Eye Problem Causes: ಕಣ್ಣಿನ ದೃಷ್ಟಿ ಸಮಸ್ಯೆಗೆ ಈ ಆಹಾರಗಳು ಕಾರಣ

ವಯಸ್ಸಾದಂತೆ ನಮ್ಮ ದೃಷ್ಟಿ ಹದಗೆಡುತ್ತ ಹೋಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಒಬ್ಬರ ಆಹಾರ ಕ್ರಮ ಸರಿಯಾಗಿಲ್ಲ ಎಂದಾದರೆ ದೃಷ್ಟಿ ವೇಗವಾಗಿ ಕ್ಷೀಣಿಸಲು ಪ್ರಾರಂಭಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ದಿನಮಾನಗಳಲ್ಲಿ (Now A Days) ಅಧಿಕ ಜನರು (People) ತಮ್ಮ ಕಣ್ಣು (Eye) ದೃಷ್ಟಿ ಮಂದವಾಗಿದೆ, ಕಣ್ಣುರಿ ಸೇರಿದಂತೆ ಹಲವಾರು ದೂರು (Complaint) ನೀಡುತ್ತಾರೆ. ಕಣ್ಣಿನ ಸಮಸ್ಯೆ (Problem) ಉಂಟಾಗಲು ಮುಖ್ಯ ಕಾರಣ ಕೆಟ್ಟ ಜೀವನಶೈಲಿ ಆಗಿದೆ. ಇದನ್ನು ಎಲ್ಲರೂ ಮೊದಲು ಅರ್ಥ ಮಾಡಿಕೊಳ್ಳಬೇಕು. ಹೆಚ್ಚಿನ ಜನರು ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ಕಂಪ್ಯೂಟರ್ ಪರದೆಯ ಮುಂದೆ ಸಮಯ ಕಳೆಯುತ್ತಾರೆ. ಇದಲ್ಲದೇ ಕಣ್ಣುಗಳ ಮೇಲಿನ ನಿರಂತರ ಒತ್ತಡ, ಅತಿಯಾದ ಮೊಬೈಲ್ ಬಳಕೆ, ಕಡಿಮೆ ಬೆಳಕಿನಲ್ಲಿ ಕೆಲಸ ಮಾಡುವುದು, ಕಣ್ಣಿನ ಆರೈಕೆ ಮಾಡದೇ ಇರುವುದು, ಸರಿಯಾದ ಆಹಾರ ಕ್ರಮ ಪಾಲನೆ ಮಾಡಿರುವುದು.

  ಯಾವುದು ಕಣ್ಣುಗಳು ಕ್ರಮೇಣ ದುರ್ಬಲಗೊಳ್ಳಲು ಕಾರಣ

  ಇತ್ಯಾದಿ ಚಟುವಟಿಕೆಗಳು ಕಣ್ಣುಗಳು ಕ್ರಮೇಣ ದುರ್ಬಲಗೊಳ್ಳಲು ಕಾರಣ ಆಗುತ್ತವೆ. ಇದರ ಜೊತೆಗೆ ಕಣ್ಣಿನ ದೃಷ್ಟಿ ಕಡಿಮೆಯಾಗುತ್ತ ಹೋಗುತ್ತದೆ. ವಯಸ್ಸಾದಂತೆ ನಮ್ಮ ದೃಷ್ಟಿ ಹದಗೆಡುತ್ತ ಹೋಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಒಬ್ಬರ ಆಹಾರ ಕ್ರಮ ಸರಿಯಾಗಿಲ್ಲ ಎಂದಾದರೆ ದೃಷ್ಟಿ ವೇಗವಾಗಿ ಕ್ಷೀಣಿಸಲು ಪ್ರಾರಂಭಿಸುತ್ತದೆ.

  ಇಲ್ಲಿ ಹೇಳಲಾದ ನಾಲ್ಕು ಅಂಶಗಳು ಕಣ್ಣುಗಳನ್ನು ದುರ್ಬಲಗೊಳಿಸಲು ಕಾರಣವಾಗುತ್ತವೆ. ಕೆಲ ಸಂದರ್ಭದಲ್ಲಿ ಇದು ಕುರುಡುತನಕ್ಕೆ ಕಾರಣವಾಗುತ್ತದೆ. ಆ ವಿಷಯಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

  ಇದನ್ನೂ ಓದಿ: ಬಿಳಿ ಕೂದಲ ಸಮಸ್ಯೆ ನಿವಾರಣೆಗೆ ವಾಲ್ ನಟ್ ಸಿಪ್ಪೆಯಿಂದ ಹೀಗೆ ಮಾಡಿ, ಪ್ರಯೋಜನ ಪಡೆಯಿರಿ

  ಕಳಪೆ ಆಹಾರ ಕ್ರಮದಿಂದಾಗಿ ವಯಸ್ಸಾಗುವ ಮೊದಲೇ ದೃಷ್ಟಿ ದುರ್ಬಲ

  Express.co.uk ಗೆ ನೀಡಿದ ಸಂದರ್ಶನದಲ್ಲಿ ಫೀಲ್ ಗುಡ್ ಕಾಂಟ್ಯಾಕ್ಟ್ಸ್‌ನ ಕಾಂಟ್ಯಾಕ್ಟ್ ಲೆನ್ಸ್ ಆಪ್ಟಿಶಿಯನ್ ಶರೋನ್ ಕೋಪ್ಲ್ಯಾಂಡ್ ಹೇಳುವ ಪ್ರಕಾರ, ವಯಸ್ಸಾದಂತೆ ದೃಷ್ಟಿ ಕ್ಷೀಣಿಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಕಳಪೆ ಆಹಾರ ಕ್ರಮದಿಂದಾಗಿ ವಯಸ್ಸಾಗುವ ಮೊದಲೇ ದೃಷ್ಟಿ ದುರ್ಬಲವಾಗುತ್ತದೆ.

  ಅತಿಯಾದ ಸಿಹಿ ಪದಾರ್ಥ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಸೇವನೆ

  ಅತಿಯಾದ ಸಿಹಿ ಪದಾರ್ಥ ಸೇವನೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಸೇವನೆ ದೃಷ್ಟಿಗೆ ಹಾನಿ ಉಂಟು ಮಾಡುತ್ತದೆ. ಈ ಕೆಟ್ಟ ಸಂಸ್ಕರಿತ ಕಾರ್ಬೋಹೈಡ್ರೇಟ್ ಆಹಾರ ಬಿಳಿ ಬ್ರೆಡ್ ಮತ್ತು ಪಾಸ್ತಾದಲ್ಲಿ ಇದೆ. ಜೊತೆಗೆ ಕೆಚಪ್ ಮತ್ತು ತಂಪು ಪಾನೀಯ ಸಹ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು.

  ವಾಸ್ತವವಾಗಿ ಈ ವಸ್ತುಗಳು ವೇಗವಾಗಿ ಜೀರ್ಣವಾಗುತ್ತವೆ. ಇದರಿಂದ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣ. ರಕ್ತದ ಸಕ್ಕರೆ ಮಟ್ಟದ ಹೆಚ್ಚಳ 'ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್' (AMD) ಗೆ ಕಾರಣ. ಎಎಮ್‌ಡಿ ಕಣ್ಣಿನ ಕಾಯಿಲೆ. ಇದು ದೃಷ್ಟಿ ಮಂದ, ದೃಷ್ಟಿ ಕಳೆದುಕೊಳ್ಳುವುದು ಮತ್ತು ಅಂತಿಮವಾಗಿ ಸಂಪೂರ್ಣ ಕುರುಡುತನ ಉಂಟು ಮಾಡುತ್ತದೆ.

  ಟೈಪ್ 2 ಮಧುಮೇಹದ ಕಾರಣಗಳು

  ಶರೋನ್ ಕೋಪ್ಲ್ಯಾಂಡ್ ಪ್ರಕಾರ, ಅಧಿಕ ರಕ್ತದ ಸಕ್ಕರೆ ಮಟ್ಟವು ಟೈಪ್ 2 ಮಧುಮೇಹಕ್ಕೆ ಕಾರಣ. ಮಧುಮೇಹಿಗಳು ಡಯಾಬಿಟಿಕ್ ರೆಟಿನೋಪತಿ ಅಭಿವೃದ್ಧಿಪಡಿಸಬಹುದು. ಇದು ಕಣ್ಣಿನ ಸಮಸ್ಯೆ ಉಂಟು ಮಾಡಬಹುದು. ಇವರಲ್ಲಿ ರಕ್ತದ ಸಕ್ಕರೆ ಮಟ್ಟ ಅನಿಯಂತ್ರಿತವಾಗಿ ಉಳಿಯುತ್ತದೆ.

  ಪಾಶ್ಚಿಮಾತ್ಯ ಆಹಾರ ಸೇವನೆ

  ಪಾಶ್ಚಿಮಾತ್ಯ ಆಹಾರ ಸೇವಿಸುವ ಜನರು ಹೆಚ್ಚಿನ ಕಣ್ಣಿನ ಸಮಸ್ಯೆ ಹೊಂದಿರುವ ಸಾಧ್ಯತೆ ಹೆಚ್ಚು. ಇದು ಆಹಾರಗಳು ಕಣ್ಣುಗಳಿಗೆ ಹಾನಿ ಉಂಟು ಮಾಡುತ್ತದಂತೆ. ಸಾಸೇಜ್, ಬೇಕನ್, ಹ್ಯಾಮ್ ಮತ್ತು ಡೆಲಿ ಮಾಂಸಗಳಂತಹ ಸಂಸ್ಕರಿಸಿದ ಮಾಂಸ ಸೇವನೆ ತಪ್ಪಿಸಿ.

  ಈ ಸಂಸ್ಕರಿತ ಮಾಂಸವು ಬಹಳಷ್ಟು ಉಪ್ಪು ಹೊಂದಿರುತ್ತದೆ. ಇದು ರಕ್ತದೊತ್ತಡ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡವು ರೆಟಿನೋಪತಿಗೆ ಕಾರಣ. ರೆಟಿನಾವನ್ನು ಹಾನಿಗೊಳಿಸುತ್ತದೆ. ಜೊತೆಗೆ ರಕ್ತನಾಳಕ್ಕೆ ಹಾನಿ ಮಾಡುತ್ತದೆ. ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, 17 ವರ್ಷದ ಹುಡುಗನು ಜಂಕ್ ಫುಡ್ ಸೇವನೆ ನಂತರ ವರ್ಷದ ನಂತರ ಕುರುಡನಾಗಿದ್ದನು.

  ಇದನ್ನೂ ಓದಿ: ಮಹಿಳೆಯರ ಮುಖದ ಮೇಲಿನ ಅನಗತ್ಯ ಕೂದಲು ತೆಗೆದು ಹಾಕುವುದು ಹೇಗೆ?

  ಈ ಸಂಶೋಧನೆಯು ಜಂಕ್ ಫುಡ್ ತಿನ್ನುವುದರಿಂದ ಆಗುವ ಹಾನಿಯ ಬಗ್ಗೆ ನೇತ್ರ ತಜ್ಞರಿಗೆ ಎಚ್ಚರಿಕೆ ನೀಡಿದೆ. ಬಹಳಷ್ಟು ಫ್ರೆಂಚ್ ಫ್ರೈಸ್, ಪ್ರಿಂಗಲ್ಸ್, ಬಿಳಿ ಬ್ರೆಡ್ ಮತ್ತು ಸಂಸ್ಕರಿಸಿದ ಮಾಂಸ ಸೇವಿಸಿದವರನ್ನು ಪರೀಕ್ಷಿಸಿದಾಗ, ದೇಹದಲ್ಲಿ ವಿಟಮಿನ್ ಬಿ 12 ಮಟ್ಟವು ತುಂಬಾ ಕಡಿಮೆಯಾಗಿದೆ ಮತ್ತು ಮ್ಯಾಕ್ರೋಸೈಟಿಕ್ ಅನೀಮಿಯಾದೊಂದಿಗೆ ಅನೇಕ ವಿಟಮಿನ್ಗಳ ಕೊರತೆ ಕಂಡು ಬಂದಿದೆ.
  Published by:renukadariyannavar
  First published: