Oral Cancer Symptoms: ಬಾಯಿಯ ಕ್ಯಾನ್ಸರ್ ತುಂಬಾನೇ ಡೇಂಜರ್! ಇದರ ರೋಗಲಕ್ಷಣ ಮತ್ತು ಚಿಕಿತ್ಸೆ ಬಗ್ಗೆ ತಿಳ್ಕೊಳ್ಳಿ

Oral Cancer Symptoms And Treatment: ಬಾಯಿಯ ಆರೋಗ್ಯ ದೇಹದ ಒಟ್ಟಾರೆ ಆರೋಗ್ಯಕ್ಕೆ ಹೆಬ್ಬಾಗಿಲು ಇದ್ದಂತೆ. ಬಾಯಿಯ ಕ್ಯಾನ್ಸರ್ ನ ಸೂಚಕವಾಗಬಹುದಾದ ರೋಗಲಕ್ಷಣಗಳನ್ನು ಗಮನಿಸಲು ಆದರ್ಶಪ್ರಾಯವಾಗಿ ಪ್ರತಿ ತಿಂಗಳಿಗೊಮ್ಮೆ ನಿಯಮಿತವಾಗಿ ಸ್ವಯಂ-ತಪಾಸಣೆ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿರಬೇಕು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ನಿಮ್ಮ ದೇಹದ ಆರೋಗ್ಯ (Health) ಚೆನ್ನಾಗಿರಬೇಕು ಎಂದರೆ ಮೊದಲು ನಿಮ್ಮ ಬಾಯಿಯ ಆರೋಗ್ಯ ಚೆನ್ನಾಗಿರಬೇಕು ಅಂತ ವೈದ್ಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಹೌದು.. ಈ ಮಾತು ನೂರಕ್ಕೆ ನೂರರಷ್ಟು ಸತ್ಯ, ಏಕೆಂದರೆ ಬಾಯಿಯ ಆರೋಗ್ಯ (Oral Health) ದೇಹದ ಒಟ್ಟಾರೆ ಆರೋಗ್ಯಕ್ಕೆ ಹೆಬ್ಬಾಗಿಲು ಇದ್ದಂತೆ. ಬಾಯಿಯ ಕ್ಯಾನ್ಸರ್ ನ (Oral Cancer) ಸೂಚಕವಾಗಬಹುದಾದ ರೋಗಲಕ್ಷಣಗಳನ್ನು ಗಮನಿಸಲು ಆದರ್ಶಪ್ರಾಯವಾಗಿ ಪ್ರತಿ ತಿಂಗಳಿಗೊಮ್ಮೆ ನಿಯಮಿತವಾಗಿ ಸ್ವಯಂ-ತಪಾಸಣೆ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿರಬೇಕು. ಬಾಯಿಯ ಕ್ಯಾನ್ಸರ್ ವಿರುದ್ಧ ಹೋರಾಡಲು ಮುಂಚಿತವಾಗಿ ಪತ್ತೆ ಹಚ್ಚುವುದು ತುಂಬಾನೇ ಮುಖ್ಯವಾಗಿರುವುದರಿಂದ ರಕ್ತಸ್ರಾವವಾಗುವ ಅಥವಾ ಬಾಯಿಯಲ್ಲಿನ ಹುಣ್ಣು ಅಥವಾ ತೇಪೆಗಳನ್ನು ತಕ್ಷಣವೇ ವೈದ್ಯರ (Doctors) ಗಮನಕ್ಕೆ ತರಬೇಕು.

ಬಾಯಿಯ ಕ್ಯಾನ್ಸರ್ ಎಂದರೇನು ?
ತುಟಿಗಳು, ನಾಲಿಗೆಯ ತಳಭಾಗ, ಕೆನ್ನೆಗಳ ಒಳಭಾಗ, ಬಾಯಿಯಲ್ಲಿ ಗಟ್ಟಿಯಾದ ಮತ್ತು ಮೃದುವಾದ ಅಂಗುಳ, ಸೈನಸ್ ಗಳು, ಟಾನ್ಸಿಲ್ ಗಳು, ವ್ಯಾಲೆಕ್ಯುಲಾ ಮತ್ತು ಗಂಟಲು ಸೇರಿದಂತೆ ಬಾಯಿಯ ಒಳಭಾಗದಲ್ಲಿ ಕುಹರ ಉಂಟಾಗುವ ಕ್ಯಾನ್ಸರ್ ಅನ್ನು ಬಾಯಿಯ ಕ್ಯಾನ್ಸರ್ ಅಥವಾ ಬಾಯಿಯ ಕುಹರದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.

ಇದು ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಗಳ ವರ್ಗದಲ್ಲಿ ವರ್ಗೀಕರಿಸಲ್ಪಟ್ಟ ಒಂದು ರೀತಿಯ ಕ್ಯಾನ್ಸರ್ ಆಗಿದೆ ಮತ್ತು ಇದನ್ನು ಮುಂಚಿತವಾಗಿ ಪತ್ತೆ ಹಚ್ಚಿದಾಗ, ವೈದ್ಯರಿಗೆ ಚಿಕಿತ್ಸೆ ನೀಡುವುದು ತುಂಬಾ ಸುಲಭವಾಗುತ್ತದೆ. ಆದರೆ ದುರದೃಷ್ಟವಶಾತ್, ಅನೇಕ ಜನರು ಈ ಕ್ಯಾನ್ಸರ್ ಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ಪಡೆಯಲು ತುಂಬಾನೇ ವಿಳಂಬ ಮಾಡುತ್ತಾರೆ.

"ಹೆಚ್ಚಿನ ಸಮಯಗಳಲ್ಲಿ, ಬಾಯಿಯ ಕ್ಯಾನ್ಸರ್ ಬಿಳಿ ಅಥವಾ ಕೆಂಪು ಮಚ್ಚೆಗಳು ಅಥವಾ ರಕ್ತಸ್ರಾವವಾಗುವ ಹುಣ್ಣುಗಳನ್ನು ಹೊಂದಿರುವ ತುಟಿಗಳು ಅಥವಾ ಬಾಯಿಯ ಸಾಮಾನ್ಯ ಸಮಸ್ಯೆಯಂತೆ ಕಾಣುತ್ತದೆ. ಒಂದು ಸಾಮಾನ್ಯ ಸಮಸ್ಯೆ ಮತ್ತು ಸಂಭಾವ್ಯ ಕ್ಯಾನ್ಸರ್ ನಡುವಿನ ಏಕೈಕ ವ್ಯತ್ಯಾಸವೆಂದರೆ ಈ ಸಮಸ್ಯೆ ಎರಡು ವಾರಗಳಲ್ಲಿಯೂ ಕಡಿಮೆ ಆಗದಿರುವುದು ಮತ್ತು ಇದಕ್ಕೆ ಸೂಕ್ತವಾದ ಚಿಕಿತ್ಸೆ ನೀಡದಿದ್ದರೆ, ಅದು ಇತರ ಭಾಗಗಳಿಗೆ ಹರಡುತ್ತದೆ. ಉದಾಹರಣೆಗೆ, ಕೆನ್ನೆಗಳ ಕ್ಯಾನ್ಸರ್ ಇದ್ದರೆ, ಅದನ್ನು ಚಿಕಿತ್ಸೆಯಿಲ್ಲದೆ ಬಿಟ್ಟರೆ, ಅದು ಕ್ರಮೇಣ ಸ್ನಾಯುಗಳಿಗೆ ಹರಡುತ್ತದೆ, ನಂತರ ಚರ್ಮಕ್ಕೆ ಮತ್ತು ಮೂಳೆಗಳಿಗೆ ಹರಡುತ್ತದೆ" ಎಂದು ಹೇಳಲಾಗಿದೆ.

ಬಾಯಿ ಕ್ಯಾನ್ಸರ್ ಗೆ ಮುಖ್ಯವಾದ ಕಾರಣಗಳು:
ಡಾ. ಅಂಕಿತ್ ಮಹುವಕರ್ "ತುಟಿಗಳು ಅಥವಾ ಬಾಯಿಯಲ್ಲಿರುವ ಜೀವಕೋಶಗಳು ತಮ್ಮ ಡಿಎನ್ಎಯಲ್ಲಿ ಬದಲಾವಣೆಗಳನ್ನು ಅಭಿವೃದ್ಧಿಪಡಿಸಿದಾಗ, ಅವು ಬೆಳೆಯುವುದನ್ನು ಮತ್ತು ವಿಭಜಿಸುವುದನ್ನು ಮುಂದುವರಿಸಿದಾಗ ಮತ್ತು ಆರೋಗ್ಯಕರ ಜೀವಕೋಶಗಳು ಸಾಯಲು ಕಾರಣವಾದಾಗ ಅಸಹಜ ಜೀವಕೋಶಗಳ ಶೇಖರಣೆಯು ಗೆಡ್ಡೆಯನ್ನು ರೂಪಿಸಬಹುದು. ಸಮಯ ಕಳೆದಂತೆ, ಇದು ಬಾಯಿಯ ಒಳಗೆ ಹರಡುತ್ತದೆ. ಸಾಮಾನ್ಯವಾಗಿ, ಬಾಯಿ ಕ್ಯಾನ್ಸರ್ ಗಳು ಚಪ್ಪಟೆಯಾದ, ತೆಳುವಾದ (ಸ್ಕ್ವಾಮಸ್) ಕೋಶಗಳಲ್ಲಿ ಪ್ರಾರಂಭವಾಗುತ್ತವೆ, ಅವು ತುಟಿಗಳನ್ನು ಮತ್ತು ಬಾಯಿಯ ಒಳಗೆ ಬರುತ್ತವೆ. ಅವು ಸ್ಕ್ವಾಮಸ್ ಸೆಲ್ ಕಾರ್ಸಿನೋಮಾಗಳಾಗಿರುತ್ತವೆ" ಎಂದು ಹೇಳುತ್ತಾರೆ.

ಇದನ್ನೂ ಓದಿ:  Blood Test: ರೋಗಲಕ್ಷಣಗಳಿಲ್ಲದೇ ಹಲವು ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚುತ್ತಂತೆ ಈ ಹೊಸ ರಕ್ತ ಪರೀಕ್ಷೆ!

"ಸಿಗರೇಟು ಸೇದುವುದು, ತಂಬಾಕು ಜಗಿಯುವುದು ಮತ್ತು ಅತಿಯಾದ ಆಲ್ಕೋಹಾಲ್ ಸೇವನೆಯಂತಹ ಅನಾರೋಗ್ಯಕರ ಅಭ್ಯಾಸಗಳು ಬಾಯಿಯ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಮುಖ ಮತ್ತು ತುಟಿಗಳನ್ನು ಸೂರ್ಯನ ಶಾಖಕ್ಕೆ ಒಡ್ಡಿಕೊಂಡರೆ ಅಥವಾ ವ್ಯಕ್ತಿಯು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದರೆ ಈ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ. ಅಲ್ಲದೆ, ಹ್ಯೂಮನ್ ಪಾಪಿಲೋಮಾ ವೈರಸ್ (ಎಚ್‌ಪಿವಿ) ಎಂದು ಕರೆಯಲ್ಪಡುವ ಲೈಂಗಿಕವಾಗಿ ಹರಡುವ ವೈರಸ್ ಓರೋಫಾರಿಂಜಿಯಲ್ ಕ್ಯಾನ್ಸರ್ ಗೆ ಸ್ಥಾಪಿತ ಅಪಾಯದ ಅಂಶವಾಗಿದೆ" ಎಂದು ಹೇಳಿದರು.

ಈ ಬಾಯಿ ಕ್ಯಾನ್ಸರ್ ನ ಲಕ್ಷಣಗಳು:

 • ತುಟಿಗಳು, ಒಸಡುಗಳು, ಕೆನ್ನೆ ಅಥವಾ ಬಾಯಿಯ ಒಳಗೆ ಊತ ಅಥವಾ ದಪ್ಪಗಾಗುವುದು, ಗಡ್ಡೆಗಳು ಅಥವಾ ಒರಟಾದ ಕಲೆಗಳು ಅಥವಾ ಸವೆತ ಕಂಡು ಬರುವುದು.

 • ವೆಲ್ವೆಟ್ ಆಗಿ ಕಾಣುವ ಬಾಯಿಯಲ್ಲಿ ಬಿಳಿ ಅಥವಾ ಕೆಂಪು ಮಚ್ಚೆಗಳು

 • ಬಾಯಿಯಲ್ಲಿ ರಕ್ತಸ್ರಾವವಾಗುವುದು

 • ಮುಖ, ಬಾಯಿ ಅಥವಾ ಕುತ್ತಿಗೆಯ ಯಾವುದೇ ಜಾಗದಲ್ಲಿ ಮರಗಟ್ಟುವಿಕೆ, ಸಂವೇದನೆ ನಷ್ಟ ಮತ್ತು ನೋವು ಕಾಣಿಸುತ್ತದೆ.

 • ಮುಖ, ಕುತ್ತಿಗೆ ಅಥವಾ ಬಾಯಿಯಲ್ಲಿ ನಿರಂತರ ಹುಣ್ಣುಗಳು, ರಕ್ತಸ್ರಾವ ಮತ್ತು 2 ವಾರಗಳಾದರೂ ಗುಣವಾಗುವುದಿಲ್ಲ.

 • ಗಂಟಲಿನಲ್ಲಿ ಏನೋ ಸಿಕ್ಕಿ ಹಾಕಿಕೊಂಡಿರುವ ಹಾಗಿರುತ್ತದೆ

 • ಆಹಾರವನ್ನು ಅಗಿಯಲು ಅಥವಾ ನುಂಗಲು ಮತ್ತು ಮಾತನಾಡಲು ಕಷ್ಟವಾಗುವುದು

 • ದೀರ್ಘಕಾಲದ ಗಂಟಲು ನೋವು ಅಥವಾ ಧ್ವನಿಯಲ್ಲಿ ಬದಲಾವಣೆಯಾಗುವುದು

 • ದವಡೆ ಅಥವಾ ಕಿವಿಯಲ್ಲಿ ನೋವು

 • ಹಠಾತ್ ಆಗಿ ದೇಹದ ತೂಕ ಕಡಿಮೆ ಆಗುವುದು


ಇದನ್ನು ತಡೆಗಟ್ಟುವುದು ಹೇಗೆ?
ಡಾ ಅಂಕಿತ್ ಮಹುವಕರ್ ಅವರ ಪ್ರಕಾರ, "ಬಾಯಿಯ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡಲು ವ್ಯಕ್ತಿಯು ಸಕ್ರಿಯ ಪಾತ್ರವನ್ನು ವಹಿಸಿದರೆ ಅದನ್ನು ತಡೆಗಟ್ಟಬಹುದು. ಧೂಮಪಾನ ಮಾಡುವ ಅಥವಾ ತಂಬಾಕನ್ನು ಸೇವಿಸುವ ಜನರು ಅದನ್ನು ನಿಲ್ಲಿಸಬೇಕು. ಏಕೆಂದರೆ ಅದು ನೇರವಾಗಿ ಬಾಯಿಯಲ್ಲಿರುವ ಜೀವಕೋಶಗಳನ್ನು ಅಪಾಯಕಾರಿ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕಗಳಿಗೆ ಒಡ್ಡುತ್ತದೆ. ಆಲ್ಕೋಹಾಲ್ ಸೇವನೆಯನ್ನು ಸಹ ಕಡಿಮೆ ಮಾಡಬೇಕು, ಏಕೆಂದರೆ ಇದು ಜೀವಕೋಶಗಳನ್ನು ಕಿರಿಕಿರಿಗೊಳಿಸಬಹುದು, ಇದರಿಂದಾಗಿ ಅವು ಬಾಯಿಯ ಕ್ಯಾನ್ಸರ್ ಗೆ ದಾರಿ ಮಾಡಿಕೊಡುತ್ತದೆ" ಎಂದು ಹೇಳಿದರು.

ಇದನ್ನೂ ಓದಿ:  Wine And Diabetes: ಡಯಾಬಿಟಿಸ್​ ಇರುವವರು ವೈನ್ ಕುಡಿಯೋ ಮುಂಚೆ ಈ ಸ್ಟೋರಿ ಓದಿ

"ತುಟಿಗಳ ಮೇಲಿನ ಚರ್ಮವನ್ನು ಎಲ್ಲಾ ಸಮಯದಲ್ಲೂ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು. ಆದ್ದರಿಂದ ಅಗಲವಾದ ಟೋಪಿಯನ್ನು ಧರಿಸುವುದು ಅಥವಾ ಮುಖವನ್ನು ಮುಚ್ಚಲು ಸಹಾಯ ಮಾಡುವ ಛತ್ರಿಯನ್ನು ಒಯ್ಯುವುದು ಒಳ್ಳೆಯದು. ಅಲ್ಲದೆ, ಸನ್ ಸ್ಕ್ರೀನ್ ಲಿಪ್ ಕ್ರೀಮ್ ಅನ್ನು ಹಚ್ಚಿಕೊಳ್ಳಿರಿ. ಹ್ಯೂಮನ್ ಪ್ಯಾಪಿಲೋಮಾ ವೈರಸ್ ವಿರುದ್ಧ ಲಸಿಕೆ ಪಡೆಯುವುದು ಸಹ ಅಗತ್ಯವಾಗಿದೆ. ಯಾವುದೇ ಕ್ಯಾನ್ಸರ್ ವಿರುದ್ಧ ಹೋರಾಡಲು ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ಕ್ಯಾನ್ಸರ್ ಪೂರ್ವ ಬದಲಾವಣೆಗಳನ್ನು ತಡೆಗಟ್ಟಲು ಇಡೀ ಬಾಯಿಯ ಸಂಪೂರ್ಣ ತಪಾಸಣೆಗಾಗಿ ದಂತ ವೈದ್ಯರನ್ನು ನಿಯಮಿತವಾಗಿ ನೋಡುವುದು ಸಹ ಮುಖ್ಯವಾಗಿದೆ" ಎಂದು ಹೇಳಿದರು.

ಇದಕ್ಕೆ ಚಿಕಿತ್ಸೆ ಏನು?
ಚಿಕಿತ್ಸೆಯು ಕ್ಯಾನ್ಸರ್ ಆದ ಸ್ಥಳ, ಹಂತ, ವಿಧ, ರೋಗಿಯ ವಯಸ್ಸು ಮತ್ತು ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಒತ್ತಿ ಹೇಳಿದ ಡಾ ಅಂಕಿತ್ ಮಹುವಕರ್ ಅವರು "ಬಾಯಿಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬ್ರಾಕಿಥೆರಪಿಯನ್ನು ಬಳಸಲಾಗುತ್ತದೆ. ಉದಾಹರಣೆಗೆ, ನಾಲಿಗೆಯ ಒಂದು ಭಾಗವನ್ನು ಅಥವಾ ದವಡೆಯ ಮೂಳೆಯನ್ನು ಅಥವಾ ದುಗ್ಧರಸ ಗ್ರಂಥಿಗಳನ್ನು ತೆಗೆದು ಹಾಕುವುದನ್ನು ಇದು ಒಳಗೊಂಡಿರುತ್ತದೆ.

ಇವು ವ್ಯಕ್ತಿಯ ನೋಟವನ್ನು ಮತ್ತು ಮಾತನಾಡುವ ಅಥವಾ ತಿನ್ನುವ ಅವರ ಸಾಮರ್ಥ್ಯವನ್ನು ಗಮನಾರ್ಹವಾಗಿ ಬದಲಾಯಿಸುತ್ತವೆ. ಬಾಯಿಯ ಕ್ಯಾನ್ಸರ್ ಅನ್ನು ಬೇಗನೆ ಪತ್ತೆ ಹಚ್ಚುವುದರಿಂದ ಅದು ಮತ್ತಷ್ಟು ಬೆಳೆಯುವ ಅಥವಾ ಹರಡುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ತುಟಿಗಳು, ಒಸಡುಗಳ ಮುಂಭಾಗ ಮತ್ತು ಬಾಯಿಯ ಮೇಲ್ಭಾಗವನ್ನು ಬೆರಳಿನಿಂದ ಪರೀಕ್ಷಿಸಬೇಕಾದ ಮಾಸಿಕ ಸ್ವಯಂ-ಪರೀಕ್ಷೆಯನ್ನು ಮಾಡುವ ಮೂಲಕ ಇದು ಸಾಧ್ಯವಾಗುತ್ತದೆ.

ಯಾವುದೇ ಗಡ್ಡೆಗಳು ಅಥವಾ ಹಿಗ್ಗಿದ ದುಗ್ಧರಸ ಗ್ರಂಥಿಗಳಿಗಾಗಿ ಕುತ್ತಿಗೆ ಮತ್ತು ಕೆಳಗಿನ ದವಡೆಗಳ ಕೆಳಗಿನ ಜಾಗವನ್ನು ಪರೀಕ್ಷಿಸಬೇಕು. ಪ್ರಕಾಶಮಾನವಾದ ಬೆಳಕು ಮತ್ತು ಕನ್ನಡಿಯನ್ನು ಬಳಸಿ, ಬಾಯಿಯ ಒಳಭಾಗವನ್ನು ಪರೀಕ್ಷಿಸಬೇಕು. ಅಲ್ಲದೆ, ತಲೆಯನ್ನು ಸ್ವಲ್ಪ ಓರೆಯಾಗಿಸುವುದರ ಮೂಲಕ ಬಾಯಿಯ ಒಳಗಿರುವ ಮೇಲ್ಭಾಗವನ್ನು ಗಮನಿಸಬೇಕು. ಬಾಯಿಯ ಒಳಭಾಗ, ಕೆನ್ನೆಗಳ ಒಳಪದರ ಮತ್ತು ಒಸಡುಗಳ ಹಿಂಭಾಗವನ್ನು ನೋಡಲು ಕೆನ್ನೆಗಳನ್ನು ಹೊರ ತೆಗೆಯಬೇಕು ಮತ್ತು ಬಾಯಿಯ ಮೇಲ್ಭಾಗ, ಕೆಳಭಾಗದಲ್ಲಿ ಏನಾದರೂ ಬದಲಾವಣೆಗಳಿವೆಯೇ ಎಂದು ನೋಡಲು ನಾಲಿಗೆಯನ್ನು ಸಹ ಹೊರ ತೆಗೆಯಬೇಕು.

ಇದನ್ನೂ ಓದಿ: Teeth Health: ಹಲ್ಲುಗಳ ಸಮಸ್ಯೆಗೂ, ಯಕೃತ್ತಿನ ಕ್ಯಾನ್ಸರ್‌ಗೂ ಸಂಬಂಧವಿದೆಯೇ? 

ಬಾಯಿಯ ಆರೋಗ್ಯವು ತುಂಬಾನೇ ಮುಖ್ಯವಾಗಿದೆ ಮತ್ತು ಅದು ವ್ಯಕ್ತಿಯ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವು ಮಾಡಬೇಕಾಗಿರುವುದು ಏನೆಂದರೆ, ಯಾವುದೇ ಬದಲಾವಣೆ ಕಂಡು ಬಂದರೂ ಕೂಡಲೇ ಬಾಯಿಯ ಒಳಭಾಗವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಮತ್ತು ಅದರ ಹರಡುವಿಕೆಯನ್ನು ತಡೆಗಟ್ಟಲು ತಕ್ಷಣವೇ ವೈದ್ಯರಿಗೆ ತೋರಿಸುವುದು.
Published by:Ashwini Prabhu
First published: