Food Timing: ಯಾವ ಟೈಮಿಗೆ ತಿಂಡಿ, ಯಾವ ಟೈಮಿಗೆ ಊಟ ಮಾಡಿದ್ರೆ ಒಳ್ಳೆಯದು? ವೈದ್ಯರು ವಿವರಿಸಿದ್ದಾರೆ ನೋಡಿ

ಈ ಆಹಾರ ಎನ್ನುವುದು ನಮ್ಮ ದೇಹಕ್ಕೆ ತುಂಬಾನೇ ಮುಖ್ಯವಾದದ್ದು ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಕೆಲವರನ್ನು ನೋಡಿದರೆ ಅವರು ಹೇಗೆ ಬೆಳಿಗ್ಗೆಯ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಸರಿಯಾದ ಸಮಯಕ್ಕೆ ಎಂದರೆ ನಿಗದಿಪಡಿಸಿಕೊಂಡ ಸಮಯದೊಳಗೆ ಸೇವಿಸುತ್ತಾರೆ ಎಂದು ನೋಡಿದಾಗ ನಮಗೆ ಅಚ್ಚರಿ ಆಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಆಹಾರ (Food) ಎನ್ನುವುದು ನಮ್ಮ ದೇಹಕ್ಕೆ (Body) ತುಂಬಾನೇ ಮುಖ್ಯವಾದದ್ದು ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಕೆಲವರನ್ನು ನೋಡಿದರೆ ಅವರು ಹೇಗೆ ಬೆಳಿಗ್ಗೆಯ ಉಪಾಹಾರ (Breakfast), ಮಧ್ಯಾಹ್ನದ ಊಟ (Lunch) ಮತ್ತು ರಾತ್ರಿಯ ಊಟವನ್ನು (Dinner) ಸರಿಯಾದ ಸಮಯಕ್ಕೆ ಎಂದರೆ ನಿಗದಿಪಡಿಸಿಕೊಂಡ ಸಮಯದೊಳಗೆ ಸೇವಿಸುತ್ತಾರೆ ಎಂದು ನೋಡಿದಾಗ ನಮಗೆ ಅಚ್ಚರಿ ಆಗುತ್ತದೆ. ನಮ್ಮ ಜೀವನ ಶೈಲಿ (Lifestyle), ಒತ್ತಡದ ಬದುಕಿನಿಂದಾಗಿಕೆಲವರಿಗೆ ಉಪಾಹಾರ ತಡವಾಗಿ ಹೋಗುತ್ತದೆ. ಬೆಳಿಗ್ಗೆ ತಿಂಡಿ ಸಮಯ ತಪ್ಪಿ ಹೋದರೆ ಅಲ್ಲಿಂದ ಮಧ್ಯಾಹ್ನದ ಊಟಕ್ಕೆ ಕೂರುವಷ್ಟರಲ್ಲಿ ಸಂಜೆ (Evening) ಆಗಿರುತ್ತದೆ.ಇನ್ನೂ ರಾತ್ರಿಯ ಊಟ ಮಲಗುವ ಸಮಯಕ್ಕೆ ಹೋಗಿ ತಲುಪಿರುತ್ತದೆ. ಸ್ವಲ್ಪ ಜನ ಒಂದು ಹೊತ್ತಿನ ಊಟವನ್ನೇ ಬಿಟ್ಟು ಬಿಡುತ್ತಾರೆ, ಹೀಗಾದಾಗ ಅವರ ದೇಹವು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತದೆ ಎಂದು ಹೇಳಬಹುದು.

ಅನೇಕ ಆರೋಗ್ಯ ಪ್ರಯೋಜನಗಳನ್ನು ನಿರ್ಧರಿಸಲು ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ನಾವು ಏನನ್ನು ಸೇವಿಸುತ್ತೇವೆ ಎಂಬುದು ಎಷ್ಟು ಮುಖ್ಯವಾಗುತ್ತದೆಯೋ, ಅಷ್ಟೇ ಮುಖ್ಯವಾದದ್ದು ಯಾವ ಸಮಯಕ್ಕೆ ನಾವು ಅದನ್ನು ಸೇವಿಸುತ್ತೇವೆ ಎನ್ನುವುದು ಆಗಿರುತ್ತದೆ. ಹೀಗಾಗಿ ಯಾವ ಊಟವನ್ನು ಯಾವ ಸಮಯದಲ್ಲಿ ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ನಾವು ಇಡೀ ದಿನದಲ್ಲಿ ಮಾಡುವ ಊಟಗಳ ಸರಿಯಾದ ಸಮಯ ಮತ್ತು ಅದು ನಮ್ಮ ದೇಹಕ್ಕೆ ಹೇಗೆ? ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಾವು ಮಾಡುವ ಊಟಗಳ ಸಮಯ ಹೀಗಿರಬೇಕು
1.ಬೆಳಗಿನ ಉಪಾಹಾರ:

ಬೆಳಗಿನ ಉಪಾಹಾರವು ದಿನದ ಮೊದಲ ಊಟವಾಗಿದ್ದು, ಇದು ನಮ್ಮ ದೇಹದಲ್ಲಿರುವ ಶಕ್ತಿಯನ್ನು ಬಲಗೊಳ್ಳುವಂತೆ ಮಾಡುತ್ತದೆ. ಸಾಮಾನ್ಯವಾಗಿ, ನಮ್ಮ ಹಿಂದಿನ ರಾತ್ರಿ ಊಟದ 8 ರಿಂದ 10 ಗಂಟೆಗಳ ನಂತರ ಬೆಳಿಗ್ಗೆ ಉಪಾಹಾರವನ್ನು ಸೇವಿಸಲಾಗುತ್ತದೆ. ದಿನದ ಮೊದಲ ಊಟವನ್ನು ಸೇವಿಸಲು ಉತ್ತಮ ಸಮಯವೆಂದರೆ ಬೆಳಿಗ್ಗೆ 7 ರಿಂದ 9 ಗಂಟೆ ಎಂದು ಹೇಳಬಹುದು.

2. ಮಧ್ಯಾಹ್ನದ ಊಟ:
ನೀವು ನಿಮ್ಮ ಉಪಾಹಾರವನ್ನು ಬೇಗನೆ ಸೇವಿಸಿದಾಗ, ನಿಮ್ಮ ಮಧ್ಯಾಹ್ನದ ಊಟಕ್ಕೆ ಕುಳಿತುಕೊಳ್ಳುವ ಮೊದಲು ಅದು ನಿಮ್ಮ ಹೊಟ್ಟೆಗೆ ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುತ್ತದೆ. ಇದು ಬೆಳಗಿನ ಉಪಾಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಧ್ಯಾಹ್ನ 12 ರಿಂದ 2 ಗಂಟೆಯೊಳಗೆ ಊಟ ಮಾಡಿ ಮುಗಿಸುವುದು ಉತ್ತಮ.

ಇದನ್ನೂ ಓದಿ: Papaya Benefits: ದಿನಕ್ಕೆ ಒಂದು ಕಪ್​ ಪಪ್ಪಾಯ ಹಣ್ಣು ತಿಂದ್ರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ

3. ರಾತ್ರಿ ಊಟ:
ನೀವು ನಿಮ್ಮ ಮಧ್ಯಾಹ್ನದ ಊಟವನ್ನು ಬೇಗನೆ ಮಾಡಿರುವುದರಿಂದ, ಸಂಜೆ ಬೇಗನೆ ನಿಮಗೆ ಹಸಿವಾಗಬಹುದು. ನಿಮ್ಮ ಹಸಿವನ್ನು ಪೂರೈಸಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಅನೇಕ ಆಹಾರ ತಜ್ಞರು ಬೇಗನೆ ಊಟ ಮಾಡಲು ಶಿಫಾರಸು ಮಾಡುತ್ತಾರೆ. ನೀವು ಸಂಜೆ 6.30 ರಿಂದ ರಾತ್ರಿ 8 ರೊಳಗೆ ನಿಮ್ಮ ರಾತ್ರಿ ಊಟ ಮುಗಿಸುವುದು ಸೂಕ್ತ.

ಇದರಿಂದಾಗುವ ಪ್ರಯೋಜನಗಳು:
ನೀವು ಪ್ರತಿದಿನ ನಿಗದಿತ ಸಮಯದಲ್ಲಿ ನಿಮ್ಮ ಎಲ್ಲಾ ಊಟವನ್ನು ಸೇವಿಸಿದರೆ, ಅದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ಬೆಳಿಗ್ಗೆ, ನಿಮ್ಮ ಚಯಾಪಚಯ ದರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು ದಿನ ಕಳೆದಂತೆ, ಅದು ನಿಧಾನವಾಗುತ್ತದೆ. ಆದ್ದರಿಂದ, ಆರಂಭಿಕ ಉಪಾಹಾರವನ್ನು ಸೇವಿಸುವುದು ಅದಕ್ಕೆ ಉತ್ತೇಜನವನ್ನು ನೀಡುತ್ತದೆ ಮತ್ತು ಬೇಗನೆ ಊಟ ಮಾಡುವುದು ಅದನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ರುಚಿಕರ ತೆಂಗಿನ ಹಾಲಿನ ರೈಸ್

ನಿಗದಿತ ಊಟವು ನಿಮ್ಮ ದೇಹವು ದಿನವಿಡೀ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ, ಏಕೆಂದರೆ ನಿಮ್ಮ ಹೊಟ್ಟೆಯಲ್ಲಿರುವ ಆಹಾರ ಸಂಪೂರ್ಣವಾಗಿ ಖಾಲಿಯಾಗುವ ಮೊದಲು ನೀವು ತಿನ್ನುತ್ತೀರಿ.

ಸಮಯಕ್ಕೆ ಸರಿಯಾಗಿ ಊಟ ಮಾಡುವುದು ತೂಕ ಇಳಿಸುವ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ, ಏಕೆಂದರೆ ನೀವು ನಡುವೆ ಹಸಿವನ್ನು ಅನುಭವಿಸುವುದಿಲ್ಲ ಮತ್ತು ಅನಾರೋಗ್ಯಕರ ತಿಂಡಿಗಳನ್ನು ಸೇವಿಸುವುದಿಲ್ಲ.
Published by:Ashwini Prabhu
First published: