Grapes Benefits: ದ್ರಾಕ್ಷಿ ಹಣ್ಣು ತಿಂದ್ರೆ ಈ ಎಲ್ಲಾ ಸಮಸ್ಯೆಗೆ ಮುಕ್ತಿ ಸಿಗುತ್ತೆ

ದ್ರಾಕ್ಷಿ ಹಣ್ಣು

ದ್ರಾಕ್ಷಿ ಹಣ್ಣು

ದ್ರಾಕ್ಷಿಯು ಅತ್ಯಂತ ಪರಿಚಿತ ಮತ್ತು ರುಚಿಕರವಾದ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ತಿನ್ನೋದ್ರಿಂದ ದೇಹವನ್ನು ಆರೋಗ್ಯದಲ್ಲಿಟ್ಟುಕೊಳ್ಳಬಹುದು. ಹಾಗಿದ್ರೆ ದ್ರಾಕ್ಷಿ ಹಣ್ಣು ತಿನ್ನುವುದರಿಂದ ಏನೆಲ್ಲಾ ಆರೋಗ್ಯದ ಪ್ರಯೋಜನಗಳಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

  • Share this:

ಸಾಮಾನ್ಯವಾಗಿ ಸೀಸನ್‌ನಲ್ಲಿ ಬರುವಂತಹ ಹಣ್ಣುಗಳನ್ನು ಹೆಚ್ಚಾಗಿ ತಿನ್ನಿ ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಈಗಂತೂ ದ್ರಾಕ್ಷಿ ಹಣ್ಣಿನ ಸೀಸನ್.‌ ಹಾಗಾಗಿ ತಾಜಾ ಆಗಿರುವ ರುಚಿಕರ ದ್ರಾಕ್ಷಿ (Grapes) ಎಲ್ಲಿಯೂ ಸಿಗುತ್ತದೆ. ಸಾಕಷ್ಟು ಜನ ದ್ರಾಕ್ಷಿ ಇಷ್ಟಪಟ್ಟು ತಿನ್ನುತ್ತಾರೆ. ಅಲ್ಲದೇ ಇದನ್ನು ವೈನ್‌ (Wine) ತಯಾರಿಕೆಯಲ್ಲಿಯೂ ಸಹ ಬಳಸಲಾಗುತ್ತದೆ. ಈ ಟೇಸ್ಟಿ ಮತ್ತು ಹೈಡ್ರೇಟಿಂಗ್‌ ಹಣ್ಣನ್ನು (Hydrating fruits) ಸಾವಿರಾರು ವರ್ಷಗಳಿಂದ ಬೆಳೆಯಲಾಗುತ್ತಿದ್ದು ಅವುಗಳಲ್ಲಿ ಹೆಚ್ಚಾಗಿ ಹಸಿರು, ಕೆಂಪು, ಕಪ್ಪು, ಹಳದಿ ಮತ್ತು ಗುಲಾಬಿ ಬಣ್ಣದ ದ್ರಾಕ್ಷಿಗಳನ್ನು ನೀವು ನೋಡಬಹುದಾಗಿದೆ. ಅಂದಹಾಗೆ ದ್ರಾಕ್ಷಿಯನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.


ಹಲವಾರು ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯ ಸುಧಾರಿಸುತ್ತದೆ. ಅದರಲ್ಲಿ ದ್ರಾಕ್ಷಿ ಸಹ ಒಂದು. ಹಾಗಿದ್ರೆ ಈ ದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ಈ ಕೆಳಗಿನ ಲೇಖದಲ್ಲಿ ತಿಳಿಸಲಾಗಿದೆ.


ದ್ರಾಕ್ಷಿ ಅತ್ಯುತ್ತಮ ಹಣ್ಣು


ಆಯುರ್ವೇದದ ಪ್ರಕಾರ, ಇದು ಅತ್ಯುತ್ತಮ ಹಣ್ಣು. ಪೌಷ್ಟಿಕತಜ್ಞರೊಬ್ಬರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಆಯುರ್ವೇದದ ಪ್ರಕಾರ ದ್ರಾಕ್ಷಿಯ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಅಜ್ಜ-ಅಜ್ಜಿಯರೇ, ವಯಸ್ಸಾಯ್ತು ಅಂತ ಮನೆಯಲ್ಲೇ ಕೂರಬೇಡಿ; ಪ್ರವಾಸಕ್ಕೆ ಹೋದ್ರೆ ನಿಮಗಿದೆ ಪ್ರಯೋಜನ!


ಇನ್‌ಸ್ಟಾಗ್ರಾಮ್‌ನಲ್ಲಿ eterny_ayurveda ಎಂಬ ಖಾತೆ ಹೊಂದಿರುವ ಪೌಷ್ಟಿಕತಜ್ಞರಾದ ಡಾ. ಚೈತಾಲಿ ರಾಥೋಡ್‌ ಎಂಬುವವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ “ಆಯುರ್ವೇದದ ಪ್ರಕಾರ ದ್ರಾಕ್ಷಿಯು ಅತ್ಯುತ್ತಮ ಹಣ್ಣು ಎಂದು ಬರೆದಿದ್ದಾರೆ. ಆಯುರ್ವೇದವು "ದ್ರಾಕ್ಷಾ ಫಲೋತ್ತಮಾ" ಎಂದು ಹೇಳುತ್ತದೆ. ಇದರರ್ಥ ಎಲ್ಲಾ ಹಣ್ಣುಗಳಲ್ಲಿ ದ್ರಾಕ್ಷಿ ಅತ್ಯುತ್ತಮವಾಗಿದೆ ಎಂದರ್ಥ.


ದ್ರಾಕ್ಷಿ ಹಣ್ಣು


ದ್ರಾಕ್ಷಿಯು ಅತ್ಯಂತ ಪರಿಚಿತ ಮತ್ತು ರುಚಿಕರವಾದ ಹಣ್ಣುಗಳಲ್ಲಿ ಒಂದಾಗಿದೆ. ಹಣ್ಣಿನ ಗೊಂಚಲಲ್ಲಿ ಸಿಹಿ ದ್ರಾಕ್ಷಿ ಮಾತ್ರ ಸಿಗುವುದಿಲ್ಲವಾದ್ದರಿಂದ, ಇದು ಹುಳಿ-ಸಿಹಿ ಎರಡೂ ರುಚಿಯನ್ನು ಹೊಂದಿರುತ್ತದೆ. ಅದರಿಂದ ನಮಗೆ ಬಹಳಷ್ಟು ಆರೋಗ್ಯದ ಪ್ರಯೋಜನಗಳಿವೆ.


ದ್ರಾಕ್ಷಿ ಹಣ್ಣಿನ ಪ್ರಯೋಜನಗಳು


  • ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವವಾಗುತ್ತಿದ್ದಲ್ಲಿ ಅದನ್ನು ಸರಿಪಡಿಸಲು ದ್ರಾಕ್ಷಿ ಸಹಾಯ ಮಾಡುತ್ತದೆ.

  •  ಮೂಗಿನಲ್ಲಿ ರಕ್ತಸ್ರಾವವಾಗುವಂತಹ ಸಮಯದಲ್ಲಿ ಅಸ್ವಸ್ಥತೆಯನ್ನು ಸರಿಪಡಿಸಲು ದ್ರಾಕ್ಷಿ ಸಹಕಾರಿ.

  • ಪಿತ್ತ ದೋಷವನ್ನು ಸಸರಿಪಡಿಸಲು ದ್ರಾಕ್ಷಿ ಸಹಕಾರಿ.

  • ದೇಹದ ಸ್ನಾಯುಗಳಿಗೆ ಬಲವನ್ನು ನೀಡುತ್ತದೆ ದ್ರಾಕ್ಷಿ ಹಣ್ಣು.

  • ಅಸ್ತಮಾ, ಉಸಿರಾಟದ ತೊಂದರೆಗಳಿರುವವರು ದ್ರಾಕ್ಷಿ ಹಣ್ಣನ್ನು ಸೇವಿಸುವುದು ಉತ್ತಮ.

  • ವ್ಯಕ್ತಿಯೊಬ್ಬ ಮದ್ಯಪಾನವನ್ನು ತ್ಯಜಿಸಬೇಕು ಎಂದುಕೊಂಡರೆ ದ್ರಾಕ್ಷಿ ಅದಕ್ಕೆ ಸಹಕಾರಿ.

  • ಲಿವರ್​ನ ಅಸ್ವಸ್ಥತೆಯನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ದ್ರಾಕ್ಷಿ.

  • ತಲೆ ಸುತ್ತುವುದು ಹಾಗೂ ಭ್ರಮೆಯನ್ನು ಕಡಿಮೆ ಮಾಡಲು ಈ ಹಣ್ಣನ್ನು ತಿನ್ನಿ.

  • ಹೊಟ್ಟೆ ಉರಿಯಂತಹ ಅನುಭವವಾಗುತ್ತಿದ್ದರೆ ಅದರಿಂದ ಚೇತರಿಸಿಕೊಳ್ಳಲು ದ್ರಾಕ್ಷಿ ತಿನ್ನಬಹುದು.

  • ಅತಿಯಾದ ಬಾಯಾರಿಕೆ ಉಂಟಾಗುತ್ತಿದ್ದರೆ ದ್ರಾಕ್ಷಿ ತಿಂದು ಅದನ್ನು ಕಡಿಮೆ ಮಾಡಿಕೊಳ್ಳಬಹುದು.


ದ್ರಾಕ್ಷಿಯನ್ನು ಸ್ವಚ್ಛಗೊಳಿಸುವ ಅತ್ಯುತ್ತಮ ವಿಧಾನ


ಇಂದಿನ ಕಾಲದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯಲು ಅನೇಕ ಕೀಟನಾಶಕಗಳನ್ನು ಬಳಸುವುದನ್ನು ನಾವು ನೋಡುತ್ತೇವೆ. ದ್ರಾಕ್ಷಿ ಹಣ್ಣು ಇದಕ್ಕೆ ಹೊರತಾದದ್ದಲ್ಲ.‌ ಅಲ್ಲದೇ ಇದು ಸಿಪ್ಪೆ ಸುಲಿದು ಬಳಸುವಂಥ ಹಣ್ಣೂ ಅಲ್ಲ. ಹಾಗಾಗಿ ನಾವು ಅದನ್ನು ನೇರವಾಗಿ ಸೇವಿಸುವುದರಿಂದ ಅದನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಅತ್ಯಂತ ಅಗತ್ಯ. ಆದ್ದರಿಂದ ಅದನ್ನು ಹೇಗೆ ಸ್ವಚ್ಛಗೊಳಿಸುವುದು ಅನ್ನೋದನ್ನು ಡಾ. ಚೈತಾಲಿ ರಾಥೋಡ್‌ ವಿವರಿಸಿದ್ದಾರೆ. ಹಾಗಿದ್ರೆ ದ್ರಾಕ್ಷಿಯನ್ನು ಸ್ವಚ್ಛಗೊಳಿಸುವ ಆರೋಗ್ಯಕರ ಮಾರ್ಗವನ್ನು ಯಾವುದು ಅನ್ನೋದನ್ನು ನೋಡೋಣ.




ದ್ರಾಕ್ಷಿ ಹಣ್ಣುಗಳನ್ನು ಮೊದಲು ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ . ನಂತರ ಅದಕ್ಕೆ ಚಿಟಿಕೆ ಉಪ್ಪನ್ನು ಹಾಕಿ. ಹಣ್ಣನ್ನು ಒಂದೊಂದಾಗಿ ಬಿಡಿಸಿ ಚೆನ್ನಾಗಿ ತಿಳೆಯಿರಿ. ನಂತರ ಸ್ವಚ್ಛವಾದ ಹತ್ತಿಯ ಬಟ್ಟೆಯಿಂದ ಅದನ್ನು ಒರೆಸಿ ಫ್ರೆಶ್‌ಆಗಿ ತಿನ್ನಿರಿ.


ಒಟ್ಟಾರೆ, ದ್ರಾಕ್ಷಿ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದಲ್ಲದೇ ಅದು ಈ ಸೀಸನ್‌ನಲ್ಲಿ ಬೆಳೆಯುವ ಸ್ಥಳೀಯ ಹಣ್ಣು. ಆದರೆ ಈ ಹಣ್ಣನ್ನು ತಂದು ಸರಿಯಾಗಿ ಸ್ವಚ್ಛಗೊಳಿಸಿದ ಬಳಿಕವೇ ತಿನ್ನಬೇಕು ಅನ್ನೋದನ್ನು ನೆನಪಿಡಿ.

First published: