Wellness Centers: ಇದೇ ನೋಡಿ ಭಾರತದ 9 ಅತ್ಯುತ್ತಮ ವೆಲ್ನೆಸ್ ಕೇಂದ್ರಗಳು

ಯೋಗ, ಧ್ಯಾನ, ಪ್ರಾಣಾಯಾಮ, ಆಯುರ್ವೇದ ಇವೆಲ್ಲ ಭಾರತದ ಮಣ್ಣಿನಲ್ಲಿ ಅಗಾಧವಾಗಿದೆ. ಹಾಗಿದ್ರೆ ನೀವು ಭಾರತದಲ್ಲಿ ಈ ಎಲ್ಲದರ ಅನುಭವವನ್ನು ಒಟ್ಟಾಗಿ ಪಡೆಯಬೇಕೆಂದು ಕೊಂಡಿದ್ದರೆ, ನೀವು ಆನಂದ ಯೋಗ ಕೇಂದ್ರ, ತನ್ಮನ್‌ ಆಯುರ್ವೇದಿಕ್‌ ರಿಸರ್ಚ್‌ ಸೆಂಟರ್‌, ದ ಸ್ವರಂ ಸೌಂಡ್‌ ಎಕ್ಸ್ ಪೀರಿಯೆನ್ಸ್‌, ಕೃಷ್ಣ ಪಟ್ಟಾಭಿ ಜೋಯಿಸ್‌ ಅಷ್ಟಾಂಗ ಯೋಗ ಸಂಸ್ಥೆ, ಉತ್ತರಾಖಂಡದಲ್ಲಿರುವ ಟಿಬೇಟಿಯನ್‌ ಔಷಧವನ, ಮಹಾಬೋಧಿ ಇಂಟರ್‌ ನ್ಯಾಷನಲ್‌ ಮೆಡಿಟೇಷನ್‌ ಸೆಂಟರ್‌, ಪರ್ಪಲ್‌ ವ್ಯಾಲಿ, ಬುದ್ಧಿಸಮ್, ಸ್ಕಾಲರ್‌ ಟೂರ್‌ ಈ ಸ್ಥಳಗಳ ಬಗ್ಗೆ ತಿಳ್ಕೊಳ್ಳಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಯೋಗ (Yoga), ಧ್ಯಾನ, ಪ್ರಾಣಾಯಾಮ, ಆಯುರ್ವೇದ (Ayurveda) ಇವೆಲ್ಲ ಭಾರತದ (India) ಮಣ್ಣಿನಲ್ಲಿ ಅಗಾಧವಾಗಿದೆ. ಹಾಗಿದ್ರೆ ನೀವು ಭಾರತದಲ್ಲಿ ಈ ಎಲ್ಲದರ ಅನುಭವವನ್ನು (Experience) ಒಟ್ಟಾಗಿ ಪಡೆಯಬೇಕೆಂದು ಕೊಂಡಿದ್ದರೆ, ನೀವು ಆನಂದ ಯೋಗ ಕೇಂದ್ರ (Ananda Yoga Center), ತನ್ಮನ್‌ ಆಯುರ್ವೇದಿಕ್‌ ರಿಸರ್ಚ್‌ ಸೆಂಟರ್‌, ದ ಸ್ವರಂ ಸೌಂಡ್‌ ಎಕ್ಸ್ ಪೀರಿಯೆನ್ಸ್‌, ಕೃಷ್ಣ ಪಟ್ಟಾಭಿ ಜೋಯಿಸ್‌ ಅಷ್ಟಾಂಗ ಯೋಗ ಸಂಸ್ಥೆ, ಉತ್ತರಾಖಂಡದಲ್ಲಿರುವ ಟಿಬೇಟಿಯನ್‌ ಔಷಧವನ, ಮಹಾಬೋಧಿ ಇಂಟರ್‌ ನ್ಯಾಷನಲ್‌ ಮೆಡಿಟೇಷನ್‌ ಸೆಂಟರ್‌, ಪರ್ಪಲ್‌ ವ್ಯಾಲಿ, ಬುದ್ಧಿಸಮ್, ಸ್ಕಾಲರ್‌ ಟೂರ್‌ ಈ ಸ್ಥಳಗಳ (Places) ಬಗ್ಗೆ ತಿಳ್ಕೊಳ್ಳಿ

  1)  ಆನಂದ ಯೋಗ ಕೇಂದ್ರ : ಹಿಮಾಲಯದ ಆನಂದ ಅನೇಕ ಕಾರಣಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಜನರ ಆಯುರ್ವೇದ ಪರಿಣಿತಿ, ಜಲಚಿಕಿತ್ಸೆಯ ಪ್ರದೇಶಗಳ ಜೊತೆಗೆ ಸುತ್ತಮುತ್ತ ಇರುವ ಪರ್ವತಗಳ ಸಾಲಿನಿಂದ ಕೂಡಿರುವ ವಾತಾವರಣದಿಂದಾಗಿ ಹಿಮಾಲಯದ ಆನಂದ ಅತ್ಯಂತ ಜನಪ್ರಿಯವಾಗಿದೆ. ಆದರೆ ಈ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆನಂದದ ಯೋಗ ಮುಖ್ಯಸ್ಥರಾದ ಅಗರ್‌ ವಲ್ಲಾ ಬಿಹಾರದ ಸಾಂಪ್ರದಾಯಿಕ ಯೋಗಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ.

  ಅವರು ಷಟ್‌ ಕ್ರಿಯೆ ಹಾಗೂ 6 ವಿಧದ ಶುದ್ಧೀಕರಣದಲ್ಲಿ ಪ್ರವೀಣರಾಗಿದ್ದಾರೆ. ಇಲ್ಲಿ ಜಲನೀತಿಯನ್ನು ತುಂಬಾ ಸರಳವಾಗಿ ಕಲಿಸಲಾಗುತ್ತದೆ. ಭಂಗಿ, ನೀರಿನ ತಾಪಮಾನ, ಮುಖ್ಯವಾಗಿ ಹೇಗೆ ಪ್ರತಿ ಹನಿಯನ್ನು ಹೊರಹಾಕುವುದು ಅನ್ನೋದನ್ನು ಕಲಿಸಲಾಗುತ್ತದೆ.

  2) ತನ್ಮನ್‌ ಆಯುರ್ವೇದಿಕ್‌ ರಿಸರ್ಚ್‌ ಸೆಂಟರ್‌: ಪುಣೆಯ ಹೊರಭಾಗದಲ್ಲಿರುವ ತನ್ಮನ್‌ ಆಯುರ್ವೇದಿಕ್‌ ರಿಸರ್ಚ್‌ ಸೆಂಟರ್‌ ಡೀಪ್‌ ಡಿಟಾಕ್ಸ್‌ ಹಾಗೂ ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಇಲ್ಲಿ ಅತ್ಯಂತ ಹಿರಿಯ ಅನುಭವಿ ವೈದ್ಯರುಗಳಿದ್ದಾರೆ. ಪ್ರಪಂಚದ ಹಲವೆಡೆ ತರಬೇತಿ ನೀಡಿದವರಿದ್ದಾರೆ.

  ಇನ್ನು ಇಲ್ಲಿನ ವೈದ್ಯರಾದ ಸುಭಾಷ್‌ ರಾನಡೆ ಆಯುರ್ವೇದದ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಆಯುರ್ವೇದದ ಬಗ್ಗೆ ಕಲಿಯಲು ತನ್ಮನ್ ಕೂಡ ಒಂದು ಅತ್ಯದ್ಭುತ ತಾಣವಾಗಿದೆ. ಪ್ರತಿ ತಿಂಗಳು ಅವರು ಮರ್ಮ ಚಿಕಿತ್ಸೆ, ಜ್ಯೋತಿಷ್ ಮತ್ತು ವೈದಿಕ ಮನೋವಿಜ್ಞಾನ ಸೇರಿದಂತೆ ಆರು ಕೋರ್ಸ್‌ಗಳನ್ನು ನಡೆಸುತ್ತಾರೆ. ಅಲ್ಲದೇ ಇಲ್ಲಿನ ವಾತಾವರಣ ಕೂಡ ಮನಸ್ಸಿಗೆ ಆಹ್ಲಾದ ತರುತ್ತದೆ. ಇಲ್ಲಿ ಮಾವಿನ ತೋಟಗಳು, ತರಕಾರಿ ತೋಟಗಳಿವೆ. ಇಲ್ಲಿಯೇ ಆಯುರ್ವೇದಿಕ್ ರೆಸ್ಟೋರೆಂಟ್ ಕೂಡ ಇದೆ.

  3) ದ ಸ್ವರಂ ಸೌಂಡ್‌ ಎಕ್ಸ್ ಪೀರಿಯೆನ್ಸ್‌: ದ ಸ್ವರಂ ಅನ್ನೋದು ಪಾಂಡಿಚೇರಿಯ ಆರೋವಿಲ್ಲೆಯಲ್ಲಿರುವ ಒಂದು ಧ್ವನಿ ಸಂಸ್ಥೆ. ಸಂಗೀತ ಹಾಗೂ ಧ್ವನಿಯ ಮೂಲಕ ಇಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು ಜಗತ್ತಿನಾದ್ಯಂತ ಸುಮಾರು 50 ಯೋಜನೆಗಳಲ್ಲಿ ಕೆಲಸ ಮಾಡಿರುವುದು ಗಮನಾರ್ಹ. ನಾದಯೋಗದೊಂದಿಗೆ ಧ್ವನಿಯ ಮೂಲವನ್ನು ಅರ್ಥಮಾಡಿಕೊಳ್ಳುವ ಅತ್ಯದ್ಭುತ ಅನುಭೂತಿಯನ್ನು ನೀವಿಲ್ಲಿ ಪಡೆಯಬಹುದು. ಅಲ್ಲದೇ ನೀವಿಲ್ಲಿ ಸೌಂಡ್‌ ಶವರ್‌, ಸೌಂಡ್‌ ಹೀಲಿಂಗ್‌, ಸೌಂಡ್‌ ಗಾರ್ಡನ್‌ ಗಳ ವಿಶೇಷ ಅನುಭವವನ್ನೂ ಪಡೆಯಬಹುದು.

  ಇದನ್ನೂ ಓದಿ: Malaysia: ಮಲೇಷಿಯಾ ಟ್ರಿಪ್ ಹೋಗಬೇಕು ಎಂದುಕೊಂಡಿದ್ದೀರಾ? ಹಾಗಾದ್ರೆ ಈ ಸ್ಥಳಗಳಿಗೆ ತಪ್ಪದೇ ಹೋಗಿ ಬನ್ನಿ

  4) ಕೃಷ್ಣ ಪಟ್ಟಾಭಿ ಜೋಯಿಸ್‌ ಅಷ್ಟಾಂಗ ಯೋಗ ಸಂಸ್ಥೆ: ಇದು ಮೈಸೂರನ್ನು ಜಾಗತಿಕ ಭೂಪಟದಲ್ಲಿ ಅಚ್ಚೊತ್ತುವಂತೆ ಮಾಡಿದೆ. ಇಲ್ಲಿನ ಸಾಂಪ್ರದಾಯಿಕ ಸಾಧಕರು ಪಠಣ, ಪ್ರಾಣಾಯಾಮ ಹಾಗೂ ತತ್ವಶಾಸ್ತ್ರಗಳಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ವಿಶ್ವದ ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಆಧ್ಯಾತ್ಮ ಕಲಿಯಲು ಬರುತ್ತಾರೆ. ಇಲ್ಲಿನ ವಿನಯ್‌ ಕುಮಾರ್‌ ಅವರ ಬ್ಯಾಕ್‌ ಬೆಂಡಿಂಗ್‌ ತರಗತಿಗಳು ತುಂಬಾ ಜನಪ್ರಿಯ. ಅಲ್ಲದೇ ಇವರ ಪ್ರಾಣ ವಶ್ಯ ತರಬೇತಿ ಕಲಿಯಲು ಕೂಡ ಬೇರೆಬೇರೆ ಕಡೆಗಳಿಂದ ಜನರು ಬರುತ್ತಾರೆ.

  5) ಉತ್ತರಾಖಂಡದಲ್ಲಿರುವ ಟಿಬೇಟಿಯನ್‌ ಔಷಧವನ : ಇದು ಭಾರತದ ಪ್ರಮುಖ ವೆಲ್‌ ನೆಸ್‌ ಕೇಂದ್ರಗಳಲ್ಲಿ ಒಂದು. ಇಲ್ಲಿ ವಿವಿಧ ಖಾಯಿಲೆಗಳಿಗೆ 21 ದಿನಗಳ ಆಯುರ್ವೇದ ಪಂಚಕರ್ಮ ದಂತಹ ಚಿಕಿತ್ಸೆ ನೀಡಲಾಗುತ್ತದೆ. ಬಹುಶಃ ಇದು ಐಷಾರಾಮಿ ವ್ಯವಸ್ಥೆಯಲ್ಲಿ ಟಿಬೆಟಿಯನ್ ಔಷಧ ಪದ್ಧತಿಯಲ್ಲಿ ಚಿಕಿತ್ಸೆ ನೀಡುವ ಭಾರತದ ಏಕೈಕ ವೆಲ್‌ ನೆಸ್‌ ಸೆಂಟರ್‌ ಆಗಿದೆ.

  6) ಮಹಾಬೋಧಿ ಇಂಟರ್‌ ನ್ಯಾಷನಲ್‌ ಮೆಡಿಟೇಷನ್‌ ಸೆಂಟರ್‌: ಇನ್ನು, ಲಾಡಾಖ್‌ ನಲ್ಲಿ ಮಹಾಬೋಧಿ ಇಂಟರ್‌ ನ್ಯಾಷನಲ್‌ ಮೆಡಿಟೇಷನ್‌ ಸೆಂಟರ್‌ ಭಾರತದ ಇನ್ನೊಂದು ಪ್ರಮುಖ ವೆಲ್‌ ನೆಸ್‌ ಸೆಂಟರ್‌. ಲಡಾಖ್‌ ನ 200 ಎಕರೆ ಪ್ರದೇಶದಲ್ಲಿದೆ. ಇಲ್ಲಿನ ಆಹ್ಲಾದಕರ ವಾತಾವರಣ ಮನಸ್ಸಿಗೆ ಮುದ ನೀಡುತ್ತೆ. ಭಿಕ್ಕು ಸಂಘ ಸೇನಾ ಸ್ಥಾಪಿಸಿದ, ಮಹಾಬೋಧಿ ದೇವಚನ ಕ್ಯಾಂಪಸ್ ಕೇವಲ ಬೌದ್ಧ ಧ್ಯಾನಕ್ಕೆ ಮಾತ್ರವಲ್ಲದೆ ಸ್ಥಳೀಯ ಮಕ್ಕಳಿಗಾಗಿ ಶಾಲೆ, ವೃದ್ಧಾಶ್ರಮ, ಮಠ, ಸನ್ಯಾಸಿಗಳ ಮಂದಿರ ಮತ್ತು ದೃಷ್ಟಿಹೀನರಿಗಾಗಿ ವಸತಿ ನಿಲಯವನ್ನು ಹೊಂದಿದೆ.

  7) ಪರ್ಪಲ್‌ ವ್ಯಾಲಿ: ಗೋವಾದಲ್ಲಿನ ಪರ್ಪಲ್‌ ವ್ಯಾಲಿಯು ಅಷ್ಟಾಂಗ ಯೋಗ ಕಲಿಯಲು ಒಂದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಅಲೈನ್‌ ಮೆಂಟ್‌ ಕಲಿಕೆ, ಅಷ್ಟಾಂಗ ತತ್ವಶಾಸ್ತ್ರ, ಪ್ರಾಣಾಯಾಮಗಳನ್ನು ಕಲಿಯಲು ಇದೊಂದು ಒಳ್ಳೆಯ ಸ್ಥಳವಾಗಿದೆ. ಅಲ್ಲದೇ ಇಲ್ಲಿ ಆಯುರ್ವೇದ ಚಿಕಿತ್ಸೆ ಹಾಗೂ ಸೌಂದರ್ಯ ಕೇಂದ್ರ ಕೂಡ ಇರುವುದು ವಿಶೇಷ.

  8) ಬುದ್ಧಿಸಮ್: ಧರ್ಮಶಾಲಾದ ದಲೈ ಲಾಮಾದಲ್ಲಿರುವ ಬುದ್ಧಿಸಮ್. ಇಲ್ಲಿ ಮಹಾಯಾನದ ಸಂಪ್ರದಾಯದ ಬಗ್ಗೆ ನೀವು ಸವಿವರವಾಗಿ ತಿಳಿದುಕೊಳ್ಳಬಹುದು. ಇನ್ನು ಹಲವು ವಿಧದ ಮೆಡಿಟೇಶನ್‌ ಕೋರ್ಸ್‌ ಗಳು ಲಭ್ಯವಿದೆ.

  ಇದನ್ನೂ ಓದಿ:  Travel Tips: ಅಕ್ಟೋಬರ್​ ತಿಂಗಳಿನಲ್ಲಿ ಭೇಟಿ ನೀಡಬಹುದಾದ ಪ್ರವಾಸಿ ತಾಣಗಳಿವು!

  9) ಸ್ಕಾಲರ್‌ ಟೂರ್‌: ವಾರಣಾಸಿಯ ಸ್ಕಾಲರ್‌ ಟೂರ್‌ ಬಹಳ ವಿಶೇಷವಾದದ್ದು. ವಾರಣಾಸಿ ನಮ್ಮ ಸಂಸ್ಕೃತಿಯ ಪ್ರತೀಕ ವೆಂದರೆ ತಪ್ಪಾಗದು. ಇಲ್ಲಿ ಅಜಯ್‌ ಪಾಂಡೆಯವರೊಂದಿಗೆ ಇಡೀ ನಗರವನ್ನು ಸುತ್ತಾಡಬಹುದು. ಇಲ್ಲಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸ್ಥಳಗಳ ಬಗ್ಗೆ ತಿಳಿದುಕೊಳ್ಳಬಹುದು.
  Published by:Ashwini Prabhu
  First published: