Baking Soda: ಬೇಕಿಂಗ್‌ ಸೋಡಾದ ಪ್ರಯೋಜನ ಏನು ಗೊತ್ತಾ? ಕೇಳಿದ್ರೆ ಬೆರಗಾಗ್ತೀರಾ!

ಕ್ರಿಶ್ ಅಶೋಕ್

ಕ್ರಿಶ್ ಅಶೋಕ್

ಅಡುಗೆ ಸೋಡಾ ಬಹುಪಯೋಗಿ ಪಾರ್ಧಥ. ಒಂದು ಚಿಟಿಕೆ ಅಡುಗೆ ಸೋಡಾ ಇದ್ರೆ ಅದೆಷ್ಟೋ ಕೆಲಸಗಳು ಚಿಟಿಕೆ ಹೊಡೆಯೋದ್ರಲ್ಲಿ ಆಗುತ್ತವೆ. ನಿಮ್ಮ ಮನೆಯಲ್ಲಿ ಬೇಕಿಂಗ್​ ಸೋಡಾ ಇದೇಯಾ ಹಾಗಿದ್ದಾರೆ ನೀವು ಬೇಕಿಂಗ್​ ಸೋಡಾದ ಪ್ರಯೋಜನ ಏನು ಅಂತ ತೀಳಿದುಕೊಳ್ಳಬೇಕು.

  • News18 Kannada
  • 4-MIN READ
  • Last Updated :
  • New Delhi, India
  • Share this:

    ಅಡುಗೆ ಸೋಡಾ (Baking Soda) ಬಹುಪಯೋಗಿ ಪಾರ್ಧಥ. ಒಂದು ಚಿಟಿಕೆ ಅಡುಗೆ ಸೋಡಾ ಇದ್ರೆ ಅದೆಷ್ಟೋ ಕೆಲಸಗಳು ಚಿಟಿಕೆ ಹೊಡೆಯೋದ್ರಲ್ಲಿ ಆಗುತ್ತವೆ. ಅದ್ರಲ್ಲೂ ಇಂಥ ಚಳಿಗಾಲದಲ್ಲಂತೂ (Summer Season) ಮನೆಯಲ್ಲಿ ಇಡ್ಲಿ, ದೋಸೆ (Dose) , ಬನ್ಸ್‌ (Bun) ನಂತಹ ತಿಂಡಿಗಳನ್ನು ಮಾಡಬೇಕು ಅಂದ್ರೆ ಸೋಡಾ ಇರಲೇಬೇಕು. ಒಂದು ಚಿಟಿಕೆ ಸೋಡಾ ಹಾಕಿದರೆ ಸಾಕು ಹಿಟ್ಟು ಚೆನ್ನಾಗಿ ಹುಳಿ ಬರುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ.


    ಇನ್ನು ಲೇಖಕ ಕ್ರಿಶ್ ಅಶೋಕ್ ಅವರು ಅಡಿಗೆ ಸೋಡಾವು ಅಡುಗೆಮನೆಯಲ್ಲಿ ಎರಡನೇ ಬಹುಮುಖ ಪದಾರ್ಥವಾಗಿದೆ ಎನ್ನುತ್ತಾರೆ. ಇದು ಹೊಟ್ಟೆಯುಬ್ಬರ ಶಮನಗೊಳಿಸುತ್ತದೆ, ಅಡುಗೆ ಮಾಡುತ್ತದೆ, ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ, ಸುವಾಸನೆ ನೀಡುತ್ತದೆ ಹೀಗೆ ಹತ್ತು ಹಲವು ಉಪಯೋಗಕ್ಕೆ ಬರುವ ಈ ಅಡುಗೆ ಸೋಡಾ ಅಡಿಗೆ ಪದಾರ್ಥಗಳ 'ಅದ್ಭುತ ಸೂಪರ್‌ಹೀರೋ' ಎಂದು ಅವರು ಹೇಳಿದ್ದಾರೆ.


    ಕೇಕ್​ಗೆ ಬಳಸುವ ಅಡುಗೆ ಸೋಡಾ


    ನೀವು ಕೇಕ್​ಗಳು, ಮಫಿನ್​ಗಳನ್ನು ಮಾಡಬೇಕಾದರೆ ಸಾಮಾನ್ಯವಾಗಿ ಬೇಕಿಂಗ್‌ ಸೋಡಾವು ಬೇಕೇ ಬೇಕು. ಇದರ ಜೊತೆಗೆ ಬೇಕಿಂಗ್‌ ಸೋಡಾ ಮತ್ತಷ್ಟು ಇಂಟರೆಸ್ಟಿಂಗ್ ಉಪಯೋಗಗಳನ್ನೂ ನೀಡುತ್ತವೆ ಎಂಬುದಾಗಿ ಅವರು ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್‌ ನಲ್ಲಿ ಹಂಚಿಕೊಂಡಿದ್ದಾರೆ.


    ಹೊಟ್ಟೆ ಉಬ್ಬರಿಸುವುವಿಕೆಗೆ ಬಳಸಬಹುದು ಬೇಕಿಂಗ್‌ ಸೋಡಾ


    ಹೊಟ್ಟೆ ಉಬ್ಬರಿಸುವುದನ್ನು ತಡೆಯುತ್ತದೆ ಬೇಕಿಂಗ್‌ ಸೋಡಾ. ಕ್ಷಾರೀಯ ಏಜೆಂಟ್ ನಂತೆ ವರ್ತಿಸುವ ಅಡಿಗೆ ಸೋಡಾವು ಆಮ್ಲಗಳನ್ನು ತಟಸ್ಥಗೊಳಿಸುತ್ತದೆ ಎಂದು ಕ್ರಿಶ್‌ ಅಶೋಕ್‌ ಹೇಳಿದ್ದಾರೆ.


    ನಿಮಗೆ “ಇನೋ” ಗೊತ್ತಿರಬಹುದು. ಆಸಿಡಿಟಿ ಅಥವಾ ಹೊಟ್ಟೆ ಉಬ್ಬರಿಸಿದಂತೆ ಆದಾಗ ಇದನ್ನು ನೀರಿನಲ್ಲಿ ಬೆರೆಸಿಕೊಂಡು ಕುಡಿಯುತ್ತೇವೆ. ಈ ಬೇಕಿಂಗ್‌ ಸೋಡಾ ಕೂಡ ಇಂಥದ್ದೇ ಪರಿಣಾಮವನ್ನು ನೀಡುತ್ತದೆ.


    Do you know the benefits of baking soda You will be surprised to hear
    ಕ್ರಿಶ್ ಅಶೋಕ್


    ಆಮ್ಲ ಮಟ್ಟವನ್ನು ಕಡಿಮೆಮಾಡುತ್ತೆ ಬೇಕಿಂಗ್‌ ಸೋಡಾ


    ಮೇದೋಜೀರಕ ಗ್ರಂಥಿಯು ಅಕ್ಷರಶಃ ಬೈಕಾರ್ಬನೇಟ್‌ಗಳನ್ನು ಉತ್ಪಾದಿಸುತ್ತದೆ. ಹೊಟ್ಟೆಯಿಂದ ಕರುಳಿಗೆ ಹಾದುಹೋಗುವ ಆಹಾರದ ಆಮ್ಲ ಮಟ್ಟವನ್ನು ಕಡಿಮೆ ಮಾಡಲು ನೀವು ಸ್ವಲ್ಪವೇ ಸ್ವಲ್ಪ ಬೇಕಿಂಗ್‌ ಸೋಡಾ ಸೇವಿಸಬಹುದು ಎಂಬುದಾಗಿ ಅವರು ಹೇಳಿದ್ದಾರೆ.


    ಬೇಗನೇ ಬೇಯಲು ಸಹಾಯ ಮಾಡುತ್ತೆ ಬೇಕಿಂಗ್‌ ಸೋಡಾ


    *ನೀವು ಕಡಲೆ ಅಥವಾ ರಾಜ್ಮಾವನ್ನು ಬೇಯಿಸಬೇಕಿದ್ದರೆ ಒಂದು ಸಣ್ಣ ಚಿಟಿಕೆಯಷ್ಟು ಸೋಡಾ ಹಾಕಬಹುದು. ಇದರಿಂದ ಬೇಗನೇ ಬೇಯಲು ಸಹಾಯವಾಗುತ್ತದೆ.


    ಮೊದಲು ಬೇಕಾಗುತ್ತಿದ್ದ ಅರ್ಧ ಸಮಯದಲ್ಲಿ ಕಡಲೆ ಅಥವಾ ರಾಜ್ಮಾ ಬೆಂದುಹೋಗುತ್ತದೆ. ಇದಕ್ಕಾಗಿಯೇ ರೆಸ್ಟೋರೆಂಟ್‌ಗಳು ಬೇಕಿಂಗ್‌ ಸೋಡಾವನ್ನು ಬಳಸುತ್ತವೆ.


    *ಒಂದು ಪಿಂಚ್ ಅಡಿಗೆ ಸೋಡಾ ಈರುಳ್ಳಿಯನ್ನು ವೇಗವಾಗಿ ಹುರಿಯುವಂತೆ ಮಾಡುತ್ತದೆ.


    *ನಿಮ್ಮ ಪಕೋಡಗಳು ಅಥವಾ ಮಾಂಸವು ಕಂದುಬಣ್ಣವಾಗಬೇಕೆಂದು ನೀವು ಬಯಸಿದರೆ, ಹಿಟ್ಟಿಗೆ ಒಂದು ಪಿಂಚ್ ಅಡಿಗೆ ಸೋಡಾವನ್ನು ಸೇರಿಸಿ.









    View this post on Instagram






    A post shared by Krish Ashok (@_masalalab)





    ಜಡ್ಡುಗಟ್ಟಿದ ಕಲೆಗಳನ್ನು ಮಾಯ ಮಾಡುತ್ತೆ ಅಡುಗೆ ಸೋಡಾ


    *ಜಡ್ಡುಗಟ್ಟಿದ ಕಲೆಗಳನ್ನು ಹೋಗಲಾಡಿಸಲು ನೀವು ವಿನೆಗರ್ ಜೊತೆ ಸ್ವಲ್ಪ ಬೇಕಿಂಗ್‌ ಸೋಡಾವನ್ನು ಹಾಕಿ ಸ್ವಚ್ಛಗೊಳಿಸಬಹುದು. ಇದು ನಿಮಗೆ ಅದ್ಭುತವಾದ ರಿಸಲ್ಟ್‌ ನೀಡುತ್ತದೆ.


    *ಅಡುಗೆ ಮನೆಯಲ್ಲಿನ ದುರ್ವಾಸನೆಯನ್ನು ತೆಗೆದುಹಾಕಲು ನೀವು ಬೇಕಿಂಗ್‌ ಸೋಡಾವನ್ನು ಬಳಸಬಹುದು. ಅಲ್ಲದೇ ಇದನ್ನು ಸಣ್ಣ ಟ್ರೇಯಲ್ಲಿರಿಸಿದರೆ ನಿಮ್ಮ ರೆಫ್ರಿಜರೇಟರ್‌ನಲ್ಲಿರುವ ದುರ್ವಾಸನೆಯನ್ನು ತೆಗೆದುಹಾಕಬಹುದು.


    ಆಹಾರ ತಜ್ಞರಾದ ಗರಿಮಾ ಗೋಯಲ್ ಏನು ಹೇಳುತ್ತಾರೆ ಗೊತ್ತಾ?


    ಇನ್ನು ಆಹಾರ ತಜ್ಞರಾದ ಗರಿಮಾ ಗೋಯಲ್ ಅವರು ಕೂಡ ಈ ಅಂಶಗಳನ್ನು ಒಪ್ಪಿಕೊಳ್ಳುತ್ತಾರೆ. ಬೇಕಿಂಗ್‌ ಸೋಡಾವು ವಾಸನೆಯನ್ನು ಉಂಟುಮಾಡುವ ಕಣಗಳನ್ನು ತೆಗೆದುಹಾಕುತ್ತದೆ.


    ಆದ್ದರಿಂದ, ನಿಮ್ಮ ಫ್ರಿಜ್‌ನಿಂದ ಆ ವಾಸನೆಯನ್ನು ತೆಗೆದುಹಾಕಲು, ಒಂದು ಕಪ್‌ನಲ್ಲಿ ಅಡಿಗೆ ಸೋಡಾವನ್ನು ತುಂಬಿಸಿ ಮತ್ತು ಅದನ್ನು ನಿಮ್ಮ ರೆಫ್ರಿಜರೇಟರ್‌ನ ಹಿಂಭಾಗದಲ್ಲಿ ಇರಿಸಿ ಎಂದು ಸಲಹೆ ನೀಡುತ್ತಾರೆ.


    ಇದನ್ನೂ ಓದಿ: Black Cardamom: ಅಸ್ತಮಾ ಸಮಸ್ಯೆಗೆ ಮಸಾಲೆಗಳ ರಾಣಿ ಕಪ್ಪು ಏಲಕ್ಕಿಯೇ ಮದ್ದು


    ಬೆವರಿನ ವಾಸನೆ ಹೋಗಲಾಡಿಸುತ್ತೆ ಬೇಕಿಂಗ್ ಸೋಡಾ


    *ಬೆವರಿನ ವಾಸನೆ ಹೋಗಲಾಡಿಸಲು ಬೇಕಿಂಗ್‌ ಸೋಡಾ ಬಳಸಬಹುದು. ತೆಂಗಿನ ಎಣ್ಣೆ, ಶಿಯಾ ಬೆಣ್ಣೆಯೊಂದಿಗೆ ಅಡಿಗೆ ಸೋಡಾವನ್ನು ಬೆರೆಸಿ ಮತ್ತು "ವಾಸನೆ-ಮುಕ್ತ ಆರ್ಮ್ಪಿಟ್ಸ್" ಗಾಗಿ ಅದನ್ನು ಕಂಕುಳಿಗೆ ಹಚ್ಚಿಕೊಳ್ಳುವಂತೆ ಗೋಯಲ್ ಸಲಹೆ ನೀಡುತ್ತಾರೆ.


    "ಬೇಕಿಂಗ್ ಸೋಡಾವು ಬೆವರಿನ ವಾಸನೆಯನ್ನು ಕಡಿಮೆ ಮಾಡುತ್ತದೆ ಮತ್ತು ಇದನ್ನು ಅನೇಕರು ನೈಸರ್ಗಿಕ ಡಿಯೋಡರೆಂಟ್ ಆಗಿಯೂ ಬಳಸುತ್ತಾರೆ" ಎಂದು ಅವರು ಹೇಳಿದರು.


    ಆದರೆ ಯಾವುದೇ ಆಗಲಿ ಒಳ್ಳೆಯದು ಅಂತ ಬೇಕಾಬಿಟ್ಟಿ ಬಳಸದೇ, ಬಳಸುವಾಗ ಎಚ್ಚರಿಕೆ ವಹಿಸಿ ಮಿತ ಪ್ರಮಾಣದಲ್ಲಿ ಬಳಸುವಂತೆ ತಜ್ಞರು ಸಲಹೆ ನೀಡುತ್ತಾರೆ.

    Published by:Gowtham K
    First published: