Folic Acid: ರಕ್ತಹೀನತೆ ಮತ್ತು ಕೂದಲು ಉದುರುವಿಕೆ ತಡೆಯುವ ಫೋಲಿಕ್ ಆಮ್ಲ ಯಾವ ಪದಾರ್ಥಗಳಲ್ಲಿದೆ ಗೊತ್ತಾ?

ಫೋಲಿಕ್ ಆಮ್ಲವು ಹೊಸ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ. ಇದು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ರಕ್ತಹೀನತೆ ತಡೆದು, ಕೂದಲು ಉದುರುವಿಕೆ ತಡೆಯುತ್ತದೆ. ಫೋಲಿಕ್ ಆಮ್ಲ ದೇಹಕ್ಕೆ ಬಹುತೇಕ ಪ್ರಯೋಜನಗಳನ್ನು ದೊರೆಯುವಂತೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಾವು ಏನು ತಿನ್ನುತ್ತೇವೆ (What Eating) ಮತ್ತು ಯಾವ ಪದಾರ್ಥಗಳನ್ನು (Which Ingredients) ಎಷ್ಟು ಪ್ರಮಾಣದಲ್ಲಿ (Limit) ತಿನ್ನುತ್ತೇವೆ ಎಂಬುದು ನಮ್ಮ ಆರೋಗ್ಯ (Health) ಕಾಪಾಡುತ್ತದೆ. ಕೆಲವು ಮಾತ್ರವಲ್ಲ, ಯಾವುದೇ ಪದಾರ್ಥವನ್ನು ಅತಿಯಾಗಿ ತಿನ್ನುವುದು ವಿಷಕ್ಕೆ ಸಮಾನ. ನಾಲಿಗೆಗೆ ಯಾವುದು ರುಚಿಯೋ ಅದನ್ನು ಹೆಚ್ಚು ತಿನ್ನಲು ಜನರು ಇಷ್ಟ ಪಡುತ್ತಾರೆ. ಆದರೆ ಯಾವುದು ನಾಲಿಗೆಗೆ ರುಚಿ ಕೊಡುತ್ತದೆಯೋ ಅದು ಆರೋಗ್ಯಕ್ಕೆ ಕಹಿ ಅಂದರೆ ದೇಹಕ್ಕೆ ಬೇಗ ಕೆಟ್ಟ ಕಾಯಿಲೆ ಅಥವಾ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳು ಮತ್ತು ಜೀವಸತ್ವಗಳಿವೆಯಾ? ಎಂದು ತಿಳಿದುಕೊಳ್ಳಬೇಕು. ಜೊತೆಗೆ ದೇಹಕ್ಕೆ ಬೇಕಾದ ಪ್ರಮಾಣದಲ್ಲಿ ಮಾತ್ರ ಸೇವನೆ ಮಾಡಬೇಕು.

    ರಕ್ತಹೀನತೆ ಮತ್ತು ಕೂದಲು ಉದುರುವಿಕೆ ತಡೆಯುತ್ತದೆ ಫೋಲಿಕ್ ಆಮ್ಲ

    ಹಾಗಾಗಿ ಎಲ್ಲಾ ರೀತಿಯ ಪದಾರ್ಥ ಸೇವನೆ ನಮ್ಮ ದೇಹಕ್ಕೆ ವಿವಿಧ ಪೋಷಕಾಂಶಗಳು ದೊರೆಯುವಂತೆ ಮಾಡುತ್ತದೆ. ಫೋಲಿಕ್ ಆಮ್ಲವೂ ಕೂಡ ಅಂಥದ್ದೇ ಒಂದು ಪೋಷಕಾಂಶವಾಗಿದೆ. ಫೋಲಿಕ್ ಆಮ್ಲವು ಹೊಸ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ. ಇದು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ರಕ್ತಹೀನತೆ ತಡೆದು, ಕೂದಲು ಉದುರುವಿಕೆ ತಡೆಯುತ್ತದೆ.

    ಫೋಲಿಕ್ ಆಮ್ಲ ದೇಹಕ್ಕೆ ಬಹುತೇಕ ಪ್ರಯೋಜನಗಳನ್ನು ದೊರೆಯುವಂತೆ ಮಾಡುತ್ತದೆ. ಇದು ದೀರ್ಘ ಪಟ್ಟಿ ಹೊಂದಿದೆ. ಇಲ್ಲಿ ನಾವು ಫೋಲಿಕ್ ಆಮ್ಲ ಯಾವ ಆಹಾರ ಪದಾರ್ಥಗಳಲ್ಲಿ ಇದೆ ಎಂಬುದನ್ನು ಹೇಳಲಿದ್ದೇವೆ. ಇವುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ. ಇದು ನಿಮ್ಮನ್ನು ದೀರ್ಘ ಕಾಲದವರೆಗೆ ಯುವ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಬಾಲಿವುಡ್ ಕಿರುತೆರೆಯ ನಟಿಯರ ಆಹಾರ ಯೋಜನೆ ಕ್ರಮ ಹಾಗೂ ಫಿಟ್ನೆಸ್ ರಹಸ್ಯ ಹೀಗಿದೆ

    ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರ ಪದಾರ್ಥಗಳು ಯಾವವು?

    ಅಕ್ಕಿ

    ಕಡಲೆ ಕಾಳು

    ಉದ್ದಿನ ಬೇಳೆ

    ಗೋವಿನಜೋಳ

    ಕಾಳುಗಳು

    ಹಸಿರು ಎಲೆ ತರಕಾರಿಗಳು

    ಬೆಂಡೆಕಾಯಿ

    ಧಾನ್ಯಗಳು

    ಒಣ ಹಣ್ಣುಗಳು

    ನೆಲಗಡಲೆ

    ಫೋಲಿಕ್ ಆಮ್ಲ ದೇಹಕ್ಕೆ ಯಾಕೆ ಮುಖ್ಯ?

    ದೇಹದಲ್ಲಿ ಫೋಲಿಕ್ ಆಮ್ಲದ ಕೊರತೆಯಿದ್ದರೆ ದೇಹ ಭಾರವಾಗುತ್ತದೆ. ಹೀಗಾಗಿ ನಡೆಯಲು, ನಿಲ್ಲಲು, ಕುಳಿತುಕೊಳ್ಳಲು ಆಗದೇ ಸಮಸ್ಯೆ ಎದುರಿಸಬೇಕಾಗುತ್ತದೆ.

    ದೇಹದಲ್ಲಿ ಫೋಲಿಕ್ ಆಮ್ಲವು ಕಡಿಮೆಯಾದರೆ ಕೂದಲು ವೇಗವಾಗಿ ತೆಳುವಾಗುವುದು ಮತ್ತು ಉದುರಲು ಶುರುವಾಗುತ್ತದೆ.

    ಫೋಲಿಕ್ ಆಮ್ಲದ ಕೊರತೆ ಮೂಳೆಗಳು ಮತ್ತು ಸ್ನಾಯುಗಳ ದುರ್ಬಲತೆಯನ್ನು ಹೆಚ್ಚಿಸುತ್ತದೆ.

    ರಕ್ತದಲ್ಲಿ ಕೆಂಪು ರಕ್ತ ಕಣಗಳ ಕೊರತೆ ಉಂಟು ಮಾಡಲು ದೇಹದಲ್ಲಿ ಕಡಿಮೆ ಮಟ್ಟದ ಫೋಲಿಕ್ ಆಮ್ಲ ಕಾರಣವಾಗಿದೆ.

    ಫೋಲಿಕ್ ಆಮ್ಲದ ಕೊರತೆ ಡಿಎನ್ಎಯಲ್ಲಿ ಬದಲಾವಣೆ ಉಂಟಾಗಲು ಕಾರಣ. ಇದು ಕ್ರಮೇಣ ಕ್ಯಾನ್ಸರ್ ಉಂಟು ಮಾಡಬಹುದು.

    ಫೋಲಿಕ್ ಆಮ್ಲದ ಕೊರತೆ ಸಾರ್ವಕಾಲಿಕ ಆಯಾಸ ಉಂಟು ಮಾಡುತ್ತದೆ.

    ಫೋಲಿಕ್ ಆಮ್ಲದ ಕೊರತೆ ಸ್ನಾಯು ನೋವಿನ ಸಮಸ್ಯೆಗೆ ಕಾರಣವಾಗುತ್ತದೆ.

    ಹಸಿವು ಕಡಿಮೆಯಾಗುತ್ತದೆ. ಮತ್ತು ತೂಕ ನಷ್ಟ ಸಂಭವಿಸಬಹುದು.

    ಹೊಟ್ಟೆಯು ಅಸಮಾಧಾನ ಹಾಗೂ ಖಿನ್ನತೆ ಅಥವಾ ಇತರ ಮಾನಸಿಕ ಕಾಯಿಲೆಗಳು ಉಂಟಾಗಲು ಕಾರಣವಾಗುತ್ತದೆ.

    ಆಹಾರದಲ್ಲಿ ಫೋಲಿಕ್ ಆಮ್ಲ ಕಡಿಮೆ ಆಗಲು ಕಾರಣವೇನು?

    ನಿಮಗೆ ಮೇಲೆ ತಿಳಿಸಲಾದ ಎಲ್ಲಾ ಆಹಾರಗಳ ಪಟ್ಟಿಯಲ್ಲಿ ಹೆಚ್ಚಿನ ಪದಾರ್ಥಗಳು ನಿಮ್ಮ ದೇಹ ಸೇರುವ ಹೊತ್ತಿಗೆ ಅವುಗಳಲ್ಲಿ ಫೋಲಿಕ್ ಆಮ್ಲದ ಅಂಶವು ತುಂಬಾ ಕಡಿಮೆಯಾಗಿರುತ್ತದೆ. ಸಂಶೋಧನೆಯ ಪ್ರಕಾರ, ಬೇಳೆಕಾಳು ಮತ್ತು ತರಕಾರಿಗಳನ್ನು ಅಡುಗೆ ಮಾಡುವಾಗ 30 ರಿಂದ 80 ಪ್ರತಿಶತದಷ್ಟು ವಿಟಮಿನ್ಗಳು ಮತ್ತು ಫೋಲಿಕ್ ಆಮ್ಲವು ಕಳೆದು ಹೋಗುತ್ತದೆ.

    ಇದನ್ನೂ ಓದಿ: ಅನ್ನನಾಳ ಕ್ಯಾನ್ಸರ್ ರೋಗಿಗಳು ಎದುರಿಸುವ ಸಮಸ್ಯೆಗಳು ಯಾವವು? ಸಂಶೋಧನೆ ಏನು ಹೇಳುತ್ತದೆ?

    ಹೀಗಾಗಿ ಸಾಧ್ಯವಾದಷ್ಟು ಹಸಿ ತರಕಾರಿ ಸಲಾಡ್, ಹಣ್ಣುಗಳು, ಒಣ ಹಣ್ಣುಗಳು ಮತ್ತು ಮೊಸರು ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಕತ್ತರಿಸಿದ ನಂತರ ತರಕಾರಿಗಳನ್ನು ಎಂದಿಗೂ ತೊಳೆಯಬಾರದು ಎಂದು ಸಲಹೆ ನೀಡಲಾಗುತ್ತದೆ.

    ಬೇಳೆಕಾಳುಗಳನ್ನು ತೊಳೆದ ನಂತರ, ಈ ಬೇಳೆಕಾಳುಗಳ ತಯಾರಿಕೆಯಲ್ಲಿ ನೀವು ನೆನೆಸಿದ ಅದೇ ನೀರನ್ನು ಬಳಸಿ.
    Published by:renukadariyannavar
    First published: