Kitchen Tips: ಯಾವ ಪಾತ್ರೆಯಲ್ಲಿ ಆಹಾರ ಬೇಯಿಸಿ, ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ?

ನಾವು ಯಾವ ಲೋಹದ ಪಾತ್ರೆಯಲ್ಲಿ ಅಡುಗೆ ಮಾಡಿ ತಿನ್ನುತ್ತೇವೆ ಮತ್ತು ಆಹಾರ ತಯಾರಿಸುತ್ತೇವೆ ಎಂಬುದು ತುಂಬಾ ಮುಖ್ಯ. ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಾಯಿಲೆಗಳಿಗೆ (Disease) ಕೇವಲ ಆಹಾರ (Food) ಪದ್ಧತಿ, ಜೀವನಶೈಲಿ (Lifestyle) ಮಾತ್ರ ಕಾರಣವಾಗಿಲ್ಲ. ಹೆಚ್ಚಿನ ರೋಗಗಳನ್ನು ಆರೋಗ್ಯಕರ (Healthy) ಜೀವನಶೈಲಿಯಿಂದ ವಾಸಿ ಮಾಡಬಹುದು. ಕಾಯಿಲೆಯನ್ನು ವಾಸಿ ಮಾಡುವ ಮೊದಲು ಆರೋಗ್ಯಕರ ಜೀವನಶೈಲಿಗೆ ಏನು ಬೇಕು ಅನ್ನೋದನ್ನ ಸರಿಯಾಗಿ ಮೊದಲು ತಿಳಿದುಕೊಳ್ಳಬೇಕು. ವ್ಯಾಯಾಮ ಮಾಡೋದು ಮತ್ತು ಆರೋಗ್ಯಕರ ಆಹಾರ ಕ್ರಮ ಅನುಸರಿಸುವುದು ಮಾತ್ರ ಸಾಕಾಗಲ್ಲ. ವಾಸ್ತವವಾಗಿ ಆರೋಗ್ಯಕರ ಆಹಾರ ಕ್ರಮ ಮತ್ತು ವ್ಯಾಯಾಮದ ಜೊತೆಗೆ ದೇಹವು ಸಾಕಷ್ಟು ಪೋಷಕಾಂಶ ಪಡೆಯುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು. ಇನ್ನೊಂದೆಡೆ ಪೋಷಕಾಂಶಗಳ ವಿಷಯಕ್ಕೆ ಬಂದಾಗ, ನಾವು ಏನು ತಿನ್ನುತ್ತೇವೆ ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು.

    ಅದರೊಂದಿಗೆ ಯಾವ ಲೋಹ ಬಳಸಿ ಅಡುಗೆ ಮಾಡುತ್ತಿದ್ದೇವೆ. ಅಂದರೆ ಯಾವ ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆಯೂ ಸೂಕ್ತ ಗಮನ ಹರಿಸಬೇಕು. ಈ ಬಗ್ಗೆ ನೀವು ಯೋಚನೆ ಮಾಡಬೇಕು.

    ಯಾವ ಲೋಹದಲ್ಲಿ ಅಡುಗೆ ಮಾಡಿ ತಿನ್ನುತ್ತೇವೆ ಎಂಬ ಬಗ್ಗೆ ಗಮನಹರಿಸಿ

    ವಾಸ್ತವವಾಗಿ ನಾವು ಯಾವ ಲೋಹದಲ್ಲಿ ಅಡುಗೆ ಮಾಡಿ ತಿನ್ನುತ್ತೇವೆ ಮತ್ತು ಆಹಾರ ತಯಾರಿಸುತ್ತೇವೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮ ಹೊಂದಿದೆ. ಹಾಗಾಗಿ ಅಡುಗೆ ಮಾತ್ರವಲ್ಲ, ಯಾವ ಆಹಾರವನ್ನು ಯಾವ ಪಾತ್ರೆಯಲ್ಲಿ ಬೇಯಿಸಬೇಕು ಎಂಬುದನ್ನು ಗಮನಿಸಿ.

    ಇದನ್ನೂ ಓದಿ: ಮಧ್ಯ ವಯಸ್ಕರರು ಪ್ರತಿದಿನ ಎಷ್ಟು ಹೊತ್ತಿನ ನಿದ್ದೆ ಮಾಡಬೇಕು? ಸಂಶೋಧಕರು ಏನು ಹೇಳುತ್ತಾರೆ?

    ನಿಮ್ಮ ಮನೆಯಲ್ಲಿ ಅಡುಗೆ ಮಾಡಲು ಮತ್ತು ತಿನ್ನಲು ಬಳಸುವ ವಿವಿಧ ಲೋಹದ ಪಾತ್ರೆಗಳಿವೆ. ನೀವು ಸರಿಯಾದ ಪಾತ್ರೆಗಳಲ್ಲಿ ಆಹಾರ ಬೇಯಿಸಿದಾಗ ಅಥವಾ ತಿನ್ನುವಾಗ ಅದು ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ಅದರ ಪೋಷಕಾಂಶಗಳು ಹೆಚ್ಚುತ್ತವೆ.

    ತಾಮ್ರದ ಪಾತ್ರೆಯಲ್ಲಿ ಆಹಾರ ತಯಾರಿಸಿ ತಿನ್ನುವುದು ದೇಹದಲ್ಲಿ ಕಾಲಜನ್ ಅಂಶವನ್ನು ಹೆಚ್ಚಿಸುತ್ತದೆ.  ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ. ಹಾಗಾದರೆ ಯಾವ ರೀತಿಯ ಪಾತ್ರೆಗಳಲ್ಲಿ ಬೇಯಿಸಬೇಕು ಎಂದು ತಿಳಿಯೋಣ.

    ಯಾವ ರೀತಿಯ ಪಾತ್ರೆಗಳಲ್ಲಿ ಆಹಾರ ಬೇಯಿಸಬೇಕು?

    ತಾಮ್ರದ ಮಡಕೆ

    ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ತಾಮ್ರದ ಜಗ್ ಅಥವಾ ಪಾತ್ರೆಗಳಲ್ಲಿ ನೀರು ಸಂಗ್ರಹಿಸುವ ಪ್ರಕ್ರಿಯೆ ತುಂಬಾ ಹಳೆಯದು. ನೀರನ್ನು ಶುದ್ಧೀಕರಿಸಲು ಇದು ನೈಸರ್ಗಿಕ ಪ್ರಕ್ರಿಯೆ ಆಗಿದೆ. ಇದು ನೀರಿನಲ್ಲಿ ಇರುವ ಕೊಳಕು ಮತ್ತು ಬ್ಯಾಕ್ಟೀರಿಯಾವನ್ನು ಫಿಲ್ಟರ್ ಮಾಡಿ ಕಾರ್ಯ ನಿರ್ವಹಿಸುತ್ತದೆ.

    ಇದು ದೇಹಕ್ಕೆ ಹಾನಿಕಾರಿಯಾಗಿದೆ ಎಂದು ಸಾಬೀತಾಗಿದೆ. ಅದೇ ವೇಳೆ ತಾಮ್ರದ ಪಾತ್ರೆಗಳಲ್ಲಿ ನೀರು ಸಂಗ್ರಹಿಸುವುದು ಅದರ ಗುಣಮಟ್ಟ ಹೆಚ್ಚಿಸುತ್ತದೆ. ಇದು ಮೂಳೆಗಳು ಸೇರಿದಂತೆ ಅನೇಕ ದೈಹಿಕ ಸಮಸ್ಯೆ ತೆಗೆದು ಹಾಕಲು ಸಹಕಾರಿ ಆಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಉತ್ಕರ್ಷಣ ನಿರೋಧಕ, ಉರಿಯೂತದ ಗುಣಲಕ್ಷಣಗಳಿಂದ ಕೂಡಿದೆ.

    ಹಿತ್ತಾಳೆಯ ಪಾತ್ರೆಗಳು

    ಹಿತ್ತಾಳೆಯು ಅಯಸ್ಕಾಂತೀಯವಲ್ಲದ, ಶಾಖ ವಾಹಕ ಮತ್ತು ದೀರ್ಘಾವಧಿಯ ಪಾತ್ರೆ. ಇದು 70 ಪ್ರತಿಶತ ತಾಮ್ರ ಮತ್ತು 30 ಪ್ರತಿಶತ ಸತುವುಗಳಿಂದ ಮಾಡಲ್ಪಟ್ಟಿದೆ. ಈ ಪಾತ್ರೆಯಲ್ಲಿ ಆಹಾರ ಬೇಯಿಸುವುದು ಕೇವಲ 7 ಪ್ರತಿಶತದಷ್ಟು ಪೋಷಕಾಂಶಗಳನ್ನು ನಾಶಪಡಿಸುತ್ತದೆ.

    ತಾಮ್ರ ಮತ್ತು ಸತುವು ಎರಡರ ಸಂಯೋಜನೆ ಆರೋಗ್ಯಕ್ಕೆ ಪ್ರಯೋಜನಕಾರಿ. ದೇಹದಲ್ಲಿ ತಾಮ್ರದ ಕೊರತೆಯು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ಚರ್ಮ ಮತ್ತು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಕಾರಣವಾಗುತ್ತದೆ.

    ಮತ್ತೊಂದೆಡೆ ಹಿತ್ತಾಳೆ ಪಾತ್ರೆಗಳನ್ನು ಮಸೂರ ಮತ್ತು ಅಕ್ಕಿಯಂತಹ ಆಮ್ಲೀಯವಲ್ಲದ ಆಹಾರ ತಯಾರಿಸಲು ಹೆಚ್ಚು ಬಳಸಲಾಗುತ್ತದೆ.

    ಕಂಚಿನ ಮಡಿಕೆಗಳು

    ಮಿಶ್ರಲೋಹ ಅಂದರೆ ತಾಮ್ರ ಮತ್ತು ರಂಗವನ್ನು ಬೆರೆಸಿ ಕಂಚಿನ ಪಾತ್ರೆಗಳನ್ನು ತಯಾರಿಸಲಾಗುತ್ತದೆ. ಇವೆರಡೂ ಸಮಾನ ಪ್ರಮಾಣದಲ್ಲಿರುತ್ತವೆ ಮತ್ತು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದು ತಿನ್ನಲು ಉತ್ತಮವಾದ ಲೋಹಗಳಲ್ಲಿ ಒಂದಾಗಿದೆ. ಇದು ಆಹಾರದ ಆಮ್ಲ ಪ್ರಮಾಣ ಕಡಿಮೆ ಮಾಡುತ್ತದೆ.

    ಹೊಟ್ಟೆ ಅಥವಾ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಸುಧಾರಿಸುತ್ತದೆ. ಈ ಲೋಹದ ಗುಣಲಕ್ಷಣಗಳು ಸಂಧಿವಾತ ಉರಿಯೂತ ಕಡಿಮೆ ಮಾಡುತ್ತದೆ. ಧಾತುವು ಸ್ಮರಣೆಯನ್ನು ಸುಧಾರಿಸುತ್ತದೆ ಮತ್ತು ಥೈರಾಯ್ಡ್ ಸಮತೋಲನಗೊಳಿಸುತ್ತದೆ.

    ಕಬ್ಬಿಣದ ಮಡಕೆಗಳು

    ಕಬ್ಬಿಣದ ಪಾತ್ರೆಗಳು ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಆದರೆ ಇತ್ತೀಚಿನ ದಿನಗಳಲ್ಲಿ ನಾನ್ ಸ್ಟಿಕ್ ಪ್ಯಾನ್‌ ಬಳಕೆ ಹೆ್ಚ್ಚಿದೆ. ಇದನ್ನು ತಯಾರಿಸಲು ಒಂದು ರೀತಿಯ ರಾಸಾಯನಿಕ ವಸ್ತು  ಬಳಸುತ್ತಾರೆ. ಇದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.

    ಇದನ್ನೂ ಓದಿ: ಏನು ಮಾಡಿದರೂ ಹೊಟ್ಟೆ ಭಾಗದ ಬೊಜ್ಜು ಕರಗುತ್ತಿಲ್ಲವೇ? ಈ ಸಿಂಪಲ್ ಟಿಪ್ಸ್ ಒಮ್ಮೆ ಟ್ರೈ ಮಾಡಿ

    ಕಬ್ಬಿಣದ ಪಾತ್ರೆಗಳು ಎಲ್ಲಾ ಕಡೆಯಿಂದ ಸಮಾನವಾಗಿ ಬಿಸಿಯಾಗಿರುತ್ತವೆ. ಇದು ಆಹಾರವನ್ನು ತ್ವರಿತವಾಗಿ ಬೇಯಿಸಲು ಸಹಕಾರಿ. ಅಡುಗೆ ವೇಳೆ ಕಬ್ಬಿಣ ಬಿಡುಗಡೆ ಮಾಡುತ್ತದೆ. ಇದು ಆಹಾರದೊಂದಿಗೆ ಬೆರೆತು ದೇಹಕ್ಕೆ ಪ್ರಯೋಜನ ನೀಡುತ್ತದೆ.
    Published by:renukadariyannavar
    First published: