Arthritis Fruits: ಕೀಲು ನೋವು ಸಮಸ್ಯೆಗೆ ಪರಿಹಾರ ನೀಡಲು ಯಾವ ಹಣ್ಣುಗಳ ಸೇವನೆ ಮಾಡುವುದು ಉತ್ತ,ಮ ಗೊತ್ತಾ?

ನಿಮ್ಮನ್ನು ಕಾಡುವ ಕೀಲುನೋವಿಗೆ ನೀವು ಕೆಲವು ಹಣ್ಣುಗಳ ಸೇವನೆ ಮಾಡುವ ಮೂಲಕ ಬೇಸಿಗೆಯಲ್ಲಿ ಈ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು. ಈಗ ನಾವು ಕೀಲು ನೋವಿನಿಂದ ಪರಿಹಾರ ನೀಡುವ ಕೆಲ ಹಣ್ಣುಗಳ ಇಲ್ಲಿ ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಟ್ಟ ಜೀವನಶೈಲಿ (Bad Lifestyle), ವ್ಯಾಯಾಮ (Exercise) ರಹಿತ ಜೀವನ, ಆಹಾರದಲ್ಲಿ (Food) ಹಸಿರು ತರಕಾರಿ, ಹಣ್ಣು (Fruits) ಸೇರಿಸದೇ ಸೇವನೆ ಮಾಡುವುದು ತುಂಬಾ ಅನಾರೋಗ್ಯಕ್ಕೆ (Unhealthy) ಕಾರಣ ಆಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಯಸ್ಕರರು ಸೇರಿದಂತೆ ಸ್ವಲ್ಪ ವಯಸ್ಸಾಗುತ್ತಲೇ ಕೀಲು ನೋವಿನ ಸಮಸ್ಯೆ ಕಾಡುವುದು ತುಂಬಾ ಸಾಮಾನ್ಯ ಸಂಗತಿ ಎಂಬಂತಾಗಿದೆ. 30 ವರ್ಷ ದಾಟಿದ ಕೂಡಲೇ ಹೆಚ್ಚಿನ ಜನರು ಕೀಲುನೋವಿನ ಸಮಸ್ಯೆಗೆ ತುತ್ತಾಗುತ್ತಾರೆ. ಕೀಲುನೋವು ಶುರುವಾಗುತ್ತಲೇ ಜನರ ದೈಹಿಕ ಚಟುವಟಿಕೆಗಳು ಮತ್ತಷ್ಟು ಕುಗ್ಗುತ್ತವೆ. ಹೀಗಾಗಿ ನೋವಿಗೆ ಪರಿಹಾರ ಪಡೆಯಲು ಆಹಾರದಲ್ಲಿ ಔಷಧ, ವ್ಯಾಯಾಮ ಸೇರಿಸುತ್ತಾರೆ.

    ಆದರೆ ನಿಮ್ಮನ್ನು ಕಾಡುವ ಕೀಲುನೋವಿಗೆ ನೀವು ಕೆಲವು ಹಣ್ಣುಗಳ ಸೇವನೆ ಮಾಡುವ ಮೂಲಕ ಬೇಸಿಗೆಯಲ್ಲಿ ಈ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು. ಈಗ ನಾವು ಕೀಲು ನೋವಿನಿಂದ ಪರಿಹಾರ ನೀಡುವ ಕೆಲ ಹಣ್ಣುಗಳ ಇಲ್ಲಿ ನೋಡೋಣ.

    ಕಿತ್ತಳೆ ಹಣ್ಣು ತಿನ್ನುವುದು ಸಹಕಾರಿ

    ನಿಮ್ಮ ಆಹಾರದಲ್ಲಿ ಕಿತ್ತಳೆ ಹಣ್ಣು ಸೇರಿಸಿ. ಇದರ ಸೇವನೆ ನೀರಿನ ಕೊರತೆ ನಿವಾರಿಸುತ್ತದೆ. ವಿಟಮಿನ್ ಸಿ ಇದರಲ್ಲಿ ಸಾಕಷ್ಟು ಹೇರಳವಾಗಿದೆ. ಇದು ನಿಮ್ಮ ಕೀಲು ನೋವಿನ ಸಮಸ್ಯೆಗೆ ಪರಿಹಾರ ನೀಡಲು ಪ್ರಯೋಜನಕಾರಿಯಾಗಿದೆ.

    ಇದನ್ನೂ ಓದಿ: ಯಾವ ಡಯಟ್ ಪ್ಲಾನ್ ಫಾಲೋ ಮಾಡಿದ್ರೆ ವೇಗವಾಗಿ ತೂಕ ಕಡಿಮೆ ಮಾಡಬಹುದು? ಸಂಶೋಧನೆ ಕಂಡುಕೊಂಡಿದ್ದೇನು?

    ದ್ರಾಕ್ಷಿ ಹಣ್ಣುಗಳು ಪ್ರಯೋಜನಕಾರಿ

    ದ್ರಾಕ್ಷಿ ಹಣ್ಣಿನ ಸೇವನೆ ಹಲವು ರೋಗಗಳಿಂದ ನಿಮ್ಮನ್ನು ರಕ್ಷಣೆ ಮಾಡುತ್ತದೆ. ಇದರ ಸೇವನೆಯಿಂದ ಕೀಲು ನೋವಿಗೆ ಪರಿಹಾರ ನೀಡುತ್ತದೆ.

    ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವುದು ಸಹಕಾರಿ

    ಬೇಸಿಗೆಯಲ್ಲಿ ಸಿಗುವ ಕಲ್ಲಂಗಡಿ ನಿಮ್ಮ ಆರೋಗ್ಯಕ್ಕೆ ಹಾಗೂ ಕೀಲು ನೋವಿನ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಪ್ರಯೋಜನಕಾರಿ ಆಗಿದೆ. ಇದು ದೇಹದ ನೀರಿನ ಕೊರತೆ ತೆಗೆದು ಹಾಕುತ್ತದೆ. ತ್ವರಿತ ಶಕ್ತಿ ನೀಡುತ್ತದೆ.

    ಮೂಳೆಗಳು ಗಟ್ಟಿಯಾಗಲು ಈ ಆಹಾರ ಸೇವನೆ ಮಾಡಿ

    ಗ್ರೀಕ್ ಮೊಸರು ಸೇವನೆ ಮಾಡಿ

    ವಯಸ್ಸಾಗುವಿಕೆಯಿಂದ ಮತ್ತು ಮೂಳೆಗಳು ದುರ್ಬಲವಾಗುವುದನ್ನು ತಡೆಯಲು ನೀವು ಬೆಳಗಿನ ಉಪಾಹಾರದಲ್ಲಿ ಗ್ರೀಕ್ ಮೊಸರನ್ನು ಸೇವಿಸಬಹುದು. ಓಟ್ಸ್, ವಾಲ್‌ನಟ್‌ಗಳನ್ನು ಗ್ರೀಕ್ ಮೊಸರಿನೊಂದಿಗೆ ಬೆರೆಸುವುದರಿಂದ ನಿಮ್ಮ ದೇಹವು ಕ್ಯಾಲ್ಸಿಯಂ, ಅಮೈನೋ ಆಮ್ಲಗಳು ಮತ್ತು ಮೆಗ್ನೀಸಿಯಮ್ ಅನ್ನು ಹೇರಳವಾಗಿ ಪಡೆಯುತ್ತದೆ.

    ಬೆಳಗಿನ ಉಪಾಹಾರದಲ್ಲಿ ಇದನ್ನು ತಿನ್ನುವುದರಿಂದ, ನಿಮ್ಮ ಹೊಟ್ಟೆಯು ದೀರ್ಘ ಕಾಲದವರೆಗೆ ತುಂಬಿರುತ್ತದೆ, ಇದರಿಂದ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇಂತಹ ಇನ್ನೂ ಹಲವು ಪದಾರ್ಥಗಳು ಇವೆ. ಇವುಗಳು ನೀವು ಮೂಳೆ ನಷ್ಟ ಅಥವಾ ಮೂಳೆ ವಯಸ್ಸಾಗುವ ಸಮಸ್ಯೆ ತಪ್ಪಿಸಬಹುದು.

    ಡೈರಿ ಉತ್ಪನ್ನಗಳ ಸೇವನೆ

    ಮೂಳೆಗಳ ಆರೋಗ್ಯಕ್ಕೆ ಮತ್ತು ವಯಸ್ಸಾಗುವಿಕೆ ತಡೆಗೆ ನೀವು ಆಹಾರದಲ್ಲಿ ಕ್ಯಾಲ್ಸಿಯಂ ಸೇರಿಸುವುದು ಮುಖ್ಯ. ಕ್ಯಾಲ್ಸಿಯಂ ಡೈರಿ ಉತ್ಪನ್ನಗಳಲ್ಲಿ ಹೆಚ್ಚೆಚ್ಚು ಕಂಡು ಬರುತ್ತದೆ. ಇದಲ್ಲದೆ ಹಸಿರು ಎಲೆ ತರಕಾರಿ, ಬಾದಾಮಿ ಮತ್ತು ಸೋಯಾ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚು ಕಂಡು ಬರುತ್ತದೆ.

    ಮೂಳೆಗಳು ಅನೇಕ ಖನಿಜಗಳಿಂದ ಮಾಡಲ್ಪಟ್ಟಿದೆ. ಆದ್ದರಿಂದ ಕ್ಯಾಲ್ಸಿಯಂ ಅನ್ನು ಮೂಳೆಗಳಿಗೆ ಪ್ರಮುಖ ಆಹಾರವೆಂದು ಪರಿಗಣಿಸಲಾಗಿದೆ. ಮೂಳೆಗಳು ಕ್ಯಾಲ್ಸಿಯಂ ಅನ್ನು ಸಂಗ್ರಹಿಸುತ್ತವೆ. ಆದ್ದರಿಂದ ದೇಹದಲ್ಲಿ ಈ ಖನಿಜದ ಕೊರತೆಯಿದ್ದರೆ ಕ್ಯಾಲ್ಸಿಯಂ ಮೂಳೆಗಳಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದ ಮೂಳೆಗಳು ಸುಲಭವಾಗಿ ಹಾನಿ ಮತ್ತು ನೋವಿಗೆ ಕಾರಣವಾಗಬಹುದು.

    ಇದನ್ನೂ ಓದಿ: ನಿಮ್ಮ ನಿದ್ರಾಭಂಗಕ್ಕೆ ಈ ಲಯ ತಪ್ಪುವುದೇ ಕಾರಣ, ಇಂದೇ ನಿಮ್ಮ ಅಭ್ಯಾಸಗಳನ್ನು ಸರಿಪಡಿಸಿ!

    ಕಡಿಮೆ ಸಿಹಿ ಮೊಸರು ಸೇವನೆ ಮಾಡಿ

    ಗ್ರೀಕ್ ಮೊಸರಿನಂತೆ ಬೆಳಿಗ್ಗೆ ಕಡಿಮೆ ಸಿಹಿ ಮೊಸರು ಸೇವನೆ ಮಾಡುವ ಮೂಲಕ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಸಹ ಪೂರೈಸಬಹುದು. ಇದಲ್ಲದೆ ಸಾಕಷ್ಟು ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಅನ್ನು ಸೇವಿಸುವ ಮೂಲಕ ಮೂಳೆಗಳ ಹಾನಿ, ನೋವು ತಡೆಯಬಹುದು.
    Published by:renukadariyannavar
    First published: