ಆಲೂಗಡ್ಡೆ ಎಂದು ಅಸಡ್ಡೆ ತೋರದಿರಿ: ಇದರಲ್ಲಿದೆ ಹಲವು ರೀತಿಯ ಪೋಷಕಾಂಶಗಳು

Health Tips: ಆಲೂಗಡ್ಡೆಯಲ್ಲಿ ಪ್ರೋಟೀನ್​ಗಳು ಹೇರಳವಾಗಿ ಕಂಡುಬರುತ್ತವೆ. ಈ ತರಕಾರಿಯಲ್ಲಿ ಕಂಡುಬರುವ ಪ್ರೋಟೀನ್ ಅನ್ನು ದೇಹದ ಬಿಲ್ಡಿಂಗ್ ಬ್ಲಾಕ್ ಎಂದು ಕರೆಯಲಾಗುತ್ತದೆ.

zahir | news18-kannada
Updated:September 24, 2019, 3:30 PM IST
ಆಲೂಗಡ್ಡೆ ಎಂದು ಅಸಡ್ಡೆ ತೋರದಿರಿ: ಇದರಲ್ಲಿದೆ ಹಲವು ರೀತಿಯ ಪೋಷಕಾಂಶಗಳು
Potato
  • Share this:
ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಆದರೂ ಆಲೂವನ್ನು ಸೇವಿಸುವುದರ ಬಗ್ಗೆ ಅನೇಕರು ಅಸಡ್ಡೆ ತೋರುತ್ತಾರೆ. ಕೆಲವರು ಆಲೂಗಡ್ಡೆಯನ್ನು ತಿಂದರೆ ವಾತ ಹೆಚ್ಚಾಗುತ್ತದೆ ಎಂದರೆ, ಮತ್ತೆ ಕೆಲವರು ಇದರಲ್ಲಿ ಕಾರ್ಬ್ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಬೊಜ್ಜು ಹೆಚ್ಚಾಗುತ್ತದೆ ಎಂದು ವಾದಿಸುತ್ತಾರೆ. ಆದರೆ ​ಅದೇ ಆಲೂಗೆಡ್ಡೆಯಲ್ಲಿ ಮನುಷ್ಯನಿಗೆ ಬೇಕಾಗಿರುವ ಅನೇಕ ಜೀವಸತ್ವಗಳು ಅಡಗಿವೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಹಾಗಿದ್ರೆ ಆಲೂಗಡ್ಡೆ ಸೇವನೆಯಿಂದ ದೇಹಕ್ಕೆ ಸಿಗುವ ಪೋಷಕಾಂಶಗಳಾವುವು ಎಂಬುದನ್ನು ತಿಳಿದುಕೊಳ್ಳೋಣ.

- ಆಲೂಗಡ್ಡೆಯಲ್ಲಿ ಪ್ರೋಟೀನ್​ಗಳು ಹೇರಳವಾಗಿ ಕಂಡುಬರುತ್ತವೆ. ಈ ತರಕಾರಿಯಲ್ಲಿ ಕಂಡುಬರುವ ಪ್ರೋಟೀನ್ ಅನ್ನು ದೇಹದ ಬಿಲ್ಡಿಂಗ್ ಬ್ಲಾಕ್ ಎಂದು ಕರೆಯಲಾಗುತ್ತದೆ. ನಮ್ಮ ರಕ್ತದ ಅಂಗಾಂಶ ಮತ್ತು ಮೂಳೆಗಳನ್ನು ಬಲಪಡಿಸಲು ಇದು ತುಂಬಾ ಪ್ರಯೋಜನಕಾರಿ.

ಇದನ್ನೂ ಓದಿ: 600 ಕೋಟಿ ಬಜೆಟ್​​ನಲ್ಲಿ ಬೆಳ್ಳಿತೆರೆ ಮೇಲೆ ರಾಮಾಯಣ: ರಾಮ ಮತ್ತು ರಾವಣ ಪಾತ್ರಕ್ಕೆ ಸ್ಟಾರ್ ನಟರು ಫಿಕ್ಸ್..!

- ವಿಟಮಿನ್ ಸಿ, ಫೈಬರ್, ಪೊಟ್ಯಾಶಿಯಂ ಮತ್ತು ವಿಟಮಿನ್ ಬಿ 6 ನ ಉತ್ತಮ ಮೂಲವಾಗಿದೆ ಆಲೂಗಡ್ಡೆ. ಇತ್ತೀಚಿನ ಸಂಶೋಧನೆಯಲ್ಲಿ ಮನುಷ್ಯನ ಆಹಾರಕ್ರಮದಲ್ಲಿ ಆಲೂಗೆಡ್ಡೆ ಸಮತೋಲಿತ ಆಹಾರದ ಪ್ರಮುಖ ಭಾಗ ಎಂದು ಕಂಡುಕೋಳ್ಳಲಾಗಿದೆ.

-  ರಾಸೆಟ್ ಆಲೂಗಡ್ಡೆಗಳಲ್ಲಿ 4.55 ಗ್ರಾಂ ಪ್ರೋಟೀನ್ ಕಂಡುಬರುತ್ತದೆ ಎಂದು ವರದಿಯೊಂದು ಹೇಳಿಕೊಂಡಿದೆ. ಈ ಜಾತಿಯ ಆಲೂಗೆಡ್ಡೆ ಉಳಿದವುಗಳಿಗಿಂತ ಹೆಚ್ಚಿನ ಪ್ರೋಟೀನ್ ಹೊಂದಿರುತ್ತವೆ. ಅದೇ ಸಮಯದಲ್ಲಿ, ಬಿಳಿ ಆಲೂಗೆಡ್ಡೆ 271 ಮಿಲಿಗ್ರಾಂ ಪೊಟ್ಯಾಸಿಯಮ್ ಮತ್ತು ಎರಡು ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ.

ಇಂತಹ ತರಕಾರಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಪೋಷಕಾಂಶಗಳನ್ನು ಸರಿದೂಗಿಸಬಹುದಾಗಿದೆ.

ಇದನ್ನೂ ಓದಿ: ಮದುವೆಗೂ ಮುಂಚೆ ಗಂಡು ಮಗುವಿಗೆ ಜನ್ಮ ನೀಡಿದ ವಿಲನ್ ನಾಯಕಿ..!
First published:September 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ