Dementia: ನಿಮ್ಮ ಸಾಕುಪ್ರಾಣಿಗೂ ಮರೆವಿನ ಖಾಯಿಲೆ ಬರಬಹುದು, ಅದನ್ನು ಹೀಗೆ ಗುರುತಿಸಿ

ನೀವು ವಯಸ್ಸಾದ ಬೆಕ್ಕು ಅಥವಾ ನಾಯಿಯನ್ನು ಹೊಂದಿದ್ದರೆ, ಅವುಗಳು ಕ್ರಮೇಣವಾಗಿ ಹಸಿವನ್ನು ಕಳೆದುಕೊಳ್ಳುವುದು ಮತ್ತು ಆಡುವ ಬಯಕೆ ಕಡಿಮೆಯಾಗುವುದು ಎಲ್ಲವೂ ಅವುಗಳಲ್ಲಿ ಕಂಡು ಬರುವ ಬದಲಾವಣೆಗಳಾಗಿರುತ್ತವೆ.

ನಾಯಿ

ನಾಯಿ

  • Share this:
    ಈ ಬುದ್ದಿಮಾಂದ್ಯತೆ (Dementia) ಎನ್ನುವುದು ಬರೀ ಮನುಷ್ಯರಿಗೆ ಕಾಡುವ ಕಾಯಿಲೆಯಲ್ಲ, ನಾವು ಮನೆಯಲ್ಲಿ ಸಾಕಿಕೊಂಡ ಪ್ರಾಣಿಗಳಿಗೂ (Pet ) ಬರಬಹುದು. ನಾಯಿ ಹಾಗೂ ಬೆಕ್ಕು (Dog and Cat) ಸಾಕಿರುವ ಪ್ರತಿ ನಾಲ್ಕು ಮಾಲಿಕರ ಪೈಕಿ ಒಬ್ಬರಿಗಿಂತ ಹೆಚ್ಚು ಮಾಲಿಕರಿಗೆ ತಮ್ಮ ಸಾಕುಪ್ರಾಣಿ, ವಯಸ್ಸು ಸಂಬಂಧಿತ ಬುದ್ಧಿಮಾಂದ್ಯತೆ ಕಾಯಿಲೆಗೆ ತುತ್ತಾಗಬಹುದು ಎಂದು ತಿಳಿದಿರುವುದಿಲ್ಲ. ಸುಮಾರು 2,000 ಸಾಕುಪ್ರಾಣಿಗಳ ಮಾಲೀಕರನ್ನು ಅಧ್ಯಯನ ಮಾಡಿದರೆ ಅನೇಕರಿಗೆ ತಮ್ಮ ಸಾಕುಪ್ರಾಣಿಗಳ ಗೊಂದಲ, ಆತಂಕ, ಚಡಪಡಿಕೆ ಮತ್ತು ಆಡುವ ಬಯಕೆ ಕಡಿಮೆಯಾದಂತಹ ಆರಂಭಿಕ ಲಕ್ಷಣಗಳು ಯಾವುದರ ಸೂಚನೆ ಎನ್ನುವುದು ತಿಳಿದಿಲ್ಲ ಎಂದು ಕಂಡು ಬಂದಿದೆ. ಅರ್ಧದಷ್ಟು ಜನರು ತಮ್ಮ ಸಾಕುಪ್ರಾಣಿಯಲ್ಲಿ ರೋಗಲಕ್ಷಣಗಳನ್ನು ಗುರುತಿಸುವ ವಿಶ್ವಾಸವನ್ನು ಹೊಂದಿರುವುದಿಲ್ಲ. ಸುಮಾರು ಮೂರನೇ ಎರಡರಷ್ಟು ಜನರು ತಮ್ಮ ಸಾಕುಪ್ರಾಣಿಯಲ್ಲಿ ಗಮನಾರ್ಹ ವರ್ತನೆಯ ಬದಲಾವಣೆಗಳನ್ನು ಅದರ ವಯಸ್ಸಿಗೆ ಸಂಬಂಧಿಸಿದ್ದು ಎಂದು ಅಂದು ಕೊಳ್ಳುತ್ತಾರೆ.

    ಇದನ್ನೂ ಓದಿ: Puppy: ಸಾಕಲು ನಾಯಿಮರಿ ಖರೀದಿ ಮಾಡ್ತಿದ್ದೀರಾ? ಹಾಗಾದ್ರೆ ಅವುಗಳ ವಯಸ್ಸಿನ ಬಗ್ಗೆ ಇರಲಿ ಗಮನ

    ನೀವು ವಯಸ್ಸಾದ ಬೆಕ್ಕು ಅಥವಾ ನಾಯಿಯನ್ನು ಹೊಂದಿದ್ದರೆ, ಅವುಗಳು ಕ್ರಮೇಣವಾಗಿ ಹಸಿವನ್ನು ಕಳೆದುಕೊಳ್ಳುವುದು ಮತ್ತು ಆಡುವ ಬಯಕೆ ಕಡಿಮೆಯಾಗುವುದು ಎಲ್ಲವೂ ಅವುಗಳಲ್ಲಿ ಕಂಡು ಬರುವ ಬದಲಾವಣೆಗಳಾಗಿರುತ್ತವೆ. ಅನೇಕರು ಈ ಹಿಂದೆ ಅವುಗಳ ನಿದ್ರೆಯ ಕ್ರಮದಲ್ಲಿ ಬದಲಾವಣೆಗಳನ್ನು ಸಹ ವಯಸ್ಸಾಗುವಿಕೆಯೇ ಕಾರಣ ಎಂದು ತಿಳಿದುಕೊಳ್ಳುತ್ತಿದ್ದರು.

    ರೋಗಲಕ್ಷಣಗಳನ್ನು ಕಂಡು ಹಿಡಿಯಲು ಸಾಧ್ಯ

    ಅರ್ಧಕ್ಕಿಂತ ಹೆಚ್ಚು ಜನರು ತಮ್ಮ ಸಾಕುಪ್ರಾಣಿಯನ್ನು ಕುಟುಂಬದ ಭಾಗವೆಂದು ಪರಿಗಣಿಸುವುದರಿಂದ, ಬುದ್ಧಿಮಾಂದ್ಯತೆ ಇರುವುದು ಪತ್ತೆಯಾದರೆ ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಕೊಡಿಸುವುದಾಗಿ ಒಪ್ಪಿಕೊಂಡರು. ಮಾರ್ಚ್ 7 ರಂದು ನಡೆದ ಆರಂಭಿಕ ಪೆಟ್ ಡಿಮೇನ್ಶಿಯ ದಿನದ ಅಂಗವಾಗಿ ಈ ಸಂಶೋಧನೆಯನ್ನು ವೆಟ್ಸ್4ಪೆಟ್ಸ್ ಎಂಬ ಸಂಸ್ಥೆಯು ನಿಯೋಜಿಸಿತ್ತು ಮತ್ತು ಇದರಿಂದಾಗಿ ಬುದ್ದಿಮಾಂದ್ಯತೆಯ ರೋಗಲಕ್ಷಣಗಳ ಬಗ್ಗೆ ಜಾಗೃತಿ ಮೂಡಿದ್ದು, ಬಹುತೇಕ ಸಾಕುಪ್ರಾಣಿ ಮಾಲೀಕರು ಆರಂಭಿಕ ರೋಗಲಕ್ಷಣಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ಹೊರಹಾಕಿದ್ದಾರೆ.

    ವೆಟ್ಸ್4ಪೆಟ್ಸ್ ನ ಕ್ಲಿನಿಕಲ್ ಸರ್ವೀಸಸ್ ನ ನಿರ್ದೇಶಕ ಡಾ. ಹ್ಯೂ ಸ್ಟೇಸಿ "ದುಃಖಕರವಾಗಿ, ವಯಸ್ಸಿಗೆ ಸಂಬಂಧಿಸಿದ ಬುದ್ಧಿಮಾಂದ್ಯತೆಯು ನಮ್ಮ ಪ್ರೀತಿಯ ಸಾಕುಪ್ರಾಣಿಗಳ ಜೀವಿತಾವಧಿಯಲ್ಲಿ ಪರಿಣಾಮ ಬೀರುವ ಕಾಯಿಲೆಯಾಗಿದೆ ಮತ್ತು ಯುಕೆಯಲ್ಲಿ ಸುಮಾರು ಒಂದು ಮಿಲಿಯನ್ ಹಿರಿಯ ಬೆಕ್ಕುಗಳು ಮತ್ತು ನಾಯಿಗಳು ಈ ರೋಗದಿಂದ ಬಳಲುತ್ತಿದ್ದರೂ ಅದು ಗಮನಕ್ಕೆ ಬಾರದೆ ಅವು ಹಾಗೇ ವಾಸಿಸುತ್ತಿವೆ” ಎಂದು ಹೇಳಿದರು.

    ಸಾಕುಪ್ರಾಣಿಗಳ ರೋಗ ಗುಣಪಡಿಸಬಹುದು

    "ಬೆಕ್ಕುಗಳು ಮತ್ತು ನಾಯಿಗಳಲ್ಲಿನ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ನಾವು ಸಹಾಯ ಮಾಡಲು ಬಯಸುತ್ತೇವೆ, ಇದರಿಂದ ಸಾಕುಪ್ರಾಣಿಗಳ ಮಾಲೀಕರು ಆರಂಭಿಕ ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯಂತೆ ಯಾವ ರೋಗಲಕ್ಷಣಗಳನ್ನು ಗಮನಿಸಬೇಕು ಎಂಬುದನ್ನು ತಿಳಿದುಕೊಳ್ಳುತ್ತಾರೆ. ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳಿಗೆ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡಲು ಅನೇಕ ಮಾರ್ಗಗಳಿವೆ” ಎಂದು ಹೇಳಿದರು.

    "ಆಹಾರದಲ್ಲಿನ ಸುಧಾರಣೆಗಳು ಮತ್ತು ಹೆಚ್ಚಿದ ಮಾನಸಿಕ ಪ್ರಚೋದನೆ ಎರಡು ಮೆದುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ, ಇದು ಸಾಕುಪ್ರಾಣಿಗಳ ಬುದ್ಧಿಮಾಂದ್ಯತೆಯ ಪ್ರಗತಿಯನ್ನು ನಿಧಾನಗೊಳಿಸುತ್ತದೆ ಮತ್ತು ನಿರ್ದಿಷ್ಟ ಔಷಧಿಗಳು ಮತ್ತು ಪೂರಕಗಳು ಸಹ ಸಹಾಯ ಮಾಡುತ್ತವೆ" ಎಂದು ಹೇಳಿದರು. ಸಮೀಕ್ಷೆಯಲ್ಲಿ ಒಳಗಾದವರಲ್ಲಿ, 37 ಪ್ರತಿಶತ ಜನರು ಬುದ್ದಿಮಾಂದ್ಯತೆಯಿಂದ ಬಳಲುತ್ತಿರುವ ಕನಿಷ್ಠ ಒಂದು ಬೆಕ್ಕು ಅಥವಾ ನಾಯಿಯನ್ನು ಹೊಂದಿರುವುದು ಕಂಡು ಬಂದಿದೆ.

    ಈ ಎಲ್ಲದರ ಬಗ್ಗೆ ಇರಲಿ ಎಚ್ಚರ

    ಐದು ಜನರಲ್ಲಿ ಇಬ್ಬರು ತಮ್ಮ ಸಾಕುಪ್ರಾಣಿಗಳಿಗೆ ಉತ್ತಮ ಪರಿಸರವನ್ನು ಒದಗಿಸಿ ಕೊಡಲು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸಾಧ್ಯವಾದಷ್ಟು ಸ್ನೇಹಪರವಾಗಿ ಇಡುವುದಕ್ಕೆ ಪ್ರಯತ್ನಿಸಿದರು. ಸಮೀಕ್ಷೆಯುದ್ದಕ್ಕೂ, ಪ್ಯಾನೆಲಿಸ್ಟ್ ಗಳು ಈ ಸ್ಥಿತಿಯ ಬಗ್ಗೆ ಹೆಚ್ಚು ತಿಳಿದುಕೊಂಡಂತೆ, ಹತ್ತು ಜನರಲ್ಲಿ ಎಂಟಕ್ಕಿಂತ ಹೆಚ್ಚು ಜನರು ತಮ್ಮ ಸಾಕುಪ್ರಾಣಿ ವಯಸ್ಸಾದಂತೆ ಈ ಬುದ್ಧಿಮಾಂದ್ಯತೆಯ ಲಕ್ಷಣಗಳ ಬಗ್ಗೆ ಗಮನ ಹರಿಸುವುದಾಗಿ ಹೇಳಿದರು.

    80 ಪ್ರತಿಶತ ಜನರು ಸಾಕುಪ್ರಾಣಿಗಳಲ್ಲಿ ಬುದ್ಧಿಮಾಂದ್ಯತೆಯ ಬಗ್ಗೆ ಈ ಹಿಂದೆಯೇ ಹೆಚ್ಚು ತಿಳಿದು ಕೊಂಡಿದ್ದರೆ, ಅವರು ತಮ್ಮ ಸಾಕುಪ್ರಾಣಿಯ ಕಾಯಿಲೆಯನ್ನು ಪತ್ತೆ ಹಚ್ಚ ಬಹುದಿತ್ತು ಎಂದು ಬಯಸಿದರು. ಒನ್ ಪೋಲ್ ಮೂಲಕ ನಡೆಸಲಾದ ಅಧ್ಯಯನವು, 35 ಪ್ರತಿಶತ ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿ ವಯಸ್ಸಾದಂತೆ ವೆಟ್ಸ್ ಗೆ ಭೇಟಿ ನೀಡುವುದನ್ನು ಹೆಚ್ಚಿಸುತ್ತಾರೆ ಎಂದು ಕಂಡು ಹಿಡಿದಿದೆ.

    ಇದನ್ನೂ ಓದಿ: Pet Caring: ನಿಮ್ಮ ಸಾಕುಪ್ರಾಣಿಗಳು ಕಾಯಿಲೆಗಳಿಂದ ಬಳಲುತ್ತಿವೆಯೇ..? ಈ ರೀತಿ ಕಾಳಜಿ ಮಾಡುವುದು ಒಳಿತು

    ಐದರಲ್ಲಿ ಮೂರಕ್ಕಿಂತ ಹೆಚ್ಚು ಜನರು ತಮ್ಮ ಸಾಕುಪ್ರಾಣಿಯನ್ನು ವೆಟ್ ಗೆ ಭೇಟಿ ನೀಡಲು ಯಾವಾಗ ಕರೆದೊಯ್ಯಬೇಕು ಎಂಬುದರ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು ಎಂದು ಒಪ್ಪಿಕೊಂಡರು ಮತ್ತು ಮೂರನೆಯವರಷ್ಟು ಜನರು ತಮ್ಮ ಸಾಕುಪ್ರಾಣಿಯನ್ನು ವೆಟ್ ಗೆ ಕರೆದೊಯ್ಯಲು ವಿಳಂಬ ಮಾಡಿದ್ದಾರೆ, ಏಕೆಂದರೆ ಅವರು ಅಲ್ಲಿಗೆ ಹೋದರೆ ಕೆಟ್ಟ ಸುದ್ದಿಯನ್ನು ಪಡೆಯಬಹುದು ಎಂದು ಆತಂಕಗೊಂಡಿದ್ದಾರೆ.

    ಡಾ. ಹ್ಯೂ ಸ್ಟೇಸಿ "ಅನೇಕ ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ವೆಟ್ಸ್ ಗೆ ಕರೆತರುವ ಬಗ್ಗೆ ಆತಂಕಗಳನ್ನು ಹೊಂದಿರುವುದು ಸ್ವಾಭಾವಿಕವಾಗಿದೆ, ಇದು ಅವರು ಆ ಸಾಕುಪ್ರಾಣಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

    ತಪಾಸಣೆಗೆ ಕರೆದೊಯ್ಯುವುದು ಮುಖ್ಯ

    "ನಮ್ಮ ಸಾಕುಪ್ರಾಣಿಗಳನ್ನು ಸಂತೋಷವಾಗಿ ಮತ್ತು ಆರೋಗ್ಯಕರವಾಗಿಡಲು ನಾವು ಮನೆಯಲ್ಲಿ ಮಾಡಬೇಕಾದ ಅನೇಕ ವಿಷಯಗಳಿವೆ. ಉದಾಹರಣೆಗೆ ಅವುಗಳಿಗೆ ಚೆನ್ನಾಗಿ ವ್ಯಾಯಾಮವಾಗುವಂತೆ ಆಟವನ್ನು ಆಡಿಸಿ ಮತ್ತು ಅವುಗಳಿಗೆ ವಾಸಿಸಲು ಸುರಕ್ಷಿತ, ಆರಾಮದಾಯಕ ವಾತಾವರಣ ಕಲ್ಪಿಸಿಕೊಡಿ. ನಿಮ್ಮ ಸಾಕುಪ್ರಾಣಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದೆ ಎಂದು ನೀವು ಅನುಮಾನಿಸಿದರೆ ಅವುಗಳನ್ನು ತಪಾಸಣೆಗೆ ಕರೆದೊಯ್ಯುವುದು ಅಷ್ಟೇ ಮುಖ್ಯವಾಗಿರುತ್ತದೆ.

    "ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳಲು ಸಹಾಯ ಮಾಡುವುದು ನಮ್ಮ ಅಂತಿಮ ಗುರಿಯಾಗಿದೆ, ಆದ್ದರಿಂದ ಅವುಗಳು ದೀರ್ಘ, ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸುತ್ತವೆ. ತಮ್ಮ ಸಾಕುಪ್ರಾಣಿಗೆ ಬುದ್ಧಿಮಾಂದ್ಯತೆ ಇರಬಹುದೇ ಎಂದು ಕಾಳಜಿ ವಹಿಸುವ ಸಾಕುಪ್ರಾಣಿ ಮಾಲೀಕರಿಗೆ, ವೆಟ್ಸ್4ಪೆಟ್ಸ್ ಬೆಕ್ಕುಗಳು ಮತ್ತು ನಾಯಿಗಳಿಗೆ ಆನ್‌ಲೈನ್ ಡಿಮೇನ್ಶಿಯ ರೋಗಲಕ್ಷಣ ಪರೀಕ್ಷಕರನ್ನು ರಚಿಸಿದೆ” ಎಂದು ಅವರು ಹೇಳುತ್ತಾರೆ.
    Published by:Kavya V
    First published: