Health: ಜಪಾನೀಯರು ದೀರ್ಘಕಾಲ ಬದುಕಲು ಏನು ಮಾಡುತ್ತಾರೆ ಗೊತ್ತೇ? ಇಲ್ಲಿದೆ ದಿನಚರಿಯ ವಿವರ..!

ಜಪಾನಿನ ಪುರುಷರು ಮತ್ತು ಮಹಿಳೆಯರು ಉತ್ತಮ ಆರೋಗ್ಯ, ಚಲನಶೀಲತೆ ಮತ್ತು ಅರಿವಿನ ಕೌಶಲ್ಯಗಳೊಂದಿಗೆ ದೀರ್ಘ, ಆರೋಗ್ಯಕರ ಜೀವನವನ್ನು ನಡೆಸಲು ಅವರ ಜೀವನ ಶೈಲಿಯೇ ಕಾರಣ ಎನ್ನುತ್ತಿದ್ದಾರೆ ತಜ್ಞರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬಹುತೇಕ ರಾಷ್ಟ್ರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಇತ್ತೀಚಿನ ವರ್ಷಗಳಲ್ಲಿ ಹೃದ್ರೋಗ ಕಾಯಿಲೆ ಮತ್ತು ಕ್ಯಾನ್ಸರ್ ನಿಂದ ಮರಣ ಹೊಂದಿದವರ ಜನರ ಅಂಕಿಅಂಶಗಳ ಪ್ರಕಾರ, ಅಂತರರಾಷ್ಟ್ರೀಯ ಹೋಲಿಕೆಯಲ್ಲಿ ಜಪಾನ್  (Japan) ಅತಿ ಹೆಚ್ಚು ಸರಾಸರಿ ಜೀವಿತಾವಧಿಯನ್ನು (Life Expectancy) ಹೊಂದಿದ್ದಾರೆ ಎಂದು ಟೋಕಿಯೋದ ಸಾರ್ವಜನಿಕ ಆರೋಗ್ಯ ವಿಜ್ಞಾನಗಳ ಕೇಂದ್ರದ ಶೋಯಿಚಿರೊ ತ್ಸುಗನೆ ಹೇಳುತ್ತಾರೆ. ಯುರೋಪಿಯನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ನೇಚರ್ ಡಾಟ್ ಕಾಂ ನಲ್ಲಿ ಪ್ರಕಟವಾದ ವರದಿಯಲ್ಲಿ ಸಂಶೋಧಕರು ಜಪಾನೀಯರ ಜೀವಿತಾವಧಿಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ ಎಂದು ಹೇಳಿದರು. ಹೃದ್ರೋಗ ಮತ್ತು ಕ್ಯಾನ್ಸರ್ ನಿಂದ ಕಡಿಮೆ ಮರಣ ಪ್ರಮಾಣವು ಜಪಾನ್ ನಲ್ಲಿ ಸ್ಥೂಲಕಾಯದ ಕಡಿಮೆ ಹರಡುವಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಭಾವಿಸಲಾಗಿದೆ.

ಕೆಂಪು ಮಾಂಸದ ಕಡಿಮೆ ಸೇವನೆ, ನಿರ್ದಿಷ್ಟವಾಗಿ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಮೀನಿನ ಹೆಚ್ಚಿನ ಸೇವನೆಯು ನಿರ್ದಿಷ್ಟವಾಗಿ ಎನ್-3 ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಸೋಯಾಬೀನ್ ಗಳಂತಹ ಆಹಾರಗಳು ಮತ್ತು ಗ್ರೀನ್ ಟೀಯಂತಹ ಸಕ್ಕರೆಯಿಲ್ಲದ ಪಾನೀಯಗಳು ಇದಕ್ಕೆ ಕಾರಣ ಎಂದು ಹೇಳಬಹುದು.

Benefits of Brown Rice Tea for Health and Beauty health and lifestyle
ಸಾಂದರ್ಭಿಕ ಚಿತ್ರ


ಜಪಾನಿನ ಪುರುಷರು ಮತ್ತು ಮಹಿಳೆಯರು ಉತ್ತಮ ಆರೋಗ್ಯ, ಚಲನಶೀಲತೆ ಮತ್ತು ಅರಿವಿನ ಕೌಶಲ್ಯಗಳೊಂದಿಗೆ ದೀರ್ಘ, ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯವಾದ ಪ್ರಮುಖ ಅಂಶಗಳನ್ನು ನೋಡೋಣ ಬನ್ನಿ.

ಕಾರನ್ನು ಹೆಚ್ಚು ಬಳಸದೆ ನಡೆದುಕೊಂಡು ಹೋಗುತ್ತಾರೆ: ಜಪಾನ್ ದೇಶದಿಂದ ಕೆಲವು ಅತ್ಯುತ್ತಮ ಕಾರುಗಳು ಮತ್ತು ಮೋಟಾರ್ ಸೈಕಲ್ ಗಳನ್ನು ನೋಡಿ ನೀವು ಏನಪ್ಪಾ ಇವರು ಇಷ್ಟೊಂದೆಲ್ಲ ವಾಹನ ಪ್ರಿಯರು ಎಂದು ಕೊಳ್ಳಬೇಡಿ. ಒಬ್ಬ ಜಪಾನಿನ ವ್ಯಕ್ತಿಯು ಸಕ್ರಿಯವಾಗಿರಲು, ನಡೆಯಲು, ಮೆಟ್ಟಿಲುಗಳನ್ನು ಹತ್ತಲು ಇಷ್ಟಪಡುತ್ತಾನೆ. ಸೀಜಾವನ್ನು ನೆನಪಿಸಿಕೊಳ್ಳಿ ಹೇಗೆ ತಮ್ಮ ಮೊಣಕಾಲನ್ನು ಮಡಚಿಕೊಂಡು ಅದರ ಮೇಲೆ ತಮ್ಮ ಇಡೀ ದೇಹದ ಭಾರ ಹಾಕಿ ವಿಶ್ರಾಂತಿ ಪಡೆಯುತ್ತಾರೆ. ಜಪಾನ್​ನಲ್ಲಿ ಹೆಚ್ಚಿನವರು ತಮ್ಮ ಕೆಲಸಕ್ಕೆ ರೈಲಿನಲ್ಲಿ ಹೋಗುತ್ತಾರೆ ಇಲ್ಲವೆಂದರೆ ನಡೆದುಕೊಂಡು ಹೋಗುತ್ತಾರೆ.

ಅವರ ವಂಶವಾಹಿಗಳಲ್ಲಿ ಹಾಸುಹೊಕ್ಕಾಗಿದೆ: ಉತ್ತಮ ಆರೋಗ್ಯ ರಕ್ಷಣೆ ಮತ್ತು ಉತ್ತಮ ಆಹಾರದ ಹೊರತಾಗಿ, ಜಪಾನೀಯರು ನಿರ್ದಿಷ್ಟವಾಗಿ ಎರಡು ವಂಶವಾಹಿಗಳಿಂದಾಗಿ ಆನುವಂಶಿಕ ಪ್ರಯೋಜನವನ್ನು ಹೊಂದಿದ್ದಾರೆ. ಡಿಎನ್‌ಎ 5178 ಮತ್ತು ಎನ್‌ಡಿ 2-237ಮೆಟ್ ಜೆನೋಟೈಪ್ ಅನ್ನು ಹೊಂದಿರುತ್ತಾರೆ. ಪ್ರತಿಯೊಬ್ಬ ಜಪಾನಿ ವ್ಯಕ್ತಿಯು ಈ ವಂಶವಾಹಿನಿ ಪ್ರಕಾರವನ್ನು ಹೊಂದಿರುವುದಿಲ್ಲ. ಆದರೆ ಇದು ಹೆಚ್ಚಾಗಿ ದೀರ್ಘಜೀವಿತಾವಧಿ ಹೊಂದಿರುವವರಲ್ಲಿ ಸಾಮಾನ್ಯವಾಗಿದೆ. ಈ ವಂಶವಾಹಿನಿಗಳು ಟೈಪ್ 2 ಮಧುಮೇಹ, ಪಾರ್ಶ್ವವಾಯು, ಹೃದಯಾಘಾತಗಳು ಮತ್ತು ಹೃದಯ ರಕ್ತನಾಳದ ಕಾಯಿಲೆಗಳಿಗೆ ಸಂಬಂಧಿಸಿದ ರೋಗಗಳನ್ನು ತಡೆಯುವ ಮೂಲಕ ಜೀವಿತಾವಧಿಯನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ: Winter Heart Attacks: ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ತಗ್ಗಿಸಲು ಇಲ್ಲಿವೆ ಸಲಹೆಗಳು

ಜಪಾನೀಯರು 'ಇಕಿಗೈ' (ಉದ್ದೇಶ) ಮಂತ್ರವನ್ನು ಅನುಸರಿಸುತ್ತಾರೆ: ಕೇವಲ ಜೀವಿಸುವ ಬದಲು ಜೀವನದಲ್ಲಿ ಸ್ವಲ್ಪ ಸಂತೋಷ ಮತ್ತು ಉದ್ದೇಶವನ್ನು ಹುಡುಕಬೇಕು ಎಂದು ಸಾರುವ ಪ್ರಾಚೀನ ತತ್ವಶಾಸ್ತ್ರ ಇದು. ಇದು ತಕ್ಷಣದ ತೃಪ್ತಿಯ ಬಗ್ಗೆ ಅಲ್ಲ ಆದರೆ ಖಂಡಿತವಾಗಿಯೂ ಜೀವನದಲ್ಲಿ ನಿಮ್ಮ ಉದ್ದೇಶದ ಕಡೆಗೆ ನಿಮ್ಮ ಗಮನವನ್ನು ಹರಿಸುವಂತೆ ಮಾಡುತ್ತದೆ. ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಕಂಡುಹಿಡಿಯುವುದು. ನೀವು ಜಗತ್ತಿಗೆ ಏನು ಉತ್ತಮವಾಗಿ ಕೊಡುಗೆ ನೀಡಬಹುದು, ನೀವು ಯಾವುದರಲ್ಲಿ ಉತ್ತಮರು ಮತ್ತು ನೀವು ಏನು ಮಾಡುವುದನ್ನು ಆನಂದಿಸುವಿರಿ ಎಂಬುದನ್ನು ವ್ಯಾಖ್ಯಾನಿಸುವುದು ಇದರ ಉದ್ದೇಶವಾಗಿದೆ.

ಕಡಿಮೆ ಆಹಾರ ಸೇವಿಸುವುದು: ಜಪಾನಿಯರ ಪರಿಕಲ್ಪನೆಯು ನೀವು ಶೇಕಡಾ 80 ರಷ್ಟು ಭಾಗ ಹೊಟ್ಟೆ ತುಂಬುವಷ್ಟು ಮಾತ್ರ ಊಟ ಮಾಡಬೇಕು ಎಂದು ನಿರ್ದೇಶಿಸುತ್ತದೆ. ಮೆದುಳು ತನ್ನ ಪೋಷಕಾಂಶಗಳನ್ನು ತುಂಬಿರುವುದರಿಂದ ತಿನ್ನುವುದನ್ನು ನಿಲ್ಲಿಸಬೇಕಾದ ಸಂಕೇತವನ್ನು ದೇಹದಿಂದ ಪಡೆಯಲು ಸಾಮಾನ್ಯವಾಗಿ ಕನಿಷ್ಠ 20 ನಿಮಿಷಗಳು ತೆಗೆದುಕೊಳ್ಳುತ್ತದೆ. ಈ ಅಭ್ಯಾಸವು ಜಪಾನಿನ "ಗಡಿಯಾರ ಮತ್ತು ತಿನ್ನುವುದನ್ನು ನಿಲ್ಲಿಸಲು ಜ್ಞಾಪಕ" ಆಗಿದೆ. ಜಪಾನೀಯರು ಆಹಾರ ಬಡಿಸಿಕೊಳ್ಳುವಾಗ ಸ್ವಲ್ಪವೇ ಬಡಿಸಿಕೊಳ್ಳುತ್ತಾರೆ ಮತ್ತು ನಿಧಾನವಾಗಿ ಅದನ್ನು ಸೇವಿಸುತ್ತಾರೆ.

ಸ್ವಚ್ಛ ಪರಿಸರ ಮತ್ತು ಉತ್ತಮ ಆರೋಗ್ಯ ರಕ್ಷಣಾ ವ್ಯವಸ್ಥೆ ಹೊಂದಿರುತ್ತಾರೆ: ಜಪಾನೀಯರು ಸುಧಾರಿತ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದಾರೆ. ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವುದು. ಟಿಬಿಗೆ ಉಚಿತ ಚಿಕಿತ್ಸೆಯಂತಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಜನರಿಗೆ ಮಾರ್ಗದರ್ಶನ ನೀಡುವ ನಿಯಮಿತ ಆರೋಗ್ಯ ಅಭಿಯಾನಗಳು ರೂಢಿಯಲ್ಲಿವೆ. 1950 ಮತ್ತು 1960 ರ ದಶಕದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಪ್ರಜ್ಞೆಯ ಸಂಸ್ಕೃತಿಯನ್ನು ಸೃಷ್ಟಿಸುವ ಮೂಲಕ ಸಾರ್ವಜನಿಕ ಆರೋಗ್ಯದಲ್ಲಿ ಜಪಾನ್ ತುಂಬಾನೇ ಮುಂದುವರೆದಿದೆ ಎಂದು ಲ್ಯಾನ್ಸೆಟ್ ನ ಸಂಶೋಧನಾ ಪ್ರಬಂಧವು ಹೇಳುತ್ತದೆ.

ಊಟದ ಸಮಯ ಪಾಲಿಸುತ್ತಾರೆ: ಜಪಾನಿನಲ್ಲಿ, ಕುಟುಂಬಗಳು ನೆಲದ ಮೇಲೆ ಕುಳಿತು ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಜಪಾನಿನ ಆಹಾರವು ಸಮತೋಲಿತವಾಗಿರುತ್ತದೆ. ಅವರ ಆಹಾರದಲ್ಲಿ ಹಣ್ಣುಗಳು, ಒಮೆಗಾ-ಸಮೃದ್ಧ ಮೀನು, ಅಕ್ಕಿ, ಸಂಪೂರ್ಣ ಧಾನ್ಯಗಳು, ಹಸಿರು ಮತ್ತು ಹಸಿ ತರಕಾರಿಗಳನ್ನು ಸೇವಿಸುತ್ತಾರೆ. ಜಪಾನ್ ನಲ್ಲಿ ಬೊಜ್ಜು ಪ್ರಮಾಣವು ಹೇಗೆ ಕಡಿಮೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಇದರಿಂದ ತಿಳಿಯಬಹುದು.

ಇದನ್ನೂ ಓದಿ: Hair Care: ಎಲ್ಲ ರೀತಿಯ ಕೂದಲಿನ ಸಮಸ್ಯೆಗಳಿಗೆ ತೆಂಗಿನೆಣ್ಣೆ ರಾಮಬಾಣ..!

ವಯಸ್ಸಾದವರ ಬಗ್ಗೆ ಕಾಳಜಿ ವಹಿಸಲಾಗುತ್ತದೆ: ಜಪಾನ್ ದೇಶದಲ್ಲಿ ಜನರು ತಮ್ಮ ಮನೆಯಲ್ಲಿರುವ ವಯಸ್ಸಾದವರನ್ನು ತುಂಬಾನೇ ಚೆನ್ನಾಗಿ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಕುಟುಂಬದ ವಯಸ್ಸಾದ ಸದಸ್ಯರನ್ನು ಬೇರ್ಪಡಿಸುವುದು ಅಥವಾ ತ್ಯಜಿಸುವುದಿಲ್ಲ. ಭಾರತದಂತೆಯೇ, ಜಪಾನಿನ ಹೆಚ್ಚಿನ ಮನೆಗಳಲ್ಲಿ ಅಜ್ಜ ಅಜ್ಜಿಯರನ್ನು ಕಾಣಬಹುದು.

ಚಹಾ ಕುಡಿಯುವ ಸಂಪ್ರದಾಯ: ಜಪಾನಿನ ಚಹಾ ಸಮಾರಂಭದ ಬಗ್ಗೆ ಯಾರು ಕೇಳಿರಲ್ಲ ಹೇಳಿ? ಜಪಾನಿನ ಪ್ರಾಚೀನ ಪಾನೀಯವು ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವ, ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ, ಜೀರ್ಣಕ್ರಿಯೆಗೆ ಸಹಾಯ ಮಾಡುವ, ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಚಹಾ ಕಷಾಯದಲ್ಲಿನ ಅಂಶಗಳು ಜೀವಕೋಶದ ಆರೋಗ್ಯವನ್ನು ಹೆಚ್ಚಿಸುತ್ತವೆ.
First published: