Soybean Benefits: ಪ್ರತಿದಿನ ಸೋಯಾಬಿನ್ ತಿಂದ್ರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತಂತೆ

ಸೋಯಾಬೀನ್‌ನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಮೊಟ್ಟೆ, ಹಾಲು ಮತ್ತು ಮಾಂಸದಲ್ಲಿ ಕಂಡುಬರುವ ಪ್ರೋಟೀನ್‌ಗಿಂತ ಹೆಚ್ಚಾಗಿದೆ.

 ಸೋಯಾಬೀನ್‌

ಸೋಯಾಬೀನ್‌

  • Share this:
    ವೆಜಿಟೇರಿಯನ್ ಗಳ(Vegetarian) ನಾನ್ ವೆಜ್ ಫುಡ್ ಎಂದೇ ಫೇಮಸ್ ಆಗಿರುವ ಸೋಯಾಬೀನ್ (Soybean) ಸಹಜವಾಗಿ ಎಲ್ಲರಿಗೂ ಇಷ್ಟವಾಗುತ್ತೆ. ನಾಲಿಗೆಗೆ ರುಚಿ ಕೊಡುವ ಸೋಯಾಬಿನ್ ನಲ್ಲಿ ಆರೋಗ್ಯವನ್ನು ಕಾಪಾಡುವ ಗುಣ ಕೂಡ ಇದೆ. ಸೋಯಾಬಿನ್ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ ಒಂದು ಆಹಾರವಾಗಿದೆ. ಸೋಯಾ ಚಂಕ್ಸ್ (Soya Chunks) ಮತ್ತು ಸೋಯಾಬಿನ್ ಇವೆರಡನ್ನು ಅಡುಗೆಯಲ್ಲಿ ಬಳಸಿದರೆ ಹೆಚ್ಚಿನ ಉಪಯೋಗಗಳನ್ನು ಪಡೆದುಕೊಳ್ಳಬಹುದು. ಸೋಯಾಬೀನ್‌ನಲ್ಲಿ ಪ್ರೋಟೀನ್ (Protein) ಸಮೃದ್ಧವಾಗಿದೆ. ಇದು ಮೊಟ್ಟೆ, ಹಾಲು ಮತ್ತು ಮಾಂಸದಲ್ಲಿ ಕಂಡುಬರುವ ಪ್ರೋಟೀನ್‌ಗಿಂತ ಹೆಚ್ಚಾಗಿದೆ. ಇದಲ್ಲದೆ, ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಇ, (Vitamin E) ಖನಿಜಗಳು ಮತ್ತು ಅಮೈನೋ ಆಮ್ಲಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ.

    ಮೂಳೆಗಳನ್ನು ಬಲಪಡಿಸುವ ಗುಣ ಹೊಂದಿದೆ

    ಸೋಯಾಬೀನ್ ತಿನ್ನುವುದರಿಂದ ಮೂಳೆಗಳನ್ನು ಬಲಪಡಿಸಿಕೊಳ್ಳಬಹುದು. ವಿಟಮಿನ್ ಮತ್ತು ಖನಿಜಗಳು ಸೋಯಾಬೀನ್ ನಲ್ಲಿ ಕಂಡುಬರುತ್ತವೆ. ಇದಲ್ಲದೆ ಕ್ಯಾಲ್ಸಿಯಂ, ಮೆಗ್ನೀಸಿಯಮ್, ತಾಮ್ರ, ಸೆಲೆನಿಯಮ್ ಮತ್ತು ಸತುವು ಸಹ ಇದರಲ್ಲಿ ಕಂಡುಬರುತ್ತದೆ. ಈ ಎಲ್ಲಾ ಪೋಷಕಾಂಶಗಳು ದೇಹದ ಎಲುಬುಗಳನ್ನು ಬಲಪಡಿಸುವಲ್ಲಿ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ.

    ಇದನ್ನೂ ಓದಿ: Constipation: ನಿಮಗೆ ಮಲಬದ್ಧತೆ ಸಮಸ್ಯೆ ಇದೆಯೇ? ಹಾಗಿದ್ರೆ ಈ 3 ಆಹಾರಗಳಿಂದ ದೂರವಿರಿ

    ಮಧುಮೇಹ ನಿಯಂತ್ರಿಸಲು ಸಹಕಾರಿಯಾಗಿದೆ

    ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಆಹಾರದ ವರ್ಗದಲ್ಲಿ ಇದನ್ನು ಎಣಿಸಲಾಗುತ್ತದೆ, ಇದರಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬುಗಳಿವೆ. ಆದ್ದರಿಂದ, ಸೋಯಾಬೀನ್ ಸೇವನೆಯು ಮಧುಮೇಹದಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇದರಲ್ಲಿ ಅಡಕವಾಗಿರುವ ಪ್ರೋಟೀನ್ ಗ್ಲೂಕೋಸನ್ನು ನಿಯಂತ್ರಣ ಮಾಡುವ ಶಕ್ತಿ ಹೊಂದಿದೆ.

    ದೇಹದ ತೂಕ ನಿಯಂತ್ರಿಸಲು ಸಹಕಾರಿ

    ಅಧ್ಯಯನ ಪ್ರಕಾರ ಸೋಯಬಿನ್ ದೇಹದ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಸೋಯ ಅಂಗಗಳ ಸುತ್ತ ಸಂಗ್ರಹವಾಗುವ ಅಧಿಕ ಕೊಬ್ಬನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ದೇಹದ ತೂಕ ಇಳಿಸುವ ಬಯಕೆ ಇರುವವರು ಸೋಯಬಿನ್ ಸೇವಿಸಬಹುದು.

    ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ 

    ಸೋಯಾಬೀನ್ ಅನ್ನು ಆಹಾರದಲ್ಲಿ ಸೇರಿಸುವುದರಿಂದ ಮಹಿಳೆಯರಲ್ಲಿ ಮೂಳೆ ದುರ್ಬಲಗೊಳ್ಳುವ ಆಸ್ಟಿಯೊಪೊರೋಸಿಸ್ ಅಪಾಯವನ್ನು ತಡೆಯಬಹುದು. ಸೋಯಾವನ್ನು ತಮ್ಮ ದಿನ ನಿತ್ಯದ ಆಹಾರದಲ್ಲಿ ಉಪಯೋಗಿಸುವ ಮಹಿಳೆಯರಲ್ಲಿ ಹಾರ್ಮೋನುಗಳ ವೈಪರೀತ್ಯವನ್ನು ತಡೆಯಬಹುದು. ಆದಾಗ್ಯೂ ಗರ್ಭಿಣಿಯರು ವೈದ್ಯರ ಸಲಹೆಯ ಪ್ರಕಾರ ಸೋಯಾಬೀನ್ ಬಳಸಬೇಕು.

    ಚರ್ಮದ ಆರೋಗ್ಯ ರಕ್ಷಣೆ

    ಸೋಯಾಬೀನ್ ನ ಪೇಸ್ಟ್ ನ್ನು ಹಚ್ಚಿಕೊಂಡರೆ ಆಗ ಇದರಿಂದ ಚರ್ಮಕ್ಕೆ ಮೊಶ್ಚಿರೈಸ್ ಸಿಗುವುದು ಮತ್ತು ಚರ್ಮವು ನಯವಾಗುವುದು. ಚರ್ಮದಲ್ಲಿ ಇರುವಂತಹ ಹೆಚ್ಚುವರಿ ಎಣ್ಣೆಯಂಶವನ್ನು ಹೊರಗೆ ಹಾಕಬೇಕಿದ್ದರೆ ಆಗ ನೀವು ಸೋಯಾಬೀನ್ ಬಳಕೆ ಮಾಡಿ.ಚರ್ಮವನ್ನು ಬಲಪಡಿಸುವ ಜೊತೆಗೆ ಚರ್ಮದ ಮೇಲೆ ಮೂಡುವ ಸುಕ್ಕನ್ನು ಕಡಿಮೆ ಮಾಡುತ್ತದೆ.

    ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

    ಇದು ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಿಸಿ ಶುದ್ದೀಕರಣಗೊಳಿಸುತ್ತದೆ. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದವರಿಗೂ ಸೋಯಾ ಹೆಚ್ಚು ಪರಿಣಾಮಕಾರಿ.  ಸೋಯಾದಲ್ಲಿರುವ ಪೆಪ್ಟೈಡ್ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳ ವಿರುದ್ಧ ಹೋರಾಡುವಂತೆ ಶಕ್ತಿ ನೀಡುತ್ತದೆ. ಇನ್ನಿತರ ಪದಾರ್ಥಗಳಲ್ಲಿ ಲಭ್ಯವಿರದ ವಿಟಮಿನ್ ಮತ್ತು ಖನಿಜಾಂಶಗಳನ್ನೂ ಸೋಯಾ ಸೇವನೆಯಿಂದ ಪಡೆಯಬಹುದು.

    ಸೋಯಾ ಬೀನ್‌ನಲ್ಲಿ ಕಂಡು ಬರುವ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳು ಕೆಲವು ರೀತಿಯ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕ್ಯಾನ್ಸರ್‌ ಕೋಶಗಳ ವಿರುದ್ಧ ಹೋರಾಡಲು ಮತ್ತು ಗೆಡ್ಡೆಯ ಕೋಶಗಳ ಬೆಳವಣಿಗೆಯನ್ನು ತಡೆಯಲು ಅದ್ಭುತವಾಗಿ ಕೆಲಸ ಮಾಡುತ್ತದೆ.

    ಇದನ್ನೂ ಓದಿ: Weight Loss: ತೂಕ ಇಳಿಸಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ರೆ ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

     ಜ್ಞಾಪಕ ಶಕ್ತಿಯನ್ನು ಅಧಿಕಗೊಳಿಸುತ್ತದೆ

    ಸೋಯಾದಲ್ಲಿರುವ ಲೆಸಿತಿನ್ ಅಂಶ ಜ್ಞಾಪಕ ಶಕ್ತಿಯನ್ನು ಅಧಿಕಗೊಳಿಸಿ ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ. ಸೋಯಾ ದೇಹಕ್ಕೆ, ಮೆದುಳಿಗೆ ಎಲ್ಲ ರೀತಿಯಿಂದಲೂ ಅನೇಕ ಪ್ರಯೋಜನವನ್ನು ನೀಡುತ್ತದೆ.
    Published by:Swathi Nayak
    First published: