ಸುಮ್ಮಸುಮ್ಮನೆ ಗಾಬರಿ ಆಗೋ ಸಮಸ್ಯೆ ‘ಪ್ಯಾನಿಕ್ ಅಟ್ಯಾಕ್’, ಆಲಿಯಾ ಭಟ್ ಸಹೋದರಿಗೂ ಇದೆ ಈ ಖಾಯಿಲೆ

ಶಾಹೀನ್ ಭಟ್ ಅಂತ ಹೇಳಿದರೆ ಬಹುತೇಕರಿಗೆ ಯಾರಿವರು ಅಂತ ಅನ್ನಿಸಬಹುದು, ಅದೇ ನಟಿ ಆಲಿಯಾ ಭಟ್ ಅವರ ಹಿರಿಯ ಸಹೋದರಿ ಅಂತ ಹೇಳಿದ ತಕ್ಷಣ ಅರ್ಥವಾಗುತ್ತದೆ. ಯಾವಾಗಲೂ ತನ್ನ ಮಾನಸಿಕ ಆರೋಗ್ಯ ಮತ್ತು ಅದರ ಹೋರಾಟಗಳ ಬಗ್ಗೆ ಮನಬಿಚ್ಚಿ ಮಾತಾಡುವ ಶಾಹೀನ್ ಅವರು ಈಗ ಖಿನ್ನತೆ ಮತ್ತು ಆತಂಕದ ಬಗ್ಗೆ ಮಾತನಾಡಿದ್ದಾರೆ ನೋಡಿ.

ಪ್ಯಾನಿಕ್ ಅಟ್ಯಾಕ್

ಪ್ಯಾನಿಕ್ ಅಟ್ಯಾಕ್

  • Share this:
ಶಾಹೀನ್ ಭಟ್ (Shaheen Bhatt) ಅಂತ ಹೇಳಿದರೆ ಬಹುತೇಕರಿಗೆ ಯಾರಿವರು ಅಂತ ಅನ್ನಿಸಬಹುದು, ಅದೇ ನಟಿ ಆಲಿಯಾ ಭಟ್ (Alia Bhatt) ಅವರ ಹಿರಿಯ ಸಹೋದರಿ ಅಂತ ಹೇಳಿದ ತಕ್ಷಣ ಅರ್ಥವಾಗುತ್ತದೆ. ಯಾವಾಗಲೂ ತನ್ನ ಮಾನಸಿಕ ಆರೋಗ್ಯ ಮತ್ತು ಅದರ ಹೋರಾಟಗಳ ಬಗ್ಗೆ ಮನಬಿಚ್ಚಿ ಮಾತಾಡುವ ಶಾಹೀನ್ ಈಗ ಖಿನ್ನತೆ (Depression) ಮತ್ತು ಆತಂಕದ ಬಗ್ಗೆ ಮಾತನಾಡಿದ್ದಾರೆ ನೋಡಿ. ತನ್ನ ಮಾನಸಿಕ ಆರೋಗ್ಯ ವೇದಿಕೆಯಾದ 'ಹಿಯರ್ ಕಮ್ಸ್ ದಿ ಸನ್' ನಲ್ಲಿ, ಶಾಹೀನ್ ಅವರು ಗಾಯಕಿ ಮತ್ತು ಗೀತರಚನೆಕಾರರಾದ ಅನನ್ಯಾ ಬಿರ್ಲಾ (Ananya Birla) ಅವರೊಂದಿಗೆ ಇತ್ತೀಚೆಗೆ ಸಂಭಾಷಣೆ ನಡೆಸಿದರು, ಅದರಲ್ಲಿ ಅವರು ತಮ್ಮ ಪ್ಯಾನಿಕ್ ಅಟ್ಯಾಕ್ (Panic Attack) ಪ್ರಸಂಗಗಳನ್ನು ಮತ್ತು ಹಿಂದೆ ಅದನ್ನೆಲ್ಲಾ ಹೇಗೆ ನಿಭಾಯಿಸಿದರು ಎಂಬುದರ ಬಗ್ಗೆ ಚರ್ಚಿಸಿದರು.

ಶಾಹೀನ್ ಅವರು ಏಳು ವರ್ಷಗಳಲ್ಲಿ ತನಗೆ ಯಾವುದೇ ರೀತಿಯ ಪ್ಯಾನಿಕ್ ಅಟ್ಯಾಕ್ ಆಗಿರಲಿಲ್ಲ ಮತ್ತು ನಂತರ ಇತ್ತೀಚೆಗೆ ಒಂದು ಅಟ್ಯಾಕ್ ಆಗಿತ್ತು, ನಾನು ಇರುತ್ತೇನೆಯೇ ಅಥವಾ ಸಾಯುತ್ತೇನೆ ಎಂದು ಅನ್ನಿಸಿತು ಎಂದು ಹೇಳಿದರು.

ಪ್ಯಾನಿಕ್ ಅಟ್ಯಾಕ್ ಬಗ್ಗೆ ಶಾಹೀನ್ ಭಟ್ ಏನು ಹೇಳುತ್ತಾರೆ ಗೊತ್ತೆ?
ಈ “ಪ್ಯಾನಿಕ್ ಅಟ್ಯಾಕ್ ಎನ್ನುವುದು ಗೊತ್ತಾಗದೆ ಹಠಾತ್ತನೆ ದಾಳಿ ಮಾಡುತ್ತದೆ ಮತ್ತು ತುಂಬಾನೇ ಭಯ ಹುಟ್ಟಿಸುವಂತೆ ಇರುತ್ತದೆ” ಎಂದು ಹೇಳಿದ್ದಾರೆ. "ಪ್ಯಾನಿಕ್ ಅಟ್ಯಾಕ್ ಅನ್ನು ಅನುಭವಿಸುತ್ತಿರುವ ಜನರು ತಾವು ಇರುತ್ತೇವೆಯೋ ಅಥವಾ ಸಾಯುತ್ತೇವೆಯೋ ಅಂತ ಭಯದಲ್ಲಿರುತ್ತಾರೆ” ಎಂದು ಹೇಳಿದರು.

ಒಬ್ಬ ವ್ಯಕ್ತಿಯು ಅನುಭವಿಸುವ ಆ ಭಯ ಮತ್ತು ಆತಂಕವನ್ನು ಬೇರೆ ಯಾರೂ ವಿವರಿಸಲು ಸಾಧ್ಯವಿಲ್ಲ ಮತ್ತು ಅವರ ಸುತ್ತಲೂ ಏನಾಗುತ್ತಿದೆ ಎಂಬುದರ ಬಗ್ಗೆ ಅರಿವು ಇರುವುದಿಲ್ಲ” ಎಂದು ಅವರು ಹೇಳಿದರು. "ಏಳು ವರ್ಷಗಳಲ್ಲಿ ನಾನು ನನ್ನ ಮೊದಲ ಪ್ಯಾನಿಕ್ ಅಟ್ಯಾಕ್ ಅನ್ನು ಹೊಂದಿದ್ದೆ, ಕೇವಲ ಒಂದೂವರೆ ತಿಂಗಳ ಹಿಂದೆ ಮತ್ತು ಅದನ್ನು ಹೇಗೆ ನಿಭಾಯಿಸಿದ್ದೆ ಅನ್ನೋದನ್ನು ನಾನು ಸಂಪೂರ್ಣವಾಗಿ ಮರೆತಿದ್ದೇನೆ” ಎಂದು ಶಾಹೀನ್ ಹೇಳಿದರು.
"ಪ್ಯಾನಿಕ್ ಅಟ್ಯಾಕ್ ನಿಂದ ನಿಮಗೆ ಆಗುವ ಒಂದು ದೊಡ್ಡ ಭಯವೆಂದರೆ ನೀವು ಸಾಯುತ್ತಿರುವಂತೆ ಭಾಸವಾಗುತ್ತದೆ... ಇದು ಕೇವಲ ಗಾಬರಿ ಎಂದು ನೀವು ಅರಿತುಕೊಳ್ಳುವುದಿಲ್ಲ ಅಥವಾ ಇದು ಕೇವಲ ನರವ್ಯೂಹದ ಹಠಾತ್ ಸಮಸ್ಯೆ ಅಂತ ನಿಮಗೆ ಆ ಕ್ಷಣದಲ್ಲಿ ಅರ್ಥವಾಗುವುದಿಲ್ಲ" ಎಂದು 33 ವರ್ಷದ ಶಾಹೀನ್ ಅವರು ಹೇಳಿದರು.

ಪ್ಯಾನಿಕ್ ಅಟ್ಯಾಕ್ ಆದಾಗ ಹೊಟ್ಟೆಯಿಂದ ಉಸಿರಾಟವಾಡುವುದು ಉತ್ತಮವೇಕೆ?
ತನ್ನ ಇತ್ತೀಚಿನ ದಿನಗಳಲ್ಲಿ ಪ್ಯಾನಿಕ್ ಅಟ್ಯಾಕ್ ಆದಾಗ, ಕಡಿಮೆ ಒತ್ತಡವನ್ನು ಅನುಭವಿಸಲು ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ಅವರು ಅನನ್ಯಾಗೆ ಹೇಳಿದರು. "ನಾನು ಮಾಡುವ ಮೊದಲ ಕೆಲಸವೆಂದರೆ, ನಾನು ನಿಜವಾಗಿಯೂ ನನ್ನ ಉಸಿರಾಟದ ಮೇಲೆ ಗಮನ ಹರಿಸುತ್ತೇನೆ. ಹೆಚ್ಚಿನ ಜನರು ನಿಜವಾಗಿಯೂ ಆಳವಾಗಿ ಉಸಿರಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ನಮ್ಮ ಎದೆಯಿಂದ ಉಸಿರಾಡುತ್ತೇವೆ, ಆದರೆ ನಾವು ಮಾಡಬೇಕಾಗಿರುವುದು ಡಯಾಫ್ರಾಗ್ಮ್ಯಾಟಿಕ್ ಉಸಿರಾಟ, ಅದು ನಿಮ್ಮ ಹೊಟ್ಟೆಯಿಂದ ಉಸಿರಾಡಬೇಕು" ಎಂದು ಹೇಳಿದರು.

ಇದನ್ನೂ ಓದಿ: Night Foods: ರಾತ್ರಿ ಅಪ್ಪಿ ತಪ್ಪಿ ಈ ಆಹಾರಗಳನ್ನು ಸೇವಿಸಬೇಡಿ, ಸುಮ್ನೆ ಆರೋಗ್ಯ ಹಾಳಾಗುತ್ತೆ

ಅವರು ತನ್ನ ಹೊಟ್ಟೆಯ ಮೇಲೆ ಕೈಯಿಟ್ಟು ಉಸಿರನ್ನು ಒಳಕ್ಕೆಳೆದುಕೊಳ್ಳುತ್ತಾರೆ ಮತ್ತು ತನ್ನ ದೇಹವನ್ನು ಗಾಳಿಯಿಂದ ತುಂಬಿಸಿಕೊಂಡು ಮತ್ತೆ ಹೊರಗೆ ಉಸಿರನ್ನು ಬಿಡುತ್ತಾರೆ ಎಂಬುದನ್ನು ಅವರು ತೋರಿಸಿದರು. ಈ ರೀತಿಯ ಕ್ರಮ ಆಘಾತದಲ್ಲಿರುವವರಿಗೆ ಪ್ರಚೋದಕ ಭೀತಿಯ ಹೊರತಾಗಿ, ಬೇರೆ ಯಾವುದರ ಮೇಲಾದರೂ ಗಮನ ಹರಿಸಲು ಸಹಾಯ ಮಾಡುತ್ತದೆ.

ಶಾಹೀನ್ ತಾನು ಐದು-ನಾಲ್ಕು-ಮೂರು-ಎರಡು-ಒಂದು ವಿಧಾನವನ್ನು ಸಹ ಅನುಸರಿಸುತ್ತೇನೆ ಎಂದು ವಿವರಿಸಿದರು, ಇದು ತನ್ನ ಇಂದ್ರೀಯಗಳನ್ನು ಬಳಸಲು ಮತ್ತು ತನ್ನ ಸುತ್ತಲಿನ ವಿಷಯಗಳ ಮೇಲೆ ಗಮನ ಹರಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಇದು ಕೇವಲ ಪ್ಯಾನಿಕ್ ಅಟ್ಯಾಕ್ ಎಂದು ಅವರು ತಮಗೆ ಆದಂತಹ ಘಟನೆಯನ್ನು ನೆನಪಿಸಿಕೊಳ್ಳುತ್ತ, "ನಾನು ಸಾಯುತ್ತಿಲ್ಲ, ಇದೊಂದು ಕೆಟ್ಟ ಪ್ರಕರಣ ಅಷ್ಟೇ, ನಾನು ಸ್ವಲ್ಪ ಕಾಲ ಮೂಕನಾಗುತ್ತೇನೆ" ಎಂದು ಅವರು ಹೇಳಿಕೊಳ್ಳುತ್ತಾರೆ" ಎಂದು ಸಂದರ್ಶಕಿ ವಿವರಿಸುತ್ತಾರೆ.

‘ಪ್ಯಾನಿಕ್ ಅಟ್ಯಾಕ್’ ಬಗ್ಗೆ ಅರುಬಾ ಕಬೀರ್ ಏನ್ ಹೇಳ್ತಾರೆ?
ಮಾನಸಿಕ ಆರೋಗ್ಯ ಸಲಹೆಗಾರ ಮತ್ತು ಎನ್ಸೊ ವೆಲ್ನೆಸ್ ಸಂಸ್ಥಾಪಕ ಅರುಬಾ ಕಬೀರ್ ಅವರು ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿ, ಪ್ಯಾನಿಕ್ ಅಟ್ಯಾಕ್ ಗಳು ಸಾಮಾನ್ಯವಾಗಿ "ಭಯದ ಪ್ರತಿಕ್ರಿಯೆಗಳು" ಆಗಿದ್ದು, ಅದು ಭಯಕ್ಕೆ ಪ್ರತಿಕ್ರಿಯೆಯಾಗಿ ಕಾರ್ಯ ನಿರ್ವಹಿಸುವ ವ್ಯಕ್ತಿಯ ಸಾಮರ್ಥ್ಯಕ್ಕೆ ಹಠಾತ್, ತೀವ್ರ ಮತ್ತು ಹೆಚ್ಚು-ಅಡ್ಡಿಪಡಿಸುತ್ತದೆ ಎಂದು ಹೇಳಿದರು. "ಅವು ಸ್ವತಃ ಸಂಭವಿಸಬಹುದು ಅಥವಾ ಸಾಮಾಜಿಕ ಆತಂಕ, ಸಾಮಾನ್ಯೀಕರಿಸಿದ ಆತಂಕ, ನಿರ್ದಿಷ್ಟ ಭಯ, ಸಂಬಂಧದ ಸಮಸ್ಯೆಗಳು, ದೀರ್ಘಕಾಲದ ಅನಾರೋಗ್ಯ, ವಿವಿಧ ಅಸ್ತವ್ಯಸ್ತ ಸ್ಥಿತಿಗಳ ಭಾಗವಾಗಿ ಸಂಭವಿಸಬಹುದು" ಎಂದು ಅವರು ವಿವರಿಸಿದರು.

ಒಬರಿಂದ ಮತ್ತೊಬ್ಬರಿಗೆ ಬದಲಾಗುತ್ತಾ ಪ್ಯಾನಿಕ್ ಅಟ್ಯಾಕ್?
ಪ್ಯಾನಿಕ್ ಅಟ್ಯಾಕ್ ನ ಪ್ರಸ್ತುತಿಗಳು ವ್ಯಕ್ತಿಗಳಲ್ಲಿ ಮತ್ತು ಒತ್ತಡಕಾರಕಗಳನ್ನು ಅವಲಂಬಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಎಂದು ತಜ್ಞರು ಹೇಳುತ್ತಾರೆ. "ಅತ್ಯಂತ ವ್ಯಾಖ್ಯಾನಿಸುವ ಸಂಕೇತವೆಂದರೆ ಹಿಡಿದಿಡುವ ಭಯ. ಇದು ನಿಮಗೆ ಬರಿದಾಗುವಿಕೆ ಮತ್ತು ಆಯಾಸವನ್ನು ಉಂಟು ಮಾಡಬಹುದು. ನೀವು ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ನೀವು ಭಾವಿಸಬಹುದು. ನಿಮ್ಮ ಹೃದಯವು ಹೆಚ್ಚು ವೇಗವಾಗಿ ಹೊಡೆದು ಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ನಿಮ್ಮ ಎದೆಯಲ್ಲಿ ಬಿಗಿತವನ್ನು ಅನುಭವಿಸಬಹುದು. ಇದು ಉಸಿರಾಟದಲ್ಲಿ ಸ್ವಲ್ಪ ತೊಂದರೆಯನ್ನು ಸಹ ಉಂಟು ಮಾಡಬಹುದು. ಮರಗಟ್ಟುವಿಕೆ, ವಾಕರಿಕೆ, ತಲೆನೋವು, ಕಿಬ್ಬೊಟ್ಟೆಯ ಸೆಳೆತ ಅಥವಾ ಅಪ್ರಜ್ಞಾಪೂರ್ವಕತೆಯ ಭಾವನೆಯನ್ನು ಸಹ ಅನುಭವಿಸಬಹುದು" ಎಂದು ಕಬೀರ್ ಅವರು ತಿಳಿಸಿದರು.

ಇದನ್ನೂ ಓದಿ:  Stroke: ಹಾರ್ಟ್ ಸ್ಟ್ರೋಕ್ ಆಗಿರುವುದನ್ನು ಸೂಚಿಸುವ ಮೂರು ಲಕ್ಷಣಗಳಿವು! ನೆಗ್ಲೆಕ್ಟ್ ಮಾಡಬೇಡಿ

"ಸಂವೇದನಾಶೀಲ ಭಾವನಾತ್ಮಕ ಸ್ಥಿತಿ"ಯನ್ನು ಒಳಗೊಂಡಿರುವ ಯಾವುದೇ ಪರಿಸ್ಥಿತಿಯಲ್ಲಿ ತನ್ನನ್ನು ತಾನು ಶಾಂತಗೊಳಿಸುವುದು ಮುಖ್ಯ ಆಧಾರವಾಗಿದೆ ಎಂದು ಅವರು ಸಲಹೆ ನೀಡಿದರು. "ನಾಲ್ಕು ಸೆಕೆಂಡುಗಳ ಕಾಲ ಆಳವಾದ ಉಸಿರಾಟದ ಮೂಲಕ, ಐದು ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳುವ ಮೂಲಕ ಮತ್ತು ಮುಂದಿನ ಆರು ಸೆಕೆಂಡುಗಳಲ್ಲಿ ನಿಧಾನವಾಗಿ ಉಸಿರನ್ನು ಹೊರಬಿಡುವ ಮೂಲಕ ಇದನ್ನು ಸಾಧಿಸಬಹುದು. ಇದು ನಿಮ್ಮ ಉಸಿರಾಟ ಮತ್ತು ಹೃದಯ ಬಡಿತವನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ, ಇದು ಶಾಂತತೆಯ ಭಾವನೆಯನ್ನು ಸಹ ಸೃಷ್ಟಿಸುತ್ತದೆ" ಎಂದು ಹೇಳಿದರು.

ಏನಿದು 'ಮೈಂಡ್ ಫುಲ್ ನೆಸ್'? ಇದು ಹೇಗೆ ಕೆಲಸ ಮಾಡುತ್ತದೆ?
ಕಬೀರ್ ಅವರು 'ಮೈಂಡ್ ಫುಲ್ ನೆಸ್' ಅನ್ನು ಸಹ ಸೂಚಿಸಿದರು, ಅದರಲ್ಲಿ ನೀವು ಆರಾಮವಾಗಿ ಕುಳಿತುಕೊಳ್ಳಬಹುದು ಅಥವಾ ಮಲಗಬಹುದು, ನಿಮ್ಮ ಕಣ್ಣುಗಳನ್ನು ಮುಚ್ಚಬಹುದು ಮತ್ತು ನಿಮ್ಮ ಸ್ವಂತ ಆತ್ಮದ ಮತ್ತು ನಿಮ್ಮ ದೇಹದ ಮೇಲೆ ಗಮನವನ್ನು ಹರಿಸಬಹುದು.

"ಹೃದಯ ಬಡಿತವನ್ನು ಕಡಿಮೆ ಮಾಡಲು ಒತ್ತಡಕಾರಕಗಳಿಂದ ದೂರವಿರಲು ಪ್ರಯತ್ನಿಸಿ. ಇದನ್ನು ದೃಶ್ಯೀಕರಣ ಅಥವಾ ಚಿತ್ರಣದ ಮೂಲಕವೂ ಅಭ್ಯಾಸ ಮಾಡಬಹುದು, ಅಲ್ಲಿ ವ್ಯಕ್ತಿಗೆ ಶಾಂತಿ ಅಂತ ಅನ್ನಿಸುವ ಮತ್ತು ಮನಸ್ಸಿಗೆ ಮುದ ನೀಡುವ ವಿಚಾರಗಳ ಬಗ್ಗೆ ಯೋಚಿಸಬಹುದು. ಸಕಾರಾತ್ಮಕ ಸ್ವಯಂ-ಮಾತುಕತೆಯು ನಿಮ್ಮನ್ನು ಸುರಕ್ಷಿತ ಮಾನಸಿಕ ಸ್ಥಿತಿಗೆ ಸಾಗಿಸಲು ಸಹಾಯ ಮಾಡುತ್ತದೆ. ನಿಮ್ಮ ಮಣಿಕಟ್ಟಿನ ನಾಡಿಮಿಡಿತದ ಮೇಲೆ ಐಸ್ ಅಥವಾ ತಂಪಾದ ವಸ್ತುಗಳನ್ನು ಇಡುವುದು ಸಹ ಕೆಲವೊಮ್ಮೆ ತುಂಬಾನೇ ಕೆಲಸ ಮಾಡುತ್ತದೆ" ಎಂದು ಹೇಳಿದರು.

ಪ್ಯಾನಿಕ್ ಅಟ್ಯಾಕ್ ಗಳನ್ನು ಎದುರಿಸಲು ಕೆಲಸ ಸಲಹೆಗಳು
ನವೀ ಮುಂಬೈನ ಅಪೋಲೋ ಹಾಸ್ಪಿಟಲ್ಸ್ ನ ಕನ್ಸಲ್ಟೆಂಟ್ ಮನೋರೋಗ ತಜ್ಞರಾದ ಡಾ. ರಿತುಪರ್ಣ ಘೋಷ್ ಅವರು ಪ್ಯಾನಿಕ್ ಅಟ್ಯಾಕ್ ಗಳನ್ನು ಎದುರಿಸಲು ಕೆಲಸ ಸಲಹೆಗಳನ್ನು ನೀಡಿದ್ದಾರೆ ನೋಡಿ.

  • ನಿಯಮಿತ ವ್ಯಾಯಾಮಗಳೊಂದಿಗೆ ಜೀವನಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳುವುದು.

  • ಆರೋಗ್ಯಕರ ಆಹಾರ ಸೇವನೆ ಮತ್ತು ಚೆನ್ನಾಗಿ ನಿದ್ರೆ ಮಾಡುವುದು.

  • ಸವಾಲಿನ ಪರಿಸ್ಥಿತಿಯನ್ನು ನೀವು ಗ್ರಹಿಸುವ ವಿಧಾನವನ್ನು ಬದಲಾಯಿಸಲು ಮತ್ತು ಸವಾಲುಗಳೊಂದಿಗೆ ವ್ಯವಹರಿಸಲು ಕೆಲಸ ಮಾಡಲು ಹೊಸ ಸಕಾರಾತ್ಮಕ ಹೊಂದಿಕೊಳ್ಳುವ ಮಾರ್ಗಗಳನ್ನು ಕಂಡು ಹಿಡಿಯಲು ಚಿಕಿತ್ಸೆ ಪಡೆಯುವುದು.

  • ತೀವ್ರವಾದ ದಾಳಿಗಳಲ್ಲಿ ಔಷಧಗಳನ್ನು ತೆಗೆದುಕೊಳ್ಳುವುದು.

  • ಮೈಂಡ್ ಫುಲ್ ನೆಸ್ ವ್ಯಾಯಾಮಗಳನ್ನು ಮಾಡುವುದು.

  • ಸ್ನಾಯು ವಿಶ್ರಾಂತಿ ತಂತ್ರಗಳನ್ನು ಮಾಡುವುದು.

  • ನೀವು ದಿನನಿತ್ಯ ತಪ್ಪದೆ ನಿಮ್ಮ ಸ್ವಯಂ ಆರೈಕೆಯ ಪೋಷಣೆಯಲ್ಲಿ ಸ್ವಲ್ಪ ಸಮಯ ಮತ್ತು ಹಣವನ್ನು ಹೂಡಿಕೆ ಮಾಡುವುದು ಸೂಕ್ತ.


ಇದನ್ನೂ ಓದಿ:  Heart Attack: ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ ಹೃದಯಕ್ಕೆ ಅಪಾಯ ಗ್ಯಾರಂಟಿ

ಕಬೀರ್ ಅವರು ಇಂತಹ ಪ್ಯಾನಿಕ್ ಅಟ್ಯಾಕ್ ಗಳಂತಹ ಪ್ರಸಂಗಗಳನ್ನು ಆಗಾಗ್ಗೆ ಅನುಭವಿಸಿದರೆ, ವೈದ್ಯರನ್ನು ಸಂಪರ್ಕಿಸುವುದು ಮತ್ತು ಚಿಕಿತ್ಸೆಯನ್ನು ಪಡೆಯುವುದು ತುಂಬಾನೇ ಮುಖ್ಯವಾಗಿರುತ್ತದೆ ಎಂದು ಹೇಳಿದರು.
Published by:Ashwini Prabhu
First published: