿ ಇದರಲ್ಲಿರುವ ಅಮೈನೋ ಆಮ್ಲದಿಂದ ತಲೆನೋವಿನಂತಹ ಸಮಸ್ಯೆಗಳು ಇನ್ನೂ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

    ತೂಕ ಇಳಿಸಲು ಸಹಕಾರಿ
    ಗೋಡಂಬಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಜೊತೆಗೆ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಬೀಜಗಳಲ್ಲಿ ಹೆಚ್ಚಿನ ಪ್ರೋಟೀನ್, ಫೈಬರ್ ಮತ್ತು ಕೊಬ್ಬುಗಳನ್ನು ಹೊಂದಿರುತ್ತದೆ. ಹಸಿವನ್ನು ನಿವಾರಿಸುತ್ತದೆ. ತೂಕವನ್ನು ಕಳೆದುಕೊಳ್ಳಲು ಇದು ಉತ್ತಮ ಆಯ್ಕೆ ಎಂದು ತಜ್ಞರು ಹೇಳಿದ್ದಾರೆ.

    ಇತರೆ ಪ್ರಯೋಜನಗಳು
    ವಾರಕ್ಕೆ ನಾಲ್ಕು ಬಾರಿ ಗೋಡಂಬಿ ಸೇವಿಸುವುದರಿಂದ ಶೇ 37ರಷ್ಟು ಹೃದ್ರೋಗ ಅಪಾಯವು ಕಡಿಮೆಯಾಗುತ್ತದೆ. ಬೀಜಗಳು ಉತ್ಕರ್ಷಕ ನಿರೋಧಕಗಳನ್ನು ಹೊಂದಿರುತ್ತದೆ. ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿಯಮಿತವಾದ ಗೋಡಂಬಿ ಸೇವನೆಯು ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಾಯಕವಾಗಿದೆ.

    ಗೋಡಂಬಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ನಿಮ್ಮ ದೈಹಿಕ ಸ್ಥಿತಿ ಜೊತೆಗೆ ಮಾನಸಿಕ ಒತ್ತಡದಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದ್ದು, ನಿರಂತರ ಸೇವನೆಯಿಂದ ಬಹುಬೇಗ ಒತ್ತಡದಿಂದ ಸುಧಾರಿಸಿಕೊಳ್ಳಬಹುದು.

    ಇದನ್ನು ಓದಿ:cashews: ಗೋಡಂಬಿ ಪ್ರಿಯರ ನೀವು?; ಹಾಗಾದ್ರೆ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ!

    ವಾತಾವರಣದಲ್ಲಿ ಹೆಚ್ಚು ಮಾಲಿನ್ಯವಿದ್ದರೂ ಸಹ ಗೋಡಂಬಿಯನ್ನುತಿನ್ನುವುದರಿಂದ ಕಣ್ಣಿಗೆ ಸೋಂಕು ಬರದಂತೆ ತಡೆಯುತ್ತದೆ. ಯಾಕೆಂದರೆ ಇದು ಪ್ರಬಲ ಆ್ಯಂಟಿಆಕ್ಸಿಡೆಂಟ್ ಪಿಗ್ಮೆಂಟ್ ಹೊಂದಿದೆ. ಹೀಗಾಗಿ, ರೆಟಿನಾ ಮೇಲೆ ರಕ್ಷಣಾತ್ಮಕ ಪದರವನ್ನು ಸೃಷ್ಟಿ ಮಾಡಲಿದ್ದು, ಇದರಿಂದ ಹಾನಿಕರ ಯುವಿ ಕಿರಣಗಳನ್ನು ತಡೆಯುತ್ತದೆ.

    ಅಲರ್ಜಿ ಹಾಗೂ ಅಧಿಕರಕ್ತದೊತ್ತಡ ಇರುವವರರು ಸಾಧ್ಯವಾದಷ್ಟು ಗೋಡಂಬಿ ಸೇವನೆಯಿಂದ ದೂರ ಇರುವುದು ಒಳ್ಳೆಯದು. ಆಸೆಯಿಂದ ಒಂದೆರಡು ಸೇವಿಸಬಹುದು ಆದರೆ ಅಧಿಕವಾಗಿ ತಿಂದಲ್ಲಿ ಸಮಸ್ಯೆ ಕಟ್ಟಿಟ್ಟಬುತ್ತಿ. ವೈದ್ಯರ ಶಿಫಾರಸ್ಸಿನ ಮೇಲೆ ನೀವು ಗೋಡಂಬಿಯನ್ನು ಮಿತವಾಗಿ ಸೇವಿಸಿ.
    Published by:vanithasanjevani vanithasanjevani
    First published: