Personality Test: ನಿಮ್ಮ ಕಾಲ್ಬೆರಳುಗಳೂ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದಂತೆ, ಇಂದೇ ಪರೀಕ್ಷಿಸಿಕೊಳ್ಳಿ

ವ್ಯಕ್ತಿತ್ವ ಪರೀಕ್ಷೆಗಳು ನಿಮ್ಮನ್ನು ಕುರಿತು, ನಿಮ್ಮ ಇಷ್ಟಗಳು ಅಥವಾ ಇಷ್ಟಪಡದಿರುವಿಕೆಗಳು, ಆದ್ಯತೆಗಳು, ನೀವು ಹೇಗೆ ಯೋಚಿಸುತ್ತೀರಿ, ನಿಮ್ಮ ಭಾವನಾತ್ಮಕ ಬುದ್ಧಿವಂತಿಕೆಯನ್ನು ಅಳೆಯಲು ಮತ್ತು ನಿಮ್ಮ ಐಕ್ಯೂ ಮಟ್ಟವನ್ನು ತಿಳಿದುಕೊಳ್ಳಲು ಒಂದು ಅತ್ಯುತ್ತಮ ಉಪಕರಣವಾಗಿದೆ. ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮ್ಮ ಕಾಲ್ಬೆರಳುಗಳು ಏನು ಹೇಳುತ್ತವೆ?

ಕಾಲ್ಬೆರಳುಗಳು ಮತ್ತು ವ್ಯಕ್ತಿತ್ವ

ಕಾಲ್ಬೆರಳುಗಳು ಮತ್ತು ವ್ಯಕ್ತಿತ್ವ

  • Share this:
ನಿಮ್ಮ ಕಾಲ್ಬೆರಳಿನ (Toe) ಮೂಲಕ ನಿಮ್ಮ ವ್ಯಕ್ತಿತ್ವದ ಲಕ್ಷಣಗಳನ್ನು ಅರಿತುಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಪಾದದ ಬೆರಳುಗಳ ಉದ್ದಕ್ಕೆ ಅನುಸಾರವಾಗಿ ನಿಮ್ಮ ವ್ಯಕ್ತಿತ್ವದ (personality) ಕೆಲವು ಆಕರ್ಷಕ ಅಂಶಗಳನ್ನು (Attractive factor) ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿತ್ವ ಪರೀಕ್ಷೆಗಳು ನಿಮ್ಮನ್ನು ಕುರಿತು, ನಿಮ್ಮ ಇಷ್ಟಗಳು ಅಥವಾ ಇಷ್ಟಪಡದಿರುವಿಕೆಗಳು, ಆದ್ಯತೆಗಳು, ನೀವು ಹೇಗೆ ಯೋಚಿಸುತ್ತೀರಿ, ನಿಮ್ಮ ಭಾವನಾತ್ಮಕ ಬುದ್ಧಿವಂತಿಕೆಯನ್ನು (Emotional intelligence) ಅಳೆಯಲು ಮತ್ತು ನಿಮ್ಮ ಐಕ್ಯೂ ಮಟ್ಟವನ್ನು (IQ level) ತಿಳಿದುಕೊಳ್ಳಲು ಒಂದು ಅತ್ಯುತ್ತಮ ಉಪಕರಣವಾಗಿದೆ. ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮ್ಮ ಕಾಲ್ಬೆರಳುಗಳು ಏನು ಹೇಳುತ್ತವೆ?

ಈಜಿಪ್ಟಿಯನ್ ಕಾಲ್ಬೆರಳಿನ ವ್ಯಕ್ತಿತ್ವ ಏನು ಹೇಳುತ್ತದೆ
ನಿಮ್ಮ ಹೆಬ್ಬೆರಳು ಇತರ ಕಾಲ್ಬೆರಳುಗಳಿಗಿಂತ ದೊಡ್ಡದಾಗಿದ್ದರೆ, ನೀವು ಈಜಿಪ್ಟಿಯನ್ ಕಾಲ್ಬೆರಳುಗಳ ವ್ಯಕ್ತಿತ್ವವನ್ನು ಹೊಂದಿರುತ್ತೀರಿ ಎಂದಾಗಿದೆ. ಈ ಪ್ರಕಾರವಾಗಿ ನಿಮ್ಮ ವ್ಯಕ್ತಿತ್ವದ ಲಕ್ಷಣಗಳು ನೀವು ಸೃಜನಶೀಲ, ಕೇಂದ್ರೀಕೃತ ಮತ್ತು ನವೀನತೆಯನ್ನು ಬಹಿರಂಗಪಡಿಸುತ್ತವೆ. ದೈನಂದಿನ ಜೀವನದಲ್ಲಿ ಸಮಸ್ಯೆಗಳಿಗೆ ಬುದ್ಧಿವಂತ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ನೀವು ನಿರರ್ಗಳವಾಗಿರುತ್ತೀರಿ. ನೀವು ಸ್ವಪ್ನಶೀಲರಾಗಿದ್ದೀರಿ ಮತ್ತು ಪ್ರಣಯದ ಕಲ್ಪನೆಯನ್ನು ಪ್ರೀತಿಸುತ್ತೀರಿ. ಹಾಗೂ ನೀವೊಬ್ಬ ಪ್ರಕೃತಿ ಪ್ರೇಮಿ.

ಇದನ್ನೂ ಓದಿ: Personality Test: ನೀವು ಕುಳಿತುಕೊಳ್ಳುವ ಭಂಗಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ತಿಳಿಸುತ್ತೆ

ನಿಮ್ಮ ಹೆಬ್ಬೆರಳು ನಿಮ್ಮ ಇತರ ಕಾಲ್ಬೆರಳುಗಳಿಗಿಂತ ಚಿಕ್ಕದಾಗಿದ್ದರೆ, ನೀವು ಮಾಸ್ಟರ್ ಮಲ್ಟಿಟಾಸ್ಕರ್ ಆಗಿದ್ದೀರಿ. ದೊಡ್ಡ ಕಾಲ್ಬೆರಳುಗಳಿಗಿಂತ ಭಿನ್ನವಾಗಿ, ಸಮಯಕ್ಕೆ ಸರಿಯಾಗಿ ಕಾರ್ಯಗಳನ್ನು ಮುಗಿಸುವಲ್ಲಿ ನೀವು ಹೆಚ್ಚು ದಕ್ಷತೆ ಹೊಂದಿದ್ದೀರಿ. ನೀವು ನುರಿತ ಯೋಜಕರಾಗಿದ್ದೀರಿ ಅಂತೆಯೇ ಗುರಿ ಮುಟ್ಟುವಲ್ಲಿ ಸಫಲರಾಗಿರುತ್ತೀರಿ.

ಗ್ರೀಕ್ ಕಾಲ್ಬೆರಳಿನ ವ್ಯಕ್ತಿತ್ವ
ನಿಮ್ಮ ಎರಡನೇ ಕಾಲ್ಬೆರಳು ನಿಮ್ಮ ಹೆಬ್ಬೆರಳಿಗಿಂತ ಉದ್ದವಾಗಿದ್ದರೆ, ನೀವು ಗ್ರೀಕ್ ಕಾಲ್ಬೆರಳಿನ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂದಾಗಿದೆ. ನೀವು ಮಹತ್ವಾಕಾಂಕ್ಷೆಯ, ಸೃಜನಶೀಲ, ಶಕ್ತಿಯುತ, ಸಕ್ರಿಯ ಮತ್ತು ಕ್ರಿಯಾಶೀಲರಾಗಿದ್ದೀರಿ ಎಂಬ ವ್ಯಕ್ತಿತ್ವವನ್ನು ಇದು ತೋರಿಸುತ್ತದೆ. ನೀವು ಅದ್ಭುತ ಯೋಜನೆಗಳನ್ನು ಮಾಡುತ್ತೀರಿ. ವಿನೋದಮಯ ಪ್ರವೃತ್ತಿ ನಿಮ್ಮದಾಗಿದೆ ನೀವು ವಿಷಯಗಳನ್ನು ನಿಮ್ಮ ರೀತಿಯಲ್ಲಿ ಅಥವಾ ನಿಮ್ಮ ಇಚ್ಛೆಯಂತೆ ನೆರವೇರಲು ಇಷ್ಟಪಡುತ್ತೀರಿ.

ನೀವು ಹೆಬ್ಬೆರಳು ಎರಡನೇ ಬೆರಳಿಗಿಂತ ಚಿಕ್ಕದಾಗಿದ್ದರೆ, ನಿಮ್ಮ ವ್ಯಕ್ತಿತ್ವದ ಲಕ್ಷಣಗಳು ನೀವು ಸಾಮರಸ್ಯವನ್ನು ಗೌರವಿಸುತ್ತೀರಿ ಮತ್ತು ನೀವು ಹೇಳಿದಂತೆಯೇ ನಡೆಬೇಕೆಂಬ ಮಾಲೀಕ ಪ್ರವೃತ್ತಿ ನಿಮ್ಮದಾಗಿರುವುದಿಲ್ಲ.ನೀವು ಇತರರ ಬಗ್ಗೆ ಯೋಚಿಸುತ್ತೀರಿ. ನೀವು ದಯೆ ಮತ್ತು ವಿಧೇಯತೆಯನ್ನು ವ್ಯಕ್ತಪಡಿಸುವವರಾಗಿರುತ್ತೀರಿ.

ರೋಮ್ ಕಾಲ್ಬೆರಳಿನ ವ್ಯಕ್ತಿತ್ವ
ನಿಮ್ಮ ಮೂರನೇ ಬೆರಳಿನ ಉದ್ದವು ಎರಡನೇ ಮತ್ತು ಹೆಬ್ಬೆರಳಿನಂತೆಯೇ ಇದ್ದರೆ, ನೀವು ರೋಮನ್ ಕಾಲ್ಬೆರಳಿನ ವ್ಯಕ್ತಿತ್ವವನ್ನು ಹೊಂದಿರುವಿರಿ ಎಂದಾಗಿದೆ. ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳು ಈ ಪ್ರಕಾರವಾಗಿ ಹೇಗಿರುತ್ತದೆಂದರೆ ನೀವು ಕ್ರಿಯಾತ್ಮಕರಾಗಿರುತ್ತೀರಿ, ಹೀಗಾಗಿ ಯಾರಿಗೂ ನೆಚ್ಚುವ ವ್ಯಕ್ತಿತ್ವ ನಿಮ್ಮದಾಗಿರುತ್ತದೆ, ನೀವು ಗುಂಪುಗಳ ನಡುವೆ ಶಾಂತವಾಗಿ ಕುಳಿತರೂ ನೀವು ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುತ್ತೀರಿ. ಇತರರ ಮಾತುಗಳನ್ನು ಆಲಿಸುತ್ತೀರಿ. ಪ್ರಪಂಚದ ಬಗ್ಗೆ ನಿಮ್ಮ ತಿಳುವಳಿಕೆಯನ್ನು ವಿಸ್ತರಿಸಲು ನೀವು ಆಸಕ್ತಿದಾಯಕ ಮತ್ತು ಪ್ರಾಯೋಗಿಕ ಅನುಭವವನ್ನು ಕಂಡುಕೊಳ್ಳುತ್ತೀರಿ.

ನಿಮ್ಮ ಮೂರನೇ ಬೆರಳು ಇತರ ಕಾಲ್ಬೆರಳುಗಳಿಗಿಂತ ಚಿಕ್ಕದಾಗಿದ್ದರೆ, ನೀವು ವಿಶ್ರಾಂತಿ ಮನೋಭಾವವನ್ನು ಹೊಂದಿದ್ದೀರಿ ಎಂಬುದನ್ನು ತೋರಿಸುತ್ತದೆ. ನೀವು ಕಠಿಣ ಕೆಲಸ ಅಥವಾ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಬಯಸುತ್ತೀರಿ. ನಿಮ್ಮ ಕೆಲಸವನ್ನು ಬೇರೆಯವರು ಮಾಡಬೇಕೆಂದು ನೀವು ಬಯಸುವ ವ್ಯಕ್ತಿತ್ವನ್ನು ನೀವು ಹೊಂದಿದ್ದೀರಿ ಎಂದಾಗಿದೆ.

ಇದನ್ನೂ ಓದಿ: Personality Test: ನಡಿಗೆಯ ಶೈಲಿಯಿಂದ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು!

ಕಿರುಬೆರಳು ಉದ್ದವಾಗಿದ್ದರೆ ವ್ಯಕ್ತಿತ್ವ ಹೇಗಿರುತ್ತದೆ
ನಿಮ್ಮ ಕಿರುಬೆರಳು ಉದ್ದವಾಗಿದ್ದರೆ ನೀವು ಜವಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿತ್ವದವರು ಎಂಬುದನ್ನು ಇದು ತೋರಿಸುತ್ತದೆ. ಮಗುವಿನಂತಹ ಮನೋಭಾವ ನಿಮ್ಮದಾಗಿದೆ ಅಂದರೆ ಹೆಚ್ಚು ಕೆಲಸ ಮಾಡದೇ ಮೋಜು ಅನುಭವಿಸುವ ವ್ಯಕ್ತಿತ್ವ ನಿಮ್ಮದು ಎಂದರ್ಥ. ನಿಮ್ಮದು ಸಣ್ಣ ಕಿರುಬೆರಳಾಗಿದ್ದರೆ ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಿರುತ್ತದೆ. ಜನರ ಮೇಲೆ ನಿಮ್ಮ ಪರಿಣಾಮ ತುಂಬಾ ಭಿನ್ನವಾಗಿರುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆಯೇ ನಿಮಗೆ ತಿಳಿದಿರುವುದಿಲ್ಲ. ಜನರನ್ನು ಆಕರ್ಷಿಸುತ್ತೀರಿ.
Published by:Ashwini Prabhu
First published: